ಕಲ್ಲಿದ್ದಲು ಸಚಿವಾಲಯ
azadi ka amrit mahotsav

ಕಾರ್ಯಗತವಾಗುತ್ತಿರುವ ಮೇಲ್ಮೈ ಕಲ್ಲಿದ್ದಲು ಅನಿಲೀಕರಣ ಯೋಜನೆಗಳ ವಿವರಗಳು

Posted On: 06 DEC 2023 3:30PM by PIB Bengaluru

ಕೋಲ್ ಇಂಡಿಯಾ ನಿಯಮಿತವು ಹಲವಾರು ಮೇಲ್ಮೈ ಕಲ್ಲಿದ್ದಲು ಅನಿಲೀಕರಣ (ಎಸ್ ಸಿಜಿ-ಕಲ್ಲಿದ್ದಲು ಬಳಸಿ ಅನಿಲ ಉತ್ಪಾದನೆ) ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ಇಲ್ಲಿ ಸೂಚಿಸಿರುವಂತೆ ಅವು ವಿವಿಧ ಹಂತಗಳಲ್ಲಿ ಕಾರ್ಯಗತವಾಗುತ್ತಿವೆ:

  1.  ತಲ್ಚೆರ್ (ಒಡಿಶಾ)ನಲ್ಲಿ ಕಲ್ಲಿದ್ದಲು ಅನಿಲೀಕರಣ ಆಧಾರಿತ ರಸಗೊಬ್ಬರ ಸ್ಥಾವರ: ತಲ್ಚೆರ್ ಫರ್ಟಿಲೈಸರ್ ಲಿಮಿಟೆಡ್ (ಕೋಲ್ ಇಂಡಿಯಾ ಲಿಮಿಟೆಡ್(ಸಿಐಎಲ್), ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್(ಜಿಎಐಎಲ್), ರಾಷ್ಟ್ರೀಯ ಕೆಮಿಕಲ್ಸ್ ಅಂಡ್ ಫರ್ಟಿಲೈಸರ್ಸ್ ಲಿಮಿಟೆಡ್(ಆರ್ ಸಿಎಫ್) ಮತ್ತು ದಿ ಫರ್ಟಿಲೈಸರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್(ಎಫ್ ಸಿಐಎಲ್)ನ ಜಂಟಿ ಉದ್ಯಮವಾಗಿದೆ) ಒಂದು ಸಮಗ್ರ ಕಲ್ಲಿದ್ದಲು ಅನಿಲೀಕರಣ ಆಧಾರಿತ ಯೂರಿಯಾ ಸ್ಥಾವರ ಸ್ಥಾಪನೆಯಲ್ಲಿ ತೊಡಗಿಸಿಕೊಂಡಿದೆ. ಇದು ಸಮೀಪದ ತಲ್ಚೆರ್ ಕಲ್ಲಿದ್ದಲು ಕ್ಷೇತ್ರ(ಕೋಲ್ ಫೀಲ್ಡ್)ಗಳಲ್ಲಿ ಸಿಗುವ ಹೆಚ್ಚಿನ ಬೂದಿ ಕಲ್ಲಿದ್ದಲನ್ನು ಪೆಟ್-ಕೋಕ್‌ನೊಂದಿಗೆ ಬೆರೆಸಿ, ವರ್ಷಕ್ಕೆ 1.27 ದಶಲಕ್ಷ ಮೆಟ್ರಿಕ್ ಟನ್(ಎಂಎಂಟಿಪಿಎ) ಬೇವು ಲೇಪಿತ ಯೂರಿಯಾ ಉತ್ಪಾದಿಸಲಿದೆ. ಪ್ರಸ್ತುತ, ನಿರ್ಮಾಣ ಚಟುವಟಿಕೆಗಳು ನಡೆಯುತ್ತಿವೆ. 2023 ಅಕ್ಟೋಬರ್ ವರೆಗಿನ ಭೌತಿಕ ಮತ್ತು ಆರ್ಥಿಕ ಪ್ರಗತಿಯು ಕ್ರಮವಾಗಿ 51.92% ಮತ್ತು 46.54% ಆಗಿದೆ.
  2. ಇತರ ಉಪಕ್ರಮಗಳು: ಈಸ್ಟರ್ನ್ ಕೋಲ್ ಫೀಲ್ಡ್ಸ್ ಲಿಮಿಟೆಡ್(ಇಸಿಎಲ್), ಮಹಾನದಿ ಕೋಲ್ ಫೀಲ್ಡ್ಸ್ ಲಿಮಿಟೆಡ್(ಎಂಸಿಎಲ್) ಮತ್ತು ವೆಸ್ಟರ್ನ್ ಕೋಲ್ ಫೀಲ್ಡ್ಸ್ ಲಿಮಿಟೆಡ್(ಡಬ್ಲ್ಯುಸಿಎಲ್) ಕಲ್ಲಿದ್ದಲು ಗಣಿಗಳ ಪಿಟ್ ಹೆಡ್‌ನಲ್ಲಿ ಕಲ್ಲಿದ್ದಲು ಅನಿಲೀಕರಣ ಯೋಜನೆಗಳನ್ನು ಸ್ಥಾಪಿಸಲು ಉಪಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಕೋಲ್ ಇಂಡಿಯಾ ಲಿಮಿಟೆಡ್ ಆಡಳಿತ ಮಂಡಳಿಯು ಇಸಿಎಲ್ ನಲ್ಲಿ ಕಲ್ಲಿದ್ದಲು ಸಿಂಥೆಟಿಕ್ ನ್ಯಾಚುರಲ್ ಗ್ಯಾಸ್(ಎಸ್ಎನ್ ಜಿ) ಯೋಜನೆಗೆ ಮತ್ತು ಎಂಸಿಎಲ್ ನಲ್ಲಿ ಕಲ್ಲಿದ್ದಲು ಅಮೋನಿಯಂ ನೈಟ್ರೇಟ್ ಯೋಜನೆಗೆ ಪೂರ್ವ ಕಾರ್ಯಸಾಧು ವರದಿ(ಪಿಎಫ್ಆರ್)ಗಳಿಗೆ  ಅನುಮೋದನೆ ನೀಡಿದೆ. ಡಬ್ಲ್ಯುಸಿಎಲ್ ಆಡಳಿತ ಮಂಡಳಿಯು ಕಲ್ಲಿದ್ದಲು ಅಮೋನಿಯಂ ನೈಟ್ರೇಟ್ ಯೋಜನೆಯ ಪೂರ್ವ ಕಾರ್ಯಸಾಧು ವರದಿ(ಪಿಎಫ್ಆರ್)ಗಳಿಗೆ ಅನುಮೋದನೆ ನೀಡಿದೆ.

ನೆಯ್ವೇಲಿಯಲ್ಲಿ ಲಿಗ್ನೈಟ್‌ನಿಂದ ಮೆಥನಾಲ್ ಸ್ಥಾವರ ಸ್ಥಾಪನೆಗೆ “ಎನ್‌ಎಲ್‌ಸಿಐಎಲ್” ಕ್ರಮ ಕೈಗೊಂಡಿದ್ದು, ಇದು ಟೆಂಡರ್ ಹಂತದಲ್ಲಿದೆ.

ಶುದ್ಧ ಕಲ್ಲಿದ್ದಲು ತಂತ್ರಜ್ಞಾನಗಳಲ್ಲಿ ಹೂಡಿಕೆ ಮಾಡಲು ಅಥವಾ ಸ್ವಚ್ಛ ಮತ್ತು ಹೆಚ್ಚು ಪರಿಣಾಮಕಾರಿ ಗಣಿಗಾರಿಕೆ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ಖಾಸಗಿ ವಲಯದ ಕಂಪನಿಗಳನ್ನು ಉತ್ತೇಜಿಸಲು, ಕಲ್ಲಿದ್ದಲು ಸಚಿವಾಲಯವು ಈ ಕೆಳಗಿನ ಕ್ರಮಗಳನ್ನು ತೆಗೆದುಕೊಂಡಿದೆ.

  1. ಸಚಿವಾಲಯವು ಒಂದು ನೀತಿ ರೂಪಿಸಿದ್ದು, ಅನಿಲೀಕರಣಕ್ಕಾಗಿ ಬಳಸಲಾಗುವ ಕಲ್ಲಿದ್ದಲಿನ ಪ್ರಮಾಣವು ಒಟ್ಟು ಕಲ್ಲಿದ್ದಲು ಉತ್ಪಾದನೆಯ ಕನಿಷ್ಠ 10% ಆಗಿದ್ದರೆ, ಅನಿಲೀಕರಣ ಉದ್ದೇಶಕ್ಕಾಗಿ ಬಳಸುವ ಕಲ್ಲಿದ್ದಲು ಭವಿಷ್ಯದ ಎಲ್ಲಾ ವಾಣಿಜ್ಯ ಕಲ್ಲಿದ್ದಲು ಬ್ಲಾಕ್ ಹರಾಜುಗಳಿಗೆ ಆದಾಯದ ಪಾಲಿನಲ್ಲಿ 50% ರಿಯಾಯಿತಿ  ಒದಗಿಸಲಾಗಿದೆ.
  2. ಹೊಸ ಕಲ್ಲಿದ್ದಲು ಅನಿಲೀಕರಣ ಘಟಕಗಳಿಗೆ ಕಲ್ಲಿದ್ದಲು ಲಭ್ಯವಾಗುವಂತೆ ನಿಯಂತ್ರಿತ ವಲಯದ ಅಡಿ, ಪ್ರತ್ಯೇಕ ಹರಾಜು ಗವಾಕ್ಷಿ ತೆರೆಯಲಾಗಿದೆ.

ಕಲ್ಲಿದ್ದಲು ಅನಿಲೀಕರಣ ಪ್ರಕ್ರಿಯೆಯಲ್ಲಿ ಪರಿಸರ ಕಾಳಜಿ ಪರಿಹರಿಸಲು ಸರ್ಕಾರವು, ಪರಿಸರ ಅನುಮೋದನೆ ಅನುದಾನ ಕಡ್ಡಾಯಗೊಳಿಸಿದೆ, ಇದರಲ್ಲಿ ಯೋಜನೆ ನಡೆಸವವರು ಅಥವಾ ಮೇಲ್ವಿಚಾರಕರು ಪರಿಸರ ಪ್ರಭಾವದ ಮೌಲ್ಯಮಾಪನ ಅಧ್ಯಯನಗಳನ್ನು ನಡೆಸಬೇಕು ಮತ್ತು ಪರಿಸರ ನಿರ್ವಹಣಾ ಯೋಜನೆಯನ್ನು ಸಿದ್ಧಪಡಿಸಬೇಕು. ಕಲ್ಲಿದ್ದಲು ಅನಿಲೀಕರಣ ಸ್ಥಾವರ ಸ್ಥಾಪನೆಗೆ ಸಂಬಂಧಿಸಿದ ಯಾವುದೇ ಚಟುವಟಿಕೆಗಳನ್ನು ಕೈಗೊಳ್ಳುವ ಮೊದಲು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ(MoEF&CC)ದ ಅಡಿ ಬರುವ ತಜ್ಞರ ಸಮಿತಿಯು ಇದನ್ನು ಸರಿಯಾಗಿ ಪರಿಶೀಲಿಸುತ್ತದೆ.

ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಶ್ರೀ ಪ್ರಲ್ಹಾದ್ ಜೋಶಿ ಅವರು ಲೋಕಸಭೆಯಲ್ಲಿಂದು ಲಿಖಿತ ಉತ್ತರದಲ್ಲಿ ಈ ಮಾಹಿತಿ ನೀಡಿದ್ದಾರೆ.

 

****


(Release ID: 1983429) Visitor Counter : 51


Read this release in: English , Urdu , Hindi