ವಾರ್ತಾ ಮತ್ತು ಪ್ರಸಾರ ಸಚಿವಾಲಯ

ನಾರಿ ಶಕ್ತಿಯ ಗೆಲುವುಗಳು: ವಿಕಸಿತ ಭಾರತ ಸಂಕಲ್ಪಯಾತ್ರೆಯಿಂದ ಪರಿವರ್ತಕ ಕಥೆಗಳು


ಮಹಿಳಾ ಫಲಾನುಭವಿಗಳು 'ಮೇರಿ ಕಹಾನಿ ಮೇರಿ ಜುಬಾನಿ' ಮೂಲಕ ಪರಿಣಾಮಕಾರಿ ಅನುಭವಗಳನ್ನು ಹಂಚಿಕೊಂಡಿದ್ದಾರೆ

Posted On: 05 DEC 2023 5:32PM by PIB Bengaluru

ಭಾರತ ಸರ್ಕಾರವು ಮಹಿಳೆಯರನ್ನು ಸಬಲೀಕರಣಗೊಳಿಸುವ ಉದ್ದೇಶದಿಂದ ವೈವಿಧ್ಯಮಯ ಉಪಕ್ರಮಗಳನ್ನು ಕಾರ್ಯಗತಗೊಳಿಸುತ್ತಿದೆ. ಮಿಷನ್ ಪೋಷಣ್, ಪ್ರಧಾನ ಮಂತ್ರಿ ಮಾತೃವಂದನಾ ಯೋಜನೆ (ಪಿಎಂಎಂವಿವೈ) ಮತ್ತು ಪ್ರಧಾನ ಮಂತ್ರಿ ಉಜ್ವಲ ಯೋಜನೆಗಳಂತಹ ಪ್ರಮುಖ ಕಾರ್ಯಕ್ರಮಗಳು ರಾಷ್ಟ್ರದಾದ್ಯಂತ ಮಹಿಳೆಯರ ಆರೋಗ್ಯ ಮತ್ತು ಯೋಗಕ್ಷೇಮವನ್ನು ಹೆಚ್ಚಿಸಲು ಸರ್ಕಾರದ ಸಮರ್ಪಣೆಯನ್ನು ಒತ್ತಿಹೇಳುತ್ತವೆ.

ಜಾರ್ಖಂಡ್‌ ನ ಖುಂಟಿಯಿಂದ ನವೆಂಬರ್ 15, 2023 ರಂದು ಜನಜಾತೀಯ ಗೌರವ ದಿವಸದ ಶುಭ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ ವಿಕಸಿತ ಭಾರತ ಸಂಕಲ್ಪ ಯಾತ್ರೆಯು, ಈ ಯೋಜನೆಗಳ ಪ್ರಯೋಜನಗಳು ಎಲ್ಲಾ ನಾಗರಿಕರಿಗೆ, ವಿಶೇಷವಾಗಿ ಮಹಿಳೆಯರಿಗೆ ತಲುಪುವಂತೆ ಖಚಿತಪಡಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.

ಯಾತ್ರೆಗಾಗಿ ವಿಶೇಷವಾಗಿ ರೂಪಿಸಲಾದ ಐಇಸಿ ವಾಹನಗಳು ಸ್ಥಳೀಯ ಭಾಷೆಗಳಲ್ಲಿ ಮಾಹಿತಿಗಳನ್ನು ಹೊಂದಿದ್ದು, ಮಹಿಳೆಯರಲ್ಲಿ ಘನತೆ, ಆತ್ಮವಿಶ್ವಾಸ ಮತ್ತು ಒಟ್ಟಾರೆ ಯೋಗಕ್ಷೇಮವನ್ನು ಹೆಚ್ಚಿಸಲು ಕೊಡುಗೆ ನೀಡುತ್ತಿವೆ, ಇದು ಸಮಾಜದ ಪ್ರಗತಿಗೆ ಸರ್ಕಾರದ ದೃಢವಾದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.

Image

ಯಾತ್ರೆಯ ಸಂದರ್ಭದಲ್ಲಿ, ವಿವಿಧ ಯೋಜನೆಗಳಿಗೆ ಅರ್ಹ ಫಲಾನುಭವಿಗಳನ್ನು ನೋಂದಾಯಿಸಲು ವಿನೂತನವಾದ "ಸ್ಥಳೀಯ ನೋಂದಣಿ" ಅಭಿಯಾನವನ್ನು ನಡೆಸಲಾಗುತ್ತಿದೆ. ಈ ವಿಧಾನವು ಲಭ್ಯವಿರುವ ಯೋಜನೆಗಳು ಮತ್ತು ಅವುಗಳ ಪ್ರಯೋಜನಗಳ ಬಗ್ಗೆ ಜನರಿಗೆ ಶಿಕ್ಷಣ ನೀಡುವ ಗುರಿಯನ್ನು ಹೊಂದಿದೆ, ಅರ್ಹ ವ್ಯಕ್ತಿಗಳು ಇದರಲ್ಲಿ ಭಾಗವಹಿಸಲು ಮತ್ತು ಸಂಬಂಧಿತ ಕಾರ್ಯಕ್ರಮಗಳ ಪ್ರಯೋಜನ ಪಡೆದುಕೊಳ್ಳಲು ಅವರನ್ನು ಪ್ರೋತ್ಸಾಹಿಸುತ್ತದೆ.

ಈ ಯಾತ್ರೆಯ ಸಮಯದಲ್ಲಿ ಸರ್ಕಾರವು "ಸ್ವಸ್ಥ ಬಾಲಕ ಸ್ಪರ್ಧಾ (SBS)" ಕಾರ್ಯಕ್ರಮವನ್ನೂ ಸಹ ನಡೆಸುತ್ತಿದೆ. ಈ ಉಪಕ್ರಮವು ಆರೋಗ್ಯವಂತ ಮಕ್ಕಳನ್ನು ಗುರುತಿಸುತ್ತದೆ ಮತ್ತು ಗೌರವಿಸುತ್ತದೆ, ಪೌಷ್ಟಿಕಾಂಶದ ಧನಾತ್ಮಕ ವಿಧಾನಕ್ಕೆ ಒತ್ತು ನೀಡುವ ಮೂಲಕ ಸಮಾಜದ ತೊಡಗಿಸುಕೊಳ್ಳುವಿಕೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.

ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಮತ್ತೊಂದು ಮಹತ್ವದ ಅಂಶವೆಂದರೆ "ಮೇರಿ ಕಹಾನಿ ಮೇರಿ ಜುಬಾನಿ (MKMZ)" ಉಪಕ್ರಮ, ಇದರಲ್ಲಿ ಫಲಾನುಭವಿಗಳು ತಮ್ಮ ವೈಯಕ್ತಿಕ ಅನುಭವಗಳನ್ನು ಹಂಚಿಕೊಳ್ಳುತ್ತಾರೆ, ಅವರ ಜೀವನದ ಮೇಲೆ ಸರ್ಕಾರದ ಯೋಜನೆಗಳ ಪರಿವರ್ತನೆಯ ಪರಿಣಾಮವನ್ನು ಹೇಳುತ್ತಾರೆ. ಅಂತಹ ಕೆಲವು ಕಥೆಗಳನ್ನು ನೋಡೋಣ:

ಅರುಣಾಚಲ ಪ್ರದೇಶದ ಜೋಬ್ರಾಂಗ್ ಮತ್ತು ರಿಂಗ್ಯಾಂಗ್ ಗ್ರಾಮ ಪಂಚಾಯತಿಯಲ್ಲಿ ನಡೆದ ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಸಂದರ್ಭದಲ್ಲಿ ಪೋಷಣಾ ಅಭಿಯಾನದ ಫಲಾನುಭವಿ ಕರ್ಮಾ ದೇಚಿನ್ ಅವರು "ಮೇರಿ ಕಹಾನಿ ಮೇರಿ ಜುಬಾನಿ" ಮೂಲಕ ತಮ್ಮ ಕಥೆಯನ್ನು ಹಂಚಿಕೊಂಡಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯರು ಪ್ರತಿ ತಿಂಗಳು ಭೇಟಿ ನೀಡಿ ಮಕ್ಕಳಿಗೆ ಹಾಲುಣಿಸುವ ಮಹತ್ವದ ಬಗ್ಗೆ ತಿಳಿಸುತ್ತಾರೆ, ಅವರ ಬೆಳವಣಿಗೆಯನ್ನು ಅಳೆಯುತ್ತಾರೆ ಮತ್ತು ಪಡಿತರವನ್ನು ಒದಗಿಸುತ್ತಾರೆ ಎಂದು ಅವರು ಹೇಳಿದರು.

ಪ್ರಧಾನ ಮಂತ್ರಿ ಮಾತೃವಂದನಾ ಯೋಜನೆ (PMMVY) ಫಲಾನುಭವಿಯಾಗಿರುವ ಪಂಜಾಬ್‌ ನ ಪಠಾಣ್‌ ಕೋಟ್‌ ನ ಕೋಟಭಟ್ಟಿಯನ್ ಗ್ರಾಮದ ಶ್ರೀಮತಿ ಇಂದು ಈ ಯೋಜನೆಯಡಿಯಲ್ಲಿ ಹಣಕಾಸಿನ ನೆರವು ಪಡೆದ ಅನುಭವವನ್ನು ಹಂಚಿಕೊಂಡರು. ಇದು ಅವರ ಮೊದಲ ಗರ್ಭಾವಸ್ಥೆಯಾಗಿತ್ತು ಮತ್ತು ಅವರು ಆರ್ಥಿಕ ಸಹಾಯವನ್ನು ಪಡೆದರು, ಇದಕ್ಕಾಗಿ ಅವರು ಭಾರತ ಸರ್ಕಾರಕ್ಕೆ ಕೃತಜ್ಞರಾಗಿರುವುದಾಗಿ ಹೇಳಿದರು.

ಮಹಾರಾಷ್ಟ್ರದ ಧಾರಶಿವ ಜಿಲ್ಲೆಯ ಅಂಬೇಜವಲ್ಗೆ ಗ್ರಾಮದ ಇನ್ನೊಬ್ಬ ಫಲಾನುಭವಿ ರೇಷ್ಮಾ ಸಾಬ್ಲೆ ಅವರು ಪ್ರಧಾನ ಮಂತ್ರಿ ಮಾತೃವಂದನಾ ಯೋಜನೆ (ಪಿಎಂಎಂವಿವೈ) ಯೋಜನೆಯಡಿ ಒದಗಿಸಲಾದ ಸಹಾಯವು ಹೇಗೆ ಪೌಷ್ಠಿಕ ಆಹಾರವನ್ನು ಪಡೆಯಲು ನೆರವಾಯಿತು ಎಂದು ವಿವರಿಸಿದರು.

ಕರ್ನಾಟಕದ ಹಾವೇರಿ ಜಿಲ್ಲೆಯ ದಂಬರಮತ್ತೂರು ಗ್ರಾಮದ ಶ್ರೀಮತಿ ನಿವೇದಿತಾ ಕೆಬಿ ಅವರು ಪ್ರಧಾನ ಮಂತ್ರಿ ಮಾತೃವಂದನಾ ಯೋಜನೆಯಿಂದ ಪ್ರಯೋಜನ ಪಡೆದಿದ್ದಾರೆ ಮತ್ತು ಅಂಗನವಾಡಿಗಳಲ್ಲಿ ನೀಡುವ ಪೌಷ್ಟಿಕ ಆಹಾರದಿಂದ ತಮ್ಮ ಮಕ್ಕಳು ಆರೋಗ್ಯವಾಗಿ ಬೆಳೆಯುತ್ತಿದ್ದಾರೆ ಎಂದು ಅವರು ಹೇಳಿದರು.

ಕರ್ನಾಟಕದ ನ್ಯಾಮತಿ ತಾಲೂಕಿನ ಚಟ್ನಹಳ್ಳಿ ಗ್ರಾಮದ ಶ್ರೀಮತಿ ಸಂಗೀತಾ ಅವರು ಪ್ರಧಾನ ಮಂತ್ರಿ ಮಾತೃವಂದನಾ ಯೋಜನೆ ಅಡಿಯಲ್ಲಿ ತಮ್ಮ ಮೊದಲ ಹೆರಿಗೆಗೆ 5,000 ರೂ. ಪಡೆದರು. ಆಶಾ ಕಾರ್ಯಕರ್ತೆಯರು ಪ್ರತಿ ತಿಂಗಳು ಪೌಷ್ಟಿಕ ಆಹಾರ ನೀಡಿ ಸಾಂಸ್ಥಿಕ ಹೆರಿಗೆಗೆ ಸಹಕರಿಸುತ್ತಿದ್ದಾರೆ ಎಂದು ಅವರು ಹೇಳಿದರು.

ವಿಕಸಿತ ಭಾರತ ಸಂಕಲ್ಪಯಾತ್ರೆ ಮುನ್ನಡೆಯುತ್ತಿದ್ದಂತೆ, ಈ ಮಹಿಳಾ-ಆಧಾರಿತ ಕಲ್ಯಾಣ ಯೋಜನೆಗಳು ನಾರಿ ಶಕ್ತಿಯನ್ನು ಸಶಕ್ತಗೊಳಿಸುವ ಸರ್ಕಾರದ ಸಮರ್ಪಣೆಗೆ ಜ್ವಲಂತ ಸಾಕ್ಷಿಗಳಾಗುತ್ತಿವೆ.

ವಿವಿಧ ಯೋಜನೆಗಳ ಫಲಾನುಭವಿಗಳ ಹೆಚ್ಚಿನ ಅನುಭವಗಳನ್ನು ಓದಲು HERE ಕ್ಲಿಕ್ ಮಾಡಿ.

****

 



(Release ID: 1982771) Visitor Counter : 97