ವಾರ್ತಾ ಮತ್ತು ಪ್ರಸಾರ ಸಚಿವಾಲಯ

ನಾನು ಭೌತಿಕ ಗಡಿಗಳನ್ನು ನಂಬುವುದಿಲ್ಲ ಆದರೆ ಮಾನವೀಯತೆಯನ್ನು ಮಾತ್ರ ನಂಬುತ್ತೇನೆ: ಬಂಗಾಳಿ ಚಿತ್ರ 'ಫೆರೆಶ್ತೆಹ್' ನಿರ್ದೇಶಕ ಮೊರ್ಟೆಜಾ ಅಟಾಶ್ಝಮ್ಜಾಮ್



ಭಾವನೆಗಳನ್ನು ಅನುಭವಿಸಲು ಮತ್ತು ಅವುಗಳನ್ನು ಪ್ರೇಕ್ಷಕರಿಗೆ ಅತ್ಯಂತ ಅಧಿಕೃತ ರೀತಿಯಲ್ಲಿ ಚಿತ್ರಿಸಲು ನಟನು ಪಾತ್ರವನ್ನು ಆವಾಹಿಸಿಕೊಳ್ಳಬೇಕು:ನಟ ಸುಮೋನ್ ಫಾರೂಕ್

Posted On: 23 NOV 2023 7:05PM by PIB Bengaluru

ಗೋವಾ, ನವೆಂಬರ್ 23, 2023

 

"ವಿಶ್ವದ ಅತ್ಯುತ್ತಮ ಧರ್ಮವೆಂದರೆ ಮಾನವೀಯತೆ" ಎಂದು ಬಾಂಗ್ಲಾದೇಶದ ಚಲನಚಿತ್ರ ಫೆರೆಶ್ತೆಹ್ ನಿರ್ದೇಶಕ ಮೊರ್ಟೆಜಾ ಅಟಾಶ್ಝಮ್ಜಾಮ್ ಹೇಳಿದರು, 54 ನೇ ಐಎಫ್ಎಫ್ಐನಲ್ಲಿ 'ಸಿನೆಮಾ ಆಫ್ ದಿ ವರ್ಲ್ಡ್' ವಿಭಾಗದಲ್ಲಿ ನಿನ್ನೆ ಈ ಚಿತ್ರವು ವಿಶ್ವದ ಪ್ರಥಮ(ವರ್ಲ್ಡ್ ಪ್ರೀಮಿಯರ್) ಪ್ರದರ್ಶನ ಕಂಡಿತು.  ಮೊರ್ತೇಜಾ ಮತ್ತು ಬಾಂಗ್ಲಾದೇಶದ ನಟ ಸುಮೋನ್ ಫಾರೂಕ್ ಅವರು ಇಂದು ಮಾಧ್ಯಮಗಳು, ಪ್ರತಿನಿಧಿಗಳು ಮತ್ತು ಸಿನಿ ಉತ್ಸಾಹಿಗಳೊಂದಿಗೆ ಸಂವಾದ ನಡೆಸಿದರು.

ಫೆರೆಶ್ತೆ ಬಂಗಾಳಿ ಭಾಷೆಯಲ್ಲಿ ನಿರ್ಮಾಣವಾದ ಬಾಂಗ್ಲಾದೇಶದ ಚಲನಚಿತ್ರವಾಗಿದೆ ಮತ್ತು ಇರಾನ್ ಹಾಗು ಬಾಂಗ್ಲಾದೇಶದ ಜಂಟಿ ಉದ್ಯಮದ ಮೂಲಕ  ನಿರ್ಮಾಣವಾದ ಚಲನಚಿತ್ರವೂ ಆಗಿದೆ. ಇದು ಫೆರೆಶ್ತೆ ಮತ್ತು ಅವರ ಪತಿ ಅಮ್ಜದ್ ದಂಪತಿಗಳ ಕಥೆಯಾಗಿದ್ದು, ಅದರಲ್ಲಿ ಅವರು ತಮ್ಮ ಆಸೆ-ಆಕಾಂಕ್ಷೆಗಳನ್ನು ಸಾಧಿಸಲು ಶ್ರಮಿಸುತ್ತಲೇ ಇರುತ್ತಾರೆ. ಈ ಚಿತ್ರದಲ್ಲಿ ಫೆರೆಶ್ತೆ ಪಾತ್ರದಲ್ಲಿ ಜಯಾ ಅಹ್ಸಾನ್ ಮತ್ತು ಅಮ್ಜದ್ ಪಾತ್ರದಲ್ಲಿ ಸುಮೋನ್ ಫಾರೂಕ್ ನಟಿಸಿದ್ದಾರೆ.

ಚಿತ್ರದ ಬಗ್ಗೆ ಮಾತನಾಡಿದ ಮೊರ್ಟೆಜಾ ಅವರು ತಾವು ತಮ್ಮ ಹೃದಯದ ಭಾವನೆಗಳನ್ನು ಆಲಿಸುವ ಮೂಲಕ ಜನರೊಂದಿಗೆ ಮತ್ತು ಅವರ ನೋವಿನೊಂದಿಗೆ ಜೋಡಣೆಗೊಳ್ಳಲು ಪ್ರಯತ್ನಿಸಿರುವುದಾಗಿ  ಹೇಳಿದರು. ಫೆರೆಶ್ಟೆಹ್ ಚಿತ್ರವನ್ನು ಈ ತತ್ವದೊಂದಿಗೆ ಒಂದು ಸಣ್ಣ ತಂಡವು ತನ್ನ ಸೀಮಿತ ಬಜೆಟ್ ನಲ್ಲಿ ರೂಪಿಸಿದೆ. ಚಲನಚಿತ್ರ ನಿರ್ಮಾಣದ ಹಿಂದಿನ ಪ್ರೇರಣೆಯ ಬಗ್ಗೆ ಮಾತನಾಡಿದ ಅವರು, ನಾವು ಏನನ್ನಾದರೂ ಪ್ರೀತಿಸಿದಾಗ, ನಾವು ಯಾವುದೇ ಸವಾಲನ್ನು ಎದುರಿಸಲು ಮತ್ತು ಯಾವುದೇ ತೊಂದರೆಯನ್ನು ನಿವಾರಿಸಲು ಸಿದ್ಧರಾಗುತ್ತೇವೆ ಎಂದ ಅವರು ಐಎಫ್ಎಫ್ಐನಂತಹ ಅಂತರರಾಷ್ಟ್ರೀಯ ಉತ್ಸವದಲ್ಲಿ ತಮ್ಮ ಚಿತ್ರ ಪ್ರದರ್ಶನಗೊಂಡಿರುವುದಕ್ಕೆ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸಿದರು.

ಭಾರತದ ಬಗ್ಗೆ ಮಾತನಾಡಿದ ಇರಾನಿನ ನಿರ್ದೇಶಕ ಮೊರ್ಟೆಜಾ ಅವರು ತಾನು ಭೌತಿಕ ಗಡಿಗಳನ್ನು ನಂಬುವುದಿಲ್ಲ ಆದರೆ ಮಾನವೀಯತೆಯಲ್ಲಿ ಮಾತ್ರ ನಂಬಿಕೆ ಹೊಂದಿದ್ದೇನೆ  ಎಂದರು.  ಇರಾನ್ ನ ಜನರು ಭಾರತ ಮತ್ತು ಭಾರತೀಯ ಸಂಸ್ಕೃತಿಯನ್ನು ವಿಶೇಷವಾಗಿ ಬಾಲಿವುಡ್ ಅನ್ನು ಪ್ರೀತಿಸುತ್ತಾರೆ ಎಂದೂ  ಅವರು ಹೇಳಿದರು. ತಾವು ಭಾರತದಲ್ಲಿ ಚಲನಚಿತ್ರ ನಿರ್ಮಾಣ ಮಾಡುವ  ಅವಕಾಶವನ್ನು ಎದುರು ನೋಡುತ್ತಿರುವುದಾಗಿಯೂ ಅವರು ಹೇಳಿದರು.

ತಮ್ಮ ಅನುಭವಗಳನ್ನು ಹಂಚಿಕೊಂಡ ಸುಮೋನ್ ಫಾರೂಕ್, ತಾವೊಬ್ಬ ಉದ್ಯಮಿಯಾಗಿದ್ದು,  ಬಡ ರಿಕ್ಷಾ ಎಳೆಯುವ ಅಮ್ಜದ್ ಪಾತ್ರಕ್ಕಾಗಿ ತಮ್ಮನ್ನು ತಾವು ಸಿದ್ಧಪಡಿಸಿಕೊಂಡು ಅದರಲ್ಲಿ ಪಾಲ್ಗೊಳುವುದು  ಸವಾಲಾಗಿತ್ತು ಎಂದು ಹೇಳಿದರು. ಪಾತ್ರಕ್ಕಾಗಿ ತಮ್ಮನ್ನು ತಾವು ಸಿದ್ಧಪಡಿಸಿಕೊಳ್ಳಲು ಅವರು ರಿಕ್ಷಾವನ್ನು ಖರೀದಿಸಿದರು ಮತ್ತು ತಮ್ಮ ಕಚೇರಿ ಸಮಯದ ನಂತರ ಅದನ್ನು ಎಳೆಯಲು ಪ್ರಾರಂಭಿಸಿದರು. ತನ್ನ ಪಾತ್ರಕ್ಕೆ ನ್ಯಾಯ ಒದಗಿಸಲು ತನ್ನ ಚರ್ಮವನ್ನು ಕಂದು ಬಣ್ಣಕ್ಕೆ ಪರಿವರ್ತಿಸಲು ಹಗಲಿನಲ್ಲಿ ರಿಕ್ಷಾ ಎಳೆಯಲು ಪ್ರಾರಂಭಿಸಿದೆ ಎಂದೂ  ನಟ ಹೇಳಿದರು. ಭಾವನೆಗಳನ್ನು ಅನುಭವಿಸಲು ಮತ್ತು ಅವುಗಳನ್ನು ಪ್ರೇಕ್ಷಕರಿಗೆ ಅತ್ಯಂತ ಅಧಿಕೃತ ರೀತಿಯಲ್ಲಿ ಚಿತ್ರಿಸಲು ನಟನು ಪಾತ್ರದಲ್ಲಿ ತಲ್ಲೀನನಾಗಿ  ಬದುಕಬೇಕು ಎಂದು ತಾವು ಭಾವಿಸುವುದಾಗಿ  ಅವರು ಹೇಳಿದರು. 

ನಟ ಸುಮೋನ್ ಫಾರೂಕ್ ಅವರು ತಮ್ಮ ಚಿತ್ರವನ್ನು ಭಾರತದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಂತಹ ಪ್ರತಿಷ್ಠಿತ ವೇದಿಕೆಯಲ್ಲಿ ಪ್ರದರ್ಶಿಸುತ್ತಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದರು.ಇದು ಕನಸು ನನಸಾದ ಸಮಯ ಎಂದರು.

****
 



(Release ID: 1979446) Visitor Counter : 89


Read this release in: English , Urdu , Hindi , Marathi