ಪ್ರಕಟಣಾ ದಿನಾಂಕ:
22 NOV 2023 3:52PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಪ್ರಾರಂಭವಾದ ರಾಷ್ಟ್ರವ್ಯಾಪಿ ಪ್ರಚಾರದ ವಿಕಸಿತ ಭಾರತ ಸಂಕಲ್ಪ ಯಾತ್ರೆ ಪಂಜಾಬ್ ನಲ್ಲಿ ಪ್ರಾರಂಭವಾಗಿದೆ, ಹಾಗೂ ತೀವ್ರಗತಿ ಪಡೆಯುತ್ತಿದೆ. ಪಂಜಾಬ್ ರಾಜಭವನದಿಂದ ಆರಂಭವಾದ ಯಾತ್ರೆಗೆ ಗೌರವಾನ್ವಿತ ರಾಜ್ಯಪಾಲ ಶ್ರೀ ಬನ್ವಾರಿಲಾಲ್ ಪುರೋಹಿತ್ ಅವರು ವಿಧ್ಯುಕ್ತವಾಗಿ ಚಾಲನೆ ನೀಡಿದರು. ನವೆಂಬರ್ 15, 2023 ರಂದು ಜಾರ್ಖಂಡ್ ನ ಖುಂಟಿಯಿಂದ ಪ್ರಾರಂಭವಾದ ಈ ಉಪಕ್ರಮವು ಬುಡಕಟ್ಟು ಪ್ರದೇಶಗಳಿಗೆ ಸಮರ್ಪಿತವಾಗಿದೆ, ಈಗ ಯಾತ್ರೆಯು ಇಡೀ ರಾಷ್ಟ್ರವನ್ನು ಆವರಿಸಲು ತನ್ನ ಹೆಜ್ಜೆಗುರುತನ್ನು ಇತರ ರಾಜ್ಯಗಳಿಗೆ ವಿಸ್ತರಿಸುತ್ತಿದೆ.

ಈ ಯಾತ್ರೆಯು ಭಾರತ ಸರ್ಕಾರದಿಂದ ಪ್ರಾರಂಭವಾದ ಜನಪ್ರಚಾರದ ಇದುವರೆಗಿನ ಅತಿ ದೊಡ್ಡ ಉಪಕ್ರಮವಾಗಿದೆ. ದೇಶದ ಅಂತರ್ಗತ ಅಭಿವೃದ್ಧಿಯ ದೃಷ್ಟಿಯಲ್ಲಿ ಈ ಯಾತ್ರೆಯ ಸಂಕಲ್ಪ ಬೇರೂರಿದೆ. ಇದು ಕೇಂದ್ರ ಸರ್ಕಾರದ ಯೋಜನೆಗಳ ಪ್ರಯೋಜನಗಳು 100% ವ್ಯಾಪ್ತಿಯನ್ನು ಸಾಧಿಸಿ, ರಾಷ್ಟ್ರದ ಪ್ರತಿಯೊಂದು ಮೂಲೆಯನ್ನು ತಲಪುವುದನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಯಾತ್ರೆ ಹೊಂದಿದೆ. ವ್ಯಾಪಕವಾದ ಮಾಹಿತಿ ಪಸರಿಸುವಿಕೆ, ಪ್ರಸಾರ ಮತ್ತು ದೇಶದ ಅಭಿವೃದ್ಧಿಗೆ ಸಕ್ರಿಯವಾಗಿ ಕೊಡುಗೆ ನೀಡಲು ನಾಗರಿಕರಿಗೆ ಅಧಿಕಾರ ನೀಡುವ ಮೂಲಕ ಯಾತ್ರೆಯು ಕೇಂದ್ರ ಸರ್ಕಾರದ ಯೋಜನೆಗಳ ಉದ್ದೇಶವನ್ನು ಸಾಕಾರಗೊಳಿಸುವತ್ತ ಮಹತ್ವದ ದಾಪುಗಾಲು ಹಾಕುತ್ತಿದೆ.
ಮಾಹಿತಿ, ಶಿಕ್ಷಣ ಮತ್ತು ಸಂವಹನ (ಐಇಸಿ) ವ್ಯಾನ್ಗಳಿಂದ ಸುಗಮಗೊಳಿಸಲಾದ ತಲ-ಮಟ್ಟದ ಪ್ರಚಾರ ಚಟುವಟಿಕೆಗಳ ನೈಜ-ಸಮಯದ ಡೇಟಾವನ್ನು ವ್ಯವಸ್ಥಿತವಾಗಿ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ ಡಿಜಿಟಲ್ ಇಂಡಿಯಾ ಕಾರ್ಪೊರೇಷನ್ ಅಭಿವೃದ್ಧಿಪಡಿಸಿದ ಪೋರ್ಟಲ್ ನಲ್ಲಿ ಪಡೆಯಬಹುದಾಗಿದೆ. ಒಟ್ಟು 116 ವ್ಯಾನ್ ಗಳನ್ನು ಪಂಜಾಬ್ ಗೆ ಪ್ರಚಾರ ಮಾಡಲು ಈಗಾಗಲೇ ಏರ್ಪಡಿಸಲಾಗಿದೆ, ಹಾಗೂ 3 ಎಸ್.ಎ.ಎಸ್. ನಗರದಲ್ಲಿ ಮತ್ತು ಹೆಚ್ಚುವರಿ 6 ರೂಪ್ ನಗರ ಜಿಲ್ಲೆಗಳಲ್ಲಿ ನಿಯೋಜಿಸಲಾಗಿದೆ. ಉಳಿದ ವ್ಯಾನ್ಗಳನ್ನು ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಪ್ರಾರಂಭಿಸಲಾಗುವುದು. ಸುಮಾರು 13,000 ಗ್ರಾಮ ಪಂಚಾಯತ್ ಗಳು ಮತ್ತು ಸುಮಾರು 400 ನಗರ ಪ್ರದೇಶಗಳನ್ನು ಒಳಗೊಂಡಿದೆ. ಪ್ರತಿ ದಿನ, ವ್ಯಾನ್ಗಳು ಪ್ರಮುಖ ಸ್ಥಳಗಳಲ್ಲಿ ಎರಡು ನಿಲುಗಡೆ ಮಾಡುತ್ತವೆ. ಆರೋಗ್ಯ ಶಿಬಿರಗಳು, ಆಧಾರ್ ನೋಂದಣಿ ಮತ್ತು ಇತರ ಅಗತ್ಯ ಸೇವೆಗಳನ್ನು ಸ್ಥಳದಲ್ಲಿಯೇ ಪೂರೈಸುತ್ತವೆ.
ವಿಕಸಿತ ಭಾರತ ಸಂಕಲ್ಪ ಯಾತ್ರೆಯು ಪಂಜಾಬ್ ನಾದ್ಯಂತ ತೀವ್ರತೆ ಪಡೆದುಕೊಳ್ಳುತ್ತಿದ್ದಂತೆ, ಸಮೃದ್ಧ ಭಾರತಕ್ಕಾಗಿ ಇದು ಪರಿವರ್ತಕ ಶಕ್ತಿಯಾಗಲು ಸಿದ್ಧವಾಗಿದೆ, ಕೇಂದ್ರ ಸರ್ಕಾರದ ಉಪಕ್ರಮಗಳ ದೂರಗಾಮಿ ಪರಿಣಾಮವನ್ನು ಖಾತ್ರಿಪಡಿಸುತ್ತದೆ ಮತ್ತು ರಾಷ್ಟ್ರ ನಿರ್ಮಾಣ ಪ್ರಕ್ರಿಯೆಯಲ್ಲಿ ಸರ್ಕಾರದ ಬದ್ಧತೆಯನ್ನು ಮತ್ತು ನಾಗರಿಕರ ಸಕ್ರಿಯ ಭಾಗವಹಿಸುವಿಕೆಯ ಪ್ರಜ್ಞೆಯನ್ನು ಯಾತ್ರೆ ಉತ್ತೇಜಿಸುತ್ತದೆ.
ಅಭಿವೃದ್ಧಿಯ ಕಡೆಗೆ ಬಹುಮುಖಿ ವಿಧಾನವಾಗಿ ವಿನ್ಯಾಸಗೊಳಿಸಲಾದ ವಿಕಸಿತ ಭಾರತ ಸಂಕಲ್ಪ ಯಾತ್ರೆಯು ಕೇಂದ್ರ ಸರ್ಕಾರದ ಯೋಜನೆಗಳ ಪ್ರಯೋಜನಗಳನ್ನು ಸಮಾಜದ ಎಲ್ಲಾ ವರ್ಗಗಳಿಗೆ ವಿಸ್ತರಿಸುವ ಗುರಿಯನ್ನು ಹೊಂದಿದೆ, ಸಮಗ್ರ ಅಭಿವೃದ್ಧಿಯತ್ತ ಸಂಘಟಿತ ಪ್ರಯತ್ನವನ್ನು ಪ್ರದರ್ಶಿಸುತ್ತದೆ. ಫಲಾನುಭವಿಗಳೊಂದಿಗೆ ಸಂವಾದಗಳು, ಗ್ರಾಮ ಪಂಚಾಯತ್ ಸಾಧನೆಗಳ ವಿವರಣೆಗಳು, ಸ್ಥಳದಲ್ಲೇ ರಸಪ್ರಶ್ನೆ ಸ್ಪರ್ಧೆಗಳು ಮತ್ತು ಆರೋಗ್ಯ ಶಿಬಿರಗಳಂತಹ ವಿವಿಧ ಜನ ಪಾಲ್ಗೊಳ್ಳುವಿಕೆ(ಭಾಗಿದಾರಿ) ಕಾರ್ಯಕ್ರಮಗಳನ್ನು, ಇತರ ತಳಮಟ್ಟದ ಪ್ರಚಾರ ಚಟುವಟಿಕೆಗಳು ಯಾತ್ರೆ ಒಳಗೊಂಡಿರುತ್ತದೆ.
ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಪ್ರಮುಖ ಗುರಿಯು ಜನಸಾಮಾನ್ಯರಲ್ಲಿ ಅರಿವು ಮೂಡಿಸುವುದು ಮತ್ತು ನೈರ್ಮಲ್ಯ, ಹಣಕಾಸು ಸೇವೆಗಳು, ವಿದ್ಯುತ್, ವಸತಿ, ಆಯುಷ್ಮಾನ್ ಭಾರತ್, ಪಿ.ಎಂ. ಗರೀಬ್ ಕಲ್ಯಾಣ್ ಅನ್ನ ಯೋಜನೆ ಮತ್ತು ಪಿ.ಎಂ. ಆವಾಸ್ ಯೋಜನೆ ಸೇರಿದಂತೆ ಪ್ರಮುಖ ಕಲ್ಯಾಣ ಯೋಜನೆಗಳ ಪ್ರಯೋಜನಗಳು ಮತ್ತು ಸಮರ್ಪಕ ಅನುಷ್ಠಾನಗೊಳಿಸುವುದನ್ನು ಖಾತ್ರಿ ಪಡಿಸುವುದು, ವ್ಯವಸ್ಥೆಗಳನ್ನು ಸುಲಭಗೊಳಿಸುವುದು, ಮುಂತಾದ ಜನಪರ ಮಾಹಿತಿ ವಿನಿಮಯ ಕಾರ್ಯಗಳನ್ನು ಈ ಯಾತ್ರೆ ಮಾಡುತ್ತಿದೆ.
******