ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ವಿಕಸಿತ್ ಭಾರತ ಸಂಕಲ್ಪ ಯಾತ್ರೆ ಹಿಮಾಚಲ ಪ್ರದೇಶದ ಬುಡಕಟ್ಟು ಜಿಲ್ಲೆಗಳಲ್ಲಿ ತೀವ್ರತೆ ಪಡೆಯುತ್ತದೆ


ಪಂಜಾಬ್, ಹರಿಯಾಣ ಮತ್ತು ಚಂಡೀಗಢಗಳಲ್ಲಿ ಚಾಲನೆಗೆ ಸಿದ್ಧತೆಗಳು ತೀವ್ರತೆ ಪಡೆಯುತ್ತವೆ

Posted On: 19 NOV 2023 3:02PM by PIB Bengaluru

ರಾಷ್ಟ್ರದಾದ್ಯಂತ ಕೇಂದ್ರ ಸರ್ಕಾರದ ಯೋಜನೆಗಳ ಪ್ರಯೋಜನಗಳನ್ನು ಮಾಡುವ ಗುರಿಯನ್ನು ಹೊಂದಿರುವ ಅದ್ಭುತ ಉಪಕ್ರಮ ವಿಕಸಿತ ಭಾರತ ಸಂಕಲ್ಪ ಯಾತ್ರೆಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವೆಂಬರ್ 15 , 2023 ರಂದು ಜಾರ್ಖಂಡ್ ನ ಖುಂಟಿಯಿಂದ ಚಾಲನೆ ನೀಡಿದರು. ಮೊದಲ ಹಂತದಲ್ಲಿ, ಯಾತ್ರೆಯು ಚಂಬಾ, ಸ್ಪಿತಿ ಮತ್ತು ಕಿನ್ನೌರ್ ಎಂಬ ಹಿಮಾಚಲ ಪ್ರದೇಶದ ಮೂರು ಬುಡಕಟ್ಟು ಜಿಲ್ಲೆಗಳನ್ನು ಒಳಗೊಂಡಿದೆ, ಯಾತ್ರೆಯ ವ್ಯಾಪ್ತಿಯಲ್ಲಿ ಗಮನಾರ್ಹ ವಿಸ್ತರಣೆಯನ್ನು ಈಗ ಗುರುತಿಸಲಾಗುತ್ತಿದೆ. 

ಪಂಜಾಬ್ ಮತ್ತು ಹರಿಯಾಣಗಳಲ್ಲಿ ನವೆಂಬರ್ 22, 2023 ರಂದು ವಿಕಸಿತ ಭಾರತ ಸಂಕಲ್ಪ ಯಾತ್ರೆ ಪ್ರಾರಂಭವಾಗಲಿದೆ.

ವಿಕಸಿತ ಭಾರತ ಸಂಕಲ್ಪ ಯಾತ್ರೆಯು ದೇಶದ ಪ್ರತಿಯೊಂದು ಗ್ರಾಮ ಪಂಚಾಯತ್ ಅನ್ನು ಒಳಗೊಳ್ಳಲು ಪ್ರಯತ್ನಿಸುತ್ತದೆ. ಪಂಜಾಬ್ ನಲ್ಲಿ, 13,646 ಸ್ಥಳಗಳನ್ನು ಒಳಗೊಂಡಿದ್ದರೆ, ಹಿಮಾಚಲ ಪ್ರದೇಶದಲ್ಲಿ 3,799 ಸ್ಥಳಗಳನ್ನು ಗುರಿತಿಸಲಾಗಿದೆ ಮತ್ತು ಹರಿಯಾಣದಲ್ಲಿ, ಅಭಿಯಾನವು 6,537 ಸ್ಥಳಗಳನ್ನು ತಲುಪಲಿದೆ.


ಜನಸಾಮಾನ್ಯರ ತಕ್ಷಣದ ಸೇವೆಗಳನ್ನು ಸುಗಮಗೊಳಿಸಲು, ಅಂಚೆ ಇಲಾಖೆ, ಆರೋಗ್ಯ ಇಲಾಖೆ ಮತ್ತು ಇತರ ಇಲಾಖೆಗಳಿಂದ ವಿವಿಧ ಶಿಬಿರಗಳನ್ನು ಸ್ಥಳದಲ್ಲೇ ಸ್ಥಾಪಿಸಲಾಗುವುದು. ಸರ್ಕಾರದ ಪ್ರಮುಖ ಯೋಜನೆಗಳ ಬಗ್ಗೆ ನಾಗರಿಕರಿಗೆ ತಿಳಿಸಲು ಮತ್ತು ಸಬಲೀಕರಣಗೊಳಿಸಲು ವಿನ್ಯಾಸಗೊಳಿಸಲಾದ ಯಾತ್ರೆಯು ಜಾಗೃತಿ ಮೂಡಿಸಲು ಮತ್ತು ಕಲ್ಯಾಣ ಕಾರ್ಯಕ್ರಮಗಳ ಪ್ರಯೋಜನಗಳನ್ನು ನೇರವಾಗಿ ಜನರಿಗೆ ತಲುಪಿಸುವ ಗುರಿಯನ್ನು ವಿಕಸಿತ ಭಾರತ ಸಂಕಲ್ಪ ಯಾತ್ರೆ ಹೊಂದಿದೆ.

ಜನ್ ಜಾತೀಯ ಗೌರವ ದಿವಸ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ  ನರೇಂದ್ರ ಮೋದಿ ಅವರು ಸರ್ಕಾರದ ಯೋಜನೆಗಳ ಸಂದೇಶಗಳನ್ನು ಹೊಂದಿರುವ ವಿಶೇಷವಾಗಿ ವಿನ್ಯಾಸಗೊಳಿಸಲಾದ ಐ.ಇ.ಸಿ. ವ್ಯಾನ್ ಗಳಿಗೆ ಹಸಿರು ನಿಶಾನೆ ತೋರಿಸಿ ಚಾಲನೆ ಮಾಡಿದರು. ಸ್ಥಳೀಯ ಭಾಷೆಗಳಲ್ಲಿ ಮಾಹಿತಿಯಿಂದ ಅಲಂಕೃತವಾಗಿರುವ ಈ ವ್ಯಾನ್ ಗಳು ಶ್ರವ್ಯ ದೃಶ್ಯಗಳು, ಕರಪತ್ರಗಳು, ಮಾಹಿತಿಪತ್ರಗಳು, ಕಿರುಪುಸ್ತಕಗಳು ಮತ್ತು ಸ್ಟಾಂಡಿಗಳ ಮೂಲಕ ಸರ್ಕಾರದ ಯೋಜನೆಗಳ ಕುರಿತು ಪ್ರಸಾರ ಮಾಡುತ್ತವೆ ಮತ್ತು ಕೇಂದ್ರೀಕೃತ ಸೇವಾ ಕ್ಷೇತ್ರಗಳಲ್ಲಿ, ಅಂದರೆ, ನೈರ್ಮಲ್ಯ, ಹಣಕಾಸು ಸೇವೆಗಳು, ವಿದ್ಯುತ್, ಎಲ್.ಪಿ.ಜಿ ಸಂಪರ್ಕಗಳು, ವಸತಿ, ಆಹಾರ ಭದ್ರತೆ, ಆರೋಗ್ಯ ರಕ್ಷಣೆ, ಶುದ್ಧ ನೀರು ಮತ್ತು ಇತ್ಯಾದಿ ಯೋಜನೆಗಳು ಸೇರಿದಂತೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುತ್ತವೆ. 

ಫಲಾನುಭವಿಗಳೊಂದಿಗೆ ಸಂವಾದ, ಸಾಧನೆಗಳ ಮಾಹಿತಿ ವಿನಿಮಯ, ಸ್ಥಳದಲ್ಲೇ ರಸಪ್ರಶ್ನೆ ಸ್ಪರ್ಧೆಗಳು, ವಿಡಿಯೊ ಮತ್ತು ಡ್ರೋನ್ ಪ್ರದರ್ಶನಗಳು, ಆರೋಗ್ಯ ಶಿಬಿರಗಳು ಮತ್ತು ನನ್ನ ಯುವ ಭಾರತ (ಮೇರಾ ಯುವ ಭಾರತ್) ಸ್ವಯಂಸೇವಕ ದಾಖಲಾತಿ ಸೇರಿದಂತೆ ಜನ ಪಾಲ್ಗೊಳ್ಳುವಿಕೆಯ(ಜನ್ ಭಾಗಿದರಿ) ವಿವಿಧ ಕಾರ್ಯಕ್ರಮಗಳನ್ನು ಯಾತ್ರೆಯಲ್ಲಿ ಹಮ್ಮಿಕೊಳ್ಳಲಾಗಿದೆ, ಹಾಗೂ ವಿವಿಧ ತಲಮಟ್ಟದ ಪೂರಕ ಜನಪರ ಪ್ರಚಾರ ಚಟುವಟಿಕೆಗಳು ಕೂಡಾ ಇದರ ಅವಿಭಾಜ್ಯ ಅಂಗಗಳಾಗಿವೆ.

ವಿಕಸಿತ ಭಾರತ ಅಭಿಯಾನವು ಜನವರಿ 25, 2024 ರೊಳಗೆ ಜಿಲ್ಲಾ ಅಧಿಕಾರಿಗಳು, ನಗರ ಸ್ಥಳೀಯ ಸಂಸ್ಥೆಗಳು ಮತ್ತು ಗ್ರಾಮ ಪಂಚಾಯತ್ ಗಳು ಸೇರಿದಂತೆ, 2.55 ಲಕ್ಷ ಗ್ರಾಮ ಪಂಚಾಯತ್ ಗಳು ಮತ್ತು 3,600 ನಗರ ಸ್ಥಳೀಯ ಸಂಸ್ಥೆಗಳನ್ನು ಒಳಗೊಳ್ಳುವ ಗುರಿಯನ್ನು ಹೊಂದಿದೆ. 

****


(Release ID: 1978240) Visitor Counter : 116


Read this release in: English , Urdu , Hindi , Manipuri