ವಾರ್ತಾ ಮತ್ತು ಪ್ರಸಾರ ಸಚಿವಾಲಯ
iffi banner
0 5

ಸಿನಿಮೀಯ ಅನುಭವದ ನಿರಂತರ ಆಕರ್ಷಣೆಗೆ ಚಲನಚಿತ್ರೋತ್ಸವಗಳು ಸಾಕ್ಷಿಯಾಗಿವೆ: ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್


ಜಾಗತಿಕ(ವಿಶ್ವ) ಸಿನಿಮಾದ ಸಾರಸಂಗ್ರಹ ಶ್ರೇಣಿ ಪ್ರದರ್ಶಿಸಲಿರುವ 54ನೇ ಐಎಫ್ಎಫ್ಐ, ನಾಳೆ ಉದ್ಘಾಟನಾ ಸಮಾರಂಭ


ಈ ವರ್ಷ 13 ವರ್ಲ್ಡ್ ಪ್ರೀಮಿಯರ್‌ಗಳು(ಸಿನೆಮಾಗಳು), 18 ಇಂಟರ್‌ನ್ಯಾಶನಲ್ ಪ್ರೀಮಿಯರ್‌ಗಳು, 62 ಏಷ್ಯನ್ ಮತ್ತು 89 ಇಂಡಿಯನ್ ಪ್ರೀಮಿಯರ್‌ಗಳು ಪ್ರದರ್ಶನ ಕಾಣಲಿವೆ

ಗೋವಾ, 19 ನವೆಂಬರ್ 2023

 

54ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಐಎಫ್ಎಫ್ಐ) ಆಚರಣೆಗೆ ಗೋವಾದ ಕಡಲ ಕಿನಾರೆ ಸಜ್ಜಾಗಿದ್ದು, ನಾಳೆ ಪಣಜಿಯಲ್ಲಿ ಗಾಲಾ ಉದ್ಘಾಟನಾ ಸಮಾರಂಭ ಆರಂಭವಾಗಲಿದೆ. ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಶ್ರೀ ಅನುರಾಗ್ ಠಾಕೂರ್ ಅವರು ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಒಳಾಂಗಣ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಅಲ್ಲದೆ, ಅವರು ಉದ್ಘಾಟನಾ ಸಮಾರಂಭಕ್ಕೆ ಚಾಲನೆ ನೀಡಲಿದ್ದಾರೆ. ಅಲ್ಲದೆ, ಸಚಿವರು ಐನೋಕ್ಸ್ ಕಾಂಪ್ಲೆಕ್ಸ್‌ನಲ್ಲಿ ಉದ್ಘಾಟನಾ ಚಿತ್ರದ ನಿರ್ಮಾಪಕರು ಮತ್ತು ಪಾತ್ರವರ್ಗವನ್ನ ಸನ್ಮಾನಿಸಲಿದ್ದಾರೆ. 54ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಐಎಫ್ಎಫ್ಐ) ನೇಪಥ್ಯದಲ್ಲಿ ಸಚಿವರು, ಫಿಲ್ಮ್ ಬಜಾರ್ ಉದ್ಘಾಟಿಸಲಿದ್ದಾರೆ. ಫಿಲ್ಮ್ ಬಜಾರ್ ದಕ್ಷಿಣ ಏಷ್ಯಾದ ಅತಿದೊಡ್ಡ ಜಾಗತಿಕ ಚಲನಚಿತ್ರ ಮಾರುಕಟ್ಟೆಯಾಗಿದ್ದು, ಪ್ರತಿ ವರ್ಷ ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ(ಎನ್ಎಫ್ ಡಿಸಿ) ಮತ್ತು ಐಎಫ್ಎಫ್ಐ  ಜತೆಗೂಡಿ ಆಯೋಜಿಸುತ್ತವೆ. ಇದು ದಕ್ಷಿಣ ಏಷ್ಯಾದ ಸಿನೆಮಾ ತಯಾರಿಕೆ, ಉತ್ಪಾದನೆ ಮತ್ತು ವಿತರಣೆಯ ವಿಷಯ ವಸ್ತು ಮತ್ತು ಚಲನಚಿತ್ರದ ಪ್ರತಿಭೆಯನ್ನು ಬೆಂಬಲಿಸುತ್ತದೆ ಮತ್ತು ಪ್ರದರ್ಶಿಸುತ್ತದೆ. ಇದು ದಕ್ಷಿಣ ಏಷ್ಯಾದ ಪ್ರದೇಶದಲ್ಲಿ ಜಾಗತಿಕ(ವಿಶ್ವ) ಸಿನಿಮಾದ ಉತ್ತೇಜನ ಮತ್ತು ಪ್ರಚಾರವನ್ನು ಸಹ ಸುಗಮಗೊಳಿಸುತ್ತದೆ.

ಉದ್ಘಾಟನಾ ಸಮಾರಂಭದಲ್ಲಿ ಬಾಲಿವುಡ್ ಸೂಪರ್‌ಸ್ಟಾರ್‌ಗಳಾದ ಮಾಧುರಿ ದೀಕ್ಷಿತ್ ಮತ್ತು ಶಾಹಿದ್ ಕಪೂರ್ ಅವರ ಅಭಿನಯ ಪ್ರದರ್ಶಿಸಲಾಗುತ್ತದೆ. ಉದ್ಘಾಟನಾ ಸಮಾರಂಭದಲ್ಲಿ ಬಾಲಿವುಡ್ ತಾರೆಯರಾದ ಶ್ರಿಯಾ ಸರನ್, ನುಶ್ರತ್ ಭರುಚಾ, ಪಂಕಜ್ ತ್ರಿಪಾಠಿ, ಶಂತನು ಮೊಯಿತ್ರಾ, ಶ್ರೇಯಾ ಘೋಷಾಲ್ ಮತ್ತು ಸುಖ್ವಿಂದರ್ ಸಿಂಗ್ ಕೂಡ ಪ್ರದರ್ಶನ ನೀಡಲಿದ್ದಾರೆ. ಚಲನಚಿತ್ರೋದ್ಯಮದ ಗಣ್ಯ ವ್ಯಕ್ತಿಗಳು ಕ್ಯಾಥರೀನ್ ಝೀಟಾ ಜೋನ್ಸ್, ಸಲ್ಮಾನ್ ಖಾನ್, ವಿದ್ಯಾ ಬಾಲನ್, ಆಯುಷ್ಮಾನ್ ಖುರಾನಾ, ಅನುಪಮ್ ಖೇರ್, ವಿಕ್ಕಿ ಕೌಶಲ್, ಸಿದ್ಧಾರ್ಥ್ ಮಲ್ಹೋತ್ರಾ, ಅದಿತಿ ರಾವ್ ಹೈದರಿ, ಎಆರ್ ರೆಹಮಾನ್, ಅಮಿತ್ ತ್ರಿವೇದಿ, ಇತರ ಪ್ರಸಿದ್ಧ ನಟರು, ಗಾಯಕರು ಮತ್ತು ಚಲನಚಿತ್ರ ನಿರ್ಮಾಪಕರು ಈ ಉತ್ಸವವನ್ನು ಅಲಂಕರಿಸಲಿದ್ದಾರೆ.

9 ದಿನಗಳ ಚಲನಚಿತ್ರೋತ್ಸವವು ವಿಶ್ವಾದ್ಯಂತ ಪ್ರೇಕ್ಷಕರಿಗೆ ಜಾಗತಿಕ ಸಿನಿಮಾದ ಸಾರಸಂಗ್ರಹ ಶ್ರೇಣಿಯನ್ನು ಪ್ರದರ್ಶಿಸುತ್ತದೆ. ಪ್ರಶಸ್ತಿ ವಿಜೇತ ಬ್ರಿಟಿಷ್ ಚಲನಚಿತ್ರ ನಿರ್ಮಾಪಕ ಸ್ಟುವರ್ಟ್ ಗ್ಯಾಟ್ ಅವರ ಕ್ಯಾಚಿಂಗ್ ಡಸ್ಟ್‌ ಚಲನಚಿತ್ರದ ಪ್ರಥಮ ಪ್ರದರ್ಶನದೊಂದಿಗೆ ವರ್ಲ್ಡ್ ಪ್ರೀಮಿಯರ್ ಆರಂಭವಾಗಲಿದೆ.

 

https://static.pib.gov.in/WriteReadData/userfiles/image/iffi54-1K8FW.jpg

ಈ ಹಿಂದೆಯೇ ಚಲನಚಿತ್ರೋತ್ಸವಕ್ಕೆ ತಮ್ಮ ಶುಭಾಶಯಗಳನ್ನು ಕೋರಿದ್ದ ಸಚಿವ ಶ್ರೀ ಅನುರಾಗ್ ಠಾಕೂರ್, ತಂತ್ರಜ್ಞಾನವು ನಾವು ವಿಷಯವನ್ನು ಬಳಸುವ ವಿಧಾನವನ್ನು ಮರುರೂಪಿಸುವುದನ್ನು ಮುಂದುವರೆಸುತ್ತಿರುವ ಯುಗದಲ್ಲಿ, ಚಲನಚಿತ್ರೋತ್ಸವಗಳು ಸಿನಿಮೀಯ ಅನುಭವದ ನಿರಂತರ ಆಕರ್ಷಣೆಗೆ ಸಾಕ್ಷಿಯಾಗಿವೆ. ''ಐಎಫ್‌ಎಫ್‌ಐ ಸಹಯೋಗ, ಜಂಟಿ ನಿರ್ಮಾಣಗಳು ಮತ್ತು ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಲು ಪರಿಪೂರ್ಣ ವೇದಿಕೆಯಾಗಿದೆ. ನಮ್ಮ ಚಲನಚಿತ್ರ ತಯಾರಕರ ಉತ್ಸಾಹ ಮತ್ತು ನಿರ್ದೇಶಕರು ಮತ್ತು ಚಲನಚಿತ್ರ ತಯಾರಕರೊಂದಿಗಿನ ಸಹಯೋಗದಿಂದಾಗಿ ಐಎಫ್‌ಎಫ್‌ಐ ಪ್ರತಿ ವರ್ಷ ಬೆಳೆಯುತ್ತಿದೆ ಎಂದು ಹೇಳಿದ್ದರು.

ಈ ವರ್ಷ, ಐಎಫ್ಎಫ್ಐಗೆ ಅಗಾಧ ಪ್ರತಿಕ್ರಿಯೆ ಮತ್ತು ಸ್ಪಂದನೆ ಸಿಕ್ಕಿದೆ. 105 ದೇಶಗಳಿಂದ ಒಟ್ಟು 2,926 ಎಂಟ್ರಿಗಳನ್ನು(ನಮೂದು) ಸ್ವೀಕರಿಸಲಾಗಿದೆ, ಇದು ಕಳೆದ ವರ್ಷಕ್ಕಿಂತ 3 ಪಟ್ಟು ಹೆಚ್ಚಿನ ಅಂತಾರಾಷ್ಟ್ರೀಯ ಎಂಟ್ರಿಗಳ ಸಲ್ಲಿಕೆಯಾಗಿದೆ. 9 ದಿನಗಳ ಉತ್ಸವದ 4 ಸ್ಥಳಗಳಲ್ಲಿ 270ಕ್ಕಿಂತ ಹೆಚ್ಚಿನ ಚಲನಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ. ಉತ್ಸವದಲ್ಲಿ 13 ವರ್ಲ್ಡ್ ಪ್ರೀಮಿಯರ್‌ಗಳು, 18 ಇಂಟರ್ ನ್ಯಾಷನಲ್ ಪ್ರೀಮಿಯರ್‌ಗಳು, 62 ಏಷ್ಯಾ ಪ್ರೀಮಿಯರ್‌ಗಳು ಮತ್ತು 89 ಇಂಡಿಯಾ ಪ್ರೀಮಿಯರ್‌ಗಳನ್ನು ಪ್ರದರ್ಶಿಸಲಾಗುತ್ತದೆ. ಅತ್ಯುತ್ತಮ ವೆಬ್ ಸರಣಿ(ಒಟಿಟಿ) ಪ್ರಶಸ್ತಿಗಾಗಿ 15 ಒಟಿಟಿ ವೇದಿಕೆಗಳಿಂದ 10 ಭಾಷೆಗಳಲ್ಲಿ ಒಟ್ಟು 32 ಎಂಟ್ರಿಗಳನ್ನು ಸ್ವೀಕರಿಸಲಾಗಿದೆ. ಈ ವರ್ಷ ಅಸ್ಕರ್ ಗೋಲ್ಡನ್ ಪೀಕಾಕ್ ಪ್ರಶಸ್ತಿಗಾಗಿ 15 ಚಲನಚಿತ್ರಗಳು (12 ಅಂತಾರಾಷ್ಟ್ರೀಯ ಚಲನಚಿತ್ರಗಳು ಮತ್ತು 3 ಭಾರತೀಯ ಚಲನಚಿತ್ರಗಳು) ಸ್ಪರ್ಧಿಸಲಿವೆ.

ಸಾಕ್ಷ್ಯಚಿತ್ರ ತಯಾರಿಕೆಯ ಪ್ರಾಮುಖ್ಯತೆ ಎತ್ತಿ ತೋರಿಸಲು, ಈ ವರ್ಷ ಡಾಕ್ಯುಮೆಂಟ್-ಮಾಂಟೇಜ್ ವಿಭಾಗವನ್ನು ಪರಿಚಯಿಸಲಾಗಿದೆ. ಇದಲ್ಲದೆ, ಯುನೆಸ್ಕೊದ ಆದರ್ಶಗಳನ್ನು ಪ್ರತಿಬಿಂಬಿಸುವ 7 ಅಂತಾರಾಷ್ಟ್ರೀಯ ಚಲನಚಿತ್ರಗಳು ಮತ್ತು 3 ಭಾರತೀಯ ಚಲನಚಿತ್ರಗಳನ್ನು ಉತ್ಸವ ಸಮಯದಲ್ಲಿ ಐಸಿಎಫ್ ಟಿ ಯುನೆಸ್ಕೊ ಗಾಂಧಿ ಪದಕ ಪ್ರಶಸ್ತಿ ಅಧಿವೇಶನದಲ್ಲಿ ಪ್ರದರ್ಶಿಸಲಾಗುತ್ತದೆ.

ಉದಯೋನ್ಮುಖ ಪ್ರತಿಭೆಗಳನ್ನು ಪೋಷಿಸುವ ಬದ್ಧತೆಗೆ ಸಾಕ್ಷಿಯಾಗಿ, ಐಎಫ್ಎಫ್ಐ ಖ್ಯಾತ ಉದ್ಯಮದ ದಿಗ್ಗಜರು ನಡೆಸುವ ಮಾಸ್ಟರ್‌ಕ್ಲಾಸ್‌ಗಳು, ಕಾರ್ಯಾಗಾರಗಳು ಮತ್ತು ಸಂವಾದ ಚರ್ಚೆಗಳನ್ನು ಸಹ ಆಯೋಜಿಸುತ್ತದೆ. ಹಬ್ಬದ ಸಮಯದಲ್ಲಿ 75 ಕ್ರಿಯೇಟಿವ್ ಮೈಂಡ್ಸ್ ಆಫ್ ಟುಮಾರೊ(ಸಿಎಂಒಟಿ) ಅಭ್ಯರ್ಥಿಗಳಿಗೆ 20ಕ್ಕೂ ಹೆಚ್ಚು ಪ್ರಮುಖ ಕಂಪನಿಗಳು ವೃತ್ತಿಪರ ಮಾಸ್ಟರ್ ತರಗತಿಗಳು ಮತ್ತು ಟ್ಯಾಲೆಂಟ್ ಕ್ಯಾಂಪ್ ನಡೆಸುತ್ತವೆ.

ಎನ್ ಡಿಎಫ್ ಸಿ ಫಿಲ್ಮ್ ಬಜಾರ್, ವಿಎಫ್ಎಕ್ಸ್ ಮತ್ತು ಟೆಕ್ ಪೆವಿಲಿಯನ್ ಪ್ರದರ್ಶಿಸಲಿದೆ, ಇದು ಸಾಕ್ಷ್ಯಚಿತ್ರ ಮತ್ತು ನಾನ್-ಫೀಚರ್ ಯೋಜನೆಗಳು, ಚಲನಚಿತ್ರಗಳು, ಜ್ಞಾನ ಸರಣಿ ಮತ್ತು ಬಾಕ್ಸ್ ಆಫೀಸ್‌ ಪುಸ್ತಕವನ್ನು ಪರಿಚಯಿಸುತ್ತದೆ. ರಿಸ್ಟೋರ್ಡ್ ಕ್ಲಾಸಿಕ್ಸ್ ವಿಭಾಗದ ಒಂದು ಹೊಸ ಉಪಕ್ರಮವು ಭಾರತೀಯ ಕ್ಲಾಸಿಕ್ಸ್‌ನ ಹಾನಿಗೊಳಗಾದ ಸೆಲ್ಯುಲಾಯ್ಡ್ ರೀಲ್‌ಗಳಿಂದ ನ್ಯಾಷನಲ್ ಫಿಲ್ಮ್ ಹೆರಿಟೇಜ್ ಮಿಷನ್ (NFHM) ಅಡಿ NFDC-NFAI ಮಾಡಿದ ವಿಶ್ವ ದರ್ಜೆಯ 7 ವಿಶ್ವ ಪ್ರಥಮ ಪ್ರದರ್ಶನಗಳನ್ನು ಒಳಗೊಂಡಿದೆ. ಮಿಷನ್ ಅಡಿ, ರಿಸ್ಟೋರ್ ಮಾಡಿದ 3 ಅಂತಾರಾಷ್ಟ್ರೀಯ ಚಲನಚಿತ್ರಗಳನ್ನು ಸಹ ಉತ್ಸವದಲ್ಲಿ ಪ್ರದರ್ಶಿಸಲಾಗುತ್ತದೆ.

ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವಾಲಯದ ಕೇಂದ್ರೀಯ ಸಂವಹನ ಕೇಂದ್ರವು ತಲ್ಲೀನಗೊಳಿಸುವ ದೃಶ್ಯ ವಿಷಯಗಳಿರುವ ಪ್ರದರ್ಶನ ಆಯೋಜಿಸಿದೆ. ಸಿನಿಮಾ ಉತ್ಸಾಹಿಗಳು ಸಂವಾದಾತ್ಮಕ ಪ್ರದರ್ಶನಗಳ ಮೂಲಕ ಚಲನಚಿತ್ರಗಳ ಬಗ್ಗೆ ಕಲಿಯುತ್ತಾರೆ. ಎಲ್ಲರಿಗೂ ಪ್ರವೇಶ ಉಚಿತ. ಇದಲ್ಲದೆ, ಕ್ಯಾರವಾನ್‌ಗಳು, ಶಿಗ್ಮೋತ್ಸವ, ಗೋವಾ ಕಾರ್ನಿವಲ್, ಸೆಲ್ಫಿ ಪಾಯಿಂಟ್‌ಗಳು, ಐಎಫ್‌ಎಫ್‌ಐ ಮರ್ಚಂಡೈಸ್ ಮತ್ತು ಇತರ ಉಪಕ್ರಮಗಳ ಜತೆಗೆ ಸಾರ್ವಜನಿಕರಿಗೆ 3 ಸ್ಥಳಗಳಲ್ಲಿ ಓಪನ್ ಏರ್ ಸ್ಕ್ರೀನಿಂಗ್‌ಗಳನ್ನು ಸಹ ನಡೆಸಲಾಗುತ್ತದೆ.

https://static.pib.gov.in/WriteReadData/userfiles/image/iffi54-2X6BM.jpg

ಮಾಧ್ಯಮಗಳಿಗೆ ಸೌಲಭ್ಯ ಒದಗಿಸುವ ಭಾಗವಾಗಿ, ಪ್ರೆಸ್ ಇನ್ಫಾರ್ಮೇಷನ್ ಬ್ಯೂರೊವು ಹಬ್ಬಕ್ಕೆ ಸಂಬಂಧಿಸಿದ ಎಲ್ಲಾ ಕಾರ್ಯಕ್ರಮಗಳ ಕುರಿತು ಇಂಗ್ಲಿಷ್, ಹಿಂದಿ ಮತ್ತು ಪ್ರಾದೇಶಿಕ ಭಾಷೆಗಳಲ್ಲಿ ಪತ್ರಿಕಾ ಪ್ರಕಟಣೆಗಳನ್ನು ನೀಡುತ್ತದೆ. ಮೊದಲ ಬಾರಿಗೆ ಸ್ಥಳೀಯ ಮಾಧ್ಯಮಗಳಿಗೆ ಅನುಕೂಲವಾಗುವಂತೆ ಪಿಐಬಿ, ಕೊಂಕಣಿ ಭಾಷೆಯಲ್ಲಿ ಪತ್ರಿಕಾ ಪ್ರಕಟಣೆಗಳನ್ನು ಬಿಡುಗಡೆ ಮಾಡಲಿದೆ. ಪಿಐಬಿ ಸೋಷಿಯಲ್ ಮೀಡಿಯಾ ತಂಡವು ಪತ್ರಿಕಾಗೋಷ್ಠಿಗಳು ಮತ್ತು ಇತರ ಕಾರ್ಯಕ್ರಮಗಳ ಲೈವ್ ಸ್ಟ್ರೀಮಿಂಗ್ ಮಾಡುತ್ತದೆ, ಅದರ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಲ್ಲಿ ಲೈವ್ ಅಪ್‌ಡೇಟ್‌ಗಳನ್ನು ಪೋಸ್ಟ್ ಮಾಡುತ್ತದೆ. ಪಿಐಬಿ, ಮಾಧ್ಯಮಗಳಿಗೆ ಅಗತ್ಯವಾದ ಬೆಂಬಲ ಒದಗಿಸಲು ಸ್ಥಳದಲ್ಲೇ ಮಾಧ್ಯಮ ಸೌಲಭ್ಯ ಕೇಂದ್ರವನ್ನು ಸ್ಥಾಪಿಸಿದೆ.

ವಿಶೇಷ ಸಾಮರ್ಥ್ಯವುಳ್ಳ ಉತ್ಸವ ಪ್ರತಿನಿಧಿಗಳಿಗೆ ಸ್ಥಳಗಳು ಮತ್ತು ಪ್ರದರ್ಶನಗಳನ್ನು ಪ್ರವೇಶಿಸಲು ವಿಸ್ತಾರವಾದ ವ್ಯವಸ್ಥೆಗಳನ್ನು ಮಾಡಲಾಗಿದೆ. ದೃಷ್ಟಿದೋಷವುಳ್ಳವರಿಗೆ  ಎಂಬೆಡೆಡ್ ಆಡಿಯೊ ಮತ್ತು ಎಂಬೆಡೆಡ್ ಸೈನ್ ಲ್ಯಾಂಗ್ವೇಜ್ ಕೂಡ ಲಭ್ಯವಾಗುವಂತೆ ಮಾಡಲಾಗಿದೆ. ಇದಲ್ಲದೆ, ವಿವಿಧ ಭಾಷೆಗಳಲ್ಲಿ ಡಬ್ ಆಗಿರುವ ಭಾರತೀಯ ಪನೋರಮಾ ಚಲನಚಿತ್ರಗಳನ್ನು ಸಹ ಪ್ರದರ್ಶಿಸಲಾಗುತ್ತದೆ.

ಐಎಫ್‌ಎಫ್‌ಐ ಅನ್ನು ವಿಶ್ವದ ಅತಿದೊಡ್ಡ ಚಲನಚಿತ್ರೋತ್ಸವಗಳಲ್ಲಿ ಒಂದಾಗಿ ಮಾಡಲು ಸ್ಥಳದಲ್ಲಿ ಹೆಚ್ಚಿನ ಸಿದ್ಧತೆಗಳು ಭರದಿಂದ ಸಾಗಿವೆ.

ಉದ್ಘಾಟನಾ ಸಮಾರಂಭ ದೂರದರ್ಶನದಲ್ಲಿ ನೇರ ಪ್ರಸಾರವಾಗಲಿದೆ. ವಯಾಕಾಮ್ ಮೀಡಿಯಾ ಪ್ರೈ. ಲಿಮಿಟೆಡ್, ಉದ್ಘಾಟನಾ ಮತ್ತು ಸಮಾರೋಪ ಸಮಾರಂಭಗಳಲ್ಲಿ ಸಾಂಸ್ಕೃತಿಕ ಪ್ರದರ್ಶನಗಳಿಗಾಗಿ ವಿಶೇಷ ಮಾಧ್ಯಮ ಮತ್ತು ಪ್ರಸಾರ ಪಾಲುದಾರನಾಗಿದ್ದು, ಕಲರ್ಸ್ ಟಿವಿ ಚಾನೆಲ್ ಮತ್ತು ಅದರ ಒಟಿಟಿ ಪ್ಲಾಟ್‌ಫಾರ್ಮ್ ಜಿಯೊಸಿನಿಮಾದಲ್ಲಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತದೆ.

 

 

* * *

 

iffi reel

(Release ID: 1978134) Visitor Counter : 112