ಬುಡಕಟ್ಟು ವ್ಯವಹಾರಗಳ ಸಚಿವಾಲಯ
ಗೋವಾದ ಪೊರ್ವೊರಿಮ್‌ನಲ್ಲಿ ವಿಕ್ಷಿತ್ ಭಾರತ್ ಸಂಕಲ್ಪ್ ಯಾತ್ರಾ ಐಇಸಿ ವ್ಯಾನ್‌ಗೆ ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ಚಾಲನೆ
ವಿಕ್ಷಿತ್ ಭಾರತ್ ಸಂಕಲ್ಪ ಯಾತ್ರೆಯು ಜನರಿಗೆ ಜಾಗೃತಿ ಮೂಡಿಸುವ ಮತ್ತು ಕಲ್ಯಾಣ ಯೋಜನೆಗಳ ಪ್ರಯೋಜನಗಳನ್ನು ಒದಗಿಸುವ ಗುರಿ ಹೊಂದಿದೆ
Posted On:
15 NOV 2023 6:20PM by PIB Bengaluru
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜಾರ್ಖಂಡ್‌ನ ಕುಂತಿಯಲ್ಲಿಂದು ಜಂಜಾತಿಯಾ ಗೌರವ್ ದಿನಾಚರಣೆ-2023 ಕಾರ್ಯಕ್ರಮದಲ್ಲಿ ‘ವಿಕ್ಷಿತ್ ಭಾರತ್ ಸಂಕಲ್ಪ ಯಾತ್ರೆ’ ಮತ್ತು ಪ್ರಧಾನ ಮಂತ್ರಿಗಳ ವಿಶೇಷ ದುರ್ಬಲ ಬುಡಕಟ್ಟು ಗುಂಪುಗಳ ಅಭಿವೃದ್ಧಿ ಮಿಷನ್ ಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ಅವರು ರಾಜ್ಯದಲ್ಲಿ ವಿಕ್ಷಿತ್ ಭಾರತ್ ಸಂಕಲ್ಪ ಯಾತ್ರೆಗೆ ಚಾಲನೆ ನೀಡುವ ಜತೆಗೆ, ಗೋವಾದ ಪೊರ್ವೊರಿಮ್‌ನ ಸಚಿವಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಹಿತಿ, ಶಿಕ್ಷಣ ಮತ್ತು ಸಂವಹನ (ಐಇಸಿ) ವ್ಯಾನ್‌ಗೆ ಚಾಲನೆ ನೀಡಿದರು. ನೈರ್ಮಲ್ಯ ಸೌಲಭ್ಯಗಳು, ಅಗತ್ಯ ಹಣಕಾಸು ಸೇವೆಗಳು, ವಿದ್ಯುತ್ ಸಂಪರ್ಕಗಳು, ಎಲ್‌ಪಿಜಿ ಸಿಲಿಂಡರ್‌ಗಳ ಲಭ್ಯತೆ, ಬಡವರಿಗೆ ವಸತಿ, ಆಹಾರ ಭದ್ರತೆ, ಸಮರ್ಪಕ ಪೋಷಣೆ, ವಿಶ್ವಾಸಾರ್ಹ ಆರೋಗ್ಯ ರಕ್ಷಣೆ, ಶುದ್ಧ ಕುಡಿಯುವ ನೀರು ಇತ್ಯಾದಿ ಕಲ್ಯಾಣ ಯೋಜನೆಗಳ ಅರಿವು ಮೂಡಿಸುವುದು ಮತ್ತು ಪ್ರಯೋಜನಗಳನ್ನು ಜನರಿಗೆ ತಲುಪಿಸಲು ಈ ಯಾತ್ರೆಯು ಗಮನ ಕೇಂದ್ರೀಕರಿಸುತ್ತದೆ. ಜತೆಗೆ, ಯಾತ್ರೆಯ ಸಮಯದಲ್ಲಿ ಸಂಭಾವ್ಯ ಫಲಾನುಭವಿಗಳ ವಿವರಗಳನ್ನು ಖಚಿತಪಡಿಸಿಕೊಂಡು, ದಾಖಲಾತಿ ಮಾಡಲಾಗುತ್ತದೆ.
ಗೋವಾ ಮುಖ್ಯಮಂತ್ರಿ ಡಾ. ಸಾವಂತ್ ಅವರು X ಪೋಸ್ಟ್‌ನಲ್ಲಿ ವಿವರ ನೀಡಿದ್ದು; "#ಜಂಜಾತಿಯಾ ಗೌರವ ದಿವಸ್-2023ರಲ್ಲಿ ವರ್ಚುವಲ್ ಆಗಿ ಭಾಗವಹಿಸಿದ್ದೇನೆ. ಭಗವಾನ್ #BirsaMunda ಅವರ ಜನ್ಮ ವಾರ್ಷಿಕೋತ್ಸವದ ಸಂದರ್ಭದಲ್ಲಿ ಗೌರವಾನ್ವಿತ ಪ್ರಧಾನ ಮಂತ್ರಿ ಶ್ರೀ @narendramodi Ji ಅವರು #ವಿಕ್ಷಿತ್ ಭಾರತ್ ಸಂಕಲ್ಪ ಯಾತ್ರೆಗೆ ಹಸಿರು ನಿಶಾನೆ ತೋರಿದರು. ಗೋವಾದ ಪೊರ್ವೊರಿಮ್‌ನಿಂದ ವಿಕ್ಷಿತ್ ಭಾರತ್ ಸಂಕಲ್ಪ ಯಾತ್ರೆಗೆ ಹಸಿರುನಿಶಾನೆ ತೋರಲಾಗಿದೆ ಎಂದಿದ್ದಾರೆ.
ವಿಕ್ಷಿತ್ ಭಾರತ್ ಸಂಕಲ್ಪ ಯಾತ್ರೆಯು ಭಾರತದ ಜನರನ್ನು ತಲುಪುವ ಗುರಿ ಹೊಂದಿದ್ದು, ಜಾಗೃತಿ ಮೂಡಿಸುವ ಮತ್ತು ಕಲ್ಯಾಣ ಯೋಜನೆಗಳ ಪ್ರಯೋಜನಗಳನ್ನು ಒದಗಿಸುವ ಗುರಿ ಹೊಂದಿದೆ. "ಗೌರವಾನ್ವಿತ ಪ್ರಧಾನಿ ಅವರು ವಿಕ್ಷಿತ್ ಭಾರತ್, ನಾರಿಶಕ್ತಿ, ಅನ್ನದಾತ, ಯುವಶಕ್ತಿ ಮತ್ತು ಮಧ್ಯಮ ವರ್ಗ ಮತ್ತು ಬಡವರು ಸೇರಿದಂತೆ 4 ಆಧಾರಸ್ತಂಭಗಳನ್ನು ಸ್ಥಾಪಿಸಿದರು. ಈ 4 ಆಧಾರಸ್ತಂಭಗಳನ್ನು ಬಲಪಡಿಸುವುದು ವಿಕ್ಷಿತ್ ಭಾರತವನ್ನು ನಿರ್ಮಿಸುತ್ತದೆ" ಎಂದು ಗೋವಾ ಸಿಎಂ ಎಕ್ಸ್ ಪೋಸ್ಟ್‌ನಲ್ಲಿ ವಿವರಿಸಿದ್ದಾರೆ.
ಈ ಸಂದರ್ಭದಲ್ಲಿ ಪಂಚಾಯತ್ ಸಚಿವ ಶ್ರೀ ಮೌವಿನ್ ಗೋಡಿನ್ಹೊ, ಸಹಕಾರ ಸಚಿವ ಶ್ರೀ ಸುಭಾಷ್ ಶಿರೋಡ್ಕರ್ ಮತ್ತು ಪಂಚಾಯತ್ ನಿರ್ದೇಶನಾಲಯದ ನಿರ್ದೇಶಕಿ ಶ್ರೀಮತಿ ಸಿದ್ಧಿ ಹಳರಂಕರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಜಾರ್ಖಂಡ್‌ನ ಕುಂತಿಯಲ್ಲಿ ನಡೆದ ಜಂಜಾತಿಯಾ ಗೌರವ್ ದಿವಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲ ಗಣ್ಯರು ವಾಸ್ತವಿಕವಾಗಿ ಭಾಗವಹಿಸಿದ್ದರು.
ಮುಂಬರುವ ದಿನಗಳಲ್ಲಿ ವಾಹನ(ವ್ಯಾನ್)ವು ಕ್ಯಾನಕೋನಾ, ದರ್ಬಂದೋರಾ, ಮೊರ್ಮುಗೋವಾ, ಪೊಂಡಾ, ಕ್ವಿಪೆಮ್, ಸಾಲ್ಸೆಟೆ, ಸಾಂಗುಯೆಮ್ ಮುಂತಾದ ಬ್ಲಾಕ್‌ಗಳನ್ನು ಒಳಗೊಂಡಂತೆ ರಾಜ್ಯದ ಉದ್ದಗಲಕ್ಕೂ ಸಂಚರಿಸಲಿದೆ.
ವಿಕ್ಷಿತ್ ಭಾರತ್ ಸಂಕಲ್ಪ ಯಾತ್ರೆ
ಈ ಯೋಜನೆಗಳ ಪ್ರಯೋಜನಗಳು ಎಲ್ಲಾ ಉದ್ದೇಶಿತ ಫಲಾನುಭವಿಗಳಿಗೆ ಕಾಲಮಿತಿಯಲ್ಲಿ ತಲುಪುವುದನ್ನು ಖಚಿತಪಡಿಸಿಕೊಳ್ಳುವ ಮೂಲಕ ಸರ್ಕಾರದ ಪ್ರಮುಖ ಯೋಜನೆಗಳ ಪರಿಪೂರ್ಣತೆ ಸಾಧಿಸುವುದು ಪ್ರಧಾನ ಮಂತ್ರಿ ಅವರ ನಿರಂತರ ಪ್ರಯತ್ನವಾಗಿದೆ. ಯೋಜನೆಗಳ ಪರಿಪೂರ್ಣತೆಯ ಈ ಗುರಿ ಸಾಧಿಸುವ ಪ್ರಮುಖ ಹೆಜ್ಜೆಯಾಗಿ, ಪ್ರಧಾನ ಮಂತ್ರಿ ಅವರು ಜಂಜಾತಿಯಾ ಗೌರವ್ ದಿವಸ್ ಸಂದರ್ಭದಲ್ಲಿ 'ವಿಕ್ಷಿತ್ ಭಾರತ್ ಸಂಕಲ್ಪ ಯಾತ್ರೆ' ಪ್ರಾರಂಭಿಸಿದರು.
ಜಾರ್ಖಂಡ್‌ನ ಕುಂತಿಯಲ್ಲಿ 'ವಿಕ್ಷಿತ್ ಭಾರತ್ ಸಂಕಲ್ಪ ಯಾತ್ರೆ'ಯ ಆರಂಭ ಗುರುತಿಸುವ ಐಇಸಿ (ಮಾಹಿತಿ, ಶಿಕ್ಷಣ ಮತ್ತು ಸಂವಹನ) ವ್ಯಾನ್‌ಗಳಿಗೆ ಪ್ರಧಾನ ಮಂತ್ರಿ ಚಾಲನೆ ನೀಡಿದರು. ಗಮನಾರ್ಹ ಸಂಖ್ಯೆಯ ಬುಡಕಟ್ಟು ಜನರನ್ನು ಹೊಂದಿರುವ ಜಿಲ್ಲೆಗಳಿಂದ ಯಾತ್ರೆಯು ಆರಂಭವಾಗುತ್ತದೆ. 2024 ಜನವರಿ 25ರ ವೇಳೆಗೆ ಈ ಕಾರ್ಯಕ್ರಮ ದೇಶದಾದ್ಯಂತ ಎಲ್ಲಾ ಜಿಲ್ಲೆಗಳನ್ನು ಒಳಗೊಳ್ಳಲಿದೆ.
***
(Release ID: 1977427)
Visitor Counter : 87