ಕಲ್ಲಿದ್ದಲು ಸಚಿವಾಲಯ

ಕಾರ್ಯಾಚರಣೆ ನಿಲುಗಡೆಯಾದ ಕಲ್ಲಿದ್ದಲು (ಡಿ-ಕೋಲ್ಡ್) ಗಣಿಗಳಲ್ಲಿ ಪಂಪ್ ಶೇಖರಣಾ ಯೋಜನೆಗಳನ್ನು ಅಭಿವೃದ್ಧಿಪಡಿಸಲು ಪ್ರಾರಂಭಿಸಿದ ಕೇಂದ್ರ ಕಲ್ಲಿದ್ದಲು ಸಚಿವಾಲಯ


ಕೋಲ್ ಇಂಡಿಯಾ ಅಂತಹ ಯೋಜನೆಗಳಿಗಾಗಿ 20 ಪರಿತ್ಯಕ್ತ ಗಣಿಗಳನ್ನು ಗುರುತಿಸುತ್ತದೆ

Posted On: 10 NOV 2023 4:26PM by PIB Bengaluru

ಕಲ್ಲಿದ್ದಲು ಗಣಿಗಾರಿಕೆ ರಹಿತ (ಅಗೆತ /ಕಾರ್ಯಾಚರಣೆ ನಿಲುಗಡೆಯಾದ) ಗಣಿಗಳಲ್ಲಿ ಪಂಪ್ ಸ್ಟೋರೇಜ್ ಪ್ರಾಜೆಕ್ಟ್ ಗಳನ್ನು (ಪಿಎಸ್ಪಿ) ಅಭಿವೃದ್ಧಿಪಡಿಸುವ ಯೋಜನೆಯನ್ನು ಕೇಂದ್ರ ಕಲ್ಲಿದ್ದಲು ಸಚಿವಾಲಯವು ಪ್ರಾರಂಭಿಸುತ್ತಿದೆ. ಇದು ವಿಶಾಲವಾದ ಭೂ ಬ್ಯಾಂಕ್ ಲಭ್ಯ ಸ್ಥಳಗಳನ್ನು ಆರ್ಥಿಕ ಅನುಕೂಲಗಳು ಮತ್ತು ಆರ್ಥಿಕ ಕಾರ್ಯಸಾಧ್ಯತೆಯನ್ನು ಹೆಚ್ಚಿಸಲು ಬಳಸಿಕೊಳ್ಳಲು ಅನುಕೂಲ ಮಾಡಿಕೊಡುತ್ತದೆ. ಪರ್ಯಾಯ ಇಂಧನ ಮೂಲಗಳ ಕಡೆಗೆ ವೈವಿಧ್ಯಗೊಳಿಸುವುದು ಯೋಜನೆಯ ಗುರಿಯಾಗಿದೆ. ಪಂಪ್ ಶೇಖರಣಾ ಯೋಜನೆಗಳ ಮೂಲಕ, ಕಲ್ಲಿದ್ದಲು ವಲಯದಲ್ಲಿ ಸುಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸುವ ಜಲವಿದ್ಯುತ್ ಅನ್ನು ಅಭಿವೃದ್ಧಿಪಡಿಸಲು ಸೌರ ಶಕ್ತಿಯನ್ನು ಬಳಸಿಕೊಳ್ಳಲು ಯೋಜಿಸಲಾಗಿದೆ. ಈ ಉಪಕ್ರಮವು ಹಗಲಿನಲ್ಲಿ ಸೌರ ಶಕ್ತಿಯನ್ನು ಬಳಸಿಕೊಳ್ಳುವ ಗುರಿಯನ್ನು ಹೊಂದಿದೆ ಮತ್ತು ರಾತ್ರಿಯಲ್ಲಿ ಜಲ-ವಿದ್ಯುತ್ ಉತ್ಪಾದನೆಯ ಉದ್ದೇಶವನ್ನು ಹೊಂದಿದೆ.

ಪಂಪ್ಡ್ ಸ್ಟೋರೇಜ್ ಪವರ್ ಪ್ಲಾಂಟ್ಗಳು ಗುರುತ್ವಾಕರ್ಷಣೆಯನ್ನು ಬಳಸಿಕೊಂಡು ವಿದ್ಯುಚ್ಛಕ್ತಿಯನ್ನು ಉತ್ಪಾದಿಸುತ್ತವೆ, ಇದನ್ನು ಹಿಂದೆ ಪಿಟ್ನಲ್ಲಿರುವ ಜಲಾಶಯದಿಂದ ಮೇಲ್ಮೈಯಲ್ಲಿರುವ ಮೇಲಿನ ಜಲಾಶಯಕ್ಕೆ ನೀರನ್ನು ಪಂಪ್ ಮಾಡಲಾಗಿದೆ. ನೀರಿನ ಕಡಿಮೆ ಬೇಡಿಕೆಯ ಅವಧಿಯಲ್ಲಿ, ನೀರನ್ನು ಹೆಚ್ಚಿನ ಜಲಾಶಯಕ್ಕೆ ಪಂಪ್ ಮಾಡಿ ಸಂಗ್ರಹಿಸಿ ಇಡಲಾಗುತ್ತದೆ. ಬೇಡಿಕೆ ಹೆಚ್ಚಾದಾಗ, ಪವರ್ಹೌಸ್ನಲ್ಲಿ ಟರ್ಬೈನ್ ಅನ್ನು ಬಳಸಲು ಮತ್ತು ಗ್ರಿಡ್ಗೆ ವಿದ್ಯುತ್ ಅನ್ನು ನೀಡಲು ನೀರನ್ನು ಬಿಡುಗಡೆ ಮಾಡಲಾಗುತ್ತದೆ. ಕಲ್ಲಿದ್ದಲು ಉತ್ಪಾದಿಸುವ ಪ್ರದೇಶಗಳಲ್ಲಿ ಬೃಹತ್ ಭೂಪ್ರದೇಶವನ್ನು ಹೊಂದಿರುವ 200 ಕ್ಕೂ ಹೆಚ್ಚು ಕಾರ್ಯಾಚರಣೆ ನಿಲುಗಡೆಯಾದ ಕಲ್ಲಿದ್ದಲ್ಲು (ಡಿ-ಕೋಲ್ಡ್) (ಡಿ-ಕೋಲ್ಡ್ ) ಗಣಿಗಳು ಬಳಕೆಗಾಗಿ ಲಭ್ಯವಿವೆ ಎಂಬುದು ಪ್ರಸ್ತುತ ಅಂದಾಜಿಸಲಾಗಿದೆ. ಈ ಗಣಿಗಳಲ್ಲಿ ಹೆಚ್ಚಿನವು ಕಡಿಮೆ ಜಲಾಶಯ, ನೀರಿನ ತಲೆ ಮತ್ತು ಭೂಮಿ ಲಭ್ಯವಿರುವ ಕಾರಣ ಪಿ.ಎಸ್.ಪಿ. ಯೋಜನೆಗಳ ಕಾರ್ಯಕ್ಕೆ ಬಳಸಿಕೊಳ್ಳಲು ಸಾಧ್ಯವಾಗಿವೆ.

ಕೇಂದ್ರ ಕಲ್ಲಿದ್ದಲು ಸಚಿವಾಲಯದ ಕಾರ್ಯದರ್ಶಿ ಹಾಗೂ ಕೋಲ್ ಇಂಡಿಯಾ ಲಿಮಿಟೆಡ್ (ಸಿಐಎಲ್) ಅಧ್ಯಕ್ಷತೆಯಲ್ಲಿ ನಡೆದ ವೈವಿಧ್ಯೀಕರಣ ಪರಿಶೀಲನಾ ಸಭೆಯಲ್ಲಿ ಪಂಪ್ ಶೇಖರಣಾ ಯೋಜನೆಗಳಿಗೆ ಮೌಲ್ಯಮಾಪನ ಮತ್ತು ಕಾರ್ಯಸಾಧ್ಯತೆಯ ಅಧ್ಯಯನಕ್ಕಾಗಿ 20 ಕ್ಕೂ ಹೆಚ್ಚು ಚಾಲನೆಯಲ್ಲಿ ಇಲ್ಲದ  ಗಣಿಗಳನ್ನು ಗುರುತಿಸಲಾಗಿದೆ ಎಂದು ತಿಳಿಸಿದರು. ಎನ್.ಎಲ್.ಸಿ.ಐ.ಎಲ್.  ಸಂಸ್ಥೆ ಸಹ ಪಿಎಸ್ಪಿ ಯೋಜನೆ ಕುರಿತು ಕಾರ್ಯಸಾಧ್ಯತೆಯ ಅಧ್ಯಯನವನ್ನು ಕೈಗೊಂಡಿದೆ. ಇದಲ್ಲದೆ, ಅಂತಹ ಯೋಜನೆಗಳನ್ನು ಕೈಗೊಳ್ಳಲು ಆಸಕ್ತಿ ಹೊಂದಿರುವ ಏಜೆನ್ಸಿಗಳೊಂದಿಗೆ ಮಧ್ಯಸ್ಥಗಾರರ ಸಮಾಲೋಚನೆಗಾಗಿ ಮತ್ತು ಪಂಪ್ ಶೇಖರಣಾ ಯೋಜನೆಗಳನ್ನು ಸ್ಥಾಪಿಸಲು ಬಳಸಬಹುದಾದ ಹೆಚ್ಚುವರಿ ಸೈಟ್ಗಳನ್ನು ಗುರುತಿಸಲು ನಿರ್ದೇಶನವನ್ನು ನೀಡಲಾಗಿದೆ. ಇಪಿಸಿ ಮತ್ತು ಪಿಪಿಪಿಯಂತಹ ವ್ಯವಹಾರ ಮಾದರಿಯನ್ನು ಮಧ್ಯಸ್ಥಗಾರರೊಂದಿಗೆ ಸಮಾಲೋಚಿಸಿ ಅಂತಿಮಗೊಳಿಸಬಹುದು ಮತ್ತು ಅಂತಹ ಯೋಜನೆಯನ್ನು ರಾಜ್ಯ ಸರ್ಕಾರಗಳು, ಖಾಸಗಿ ಸಂಸ್ಥೆಗಳು ಮತ್ತು ಸಂಶೋಧನಾ ಸಂಸ್ಥೆಗಳು ಸೇರಿದಂತೆ ವಿವಿಧ ಪಾಲುದಾರರ ಸಹಯೋಗದೊಂದಿಗೆ ಈ ಯೋಜನೆಯನ್ನು ಕಾರ್ಯಗತಗೊಳಿಸಬಹುದು.

ಕೇಂದ್ರ ಕಲ್ಲಿದ್ದಲು ಸಚಿವಾಲಯವು ಸುಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸಲು ಮತ್ತು ಸಂಪನ್ಮೂಲ ಬಳಕೆಯನ್ನು ಉತ್ತಮಗೊಳಿಸಲು ಬದ್ಧವಾಗಿದೆ. ಇಂತಹ ನೂತನ ಉಪಕ್ರಮವು ಸುಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸಲು ಮತ್ತು ಕಲ್ಲಿದ್ದಲು ವಲಯದ ಇಂಗಾಲದ ಹೆಜ್ಜೆಗುರುತನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಸಂಪನ್ಮೂಲಗಳ ಸಮರ್ಥ ಬಳಕೆಯನ್ನು ಖಾತ್ರಿಪಡಿಸುವಲ್ಲಿ ಮತ್ತು ನಾಗರಿಕರಿಗೆ ಸ್ಥಿರವಾದ ವಿದ್ಯುತ್ ಪೂರೈಕೆಯನ್ನು ನಿರ್ವಹಿಸುವಲ್ಲಿ ಕೇಂದ್ರ ಕಲ್ಲಿದ್ದಲು ಸಚಿವಾಲಯವು ದೃಢವಾಗಿದೆ.

**



(Release ID: 1976284) Visitor Counter : 64


Read this release in: English , Urdu , Hindi , Tamil