ವಸತಿ ಮತ್ತು ನಗರ ಬಡತನ ನಿರ್ಮೂಲನೆ ಸಚಿವಾಲಯ

ಕರ್ನಾಟಕದಲ್ಲಿ ತಗ್ಗಿಸುವುದು(ರೆಡ್ಯೂಸ್), ಮರುಬಳಕೆ (ರಿಯೂಸ್‌), ಮರುಸಂಸ್ಕರಣೆ (ರಿಸೈಕಲ್) ಮೂಲಕ ಸ್ವಚ್ಛ ದೀಪಾವಳಿಗೆ ಸಜ್ಜು


ಸ್ವಚ್ಛ ದೀಪಾವಳಿಗೆ ಸಹಿ ಆಂದೋಲನಕ್ಕಾಗಿ ಜನರನ್ನು ಉತ್ತೇಜಿಸಲು ಆರ್ ಆರ್ ಆರ್ ಕಿಯೋಸ್ಕ್ ಗಳ ಸ್ಥಾಪನೆ

Posted On: 10 NOV 2023 12:22PM by PIB Bengaluru

ಸ್ವಚ್ಛ ದೀಪಾವಳಿ ಶುಭ ದೀಪಾವಳಿ ಅಭಿಯಾನದಡಿಯಲ್ಲಿ ಹಲವು ಬಗೆಯ ಚಟುವಟಿಕೆಗಳು ಮತ್ತು ಉಪಕ್ರಮಗಳನ್ನು ಆರಂಭಿಸಲಾಗಿದ್ದು, ನಗರಗಳು ಸ್ವಚ್ಛ ಹಬ್ಬಗಳ ಆಚರಣೆಗೆ ಸಜ್ಜಾಗಿವೆ. ಕರ್ನಾಟಕ ತಗ್ಗಿಸುವುದು(ರೆಡ್ಯೂಸ್), ಮರುಬಳಕೆ (ರಿಯೂಸ್‌), ಮರುಸಂಸ್ಕರಣೆ (ರಿಸೈಕಲ್) (ಆರ್ ಆರ್ ಆರ್ ) ಕೇಂದ್ರಗಳನ್ನು ತೆರೆದ ಮೈದಾನಗಳು, ಮಾರುಕಟ್ಟೆ ಪ್ರದೇಶಗಳು ಮತ್ತು ಅಧಿಕ ಜನಸಂದಣಿ ಪ್ರದೇಶಗಳಲ್ಲಿ ಕಿಯೋಸ್ಕ್ ಗಳನ್ನು ಸ್ಥಾಪಿಸಿದೆ. ಈ ಕಿಯೋಸ್ಕ್ ಗಳು ಸಚ್ಛ ದೀಪಾವಳಿ ಸಹಿ ಸಂಗ್ರಹಾ ಅಬಿಯಾನವನ್ನು ಬೆಂಬಲಿಸಲು ತಮ್ಮ ಹಳೆಯ ಹಾಗೂ ಬಳಕೆ ಮಾಡದ ವಸ್ತುಗಳನ್ನು ನೀಡುವಂತೆ ಜನರಿಗೆ ಉತ್ತೇಜನ ನೀಡಲಾಗುತ್ತಿದೆ. ಈ ಆರ್ ಆರ್‌ ಆರ್ ಕೇಂದ್ರಗಳನ್ನು ಶಾಲಾ ಮಕ್ಕಳು ಮಾಡಿದ ಕಲಾ ವಸ್ತುಗಳು ಮತ್ತು ದೀಪಗಳು ಹಾಗೂ ಸ್ವಸಹಾಯ ಗುಂಪುಗಳು ಮತ್ತು ಸರ್ಕಾರೇತರ ಸಂಸ್ಥೆಗಳು ಇತ್ಯಾದಿ ಮಾಡಿದ ಪರಿಸರ ಸ್ನೇಹಿ ಉತ್ಪನ್ನಗಳಿಂದ ಅಲಂಕರಿಸಲಾಗುತ್ತದೆ. ಸಮುದಾಯದ ಭಾಗಿದಾರಿಕೆಗಾಗಿ, ಎಲ್ಲಾ ಧಾರ್ಮಿಕ ಸ್ಥಳಗಳು ಶುಭ ದೀಪಾವಳಿ ರಂಗೋಲಿಯನ್ನು ನೈಸರ್ಗಿಕ ಹೂವುಗಳು, ಎಲೆಗಳು ಅಥವಾ ನೈಸರ್ಗಿಕ ಬಣ್ಣಗಳಿಂದ ಮಾಡಲು ಪ್ರೋತ್ಸಾಹಿಸಲಾಗುತ್ತಿದೆ. ಧಾರ್ಮಿಕ ಸ್ಥಳಗಳ ಹೊರಗೆ, ಮಾರುಕಟ್ಟೆಗಳು, ಬಸ್ ನಿಲ್ದಾಣಗಳು, ಶಾಪಿಂಗ್ ಮಾಲ್‌ಗಳು ಮತ್ತು ಥಿಯೇಟರ್‌ಗಳಲ್ಲಿ ನಾಗರಿಕರ ಪ್ರತಿಜ್ಞೆಗಳನ್ನು ನೋಂದಾಯಿಸಲು ಕ್ಯೂಆರ್ (QR) ಕೋಡ್ ಸ್ಟ್ಯಾಂಡಿಗಳನ್ನು ಇರಿಸಲಾಗಿದೆ.

ಪರಿಸರ ಸ್ನೇಹಿ ಮತ್ತು ಸ್ಥಳೀಯವಾಗಿ ತಯಾರಿಸಿದ ಉತ್ಪನ್ನಗಳನ್ನು ಪ್ರೋತ್ಸಾಹಿಸಲು, ಎಪಿಎಂಸಿಗಳ ಜೊತೆ ಸೇರಿ ವಿಶೇಷ ಮಾರುಕಟ್ಟೆಗಳನ್ನು ತೆರೆಯಲಾಗಿದ್ದು, ಅಲ್ಲಿ ಸ್ವಸಹಾಯ ಗುಂಪುಗಳು ತಯಾರಿಸಿರುವ ಅಲಂಕಾರಿಕ ವಸ್ತುಗಳು, ಉಡುಗೊರೆಗಳು ಮತ್ತು ಸಿಹಿತಿಂಡಿಗಳು ಹಾಗೂ ಪರಿಸರ ಸ್ನೇಹಿ ದೀಪಾವಳಿ ಉತ್ಪನ್ನಗಳನ್ನು ಒಳಗೊಂಡಿರುತ್ತದೆ, ಇದು ಜನರಿಗೆ ಜವಾಬ್ದಾರಿಯುತ ಆಯ್ಕೆಗಳನ್ನು ಮಾಡಲು ಪ್ರೋತ್ಸಾಹ ನೀಡುತ್ತದೆ.

ಇದಲ್ಲದೆ, ನಗರ ಸ್ಥಳೀಯ ಸಂಸ್ಥೆ(ಯುಎಲ್ ಬಿ)ಗಳು ಸಹ ತಮ್ಮದೇ ಆದ ವಿಶಿಷ್ಟ ಉಪಕ್ರಮಗಳನ್ನು ಆರಂಭಿಸಿವೆ, ಉದಾಹರಣೆಗೆ ಹಾಸನದಲ್ಲಿ, ಹಾಸನಾಂಬ ದೇವಾಲಯ ವರ್ಷಕ್ಕೆ ಒಂದೇ ಬಾರಿ ದೀಪಾವಳಿ ಸಮಯದಲ್ಲಿ ತೆರೆಯುತ್ತದೆ. ಈ ವೇಳೆ ದೇವರ ದರ್ಶನಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಚಿಂತನಶೀಲ ಉಪಕ್ರಮದಲ್ಲಿ, ಹಾಸನ ಸ್ಥಳೀಯ ಸಂಸ್ಥೆಯು ದೇವಾಲಯದ ಸಂದರ್ಶಕರೊಂದಿಗೆ ತೊಡಗಿಸಿಕೊಳ್ಳುವ ಮೂಲಕ ಜಾಗೃತಿ ಮತ್ತು ಏಕತೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ, ದೇವಾಲಯದಲ್ಲಿ QR ಕೋಡ್ ಸ್ಟ್ಯಾಂಡಿಗಳನ್ನು ಸ್ಥಾಪಿಸಿ, ಸ್ವಚ್ಛ ಹಸಿರು ದೀಪಾವಳಿಗಾಗಿ ಸ್ವಚ್ಛ ದೀಪಾವಳಿ ಸಹಿ ಅಭಿಯಾನಕ್ಕೆ ಸಹಿ ಹಾಕಲು ಭಕ್ತರನ್ನು ಆಹ್ವಾನಿಸುತ್ತದೆ. ಇದು ಕಸ ಮುಕ್ತ ನಗರಗಳಿಗಾಗಿ ಒಗ್ಗಟ್ಟಿನ ಭಾವನೆ ಮತ್ತು ಹಂಚಿಕೆಯ ಉದ್ದೇಶವನ್ನು ಬೆಳೆಸುವ ಗುರಿ ಹೊಂದಿದೆ.

ಇದೇ ವೇಳೆ ಉಡುಪಿಯ ಪ್ರಸಿದ್ಧ ಪ್ರವಾಸಿ ಕಡಲತೀರದಲ್ಲಿ ಸಾರ್ವಜನಿಕರ ಗಮನ ಸೆಳೆಯಲು ಮರಳಿನ ಕಲೆಗಳನ್ನು ಬಿಡಿಸಲಾಗಿದೆ. ವಿಜಯನಗರದಲ್ಲಿ ಹಸಿರು ಪಟಾಕಿ/ಪಟಾಕಿಗಳಿಂದ ಮಾಲಿನ್ಯದ ಬಗ್ಗೆ ಜಾಗೃತಿ ಮೂಡಿಸಲು ಕೊಳಚೆ ಪ್ರದೇಶಗಳಲ್ಲಿ ಪೌರಕಾರ್ಮಿಕರಿಂದ ಮಣ್ಣಿನ ದೀಪಗಳನ್ನು (ಹಣತೆ) ವಿತರಿಸಲಾಗುತ್ತಿದೆ. ನಾಗರಿಕರು, ಧಾರ್ಮಿಕ ಸಂಸ್ಥೆಗಳು, ನಗರ ಸ್ಥಳೀಯ ಸಂಸ್ಥೆಗಳು, ನಗರಾಡಳಿತ  ಸಂಸ್ಥೆಗಳು ಮತ್ತು ಸರ್ಕಾರವು ಮಾಡಿದ ಸಂಯೋಜಿತ ಮತ್ತು ಜಾಗೃತ ಪ್ರಯತ್ನಗಳು ಸ್ವಚ್ಛ ದೀಪಾವಳಿ ಮತ್ತು ಪರಿಸರ ಸ್ನೇಹಿ ಆಚರಣೆಗಳಿಗೆ ಅನುಕೂಲಕರ ವಾತಾವರಣ ಸೃಷ್ಟಿಸಿವೆ.

***



(Release ID: 1976153) Visitor Counter : 72


Read this release in: English , Urdu , Hindi , Tamil