ನೀತಿ ಆಯೋಗ

​​​​​​​ನಾರಿ ಶಕ್ತಿ ಕುರಿತು ಜಿ20 ವಿಷಯಾಧಾರಿತ ಕಾರ್ಯಾಗಾರ: ನೀತಿ ಆಯೋಗ ಆಯೋಗ ಆಯೋಜಿಸಿದ್ದ ಮಹಿಳಾ ನೇತೃತ್ವದ ಅಭಿವೃದ್ಧಿಯಡೆಗೆ ವಿಷಯ

Posted On: 09 NOV 2023 5:15PM by PIB Bengaluru

ನವ ದೆಹಲಿ ನಾಯಕರ ಘೋಷಣೆ 2023 (ಎನ್‌ಡಿಎಲ್‌ಡಿ 2023)ರ ಪರಿಣಾಮವಾಗಿ ಹೊರಹೊಮ್ಮಿದ "ನಾರಿ ಶಕ್ತಿ: ಮಹಿಳಾ ನೇತೃತ್ವದ ಅಭಿವೃದ್ಧಿ" ವಿಷಯ ಕುರಿತ ಕಾರ್ಯಾಗಾರ 2023ರ ನವೆಂಬರ್ 8ರಂದು ನವದೆಹಲಿಯಲ್ಲಿ ನಡೆಸಲಾಯಿತು. ನೀತಿ ಆಯೋಗ ಸಂಸ್ಥೆಯು ಇನ್ಸ್ಟಿಟ್ಯೂಟ್‌ ಆಫ್ ವಾಟ್‌ ವರ್ಕ್ಸ್ ಟು ಅಡ್ವಾನ್ಸ್ ಜಂಡರ್‌ ಈಕ್ವಾಲಿಟಿʼ (ಐಡಬ್ಲ್ಯೂಡಬ್ಲ್ಯೂಎಜಿಇ) ಸಹಯೋಗದೊಂದಿಗೆ ಈ ಕಾರ್ಯಾಗಾರವನ್ನು ಆಯೋಜಿಸಿತ್ತು. ಈ ಕಾರ್ಯಾಗಾರವು ನೀತಿ ಆಯೋಗದಿಂದ ಎನ್‌ಡಿಎಲ್‌ಡಿ 2023ರ ಕಾರ್ಯಾಚರಣಾ ಅಂಶಗಳ ಸರಣಿ ಭಾಗವಾಗಿ ನಡೆಯಿತು.

ಕಾರ್ಯಾಗಾರವು ಆರ್ಥಿಕ ಮತ್ತು ಸಾಮಾಜಿಕ ಸಬಲೀಕರಣದ ಮೂಲಕ ಆರ್ಥಿಕತೆಯಲ್ಲಿ ಮಹಿಳೆಯರ ಪಾತ್ರವನ್ನು ಹೆಚ್ಚಿಸಲು ನಿರ್ದಿಷ್ಟ ವಿಷಯಗಳ ಮೇಲೆ ಕೇಂದ್ರೀಕೃತವಾಗಿತ್ತು. ಸ್ವ-ಸಹಾಯ ಗುಂಪುಗಳು (ಎಸ್‌ಎಚ್‌ಜಿಗಳು), ರೈತ ಉತ್ಪಾದಕ ಸಂಸ್ಥೆಗಳಂತಹ (ಎಫ್‌ಪಿಒಗಳು) ಸಾಮೂಹಿಕವಾಗಿ ಮಹಿಳೆಯರು ತೊಡಗಿಸಿಕೊಳ್ಳುವ ಆರ್ಥಿಕ ಚಟುವಟಿಕೆಗಳನ್ನು ಬಲಪಡಿಸುವ ವಿಷಯಗಳ ಕುರಿತು ಚರ್ಚೆಗಳು ನಡೆದವು; ಲಿಂಗ ಕೌಶಲ್ಯಗಳ ಅಂತರ ತಗ್ಗಿಸುವುದು ಮತ್ತು ಮಹಿಳಾ ಉದ್ಯಮಿಗಳನ್ನು ಉತ್ತೇಜಿಸುವುದು; ಹಾಗೂ ಮಹಿಳಾ ಸಬಲೀಕರಣಕ್ಕಾಗಿ ಕಾನೂನು ರಕ್ಷಣೆಗಳನ್ನು ಬಲಪಡಿಸುವ ಅಂಶಗಳಿಗೂ ಒತ್ತು ನೀಡಿದೆ.

ನೀತಿ ಆಯೋಗದ ಸದಸ್ಯ ಡಾ.ವಿ.ಕೆ. ಪಾಲ್ ಅವರ ಉದ್ಘಾಟನಾ ಮಾತುಗಳೊಂದಿಗೆ ಪ್ರಾರಂಭವಾದ ಕಾರ್ಯಾಗಾರದಲ್ಲಿ ಅವರು, ಕಳೆದ ಕೆಲವು ವರ್ಷಗಳಿಂದ ವಿವಿಧ ಉಪಕ್ರಮಗಳು ಮತ್ತು ಕಾರ್ಯಕ್ರಮಗಳ ಮೂಲಕ ನಮ್ಮ ಗೌರವಾನ್ವಿತ ಪ್ರಧಾನ ಮಂತ್ರಿಗಳು ಮಹಿಳಾ ಕೇಂದ್ರಿತ ಅಭಿವೃದ್ಧಿಗೆ ಒತ್ತು ನೀಡಿದ್ದಾರೆ ಎಂದು ತಿಳಿಸಿದರು. ಆದಾಗ್ಯೂ, ಅವರು ಮಹಿಳಾ ಕಾರ್ಮಿಕ ಬಲದ ಭಾಗವಹಿಸುವಿಕೆ ಪ್ರಮಾಣ ಕಡಿಮೆಯಿರುವ ಸವಾಲಿನ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ಹಾಗೆಯೇ ಮಹಿಳೆಯರನ್ನು ಕ್ರಿಯಾಶೀಲಗೊಳಿಸುವ ಪರಿಸರ ವ್ಯವಸ್ಥೆಯನ್ನು ಒದಗಿಸುವ ಮೂಲಕ ಸಾಮಾಜಿಕ ಬಂಡವಾಳವನ್ನು ಹತೋಟಿಗೆ ತರಲು ಒತ್ತು ನೀಡಿದರು. ಅವರು ಜಿ20 ಆದ್ಯತೆಗಳು ಮತ್ತು ರಾಷ್ಟ್ರೀಯ ಕಾರ್ಯಸೂಚಿಗಳ ಮಾರ್ಗಗಳನ್ನು ಸಂಯೋಜಿಸಲು ಕರೆ ನೀಡುವ ಜತೆಗೆ ಆ ಗುರಿ ಸಾಧನೆಗೆ ಪೂರಕವಾದ ಕ್ರಿಯಾಶೀಲ ಕಾರ್ಯತಂತ್ರಗಳನ್ನು ರೂಪಿಸುವ ಬಗ್ಗೆಯೂ ಗಮನ ನೀಡದ್ದರು ಎಂದು ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಜಂಟಿ ಕಾರ್ಯದರ್ಶಿ ಡಾ. ಪ್ರೀತಂ ಬಿ. ಯಶವಂತ್, "ಮಹಿಳೆಯರು ಇನ್ನು ಮುಂದೆ ಅಭಿವೃದ್ಧಿಯ ಸಂವಾದದಲ್ಲಿ ಸಕ್ರಿಯವಾಗಿ ಭಾಗವಹಿಸುವಂತಹವರಾಗಬೇಕು. ಜಿ 20 ನಿಜವಾಗಿಯೂ ಜನ ಕೇಂದ್ರಿತ ಅಭಿವೃದ್ಧಿಗೆ ಒತ್ತು ನೀಡಿದ್ದು,  ಅಲ್ಲಿ ಮಹಿಳಾ ನೇತೃತ್ವದ ಅಭಿವೃದ್ಧಿಯನ್ನು 'ಜನ ಭಾಗ್ಯದಾರಿʼ  ಚಟುವಟಿಕೆಗಳ ಮೂಲಕ ಪ್ರದರ್ಶಿಸಲಾಗುತ್ತದೆ ಎಂದು ಅವರು ಒತ್ತಿ ಹೇಳಿದರು.

ಡಬ್ಲ್ಯೂ20 ಇಂಡಿಯಾದ ಅಧ್ಯಕ್ಷರಾದ ಡಾ. ಸಂಧ್ಯಾ ಪುರೇಚಾ ಮಾತನಾಡಿ, "ಮಹಿಳೆಯರು ಸಾಕಾರಗೊಳಿಸುವ ಶಕ್ತಿಯನ್ನು ನಾರಿ ಶಕ್ತಿ ಆವರಿಸುತ್ತದೆ. ಹಾಗೆಯೇ ಮಹಿಳಾ ನೇತೃತ್ವದ ಅಭಿವೃದ್ಧಿಯು ಸಮಾನ ಸಮಾಜಕ್ಕೆ ಅಗತ್ಯವಾದ ನೈತಿಕ ಹೊಣೆಗಾರಿಕೆಯಾಗಿದೆ,ʼʼ ಎಂದು ಒತ್ತಿ ಹೇಳಿದರು.

ಆರ್ಥಿಕತೆಯಲ್ಲಿ ಮಹಿಳೆಯರು ವಿಷಯ: ಮಹಿಳೆಯರ ಆರ್ಥಿಕ ಮತ್ತು ಸಾಮಾಜಿಕ ಸಬಲೀಕರಣವನ್ನು ಹೆಚ್ಚಿಸುವುದು ಹಾಗೂ ಮಹಿಳಾ ನೇತೃತ್ವದ ಅಭಿವೃದ್ಧಿಯನ್ನು ಸಾಧಿಸಲು ಮಹಿಳಾ ಕಾರ್ಮಿಕ ಬಲದ ಭಾಗವಹಿಸುವಿಕೆಯನ್ನು ಹೆಚ್ಚಿಸುವ ವಿಷಯ ಕೇಂದ್ರಿತವಾಗಿದೆ. ಕೌಟುಂಬಿಕ ಮತ್ತು ಆರೈಕೆ ಕೆಲಸದಲ್ಲಿ ಲಿಂಗ ಅಸಮಾನತೆಯನ್ನು ಗುರುತಿಸುವಂತಹ ಸಮಸ್ಯೆಗಳು; ಹೆಚ್ಚಿನ ಮಹಿಳೆಯರು ಉದ್ಯೋಗಿಗಳಲ್ಲಿ ಅರ್ಥಪೂರ್ಣವಾಗಿ ಭಾಗವಹಿಸಲು ಅನುವು ಮಾಡಿಕೊಡಲು ಈ ವಲಯದಲ್ಲಿ ಹೂಡಿಕೆಯನ್ನು ಹೆಚ್ಚಿಸುವುದು; ಗಿಗ್ ಆರ್ಥಿಕತೆಯ ಸಾಮರ್ಥ್ಯವನ್ನು ಅನ್ವೇಷಿಸುವುದು; ಮಹಿಳೆಯರಿಗೆ ಲಿಂಗ ಕೌಶಲ್ಯ ಅಂತರ ನಿವಾರಣೆ ಮತ್ತು ಮಹಿಳೆಯರಿಗೆ ಸಾಮಾಜಿಕ ಭದ್ರತೆ ಒದಗಿಸುವುದು; ಲಿಂಗ ಒಳಗೊಳ್ಳುವಿಕೆ ಮತ್ತು ಬೆಂಬಲ ಕಾರ್ಯಸ್ಥಳಗಳನ್ನು ರಚಿಸಲು ನೀತಿಗಳನ್ನು ಹೆಚ್ಚಿಸುವುದು; ಮತ್ತು ಮಹಿಳಾ ಉದ್ಯೋಗಿಗಳನ್ನು ಹೆಚ್ಚಿಸಲು ಮತ್ತು ಉಳಿಸಿಕೊಳ್ಳುವಲ್ಲಿ ಖಾಸಗಿ ವಲಯದ ಪಾತ್ರದ ಬಗ್ಗೆಯೂ ಚರ್ಚಿಸಲಾಯಿತು.

ಮಹಿಳಾ ಒಳಗೊಳ್ಳುವಿಕೆ ವಿಷಯ: ಸ್ವಸಹಾಯ ಸಂಘಗಳು (ಎಸ್‌ಎಚ್‌ಜಿ), ಮಹಿಳಾ ನೇತೃತ್ವದ ಎಫ್‌ಪಿಒಗಳ ಬಲವರ್ಧನೆ ಮತ್ತು ಗ್ರಾಮೀಣ ಮಹಿಳಾ ನಾಯಕತ್ವ ಸಾಮರ್ಥ್ಯಗಳು ಮಹಿಳಾ ಸಮೂಹಗಳ ಜಾಗದಲ್ಲಿ ಉತ್ತಮ ಅಭ್ಯಾಸಗಳನ್ನು ಹಂಚಿಕೊಳ್ಳಲು ಮತ್ತು ಅವುಗಳನ್ನು ಗ್ರಾಮೀಣ ಭಾರತದಾದ್ಯಂತ ಅಳೆಯುವ ತಂತ್ರಗಳನ್ನು ಹಂಚಿಕೊಳ್ಳುವುದರ ಮೇಲೆ ಕೇಂದ್ರೀಕರಿಸಿದೆ. ದೊಡ್ಡ ಉತ್ಪಾದಕ ಉದ್ಯಮಗಳು ಅಥವಾ ಸಮೂಹಗಳ ರಚನೆ ಮತ್ತು ಗ್ರಾಮೀಣ ಮಹಿಳೆಯರಲ್ಲಿ ನಾಯಕತ್ವದ ಸಾಮರ್ಥ್ಯಗಳನ್ನು ಬೆಳೆಸುವ ಮೂಲಕ ಈ ಮಹಿಳಾ ಸಮೂಹಗಳು ಆರ್ಥಿಕ ಸಬಲೀಕರಣದ ಮುಂದಿನ ಹಂತವನ್ನು ತಲುಪಲು ಕಾರ್ಯತಂತ್ರಗಳನ್ನು ಅಭಿವೃದ್ಧಿಪಡಿಸುವಲ್ಲಿ ತೊಡಗಿರುವ ಪ್ರಯತ್ನದ ಭಾಗವೂ ಆಗಿದೆ.

ಮಹಿಳೆಯರು ಮತ್ತು ಕೆಲಸದ ಭವಿಷ್ಯದ ವಿಷಯ: ಉದ್ಯೋಗಗಳಿಗೆ ಪ್ರವೇಶಕ್ಕಾಗಿ ಡಿಜಿಟಲ್ ಮತ್ತು ಕೌಶಲ್ಯ ಅಂತರವನ್ನು ನಿವಾರಿಸುವುದು ಹಾಗೂ ಮಹಿಳಾ ಉದ್ಯಮಶೀಲತೆಯನ್ನು ಬಲಪಡಿಸುವ ಮೂಲಕ ಡಿಜಿಟಲ್ ಕೌಶಲ್ಯ ಮತ್ತು ಮೂಲಸೌಕರ್ಯಕ್ಕೆ ಮಹಿಳೆಯರ ಪ್ರವೇಶವನ್ನು ಹೆಚ್ಚಿಸುವುದು. ಗುಣಮಟ್ಟ ಮತ್ತು ಸುರಕ್ಷತೆಗೆ ಆದ್ಯತೆ ನೀಡುವುದು. ಸುರಕ್ಷಿತ ಮತ್ತು ಅಂತರ್ಗತ ಡಿಜಿಟಲ್ ಸಾಕ್ಷರತೆಯ ಅನುಭವವನ್ನು ಖಾತರಿಪಡಿಸಿಕೊಳ್ಳಲು ಒತ್ತು ನೀಡಲಾಗಿದೆ. ಇದು ಲಿಂಗ ಪಾತ್ರಗಳನ್ನು ರೂಪಿಸುವ ರಚನಾತ್ಮಕ ಸಮಸ್ಯೆಗಳನ್ನು ಪರಿಹರಿಸುವ ಮೂಲಕ ಅಸಾಂಪ್ರದಾಯಿಕ ವಲಯಗಳಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಉತ್ತೇಜಿಸಲು ಉದ್ಯೋಗದಾತರನ್ನು ಉತ್ತೇಜಿಸುವತ್ತ ಗಮನಹರಿಸಿತು. ಇದರಿಂದಾಗಿ ಮಹಿಳಾ ಉದ್ಯಮಶೀಲತೆ ಮತ್ತು ವೃತ್ತಿಜೀವನದ ಆಕಾಂಕ್ಷೆಗಳ ವೈವಿಧ್ಯತೆಯನ್ನು ಉತ್ತೇಜಿಸುತ್ತದೆ.

ಮಹಿಳಾ ಸಬಲೀಕರಣಕ್ಕಾಗಿ ಕಾನೂನು ಸುರಕ್ಷತಾ ವಿಭಾಗದಲ್ಲಿ ಸುಧಾರಿತ ಸಾರ್ವಜನಿಕ ಮೂಲಸೌಕರ್ಯಗಳ ಮೂಲಕ ಮಹಿಳಾ ಸುರಕ್ಷತೆಗೆ ಆದ್ಯತೆ ನೀಡಿ ಸಕ್ರಿಯಗೊಳಿಸುವ ಪರಿಸರ ವ್ಯವಸ್ಥೆಯನ್ನು ರಚಿಸುವ ಬಗ್ಗೆ ಚರ್ಚೆಗಳು ಕೇಂದ್ರೀಕೃತವಾಗಿವೆ. ಪರಿಣಾಮಕಾರಿ ಮೇಲ್ವಿಚಾರಣೆ, ಮೌಲ್ಯಮಾಪನ ಮತ್ತು ಹೊಣೆಗಾರಿಕೆ ವ್ಯವಸ್ಥೆಯ ಮೂಲಕ ಲಿಂಗ-ಸ್ನೇಹಿ ಕಾನೂನುಗಳ ಅನುಷ್ಠಾನವನ್ನು ಬಲಪಡಿಸುವುದು ಹಾಗೂ ಮಹಿಳಾ ಕೇಂದ್ರಿತ ಅಭಿವೃದ್ಧಿಗಾಗಿ ಸಾಕ್ಷ್ಯ ಆಧಾರಿತ ನೀತಿಯನ್ನು ಅಭಿವೃದ್ಧಿಪಡಿಸುವತ್ತಲೂ ಗಮನ ಹರಿಸಲಾಗಿದೆ.

ಒಟ್ಟಾರೆ, ಈ ಕಾರ್ಯಾಗಾರವು ತಜ್ಞರು, ಶಿಕ್ಷಣ ತಜ್ಞರು, ತಜ್ಞರು ಮತ್ತು ನಾಗರಿಕ ಸಮಾಜಕ್ಕೆ ವೇದಿಕೆಯನ್ನು ಒದಗಿಸಿತ್ತು. ಹಾಗೆಯೇ ಲಿಂಗ ಸಬಲೀಕರಣದ ಕುರಿತು ಕೆಲಸ ಮಾಡುವ ಚಿಂತಕರ ಚಾವಡಿಯ ಪ್ರತಿನಿಧಿಗಳು ಸಹಕರಿಸಲು ಮತ್ತು ಸಮಗ್ರ ಲಿಂಗ ಸಮಾನತೆ ಮತ್ತು ಸಬಲೀಕರಣಕ್ಕಾಗಿ ಮಾರ್ಗಸೂಚಿಯನ್ನು ವಿನ್ಯಾಸಗೊಳಿಸುವತ್ತ ಬೆಳಕು ಚೆಲ್ಲುವ ಪ್ರಯತ್ನ ಮಾಡಿತು.

***



(Release ID: 1976080) Visitor Counter : 95


Read this release in: English , Urdu , Hindi , Marathi