ಕಾನೂನು ಮತ್ತು ನ್ಯಾಯ ಸಚಿವಾಲಯ

ವಿಶೇಷ ಅಭಿಯಾನ 3.0 ರಲ್ಲಿ ಪ್ರಶಂಸನೀಯ ಸಾಧನೆ ಮಾಡಿರುವ ಕಾನೂನು ವ್ಯವಹಾರಗಳ ಇಲಾಖೆ 

Posted On: 08 NOV 2023 5:11PM by PIB Bengaluru

ವಿಶೇಷ ಅಭಿಯಾನ 2.0 ರ ಅದ್ಭುತ ಯಶಸ್ಸಿನ ನಂತರ, ಸ್ವಚ್ಛತೆ ಮತ್ತು ಬಾಕಿ ಇರುವ ಉಲ್ಲೇಖಗಳ ವಿಲೇವಾರಿಯ ತನ್ನ ಉದ್ದೇಶಗಳನ್ನು ಸಾಧಿಸುವಲ್ಲಿ ಕೇಂದ್ರ ಸರ್ಕಾರದ ಆಡಳಿತ ಸುಧಾರಣೆಗಳು ಮತ್ತು ಸಾರ್ವಜನಿಕ ಕುಂದುಕೊರತೆಗಳ ಇಲಾಖೆ (DARP) ಕಾರ್ಯಕ್ರಮದ ಆವೇಗವನ್ನು ಮುಂದುವರಿಸಲು ವಿಶೇಷ ಅಭಿಯಾನ 3.0 ನ್ನು ಆರಂಭಿಸಿದೆ. 

ಅದೇ ರೀತಿ, ಸಾರ್ವಜನಿಕ ಕುಂದುಕೊರತೆಗಳ ಪರಿಣಾಮಕಾರಿ ವಿಲೇವಾರಿ, ಬಾಕಿ ಇರುವ ಉಲ್ಲೇಖಗಳು, ಸಂಸದೀಯ ಭರವಸೆಗಳು, ಭೌತಿಕ ದಾಖಲೆಗಳ ಬೃಹತ್ ಸಂಗ್ರಹಗಳ ಡಿಜಿಟಲೀಕರಣ ಇತ್ಯಾದಿ ಕ್ಷೇತ್ರಗಳಲ್ಲಿ ವಿಶೇಷ ಅಭಿಯಾನದಲ್ಲಿ ಶ್ಲಾಘನೀಯ ಸಾಧನೆಗಳನ್ನು ಮಾಡಿರುವ ಕಾನೂನು ವ್ಯವಹಾರಗಳ ಇಲಾಖೆಯು ಅಕ್ಟೋಬರ್ 2 ಗಾಂಧಿ ಜಯಂತಿ ದಿನದಿಂದ ಅಕ್ಟೋಬರ 31, 2023ರವರೆಗೆ ವಿಶೇಷ ಅಭಿಯಾನ 3.0 ನಲ್ಲಿ ಭಾಗವಹಿಸಿತು. ಕಾನೂನು ವ್ಯವಹಾರಗಳ ಇಲಾಖೆಯು ತನ್ನ ದೈನಂದಿನ ಕೆಲಸದಲ್ಲಿ ವಿಶೇಷ ಸ್ವಚ್ಛತಾ ಅಭಿಯಾನದ ಚೈತನ್ಯವನ್ನು ಮೈಗೂಡಿಸಿಕೊಂಡಿದೆ ಮತ್ತು ಅದು ನಿರಂತರ ಪ್ರಕ್ರಿಯೆಯಾಗಿದೆ ಎಂದು ಉಲ್ಲೇಖಿಸುವುದು ಸಮಂಜಸವಾಗಿದೆ.

ವಿಶೇಷ ಅಭಿಯಾನ 3.0 ನ್ನು ಪ್ರಾರಂಭಿಸುವ ಮೊದಲು ಮತ್ತು ಶರವೇಗದಲ್ಲಿ ಗಮನಾರ್ಹ ಸಾಧನೆಗಳನ್ನು ದಾಖಲಿಸುವ ಮೊದಲು ಕಾರ್ಯಸಾಧ್ಯವಾದ ಗುರಿಗಳ ಗುರುತಿಸುವಿಕೆಗೆ ಮತ್ತು ಕಾರ್ಯಸಾಧ್ಯ ಆದ್ಯತೆ ಗುರಿಗಳನ್ನು ಸಾಧಿಸಲು ಸಹಾಯ ಮಾಡಿದೆ. 

ವಿಶೇಷ ಅಭಿಯಾನದ ಭಾಗವಾಗಿ, 9,300 ಭೌತಿಕ ದಾಖಲೆಗಳನ್ನು ಪರಿಶೀಲಿಸಲು ನಿರ್ಧರಿಸಲಾಗಿದೆ. ಅವುಗಳಲ್ಲಿ 9,263 ದಾಖಲೆಗಳನ್ನು ಪರಿಶೀಲಿಸಲಾಗಿದೆ ಮತ್ತು ಇಂದಿನವರೆಗೆ 3,903 ದಾಖಲೆಗಳನ್ನು ತೆಗೆದುಹಾಕಲಾಗಿದೆ.

ಸ್ವಚ್ಛತಾ ಅಭಿಯಾನವನ್ನು ಸಹ ಕೈಗೊಳ್ಳಲಾಯಿತು, ಅದರಲ್ಲಿ ರದ್ದಿಯಂತಹ ಭೌತಿಕ ತ್ಯಾಜ್ಯಗಳು, ನಿಷ್ಟ್ರಯೋಜಕ ವಸ್ತುಗಳು, ವಾಹನಗಳು ಇತ್ಯಾದಿಗಳನ್ನು ವಿಲೇವಾರಿ ಮಾಡಲಾಯಿತು. ವಿಶೇಷ ಅಭಿಯಾನ 3.0 ನ್ನು ಇಲಾಖೆಯ ಮುಖ್ಯ ಕಾರ್ಯದರ್ಶಿ ಮತ್ತು ಅದರ ವಿವಿಧ ಶಾಖೆಗಳ ಕಾರ್ಯದರ್ಶಿಗಳಲ್ಲಿ ವಿವಿಧ ಶ್ರೇಣಿಯ ಅಧಿಕಾರಿಗಳು ವೀಕ್ಷಿಸಿದರು. 

ವಿಶೇಷ ಅಭಿಯಾನದ ಧ್ಯೇಯ, ಇಲಾಖೆಯ ಉಪಕ್ರಮಗಳು, ಸಾಧನೆಗಳು ಇತ್ಯಾದಿಗಳ ಜೊತೆಗೆ ಸಂಬಂಧಪಟ್ಟ ಫೋಟೋಗಳೊಂದಿಗೆ ಇಲಾಖೆಯ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಸರಣಿ ಪೋಸ್ಟ್ ಗಳನ್ನು ಬಿಡುಗಡೆ ಮಾಡಲಾಗಿದೆ.

****



(Release ID: 1975747) Visitor Counter : 66


Read this release in: English , Urdu , Hindi