ಕಾರ್ಪೋರೇಟ್ ವ್ಯವಹಾರಗಳ ಸಚಿವಾಲಯ
ಇಂಧನ ಕ್ಷೇತ್ರದ ಕುರಿತು ಶಿಕ್ಷಣದಲ್ಲಿ ಸಹಯೋಗವನ್ನು ಉತ್ತೇಜಿಸಲು ಮತ್ತು ಇಂಧನ ಕ್ಷೇತ್ರದ ನಿಯಂತ್ರಕ ಸಮಸ್ಯೆಗಳ ಕುರಿತು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಕಾರ್ಪೊರೇಟ್ ಅಫೇರ್ಸ್ (ಐ.ಐ.ಸಿ.ಎ.) ಮತ್ತು ಎಫ್.ಎಸ್.ಆರ್. ಗ್ಲೋಬಲ್ ಸಂಸ್ಥೆಗಳು ತಿಳುವಳಿಕೆ ಒಡಂಬಡಿಕೆಗೆ ಸಹಿ ಹಾಕಿವೆ
Posted On:
08 NOV 2023 3:03PM by PIB Bengaluru
ಗುರುಗ್ರಾಮ್ ನ ಮನೇಸರ್ ನಲ್ಲಿರುವ ಐ.ಐ.ಸಿ.ಎ. ಕ್ಯಾಂಪಸ್.ನಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಕಾರ್ಪೊರೇಟ್ ಅಫೇರ್ಸ್ (ಐ.ಐ.ಸಿ.ಎ.) ಮತ್ತು ಎಫ್.ಎಸ್.ಆರ್. ಗ್ಲೋಬಲ್ ನಡುವೆ ನೂತನ ತಿಳುವಳಿಕೆ ಒಡಂಬಡಿಕೆಗೆ (ಎಂಒಯು) ನಿನ್ನೆ ಸಹಿ ಹಾಕಲಾಯಿತು. ಐಐಸಿಎ ಸಂಸ್ಥೇಯನ್ನು ಪ್ರತಿನಿಧಿಸುವ ಪ್ರೊ. (ಡಾ.) ನವೀನ್ ಸಿರೋಹಿ ಮತ್ತು ಎಫ್‌ಎಸ್‌ಆರ್ ಗ್ಲೋಬಲ್ ಸಂಸ್ಥೆಯನ್ನು ಪ್ರತಿನಿಧಿಸುವ ಶ್ರೀಮತಿ ಶ್ವೇತಾ ರವಿ ಕುಮಾರ್ ಅವರು ಈ ತಿಳಿವಳಿಕೆ ಒಪ್ಪಂದ(ಒಡಂಬಡಿಕೆ)ಕ್ಕೆ ಸಹಿ ಹಾಕಿದ್ದಾರೆ.
ಐ.ಐ.ಸಿ.ಎ. ಮತ್ತು ಎಫ್.ಎಸ್.ಆರ್ ಗ್ಲೋಬಲ್ ಸಹಯೋಗದ ಈ ಪ್ರಯತ್ನಗಳನ್ನು ಉತ್ತೇಜಿಸುವ ಗುರಿಯನ್ನು ಎರಡೂ ಸಂಸ್ಥೆಗಳು ಹೊಂದಿವೆ ಮತ್ತು ಪರಸ್ಪರ ಲಾಭದಾಯಕ ಪಾಲುದಾರಿಕೆಗಳನ್ನು ಸ್ಥಾಪಿಸಲು ಇಂತಹ ವಿವಿಧ ಪ್ರಾಯೋಗಿಕ ವಿಧಾನಗಳನ್ನು ಅನ್ವೇಷಿಸುತ್ತಿವೆ. ಈ ಪಾಲುದಾರಿಕೆಯ ಪ್ರಾಥಮಿಕ ಉದ್ದೇಶವು ಭಾರತ ಮತ್ತು ವಿಶ್ವಾದ್ಯಂತ ಇಂಧನ ವಲಯದ ನಿಯಂತ್ರಕ ಚೌಕಟ್ಟುಗಳೊಳಗೆ, ತಮ್ಮ ಲಭ್ಯ ಸಂಪನ್ಮೂಲಗಳಿಂದ ಕಾರ್ಯಾಚರಣೆಯ ಸಾಮರ್ಥ್ಯಗಳನ್ನು ಹೆಚ್ಚಿಸುವುದು.
ಐಐಸಿಎ ಮತ್ತು ಎಫ್‌ಎಸ್‌ಆರ್ ಗ್ಲೋಬಲ್ ನಡುವಿನ ಸಹಯೋಗವನ್ನು ಈ ತಿಳುವಳಿಕೆ ಒಪ್ಪಂದ ( ಒಡಂಬಡಿಕೆ) ಇನ್ನೂ ಗಟ್ಟಿಗೊಳಿಸುತ್ತದೆ, ಹಾಗೂ ಇಂಧನ ನಿಯಂತ್ರಣ ಮತ್ತು ವಿದ್ಯುತ್ ನಿರ್ವಹಣೆಯ ಕ್ಷೇತ್ರದಲ್ಲಿ ನವೀನ ಕಾರ್ಯತಂತ್ರಗಳ ಅನ್ವೇಷಣೆಗೆ ಸಂಸ್ಥೆಗಳ ಸಮರ್ಪಣಾ ಮನೋಭಾವವನ್ನು ತೋರಿಸುತ್ತದೆ. ಧನಾತ್ಮಕ ಬದಲಾವಣೆ ಮತ್ತು ಸುಸ್ಥಿರ ಅಭ್ಯಾಸಗಳನ್ನು ಚಾಲನೆ ಮಾಡುವ ಗುರಿಯೊಂದಿಗೆ ಇಂಧನ ವಲಯ ಮತ್ತು ಅದರ ನಿಯಂತ್ರಣದ ಆಳವಾದ ತಿಳುವಳಿಕೆಯನ್ನು ಸುಗಮಗೊಳಿಸಲು ಮತ್ತು ಉತ್ತೇಜಿಸಲು ಸುಲಭ ಸಾಧ್ಯವಾಗುವಂತೆ ಇದನ್ನು ವಿನ್ಯಾಸಗೊಳಿಸಲಾಗಿದೆ.
ತಿಳುವಳಿಕೆ ಒಡಂಬಡಿಕೆ(ಒಪ್ಪಂದ)ಯ ನಿಯಮಗಳ ಅಡಿಯಲ್ಲಿ ತಿಳಿಸಿದಂತೆ, ಸಾಮರ್ಥ್ಯ-ನಿರ್ಮಾಣ, ಸಂಶೋಧನೆ ಮತ್ತು ಸಲಹಾ ಸೇವೆಗಳನ್ನು ಇಂಧನ ಕ್ಷೇತ್ರದ ವಿವಿಧ ಅಂಶಗಳಲ್ಲಿ ಐ.ಐ.ಸಿ.ಎ. ಮತ್ತು ಎಫ್.ಎಸ್.ಆರ್. ಗ್ಲೋಬಲ್ ಜಂಟಿಯಾಗಿ ಕಾರ್ಯನಿರ್ವಹಿಸಲಿವೆ.
ಐ.ಐ.ಸಿ.ಎ. ಬಗ್ಗೆ
ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಕಾರ್ಪೊರೇಟ್ ಅಫೇರ್ಸ್ (ಐಐಸಿಎ) ಭಾರತ ಸರ್ಕಾರದ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ (ಎಂಸಿಎ) ಸ್ಥಾಪಿಸಿದ ಸಂಸ್ಥೆಯಾಗಿದೆ. ಇದು ಭಾರತದಲ್ಲಿ ಕಾರ್ಪೊರೇಟ್ ವಲಯದ ಬೆಳವಣಿಗೆಯನ್ನು ಬೆಂಬಲಿಸಲು ಚಿಂತಕ-ತಂಡ ಮತ್ತು ಶ್ರೇಷ್ಠತೆಯ ಕೇಂದ್ರವಾಗಿ ಸಮಗ್ರ ಮತ್ತು ಬಹು-ಶಿಸ್ತಿನ ವಿಧಾನದ ಮೂಲಕ ಕಾರ್ಯನಿರ್ವಹಿಸುತ್ತಿರುವ ಸ್ವಾಯತ್ತ ಸಂಸ್ಥೆಯಾಗಿದೆ.
ಎಫ್‌ಎಸ್‌ಆರ್ ಗ್ಲೋಬಲ್ ಬಗ್ಗೆ
ಎಫ್‌ಎಸ್‌ಆರ್ ಗ್ಲೋಬಲ್ ಒಂದು ಸ್ವತಂತ್ರ ಮತ್ತು ತಟಸ್ಥ ನಿಯಂತ್ರಕ ಸಂಸ್ಥೆಯಾಗಿದ್ದು, ಗ್ಲೋಬಲ್ ಸೌತ್ ನಲ್ಲಿ ತನ್ನ ಕಾರ್ಯಾಚರಣೆಗಳನ್ನು ಕೇಂದ್ರೀಕೃತವಾಗಿ ಪ್ರವರ್ತಿಸುತ್ತಿದೆ. ಎಫ್‌ಎಸ್‌ಆರ್ ಗ್ಲೋಬಲ್ ಪ್ರಪಂಚದಾದ್ಯಂತದ ಇಂಧನ ಕ್ಷೇತ್ರದ ಮೂಲಸೌಕರ್ಯ ನಿಯಂತ್ರಣ ಮತ್ತು ನೀತಿಯ ಗುಣಮಟ್ಟವನ್ನು ಸುಧಾರಿಸಲು ವ್ಯವಸ್ಥೆ ಏರ್ಪಡಿಸುತ್ತದೆ. ಸಂಸ್ಥೆ ಪ್ರವೇಶಿಸಬಹುದಾದ ಕ್ಷೇತ್ರದಲ್ಲಿ, ಕಾರ್ಯಸಾಧ್ಯವಾದ ಜ್ಞಾನವನ್ನು ಸಹ-ರಚಿಸುವ ಮೂಲಕ ಕ್ಷೇತ್ರದ ಮಧ್ಯಸ್ಥಗಾರರೊಂದಿಗೆ ಸಹಭಾಗಿತ್ವವನ್ನು ರೂಪಿಸಿ, ಬೆಳೆಸುತ್ತದೆ
****
(Release ID: 1975675)
Visitor Counter : 114