ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನಡೆದ ರಾಷ್ಟ್ರೀಯ ಏಕತಾ ದಿನದ ಸಂದರ್ಭದಲ್ಲಿ ನವದೆಹಲಿಯಲ್ಲಿ “ನನ್ನ ಮಣ್ಣು ನನ್ನ ದೇಶ (ಮೇರಿ ಮಾಟಿ ಮೇರಾ ದೇಶ್)“ ಅಭಿಯಾನದ ಅಮೃತ ಕಲಶ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದರು.


ಅಮೃತ ವಾಟಿಕಾ ಮತ್ತು ಅಮೃತ ಮಹೋತ್ಸವ ಸ್ಮಾರಕಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶಂಕುಸ್ಥಾಪನೆ ಮಾಡಿದರು, ದೇಶದ ಪ್ರತಿಯೊಂದು ಭಾಗಗಳಿಂದ ಸಂಗ್ರಹಿಸಿದ ಮಣ್ಣಿನಿಂದ ಅಮೃತ ಮಹೋತ್ಸವ ಸ್ಮಾರಕ ತಯಾರಿಸಲಾಗಿದೆ,  ಆಜಾದಿ ಕಾ ಅಮೃತ ಮಹೋತ್ಸವದ ಸಮಾರೋಪ ಸಮಾರಂಭವನ್ನು ಸಹ ಕಾರ್ಯಕ್ರಮದ ಜೊತೆ ನಡೆಸಲಾಯಿತು.

ದೇಶದ ಯುವಕರಿಗಾಗಿ 'ಮೇರಾ ಯುವ ಭಾರತ್' ವೇದಿಕೆಗೆ ಸ್ಮಾರಕಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಚಾಲನೆ ನೀಡಿದರು

“ನನ್ನ ಮಣ್ಣು ನನ್ನ ದೇಶ (ಮೇರಿ ಮಾಟಿ ಮೇರಾ ದೇಶ್)“ ಅಭಿಯಾನದ  ಸಮಾರೋಪ ಸಮಾರಂಭದಲ್ಲಿ ಕೇಂದ್ರ ಗೃಹ  ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಕೂಡ ಭಾಗವಹಿಸಿದ್ದರು.

ಇಂದು ಉಕ್ಕಿನ ಮನುಷ್ಯ ಸರ್ದಾರ್ ಪಟೇಲ್ ಅವರ ಜನ್ಮದಿನವಾಗಿದ್ದು, ದೇಶಾದ್ಯಂತ 7500 ಸ್ಥಳಗಳಿಂದ ಸಂಗ್ರಹಿಸಿದ ಪವಿತ್ರ ಮಣ್ಣು ಇಲ್ಲಿಗೆ ತಲುಪಿದೆ.

ಆಜಾದಿ ಕಾ ಅಮೃತ್ ಮಹೋತ್ಸವದ ಅಡಿಯಲ್ಲಿ 2 ಲಕ್ಷಕ್ಕೂ ಹೆಚ್ಚು ಕಾರ್ಯಕ್ರಮಗಳೊಂದಿಗೆ  ಅಮೃತ ಕಾಲ್ ಇಂದು ಪ್ರಾರಂಭವಾಗಿದೆ.

ಆಜಾದಿ ಕಾ ಅಮೃತ್ ಮಹೋತ್ಸವದ ಸಂದರ್ಭದಲ್ಲಿ 2 ಲಕ್ಷ ಕಾರ್ಯಕ್ರಮಗಳ ಮೂಲಕ ರಾಷ್ಟ್ರೀಯ ಪ್ರಜ್ಞೆಯನ್ನು ಜಾಗೃತಗೊಳಿಸಲಾಗಿದೆ ಮತ್ತು ಈ ನಿರ್ಣಯಗಳೊಂದಿಗೆ ರಾಷ್ಟ್ರೀಯ ಪ್ರಜ್ಞೆಯನ್ನು ಪ್ರಚಾರ ಮಾಡುವ ಮೂಲಕ ಭವ್ಯ ಭಾರತವನ್ನು ನಿರ್ಮಿಸಲು ದೇಶವಾಸಿಗಳಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕರೆ ನೀಡಿದರು.

ದೇಶಾದ್ಯಂತ ಎಲ್ಲಡೆಯಿಂದ ಇಂದು ಇಲ್ಲಿಗೆ ತಂದ ಮಣ್ಣನ್ನು ಅಮೃತ ವಾಟಿಕವಾಗಿ ಪರಿವರ್ತಿಸಲಾಗುವುದು, ಅದು ಭವ್ಯ ಭಾರತವನ್ನು ರಚಿಸಲು ನಮಗೆ ಸ್ಫೂರ್ತಿ ನೀಡುತ್ತದೆ.

Posted On: 31 OCT 2023 7:56PM by PIB Bengaluru

ರಾಷ್ಟ್ರೀಯ ಏಕತಾ ದಿನದ ಸಂದರ್ಭದಲ್ಲಿ, ಇಂದು ನವದೆಹಲಿಯಲ್ಲಿ ನಡೆದ “ನನ್ನ ಮಣ್ಣು ನನ್ನ ದೇಶ (ಮೇರಿ ಮಾಟಿ ಮೇರಾ ದೇಶ್)“ ಅಭಿಯಾನದ  ಅಮೃತ ಕಲಶ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾಗವಹಿಸಿದರು. ದೇಶದ ಪ್ರತಿಯೊಂದು ಭಾಗದಿಂದ ಸಂಗ್ರಹಿಸಿದ ಮಣ್ಣಿನಿಂದ ತಯಾರಿಸಲಾದ ಅಮೃತ ವಾಟಿಕಾ ಮತ್ತು ಅಮೃತ ಮಹೋತ್ಸವ ಸ್ಮಾರಕಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶಂಕುಸ್ಥಾಪನೆ ಮಾಡಿದರು. ಈ ಕಾರ್ಯಕ್ರಮದ ಜೊತೆಯಲ್ಲಿ ಆಜಾದಿ ಕಾ ಅಮೃತ ಮಹೋತ್ಸವದ ಸಮಾರೋಪ ಸಮಾರಂಭ ಕೂಡಾ ಜರುಗಿತು. .  ಈ ಸಂದರ್ಭದಲ್ಲಿ ದೇಶದ ಯುವಕರಿಗಾಗಿ 'ಮೇರಾ ಯುವ ಭಾರತ್' ವೇದಿಕೆಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಚಾಲನೆ ನೀಡಿದರು. “ನನ್ನ ಮಣ್ಣು ನನ್ನ ದೇಶ (ಮೇರಿ ಮಾಟಿ ಮೇರಾ ದೇಶ್)“ ಅಭಿಯಾನದ ಸಮಾರೋಪ ಸಮಾರಂಭದಲ್ಲಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಕೂಡ ಭಾಗವಹಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ  ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು , “ಇಂದು ಉಕ್ಕಿನ ಮನುಷ್ಯ ಸರ್ದಾರ್ ಪಟೇಲ್ ಅವರ ಜನ್ಮದಿನವಾಗಿದ್ದು, ಇದೇ ದಿನದಂದು ದೇಶಾದ್ಯಂತ 7500 ಸ್ಥಳಗಳಿಂದ ಸಂಗ್ರಹಿಸಿದ ಪವಿತ್ರ ಮಣ್ಣು ಇಲ್ಲಿಗೆ ತಲುಪಿದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ತಮ್ಮ ದೂರದೃಷ್ಟಿಯ ಎರಡು ದೊಡ್ಡ ಕಾರ್ಯಕ್ರಮಗಳನ್ನು ಇಲ್ಲಿ ಜೋಡಿಸಿದ್ದಾರೆ. ಆಜಾದಿ ಕಾ ಅಮೃತ್ ಮಹೋತ್ಸವದ ಅಡಿಯಲ್ಲಿ 2 ಲಕ್ಷಕ್ಕೂ ಹೆಚ್ಚು ಕಾರ್ಯಕ್ರಮಗಳ ಸಂಯೋಜನೆಯೊಂದಿಗೆ ನೂತನ ಅಮೃತ್ ಕಾಲ್ ಪ್ರಾರಂಭವಾಗುತ್ತಿದೆ. ಆಜಾದಿ ಕಾ ಅಮೃತ್ ಮಹೋತ್ಸವದಿಂದ ಸ್ವಾತಂತ್ರ್ಯದ ಶತಮಾನೋತ್ಸವದವರೆಗಿನ ಈ 25 ವರ್ಷಗಳು, ದೇಶವನ್ನು ಶ್ರೇಷ್ಠವಾಗಿಸಲು, ವಿಶ್ವದ ಪ್ರತಿಯೊಂದು ಕ್ಷೇತ್ರದಲ್ಲಿಯೂ ಮೊದಲನೆಯದಾಗಿ, ಸಮೃದ್ಧ ಮತ್ತು ಸುರಕ್ಷಿತವಾಗಿಸುವ ಸಂಕಲ್ಪವನ್ನು ಕೈಗೊಳ್ಳುವ ಮತ್ತು ಪೂರೈಸುವ ವರ್ಷಗಳಾಗಿ  ರಾರಾಜಿಸಲಿವೆ”. ಎಂದು ಹೇಳಿದರು.

ಆಜಾದಿ ಕಾ ಅಮೃತ್ ಮಹೋತ್ಸವದ ಸಂದರ್ಭದಲ್ಲಿ ಆಯೋಜಿಸಲಾದ 2 ಲಕ್ಷಕ್ಕೂ ಹೆಚ್ಚು ಕಾರ್ಯಕ್ರಮಗಳ ಮೂಲಕ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು  ದೇಶದಾದ್ಯಂತ ರಾಷ್ಟ್ರೀಯ ಪ್ರಜ್ಞೆಯನ್ನು ಜಾಗೃತಗೊಳಿಸಿದ್ದಾರೆ. ಜಾಗೃತಗೊಳಿಸಲಾಗಿದೆ ಮತ್ತು ಈ ನಿರ್ಣಯಗಳೊಂದಿಗೆ  ರಾಷ್ಟ್ರೀಯ ಪ್ರಜ್ಞೆಯನ್ನು ಪ್ರಚಾರ ಮಾಡುವ ಮೂಲಕ ಭವ್ಯ ಭಾರತವನ್ನು ನಿರ್ಮಿಸಲು ದೇಶವಾಸಿಗಳಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕರೆ ನೀಡಿದರು. ದೇಶಾದ್ಯಂತ ಇಂದು ಇಲ್ಲಿಗೆ ತಂದಿರುವ ಮಣ್ಣನ್ನು ಅಮೃತ ವಾಟಿಕವಾಗಿ ಪರಿವರ್ತಿಸಲಾಗುವುದು ಮತ್ತು ಇದು ಭವ್ಯ ಭಾರತವನ್ನು ರಚಿಸಲು ನಮಗೆ ಸ್ಫೂರ್ತಿ ನೀಡುತ್ತದೆ” ಎಂದು ಕೇಂದ್ರ ಗೃಹ ಶ್ರೀ ಅಮಿತ್ ಶಾ ಅವರು ಹೇಳಿದರು. 

****

 


(Release ID: 1973578) Visitor Counter : 96


Read this release in: English , Urdu , Hindi , Punjabi