ಸಂಪುಟ
azadi ka amrit mahotsav

ಶರತ್ಕಾಲದ ರಬಿ ಋತು 2023-24 (01.10.2023 ರಿಂದ 31.03.2024 ರವರೆಗೆ) ಕ್ಕಾಗಿ ಫಾಸ್ಫೇಟಿಕ್ ಮತ್ತು ಪೊಟ್ಯಾಸಿಕ್ (ಪಿ&ಕೆ) ರಸಗೊಬ್ಬರಗಳಿಗೆ ಪೌಷ್ಟಿಕಾಂಶ ಆಧಾರಿತ ಸಬ್ಸಿಡಿ (ಎನ್.ಬಿ.ಎಸ್.) ದರಗಳನ್ನು ಕೇಂದ್ರ ಸಂಪುಟ ಸಭೆ ಅನುಮೋದಿಸಿದೆ

Posted On: 25 OCT 2023 3:17PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು, ಶರತ್ಕಾಲದ ರಬಿ ಋತು 2023-24 (01.10.2023 ರಿಂದ 31.03.2024 ರವರೆಗೆ)ಕ್ಕಾಗಿ ಫಾಸ್ಫೇಟಿಕ್ ಮತ್ತು ಪೊಟ್ಯಾಸಿಕ್ (ಪಿ&ಕೆ) ರಸಗೊಬ್ಬರಗಳಿಗೆ  ಪೌಷ್ಟಿಕಾಂಶ ಆಧಾರಿತ ಸಬ್ಸಿಡಿ (ಎನ್.ಬಿ.ಎಸ್.) ದರಗಳನ್ನು ನಿಗದಿಪಡಿಸಲು ರಸಗೊಬ್ಬರ ಇಲಾಖೆಯು ಸಲ್ಲಿಸಿರುವ ಪ್ರಸ್ತಾವನೆಯನ್ನು ಅನುಮೋದಿಸಿದೆ.
 

ವರ್ಷ

ಪ್ರತಿ ಕೆ.ಜಿ.ಗೆ ರೂ.

ರಬಿಐ, 2023-24

(01.10.2023 ರಿಂದ 31.03.2024 ರವರೆಗೆ)

N

P

K

S

47.02

20.82

2.38

1.89


 ಮುಂಬರುವ ಶರತ್ಕಾಲದ ರಬಿ ಋತು 2023-24 ರಲ್ಲಿ, ಎನ್.ಬಿ.ಎಸ್. ಯಲ್ಲಿ ರೂ. 22,303 ಕೋಟಿ ವೆಚ್ಚವನ್ನು ನಿರೀಕ್ಷಿಸಲಾಗಿದೆ.
 
ರೈತರಿಗೆ ಕೈಗೆಟುಕುವ ಬೆಲೆಯಲ್ಲಿ ಈ ರಸಗೊಬ್ಬರಗಳ ಸುಗಮ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಪಿ & ಕೆ ರಸಗೊಬ್ಬರಗಳ ಮೇಲಿನ ಸಬ್ಸಿಡಿಯನ್ನು ಶರತ್ಕಾಲದ ರಬಿ ಋತು 2023-24 (01.10.2023 ರಿಂದ 31.03.2024 ರವರೆಗೆ ಅನ್ವಯಿಸುವಂತೆ) ಕ್ಕಾಗಿ ಅನುಮೋದಿತ ದರಗಳ ಆಧಾರದ ಮೇಲೆ ರೈತರಿಗೆ ಒದಗಿಸಲಾಗುತ್ತದೆ.
 
ಪ್ರಯೋಜನಗಳು:
 
        i. ರೈತರಿಗೆ ಸಬ್ಸಿಡಿ, ಕೈಗೆಟಕುವ ಮತ್ತು ಸಮಂಜಸವಾದ ಬೆಲೆಯಲ್ಲಿ ರಸಗೊಬ್ಬರಗಳ ಲಭ್ಯತೆಯನ್ನು ಖಾತ್ರಿಪಡಿಸಲಾಗುವುದು.
       ii ರಸಗೊಬ್ಬರಗಳು ಮತ್ತು ವೆಚ್ಚಗಳ ಒಳಹರಿವಿನ ಅಂತರರಾಷ್ಟ್ರೀಯ ಬೆಲೆಗಳಲ್ಲಿನ ಇತ್ತೀಚಿನ ಪ್ರವೃತ್ತಿಗಳ ದೃಷ್ಟಿಯಿಂದ ಪಿ&ಕೆ ರಸಗೊಬ್ಬರಗಳ ಮೇಲಿನ ಸಬ್ಸಿಡಿಯನ್ನು ನಿಗದಿಪಡಿಸಲಾಗಿದೆ.
 
ಹಿನ್ನೆಲೆ:
 
ರಸಗೊಬ್ಬರ ತಯಾರಕರು/ ಆಮದುದಾರರ ಮೂಲಕ ಕೇಂದ್ರ ಸರ್ಕಾರವು 25 ದರ್ಜೆಯ ಪಿ&ಕೆ ರಸಗೊಬ್ಬರಗಳನ್ನು ರೈತರಿಗೆ ಸಬ್ಸಿಡಿ ಬೆಲೆಯಲ್ಲಿ ಲಭ್ಯವಾಗುವಂತೆ ಮಾಡುತ್ತಿದೆ. ಪಿ&ಕೆ ರಸಗೊಬ್ಬರಗಳ ಮೇಲಿನ ಸಬ್ಸಿಡಿಯನ್ನು ಎನ್.ಬಿ.ಎಸ್.  ಸ್ಕೀಮ್ 01.04.2010 ರಿಂದ ಅನ್ವಯವಾಗುವಂತೆ ನಿಯಂತ್ರಿಸಿ ವಿತರಿಸಲಾಗುತ್ತದೆ.  ರೈತ ಸ್ನೇಹಿ ವಿಧಾನಕ್ಕೆ ಅನುಗುಣವಾಗಿ, ಕೈಗೆಟುಕುವ ಬೆಲೆಯಲ್ಲಿ ರೈತರಿಗೆ ಪಿ&ಕೆ ರಸಗೊಬ್ಬರಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಸರ್ಕಾರವು ಬದ್ಧವಾಗಿದೆ. ಯೂರಿಯಾ, ಡಿಎಪಿ, ಎಂಒಪಿ ಮತ್ತು ಸಲ್ಫರ್‌ಗಳ ಅಂತರರಾಷ್ಟ್ರೀಯ ಬೆಲೆಗಳಲ್ಲಿನ ಇತ್ತೀಚಿನ ಪ್ರವೃತ್ತಿಗಳ ದೃಷ್ಟಿಯಿಂದ, ಶರತ್ಕಾಲದ ರಬಿ ಋತು 2023-24 (01.10.2023 ರಿಂದ 31.03.2024 ರವರೆಗೆ) ಕ್ಕಾಗಿ ಫಾಸ್ಫೇಟಿಕ್ ಮತ್ತು ಪೊಟ್ಯಾಸಿಕ್ (ಪಿ&ಕೆ) ರಸಗೊಬ್ಬರಗಳಿಗೆ ಪೌಷ್ಟಿಕಾಂಶ ಆಧಾರಿತ ಸಬ್ಸಿಡಿ (ಎನ್.ಬಿ.ಎಸ್.)   ಜಾರಿಗೆ ತರಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ರಸಗೊಬ್ಬರ ಕಂಪನಿಗಳಿಗೆ ಅನುಮೋದಿತ ಮತ್ತು ಅಧಿಸೂಚಿತ ದರಗಳ ಪ್ರಕಾರ ಸಬ್ಸಿಡಿಯ ಮೊತ್ತವನ್ನು ಒದಗಿಸಲಾಗುವುದು, ಇದರಿಂದಾಗಿ ಪಿ&ಕೆ ರಸಗೊಬ್ಬರಗಳು ಕೈಗೆಟುಕುವ ಬೆಲೆಯಲ್ಲಿ ರೈತರಿಗೆ ಲಭ್ಯವಾಗುತ್ತದೆ. 


*****
 
 


(Release ID: 1970913) Visitor Counter : 212