ಗೃಹ ವ್ಯವಹಾರಗಳ ಸಚಿವಾಲಯ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಮತ್ತು ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಅವರ ಮಾರ್ಗದರ್ಶನದಲ್ಲಿ, ಸೈಬರ್ ಸುರಕ್ಷಿತ ಭಾರತವನ್ನು ನಿರ್ಮಿಸುವುದು ಗೃಹ ಸಚಿವಾಲಯದ ಪ್ರಮುಖ ಆದ್ಯತೆಗಳಲ್ಲಿ ಒಂದಾಗಿದೆ.


ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ (ಐ4ಸಿ) ದೇಶದಲ್ಲಿ ಸೈಬರ್ ಅಪರಾಧವನ್ನು ಸಂಘಟಿತ ಮತ್ತು ಸಮಗ್ರ ರೀತಿಯಲ್ಲಿ ನಿಭಾಯಿಸಲು ಗೃಹ ವ್ಯವಹಾರಗಳ ಸಚಿವಾಲಯದ ಒಂದು ಉಪಕ್ರಮವಾಗಿದೆ.

ವಿವಿಧ ಕಾನೂನು ಜಾರಿ ಸಂಸ್ಥೆಗಳು ಮತ್ತು ಮಧ್ಯಸ್ಥಗಾರರ ನಡುವಿನ ಸಮನ್ವಯದ ಸುಧಾರಣೆ ಸೇರಿದಂತೆ ನಾಗರಿಕರಿಗೆ ಸೈಬರ್ ಅಪರಾಧಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನಿಭಾಯಿಸಲು ಐ4ಸಿ ಗಮನವನ್ನು ನೀಡುತ್ತದೆ.

ಐ4ಸಿಯ ಅತ್ಯಂತ ಮಹತ್ವದ ಸಾಧನೆಗಳಲ್ಲಿ ಒಂದಾದ ನಾಗರಿಕ ಕೇಂದ್ರಿತ ರಾಷ್ಟ್ರೀಯ ಸೈಬರ್ ಅಪರಾಧ ವರದಿ ಪೋರ್ಟಲ್ (ಎನ್‌.ಸಿ.ಆರ್‌.ಪಿ) ಅನ್ನು 2019 ರಲ್ಲಿ ಪ್ರಾರಂಭಿಸಲಾಯಿತು.

ಐ4ಸಿಯ ಮತ್ತೊಂದು ಉಪಕ್ರಮ, ರಾಷ್ಟ್ರೀಯ ಸೈಬರ್ ಅಪರಾಧ ಸಹಾಯವಾಣಿ ಸಂಖ್ಯೆ 1930, ಆನ್‌ಲೈನ್ ಹಣಕಾಸು ವಂಚನೆಗಳನ್ನು ನೋಂದಾಯಿಸಲು ಸಾಮಾನ್ಯ ನಾಗರಿಕರಿಗೆ ಸಹಾಯ ಮಾಡುತ್ತಿದೆ.



ರಾಷ್ಟ್ರೀಯ ಸೈಬರ್ ಕ್ರೈಮ್ ರಿಪೋರ್ಟಿಂಗ್ ಪೋರ್ಟಲ್ (ಎನ್‌.ಸಿ.ಆರ್‌.ಪಿ) ನಲ್ಲಿ ಇಲ್ಲಿಯವರೆಗೆ 29 ಲಕ್ಷಕ್ಕೂ ಹೆಚ್ಚು ದೂರುಗಳು ವರದಿಯಾಗಿದ್ದು ಪ್ರತಿದಿನ ಸರಾಸರಿ 5000ಕ್ಕೂ ಹೆಚ್ಚು ದೂರುಗಳು ದಾಖಲಾಗುತ್ತಿವೆ.

ಸಹಾಯವಾಣಿ 1930 ಮತ್ತು ಎನ್‌.ಸಿ.ಆರ್‌.ಪಿ. ಇವೆರಡೂ, 2023ರ ಸೆಪ್ಟೆಂಬರ್ 30ರವರೆಗೆ ವಂಚಕರ ಕೈಗೆ ಸಿಗದಂತೆ 765 ಕೋಟಿ ರೂಪಾಯಿಗೂ ಹೆಚ್ಚು ವಂಚಿಸಿದ ಹಣವನ್ನು ಉಳಿಸಿವೆ.

Posted On: 20 OCT 2023 5:28PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಮತ್ತು ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಅವರ ಮಾರ್ಗದರ್ಶನದಲ್ಲಿ, ಸೈಬರ್ ಸುರಕ್ಷಿತ ಭಾರತವನ್ನು ನಿರ್ಮಿಸುವುದು ಗೃಹ ಸಚಿವಾಲಯದ ಪ್ರಮುಖ ಆದ್ಯತೆಗಳಲ್ಲಿ ಒಂದಾಗಿದೆ. ಸೈಬರ್ ಭದ್ರತೆಯು ಅಂತರಾಷ್ಟ್ರೀಯ ಮಟ್ಟದಲ್ಲಿ ಭದ್ರತಾ ಸಂಬಂಧಿತ ವ್ಯವಹಾರಗಳಲ್ಲಿ ಅತ್ಯಗತ್ಯ ಅಂಶವಾಗಿರುವುದರಿಂದ ಸೈಬರ್ ಸುರಕ್ಷಿತ ದೇಶವನ್ನು ರಚಿಸಲು ಮೋದಿ ಸರ್ಕಾರವು ಸಂಪೂರ್ಣವಾಗಿ ಬದ್ಧವಾಗಿದೆ.

https://static.pib.gov.in/WriteReadData/userfiles/image/image001L60X.jpg

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಸೈಬರ್ ಸುರಕ್ಷಿತ ಭಾರತದ ದೃಷ್ಟಿಗೆ ಅನುಗುಣವಾಗಿ, ಗೃಹ ವ್ಯವಹಾರಗಳ ಸಚಿವಾಲಯವು ದೇಶದಲ್ಲಿ ಸೈಬರ್ ಅಪರಾಧವನ್ನು ಸಂಘಟಿತ ರೀತಿಯಲ್ಲಿ ಸಮಗ್ರವಾಗಿ ನಿಭಾಯಿಸಲು ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರವನ್ನು (ಐ4ಸಿ - I4C) ಸ್ಥಾಪಿಸಿದೆ. ವಿವಿಧ ಕಾನೂನು ಜಾರಿ ಸಂಸ್ಥೆಗಳು ಮತ್ತು ಮಧ್ಯಸ್ಥಗಾರರ ನಡುವಿನ ಸಮನ್ವಯವನ್ನು ಸುಧಾರಿಸುವುದು ಸೇರಿದಂತೆ ನಾಗರಿಕರಿಗೆ ಸೈಬರ್ ಅಪರಾಧ ಸಂಬಂಧಿತ ಸಮಸ್ಯೆಗಳನ್ನು ನಿಭಾಯಿಸುವುದು ಐ4ಸಿಯ ಮುಖ್ಯ ಕೆಲಸವಾಗಿದೆ.

https://static.pib.gov.in/WriteReadData/userfiles/image/image002S7P7.jpg

 

ಪ್ರಾರಂಭವಾದಾಗಿನಿಂದಲೂ, ಐ4ಸಿ ಸೈಬರ್ ಅಪರಾಧಗಳನ್ನು ಎದುರಿಸಲು ಮತ್ತು ಕಾನೂನು ಜಾರಿ ಸಂಸ್ಥೆಗಳು ಮತ್ತು ಮಧ್ಯಸ್ಥಗಾರರ ನಡುವೆ ಪರಿಣಾಮಕಾರಿ ಸಮನ್ವಯವನ್ನು ಅಭಿವೃದ್ಧಿಪಡಿಸಲು ದೇಶದ ಸಾಮೂಹಿಕ ಸಾಮರ್ಥ್ಯವನ್ನು ಹೆಚ್ಚಿಸಲು ದಣಿವರಿಯಿಲ್ಲದೆ ಕೆಲಸ ಮಾಡುತ್ತಿದೆ, ಸೈಬರ್ ಅಪರಾಧವನ್ನು ನಿಭಾಯಿಸಲು ಮತ್ತು ನಾಗರಿಕರ ತೃಪ್ತಿ ಮಟ್ಟವನ್ನು ಸುಧಾರಿಸಲು ಭಾರತದ ಒಟ್ಟಾರೆ ಸಾಮರ್ಥ್ಯದಲ್ಲಿ ಬದಲಾವಣೆಯನ್ನು ಉಂಟುಮಾಡುತ್ತದೆ. ನಾಗರಿಕ-ಕೇಂದ್ರಿತ ರಾಷ್ಟ್ರೀಯ ಸೈಬರ್ ಅಪರಾಧ ವರದಿ ಪೋರ್ಟಲ್ (ಎನ್‌.ಸಿ.ಆರ್‌.ಪಿ) ಅನ್ನು 2019 ರಲ್ಲಿ ಪ್ರಾರಂಭಿಸಲಾಯಿತು, ಇದು ಐ4ಸಿಯ ಅತ್ಯಂತ ಮಹತ್ವದ ಸಾಧನೆಗಳಲ್ಲಿ ಒಂದಾಗಿದೆ.

https://static.pib.gov.in/WriteReadData/userfiles/image/image003KL5T.jpg

 

ಐ4ಸಿ ಯ ಮತ್ತೊಂದು ಉಪಕ್ರಮ, ರಾಷ್ಟ್ರೀಯ ಸೈಬರ್ ಅಪರಾಧ ಸಹಾಯವಾಣಿ ಸಂಖ್ಯೆ 1930, ಆನ್‌ಲೈನ್ ಹಣಕಾಸು ವಂಚನೆಗಳನ್ನು ನೋಂದಾಯಿಸಲು ಸಾಮಾನ್ಯ ನಾಗರಿಕರಿಗೆ ಸಹಾಯ ಮಾಡುತ್ತಿದೆ. ರಾಷ್ಟ್ರೀಯ ಸೈಬರ್ ಅಪರಾಧ ವರದಿ ಪೋರ್ಟಲ್ (ಎನ್‌ಸಿಆರ್‌ಪಿ) ನಲ್ಲಿ ಇಲ್ಲಿಯವರೆಗೆ 29 ಲಕ್ಷಕ್ಕೂ ಹೆಚ್ಚು ದೂರುಗಳು ವರದಿಯಾಗಿವೆ. ಪೋರ್ಟಲ್‌ನಲ್ಲಿ ಪ್ರತಿದಿನ ಸರಾಸರಿ 5000ಕ್ಕೂ ಹೆಚ್ಚು ದೂರುಗಳು ದಾಖಲಾಗುತ್ತಿವೆ. ಸಹಾಯವಾಣಿ 1930 ಮತ್ತು ಎನ್‌.ಸಿ.ಆರ್‌.ಪಿ ಇವೆರಡೂ, 2023ರ ಸೆಪ್ಟೆಂಬರ್ 30ರವರೆಗೆ ವಂಚಕರ ಕೈಗೆ ಸಿಗದಂತೆ 765 ಕೋಟಿ ರೂಪಾಯಿಗೂ ಹೆಚ್ಚು ವಂಚಿಸಿದ ಹಣವನ್ನು ಉಳಿಸಿವೆ.
 

https://static.pib.gov.in/WriteReadData/userfiles/image/image0049VSS.jpg

 

ಐ4ಸಿ ಕೇಂದ್ರವು ಭಾರತೀಯ ಪುರಾತತ್ವ ಇಲಾಖೆಯ ಸಹಯೋಗದೊಂದಿಗೆ, ಸೈಬರ್ ಅಪರಾಧವನ್ನು ತಡೆಗಟ್ಟುವ ಬಗ್ಗೆ ಜಾಗೃತಿ ಮೂಡಿಸಲು ಕುತುಬ್ ಮಿನಾರಿನಲ್ಲಿ ಸೈಬರ್ ಅಪರಾಧ ಸಹಾಯವಾಣಿ ಸಂಖ್ಯೆ "1930" ಮತ್ತು ಎನ್‌.ಸಿ.ಆರ್‌.ಪಿ (cybercrime.gov.in) ಅನ್ನು ಪ್ರದರ್ಶಿಸುತ್ತಿದೆ. ಅಕ್ಟೋಬರ್ ಮಾಸವನ್ನು ರಾಷ್ಟ್ರೀಯ ಸೈಬರ್ ಭದ್ರತಾ ಜಾಗೃತಿ ಮಾಸ ಎಂದು ಆಚರಿಸಲಾಗುತ್ತದೆ. ಪ್ರತಿ ದಿನ ರಾತ್ರಿ 8.30ಕ್ಕೆ ಕುತುಬ್ ಮಿನಾರಿನಲ್ಲಿ ಲೇಸರ್ ಕಿರಣದ ಮೂಲಕ ವಾರದ ಜಾಗೃತಿ ಅಭಿಯಾನ ನಡೆಯುತ್ತಿದ್ದು, ಭಾನುವಾರದವರೆಗೆ ಇರಲಿದೆ.

 

*****



(Release ID: 1969589) Visitor Counter : 109