ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ

​​​​​​​ಕ್ರೀಡಾ ಇಲಾಖೆಯು ಸ್ವಚ್ಛತಾ ಅಭಿಯಾನ ಹಾಗೂ ಬಾಕಿ ಉಳಿದಿರುವ ವಿಷಯಗಳ ತ್ವರಿತ ವಿಲೇವಾರಿಗಾಗಿ ವಿಶೇಷ ಅಭಿಯಾನ 3.0 ಅನ್ನು ಪೂರ್ಣ ಪ್ರಮಾಣದಲ್ಲಿ ಕೈಗೊಳ್ಳುತ್ತಿದೆ

Posted On: 17 OCT 2023 6:17PM by PIB Bengaluru

ಕ್ರೀಡಾ ಇಲಾಖೆಯು ತನ್ನ ಅಧೀನದಲ್ಲಿ ಕಾರ್ಯ ನಿರ್ವಹಿಸುವ ಭಾರತೀಯ ಕ್ರೀಡಾ ಪ್ರಾಧಿಕಾರ (ಎಸ್‌ಎಐ), ಲಕ್ಷ್ಮೀಬಾಯಿ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್ ಫಿಸಿಕಲ್ ಎಜುಕೇಶನ್ (ಎಲ್‌ಎನ್‌ಐಪಿಇ), ನ್ಯಾಷನಲ್ ಸ್ಪೋರ್ಟ್ಸ್ ಯೂನಿವರ್ಸಿಟಿ (ಎನ್‌ಎಸ್‌ಯು), ನ್ಯಾಷನಲ್ ಆ್ಯಂಟಿ ಡೋಪಿಂಗ್ ಏಜೆನ್ಸಿ (ಎನ್‌ಎಡಿಎ) ಮತ್ತು ನ್ಯಾಷನಲ್ ಡೋಪ್ ಟೆಸ್ಟಿಂಗ್ ಲ್ಯಾಬೊರೇಟರಿ (ಎನ್‌ಡಿಟಿಎಲ್‌) ಸಹಯೋಗದಲ್ಲಿ ಸ್ವಚ್ಛತಾ ಕಾರ್ಯವನ್ನು ಸಾಂಸ್ಥಿಕಗೊಳಿಸುವ ಮತ್ತು ಇತ್ಯರ್ಥ್ಯಕ್ಕೆ ಬಾಕಿ ಉಳಿದಿರುವ ವಿಚಾರಗಳ ಪ್ರಮಾಣ ತಗ್ಗಿಸುವ ನಿಟ್ಟಿನಲ್ಲಿ ವಿಶೇಷ ಅಭಿಯಾನ 3.0 ಕಾರ್ಯಗತಗೊಳಿಸುತ್ತಿದೆ. ಈ ಅಭಿಯಾನದ ಸಂದರ್ಭದಲ್ಲಿ ಕ್ಷೇತ್ರ ಕಚೇರಿಗಳಿಗೆ ವಿಶೇಷ ಗಮನ ನೀಡಲಾಗುತ್ತಿದೆ. ವಿಶೇಷ ಅಭಿಯಾನ 3.0 ರ ಅನುಷ್ಠಾನದ ಹಂತವು 2023ರ ಅಕ್ಟೋಬರ್‌ 2ರಂದು ಪ್ರಾರಂಭವಾಗಿ ಅಕ್ಟೋಬರ್ 31ರ ರವರೆಗೆ ಮುಂದುವರಿಯುತ್ತದೆ.

2023ರ ಸೆಪ್ಟೆಂಬರ್ 15ರಿಂದ ಸೆಪ್ಟೆಂಬರ್ 30ರವರೆಗೆ ನಡೆದ ಪೂರ್ವಸಿದ್ಧತಾ ಹಂತದಲ್ಲಿ ಅಧಿಕಾರಿಗಳನ್ನು ಕ್ರಿಯಾಶೀಲಗೊಳಿಸುವುದು, ತಳಮಟ್ಟದ ಸಿಬ್ಬಂದಿಯನ್ನು ಸಜ್ಜುಗೊಳಿಸುವುದು, ಬಾಕಿಗಳನ್ನು ಗುರುತಿಸುವ ಜತೆಗೆ ಅಭಿಯಾನದ ಸ್ಥಳಗಳನ್ನು ಅಂತಿಮಗೊಳಿಸಲಾಯಿತು. ಇಲಾಖೆ ಅಡಿಯಲ್ಲಿನ ಸಂಸ್ಥೆಗಳೊಂದಿಗೆ ನಿಯಮಿತ ಸಭೆಗಳನ್ನು ನಡೆಸುವ ಜತೆಗೆ ಪ್ರಸ್ತಾಪಿಸಲಾದ ಸ್ವಚ್ಛತಾ ಚಟುವಟಿಕೆಗಳು, ಗುರಿಗಳು, ಸಂಭವನೀಯ ಉತ್ತಮ ಅಭ್ಯಾಸಗಳನ್ನು ಚರ್ಚಿಸಿ ಅಂತಿಮಗೊಳಿಸಲಾಯಿತು. ಈ ಹಂತದಲ್ಲಿ ಪಿಐಬಿ ಹೇಳಿಕೆ ಮತ್ತು ಟ್ವೀಟ್‌ಗಳ ಮೂಲಕವೂ ಮಾಹಿತಿ ನೀಡಲಾಗಿತ್ತು.

ಇಲಾಖೆಯ ಅಡಿಯಲ್ಲಿರುವ ಸಂಸ್ಥೆಗಳು ದೇಶಾದ್ಯಂತ ವಿಶೇಷ ಅಭಿಯಾನದ ಮೊದಲ ವಾರದಲ್ಲಿ 18 ಸ್ವಚ್ಛತಾ ಅಭಿಯಾನಗಳನ್ನು ನಡೆಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಚಾರ ನೀಡಲಾಗಿದೆ. ಈ ಸಂಬಂಧ ಈ ಇಲಾಖೆ ಮತ್ತು ಅದರ ಅಡಿಯಲ್ಲಿರುವ ಸಂಸ್ಥೆಗಳು ಸುಮಾರು 24 ಟ್ವೀಟ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿವೆ. ಬಾಕಿ ಪ್ರಮಾಣ ತಗ್ಗಿಸುವ ನಿಟಿಟನಲ್ಲಿ ಇಲಾಖೆಯಲ್ಲಿ ನಿಯಮಿತವಾಗಿ ಪರಿಶೀಲನೆ ಕಾರ್ಯ ಮುಂದುವರಿದಿದೆ. ಆಡಳಿತ ಸುಧಾರಣೆಗಳು ಮತ್ತು ಸಾರ್ವಜನಿಕ ಕುಂದುಕೊರತೆಗಳ ಇಲಾಖೆಯ "ಎಸ್‌ಸಿಪಿಡಿಎಂʼ ಪೋರ್ಟಲ್‌ನಲ್ಲಿ ಇತ್ತೀಚಿನ ಬೆಳವಣಿಗೆ, ಸ್ಥಿತಿಗತಿ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಗಿದೆ. ಉತ್ತಮವಾಗಿ ವ್ಯಾಖ್ಯಾನಿಸಲಾದ ಗುರಿಗಳು ಮತ್ತು ಮೇಲ್ವಿಚಾರಣಾ ಕಾರ್ಯವಿಧಾನಗಳೊಂದಿಗೆ, ವಿಶೇಷ ಅಭಿಯಾನ 3.0ರ ಉದ್ದೇಶಗಳನ್ನು ಯಶಸ್ವಿಯಾಗಿ ಪೂರೈಸಲು ಇಲಾಖೆಯು ಸಂಘಟಿತ ಪ್ರಯತ್ನ ನಡೆಸಿದೆ.

ಮುಂದುವರಿದು, ಕ್ರೀಡಾ ಇಲಾಖೆ ಹಾಗೂ ಸಂಬಂಧಪಟ್ಟ ಸಂಸ್ಥೆಗಳು ʼಸ್ವಚ್ಛತೆಯೇ ಸೇವೆʼ (ಸ್ವಚ್ಛತಾ ಹಿ ಸೇವಾ- ಎಸ್‌ಎಚ್‌ಎಸ್‌) ಅಭಿಯಾನಕ್ಕಾಗಿ 2023ರ ಸೆಪ್ಟೆಂಬರ್ 15ರಿಂದ ಅಕ್ಟೋಬರ್ 1ರವರೆಗೆ ದೇಶಾದ್ಯಂತ ಕಾರ್ಯಕ್ರಮಗಳನ್ನು ಆಯೋಜಿಸಿವೆ. ಪ್ರಧಾನ ಕಾರ್ಯಕ್ರಮವು 2023ರ ಅಕ್ಟೋಬರ್ 1ರಂದು ನವದೆಹಲಿಯ ಮೇಜರ್ ಧ್ಯಾನ್ ಚಂದ್ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಕೇಂದ್ರ ಯುವಜನ ಸೇವೆ ಮತ್ತು ಕ್ರೀಡಾ ಖಾತೆ ರಾಜ್ಯ ಸಚಿವರಾದ ಶ್ರೀ ನಿಶಿತ್‌ ಪ್ರಮಾಣಿಕ್‌, ಕ್ರೀಡಾ ಇಲಾಖೆ ಕಾರ್ಯದರ್ಶಿಗಳು ಮತ್ತು ಎಸ್‌ಎಐ ಹಾಗೂ ನಾನಾ ಇಲಾಖೆಗಳ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಕ್ರೀಡಾ ಇಲಾಖೆ ಕಾರ್ಯದರ್ಶಿಯು ಶುದ್ಧ ಹಾಗೂ ಕಸ ಮುಕ್ತ ಭಾರತ ನಿರ್ಮಾಣಕ್ಕೆ ಕೊಡುಗೆ ನೀಡುವ ಸಂಬಂಧ ಎಲ್ಲ ಅಧಿಕಾರಿಗಳು, ಕ್ರೀಡಾಪಟುಗಳು ಇತರರಿಗೆ ಸ್ವಚ್ಛತಾ ಪ್ರತಿಜ್ಞೆ ಬೋಧಿಸಿದರು. ಆನಂತರ  ಸ್ವಚ್ಛತಾ ಚಟುವಟಿಕೆಯನ್ನು ಆರಂಭಿಸಲಾಯಿತು. ಇದೇ ಸಂದರ್ಭದಲ್ಲಿ ಇಲಾಖೆಯು ಫಿಟ್‌ ಇಂಡಿಯಾ ಸ್ವಚ್ಛತಾ ಸ್ವಾತಂತ್ರ್ಯ ನಡಿಗೆ 4.0ಕ್ಕೆ ಚಾಲನೆ ನೀಡಿತು. ಇದರಲ್ಲಿ ವಿವಿಧ ಕ್ರೀಡಾಪಟುಗಳು ಮತ್ತು ಇಲಾಖೆಯ ಅಧಿಕಾರಿಗಳು/ಅಧಿಕಾರಿಗಳು ಭಾಗವಹಿಸಿದ್ದರು. 2023ರ ಅಕ್ಟೋಬರ್ 1ರಂದು ʼಶ್ರಮದಾನ'ದ ಮೂಲಕ 'ಸ್ವಚ್ಛತಾ ಹಿ ಸೇವಾ' (ಎಸ್‌ಎಚ್‌ಎಸ್‌) ಅಭಿಯಾನದಡಿ ಒಟ್ಟು 114 ಕಾರ್ಯಕ್ರಮಗಳನ್ನು ನಡೆಸಿತು.

****



(Release ID: 1968672) Visitor Counter : 83


Read this release in: English , Urdu , Hindi