ಕಲ್ಲಿದ್ದಲು ಸಚಿವಾಲಯ
ಕಲ್ಲಿದ್ದಲು ಸಚಿವಾಲಯದಿಂದ ಸೈಬರ್ ಭದ್ರತೆ ಕುರಿತ ಕಾರ್ಯಾಗಾರ
Posted On:
13 OCT 2023 5:11PM by PIB Bengaluru
ಅಕ್ಟೋಬರ್ ತಿಂಗಳನ್ನು ರಾಷ್ಟ್ರೀಯ ಸೈಬರ್ ಭದ್ರತಾ ಮಾಸ ಆಚರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಕಲ್ಲಿದ್ದಲು ಸಚಿವಾಲಯದಿಂದ ಸಾರ್ವಜನಿಕ ಸ್ವಾಮ್ಯದ ಉದ್ದಿಮೆಗಳು ಮತ್ತು ಸಂಸ್ಥೆಗಳಲ್ಲಿ ಈ ವಿಚಾರದ ಬಗ್ಗೆ ಸೂಕ್ಷ್ಮತೆ ಮೂಡಿಸುವ ಮತ್ತು ಆಡಳಿತಾತ್ಮಕವಾಗಿ ನಿಯಂತ್ರಣ ತೆಗೆದುಕೊಳ್ಳುವ, ತನ್ನ ಸಂಸ್ಥೆಗಳಲ್ಲಿ ಪ್ರಸ್ತುತ ಎದುರಾಗಿರುವ ಸೈಬರ್ ಭದ್ರತಾ ಸವಾಲುಗಳು ಮತ್ತು ಸೈಬರ್ ಭದ್ರತೆಯಲ್ಲಿ ಉತ್ತಮ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವ ಸಂಬಂಧ “ಸೈಬರ್ ಭದ್ರತೆ ಕುರಿತ ಕಾರ್ಯಾಗಾರ” ಆಯೋಜಿಸಲಾಗಿತ್ತು.
ಕಾರ್ಯಾಗಾರದಲ್ಲಿ ಮಾತನಾಡಿದ ಸಚಿವಾಲಯದ ಕಾರ್ಯದರ್ಶಿ ಶ್ರೀ ಅಮೃತ್ ಲಾಲ್ ಮೀನಾ, ಹೆಚ್ಚಾಗುತ್ತಿರುವ ಸೈಬರ್ ಭದ್ರತೆಯ ಮಹತ್ವ ಕುರಿತು ಬೆಳಕು ಚೆಲ್ಲಿದರು. ಆನ್ ಲೈನ್ ಸೇವೆಗಳು ಮತ್ತು ಡಿಜಿಟಲ್ ವೇದಿಕೆಗಳನ್ನು ಬಳಸುವುದು ಹೆಚ್ಚಾಗುತ್ತಿದ್ದು, ಅತ್ಯಾಧುನಿಕ ಬೆದರಿಕೆಗಳು ತೀವ್ರಗೊಳ್ಳುತ್ತಿವೆ ಎಂದು ಒತ್ತಿ ಹೇಳಿದರು. ಸೈಬರ್ ದಾಳಿಗಳಿಂದ ರಕ್ಷಣೆ ಪಡೆಯಲು ಸಂಘಟನೆಗಳು, ವ್ಯಾಪಾರಿಗಳು ಮತ್ತು ವ್ಯಕ್ತಿಗಳು ಇಂತಹ ಮಾದರಿಗಳನ್ನು ತಿಳಿದುಕೊಳ್ಳುವುದು ಅತ್ಯಂತ ನಿರ್ಣಾಯಕವಾಗಿದೆ ಎಂದರು.
ಸ್ವಾಗತ ಭಾಷಣ ಮಾಡಿದ ಜಂಟಿ ಕಾರ್ಯದರ್ಶಿ ಶ್ರೀ ಸಂಜೀವ್ ಕುಮಾರ್ ಕಾಸ್ಸಿ, ಸೈಬರ್ ಭದ್ರತೆಯ ಮಹತ್ವವನ್ನು ಪುನರುಚ್ಚರಿಸಿದರು. ಸೈಬರ್ ಭದ್ರತೆ ನಮ್ಮ ಡಿಜಿಟಲ್ ಆಸ್ತಿಗಳನ್ನಷ್ಟೇ ರಕ್ಷಿಸುವುದಿಲ್ಲ ಎಂದು ಬೆಳಕು ಚೆಲ್ಲಿದ ಅವರು, ಇದು ನಮ್ಮ ಜೀವನ ವಿಧಾನವನ್ನು ರಕ್ಷಿಸುವಲ್ಲಿ ನಿರ್ಣಾಯಕ ಅಂಶ ಎಂದರು. ತಂತ್ರಜ್ಞಾನದ ಮೇಲಿನ ನಮ್ಮ ಅವಲಂಬನೆ ಗಾಢವಾಗುತ್ತಿದ್ದಂತೆ ಸೈಬರ್ ಭದ್ರತೆಯ ಪ್ರಾಮುಖ್ಯತೆ ಮತ್ತಷ್ಟು ಹೆಚ್ಚಾಗುತ್ತದೆ ಎಂದು ಹೇಳಿದರು.
ಕಾರ್ಯಾಗಾರದಲ್ಲಿ ಕಲ್ಲಿದ್ದಲು ಸಚಿವಾಲಯದ ಸಿಐಎಲ್ ಮತ್ತು ಅಂಗಸಂಸ್ಥೆಗಳಾದ ಎಸ್.ಸಿ.ಸಿ.ಎಲ್, ಎನ್.ಎಲ್.ಸಿ.ಐ.ಎಲ್, ಸಿ.ಎಂ.ಪಿ.ಎಫ್.ಒ, ಸಿ.ಸಿ.ಒ ನ ಹಿರಿಯ ಪ್ರತಿನಿಧಿಗಳು ಸಾಕ್ಷಿಯಾಗಿದ್ದರು. ಎನ್.ಐ.ಸಿ, ಸೈಬರ್ ಭದ್ರತಾ ಗುಂಪು ಮತ್ತು ಗೃಹ ವ್ಯವಹಾರಗಳ ಸಚಿವಾಲಯದ [ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ] ಐ4ಸಿ ಪರಿಣಿತರು ಸೈಬರ್ ಭದ್ರತೆ ಕುರಿತು ಮಾತನಾಡಿದರು.
ಭಾಗವಹಿಸುವವರನ್ನು ಅಮೂಲ್ಯವಾದ ಜ್ಞಾನ ಮತ್ತು ಒಳನೋಟಗಳೊಂದಿಗೆ ಸಜ್ಜುಗೊಳಿಸುವುದು, ಆಯಾ ಸಂಸ್ಥೆಗಳಲ್ಲಿ ಅತ್ಯುತ್ತಮ ಸೈಬರ್ ಭದ್ರತಾ ಅಭ್ಯಾಸಗಳನ್ನು ಕಾರ್ಯಗತಗೊಳಿಸಲು ಅನುವುಮಾಡಿಕೊಡುವ ಉದ್ದೇಶವನ್ನು ಕಾರ್ಯಾಗಾರ ಹೊಂದಿದೆ. ಈ ಕಾರ್ಯಕ್ರಮ ಸೈಬರ್ ಭದ್ರತೆಗಾಗಿ ರಾಷ್ಟ್ರೀಯ ಕಾರ್ಯತಂತ್ರದೊಂದಿಗೆ ಹೊಂದಿಕೆಯಾಗುತ್ತದೆ. ಇದು ಹೆಚ್ಚು ಸುರಕ್ಷಿತ ಡಿಜಿಟಲ್ ಭೂದೃಶ್ಯದತ್ತ ನಿರ್ಣಾಯಕ ಹೆಜ್ಜೆಯಾಗಿದೆ. ಉದ್ಯೋಗಿಗಳು ಮತ್ತು ಪಾಲುದಾರರಲ್ಲಿ ಜಾಗೃತಿ ಮೂಡಿಸಲು ರಸ ಪ್ರಶ್ನೆ ಮತ್ತು ಮಾಹಿತಿ ಅಧಿವೇಶನಗಳು ಸೇರಿದಂತೆ ಆಕರ್ಷಕ ಕಾರ್ಯಕ್ರಮಗಳನ್ನು ಆಯೋಜಿಸಲು ಸಾರ್ವಜನಿಕ ಸ್ವಾಮ್ಯದ ಸಂಸ್ಥೆಗಳಿಗೆ ಸೂಚಿಸಲಾಗಿದೆ.
ಎನ್.ಐ.ಸಿಯ ಎಸ್.ಟಿ.ಡಿ ಶ್ರೀ ದೀಪಾ ಬನ್ಸಾಲ್ ಅವರು ತಮ್ಮ ವಂದನಾರ್ಪಣೆಯಲ್ಲಿ ಪಾಲ್ಗೊಂಡ ಪ್ರತಿಯೊಬ್ಬರು ಮತ್ತು ಕಾರ್ಯಾಗಾರವನ್ನು ಯಶಸ್ವಿಗೊಳಿಸಲು ನಿರೂಪಕರು ತಮ್ಮ ಅಮೂಲ್ಯ ಒಳನೋಟಗಳನ್ನು ನೀಡಿದ್ದಕ್ಕಾಗಿ ಕೃತಜ್ಞತೆ ಸಲ್ಲಿಸಿದರು.
****
(Release ID: 1967459)
Visitor Counter : 114