ಸಂಸದೀಯ ವ್ಯವಹಾರಗಳ ಸಚಿವಾಲಯ

ಪರಿಸರ ಸಂರಕ್ಷಿಸಲು ಮತ್ತು ಹವಾಮಾನ ಬದಲಾವಣೆಯಂತಹ ಸವಾಲುಗಳನ್ನು ಎದುರಿಸಲು ಮಿಷನ್ ಲೈಫ್ ಜಗತ್ತಿಗೆ ಹೊಸ ಸಮಗ್ರ ವಿಧಾನ ನೀಡಿದೆ: ಲೋಕಸಭಾ ಸ್ಪೀಕರ್


ನೀತಿಗಳು ಮತ್ತು ಕಾನೂನುಗಳು ಸಾಕಾಗುವುದಿಲ್ಲ, ಪ್ರತಿಯೊಬ್ಬರೂ ಜೀವನಕ್ಕೆ ಅನುಗುಣವಾಗಿ ತಮ್ಮ ಜೀವನಶೈಲಿ ಬದಲಾಯಿಸಿಕೊಳ್ಳಬೇಕು: ಪಿ-20 ಶೃಂಗಸಭೆಗೆ ಮುಂಚಿತವಾಗಿ ಸಂಸದೀಯ ವೇದಿಕೆಯಲ್ಲಿ ಲೋಕಸಭಾ ಸ್ಪೀಕರ್ ಹೇಳಿಕೆ

ಜಿ-20 ರಾಷ್ಟ್ರಗಳ ಸಂಸತ್ತಿನ ಅಧ್ಯಕ್ಷರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮಿಷನ್ ಲೈಫ್  ಶ್ಲಾಘಿಸಿದ್ದಾರೆ

“ಪರಿಸರದ ಸಂರಕ್ಷಕರಾಗಿ ಮತ್ತು ಸುಸ್ಥಿರ ಪರಂಪರೆ ಮತ್ತು ಪುನರುತ್ಪಾದಕ ಭವಿಷ್ಯದ ಜ್ಯೋತಿ ಹೊರುವವರಾಗಿ”: ರಾಜ್ಯಸಭೆ ಉಪಸಭಾಪತಿ

Posted On: 12 OCT 2023 7:18PM by PIB Bengaluru

ಪೃಥ್ವಿಯ ಉಜ್ವಲ ಭವಿಷ್ಯಕ್ಕಾಗಿ ಅಳವಡಿಸಿಕೊಳ್ಳಬೇಕಾದ ಜೀವನಶೈಲಿ ಕುರಿತು ಚರ್ಚಿಸಲು ಜಿ-20 ದೇಶಗಳ ಸಂಸದರು ಮತ್ತು ಹೊಸದಾಗಿ ಜಿ-20ಕ್ಕೆ ಸೇರ್ಪಡೆಯಾದ ಆಫ್ರಿಕಾ ಒಕ್ಕೂಟ ಸೇರಿದಂತೆ ಅತಿಥಿ ರಾಷ್ಟ್ರಗಳು ದೆಹಲಿಯ ದ್ವಾರಕಾದಲ್ಲಿರುವ ಗ್ರ್ಯಾಂಡ್ ಇಂಡಿಯಾ ಇಂಟರ್ ನ್ಯಾಷನಲ್ ಕನ್ವೆನ್ಷನ್ ಸೆಂಟರ್ ನಲ್ಲಿ ಒಟ್ಟುಗೂಡಿದರು. 9ನೇ ಜಿ-20 ಸಂಸದೀಯ ಸ್ಪೀಕರ್‌ಗಳ ಶೃಂಗಸಭೆಯ (ಪಿ-20) ಭವ್ಯ ಉದ್ಘಾಟನೆಯ ಹಿಂದಿನ ದಿನ ನಡೆದ ಜೀವನ ಕುರಿತ ಸಂಸದೀಯ ವೇದಿಕೆ(ಪರಿಸರಕ್ಕಾಗಿ ಜೀವನಶೈಲಿ ಮಿಷನ್)ಯಲ್ಲಿ ನೀತಿ ನಿರೂಪಕರು, ಮಾನವತೆಗೆ ಎದುರಾಗಿರುವ ಹಂಚಿಕೆಯ ಸವಾಲುಗಳು, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವುಗಳನ್ನು ಪರಿಹರಿಸುವ ಮಾರ್ಗಗಳ ಕುರಿತು ತಮ್ಮ ದೃಷ್ಟಿಕೋನಗಳನ್ನು ಹಂಚಿಕೊಂಡರು.

https://static.pib.gov.in/WriteReadData/userfiles/image/image0013F8S.jpg

"ಹವಾಮಾನ ಬದಲಾವಣೆಯಂತಹ ಸಮಕಾಲೀನ ಸವಾಲುಗಳನ್ನು ಎದುರಿಸಲು ಹೊಸ ಮಾರ್ಗ"

ನೂತನ ಸಂಸತ್ತಿನ ವೇದಿಕೆ ಉದ್ದೇಶಿಸಿ ಮಾತನಾಡಿದ ಲೋಕಸಭಾ ಸ್ಪೀಕರ್ ಶ್ರೀ ಓಂ ಬಿರ್ಲಾ, ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರೂಪಿಸಿದ ಜೀವನ(ಲೈಫ್) (ಪರಿಸರಕ್ಕಾಗಿ ಜೀವನಶೈಲಿ) ಮಿಷನ್ ಸಮಕಾಲೀನ ಸವಾಲುಗಳನ್ನು ಎದುರಿಸಲು ಜಗತ್ತಿಗೆ ಹೊಸ ಮಾರ್ಗವನ್ನು ನೀಡಿದೆ ಎಂದರು. ಉದಾಹರಣೆಗೆ ಹವಾಮಾನ ಬದಲಾವಣೆ, ಮತ್ತು ಸುಸ್ಥಿರ ಅಭಿವೃದ್ಧಿ, ಆರೋಗ್ಯ ಭದ್ರತೆ, ಆಹಾರ ಭದ್ರತೆ ಮತ್ತು ಇಂಧನ ಭದ್ರತೆಯನ್ನು ಖಚಿತಪಡಿಸುವುದಾಗಿದೆ. ಮಿಷನ್ ಲೈಫ್ ಪರಿಸರ ಸಂರಕ್ಷಣೆಯ ಒಂದು ಸಮಗ್ರ ಕಾರ್ಯವಿಧಾನವಾಗಿದೆ. ಇದು ಪ್ರತಿ ವ್ಯಕ್ತಿಯನ್ನು ತ್ಯಾಜ್ಯ ಕಡಿಮೆ ಮಾಡಲು, ಮರುಬಳಕೆ ಮಾಡಲು ಮತ್ತು ಪುನರ್ ಬಳಕೆ ಮಾಡಲು ಅಧಿಕಾರ ನೀಡುತ್ತದೆ. ಲೈಫ್ ಈಗ ಜಾಗತಿಕ ಆಂದೋಲನವಾಗಿ ಮಾರ್ಪಟ್ಟಿದೆ ಎಂದು ತಿಳಿಸಿದ ಶ್ರೀ ಬಿರ್ಲಾ, ಈ ಕಲ್ಪನೆಯ ಆಧಾರದ ಮೇಲೆ ಅನೇಕ ದೇಶಗಳು ತಮ್ಮ ಭೌಗೋಳಿಕ ಮತ್ತು ಸಾಮಾಜಿಕ, ಆರ್ಥಿಕ ಪರಿಸ್ಥಿತಿಗಳಿಗೆ ಅನುಗುಣವಾಗಿ ನೀತಿಗಳು ಮತ್ತು ಕ್ರಿಯಾ ಯೋಜನೆಗಳನ್ನು ರೂಪಿಸುತ್ತಿವೆ ಎಂದು ಹೇಳಿದರು.

"ಯಾವುದೇ ದೇಶ ಹಿಂದೆ ಸರಿಯದೆ, ಹವಾಮಾನ ಬದಲಾವಣೆಯನ್ನು ನೇರವಾಗಿ ಎದುರಿಸಬೇಕಾಗಿದೆ"

ಇಂದಿನ ದಿನಗಳಲ್ಲಿ ಹವಾಮಾನ ಬದಲಾವಣೆ ಮತ್ತು ಅದರ ಪರಿಣಾಮವು ಮಾನವತೆಯ ಸಾಮಾನ್ಯ ಭವಿಷ್ಯದೊಂದಿಗೆ ಆಳವಾದ ಸಂಬಂಧ ಹೊಂದಿದೆ. “ಹವಾಮಾನ ಬದಲಾವಣೆಯ ಪ್ರಭಾವದಿಂದ ಯಾವುದೇ ದೇಶವು ಹೊರತಾಗಿಲ್ಲ. ಆದ್ದರಿಂದ ಭಾರತದ ಉಪಕ್ರಮದ ಮೇಲೆ, ಪಿ-20 ಸಮ್ಮೇಳನದಲ್ಲಿ ಪರಿಸರಕ್ಕೆ ಸಂಬಂಧಿಸಿದ ವಿಷಯಗಳನ್ನು ಸರ್ವಾನುಮತದಿಂದ ಚರ್ಚೆಯ ಪ್ರಧಾನ ವಿಷಯವಾಗಿ ಇರಿಸಲಾಗಿದೆ. ಜಗತ್ತು ಎದುರಿಸುತ್ತಿರುವ ಸವಾಲುಗಳನ್ನು ಸಮರ್ಥವಾಗಿ ನಿಭಆಯಿಸಲು ಸಂಕೀರ್ಣ ಪ್ರಯತ್ನಗಳ ಅಗತ್ಯವಿದೆ. ಹವಾಮಾನ ಬದಲಾವಣೆಯನ್ನು ನೇರವಾಗಿ ಎದುರಿಸುವುದು ಈ ಸಮಯದ ಅಗತ್ಯವಾಗಿದೆ ಎಂದು ಸ್ಪೀಕರ್ ಬಿರ್ಲಾ ಒತ್ತಿ ಹೇಳಿದರು.

https://static.pib.gov.in/WriteReadData/userfiles/image/image0028GGR.jpg

 

"ನೀತಿಗಳು ಮತ್ತು ಕಾನೂನುಗಳು ಸಾಕಾಗುವುದಿಲ್ಲ, ವೈಯಕ್ತಿಕ ಮತ್ತು ಸಂಘಟಿತ (ಸಾಮೂಹಿಕ ಕ್ರಮಗಳು) ಸಹ ಅಗತ್ಯ"

ಪರಿಸರಕ್ಕಾಗಿ ಜೀವನಶೈಲಿ ವಿಷಯದ ಕುರಿತು ಭಾರತದ ಸಂಸತ್ತು ಕೈಗೊಂಡ ಉಪಕ್ರಮಗಳನ್ನು ಪ್ರಸ್ತಾಪಿಸಿದ ಶ್ರೀ ಬಿರ್ಲಾ, ಈ ದಿಸೆಯಲ್ಲಿ ಸಂಸತ್ತಿನಲ್ಲಿ ವ್ಯಾಪಕ ಚರ್ಚೆಗಳನ್ನು ನಡೆಸಲಾಗಿದೆ, ಕಾನೂನುಗಳನ್ನು ಸಹ ಮಾಡಲಾಗಿದೆ. ವೈಯಕ್ತಿಕ ಜವಾಬ್ದಾರಿ ಇಂದಿನ ಅಗತ್ಯವಾಗಿದೆ. ಹವಾಮಾನ ಬದಲಾವಣೆ ಸಮಸ್ಯೆಯನ್ನು ಎದುರಿಸಲು ಕೇವಲ ನೀತಿಗಳು ಮತ್ತು ಕಾನೂನುಗಳು ಸಾಕಾಗುವುದಿಲ್ಲ. ಬದಲಿಗೆ, ಪ್ರತಿಯೊಬ್ಬರೂ ತಮ್ಮ ದೈನಂದಿನ ದಿನಚರಿ ಮಾರ್ಪಡಿಸುವ ಮೂಲಕ ಸಾಮೂಹಿಕ ಕೊಡುಗೆ ನೀಡಬೇಕಾಗಿದೆ. “ಪ್ರತಿಯೊಬ್ಬರೂ ತಮ್ಮ ಜೀವನಶೈಲಿಯಲ್ಲಿ ಪರಿಸರಕ್ಕೆ ಹಾನಿಯಾಗದಂತಹ ವಿಧಾನವನ್ನು ಅಳವಡಿಸಿಕೊಳ್ಳುವುದು ಅವಶ್ಯಕ. ಇದನ್ನು ಮಾಡುವುದು ಪ್ರತಿಯೊಬ್ಬರ ವೈಯಕ್ತಿಕ ಮತ್ತು ಸಾಮೂಹಿಕ ಜವಾಬ್ದಾರಿಯಾಗಿದೆ”.

ಮಿಷನ್ ಲೈಫ್ (ಪರಿಸರಕ್ಕಾಗಿ ಜೀವನಶೈಲಿ) ವಿಷಯವನ್ನು ಎಲ್ಲಾ ಸಂಸತ್ತುಗಳು ಚರ್ಚಿಸಬೇಕು ಎಂದು ಶ್ರೀ ಬಿರ್ಲಾ ಒತ್ತಾಯಿಸಿದರು. ಈ ಮಿಷನ್‌ನ ಸಂದೇಶವು ಜನರ ಆಂದೋಲನವಾಗಿ ರೂಪುಗೊಳ್ಳುತ್ತದೆ ಮತ್ತು ಉತ್ತಮ ಜಗತ್ತಿನ ನಿರ್ಮಾಣಕ್ಕೆ ಕಾರಣವಾಗುತ್ತದೆ.

ಜಿ-20 ರಾಷ್ಟ್ರಗಳ ಸಂಸತ್ತಿನ ಅಧ್ಯಕ್ಷರು 'ಲೈಫ್' ಮಿಷನ್ ಪ್ರಾರಂಭಿಸಲು ಭಾರತದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಉಪಕ್ರಮಗಳನ್ನು ಶ್ಲಾಘಿಸಿದರು. ತಮ್ಮ ಸಂಸತ್ತಿನಲ್ಲಿ ಚರ್ಚೆ, ಸಂವಾದ ಮತ್ತು ಸಮಾಲೋಚನೆಗಳ ಮೂಲಕ ಈ ಉಪಕ್ರಮವನ್ನು ಮತ್ತಷ್ಟು ಹೆಚ್ಚಿಸಲು ಮತ್ತು ಕಾರ್ಯಗತಗೊಳಿಸಲು ಎಲ್ಲರೂ ಸಾಮೂಹಿಕವಾಗಿ ನಿರ್ಧರಿಸಿದರು.

 

https://static.pib.gov.in/WriteReadData/userfiles/image/image003PCXG.jpg

 

"ನಮ್ಮ ಸುಸ್ಥಿರ ಜೀವನ ಪಯಣದಲ್ಲಿ ಮಹತ್ವದ ಹೆಜ್ಜೆ"

ಮಿಷನ್ ಲೈಫ್ ಕಾರ್ಯಕ್ರಮವು ವ್ಯಕ್ತಿಗಳು ಮತ್ತು ಸಮುದಾಯಗಳ ಪ್ರಯತ್ನಗಳನ್ನು ಸಕಾರಾತ್ಮಕ ನಡವಳಿಕೆಯ ಬದಲಾವಣೆಯ ಜಾಗತಿಕ ಸಾಮೂಹಿಕ ಆಂದೋಲನಕ್ಕೆ ಮುನ್ನಡೆಸಲು ಪ್ರಯತ್ನಿಸುತ್ತದೆ ಎಂದು ರಾಜ್ಯಸಭೆ ಉಪಸಭಾಪತಿ ಶ್ರೀ ಹರಿವಂಶ್ ಹೇಳಿದರು. ಮಿಷನ್ ಲೈಫ್ ಸುಸ್ಥಿರ ಜೀವನದ ನಮ್ಮ ಸುದೀರ್ಘ ಪ್ರಯಾಣದಲ್ಲಿ ಮಹತ್ವದ ಹೆಜ್ಜೆಯಾಗಿದೆ. ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತವು ಹವಾಮಾನ ಬದಲಾವಣೆಯ ದುಷ್ಪರಿಣಾಮಗಳನ್ನು ಎದುರಿಸಲು ಸಂಘಟಿತ ಪ್ರಯತ್ನಗಳನ್ನು ಮಾಡಿದೆ. ಸಂಸದರು ಪರಿಸರ ಸಂರಕ್ಷಕರು ಮತ್ತು ಸುಸ್ಥಿರ ಪರಂಪರೆ ಮತ್ತು ಪುನರುತ್ಪಾದಕ ಭವಿಷ್ಯದ ಜ್ಯೋತಿ ಹೊರಬೇಕು. ಸಂಘಟಿತ ಅಥವಾಸಾಮೂಹಿಕ ಪ್ರಯತ್ನಗಳು ಜೀವನವು ಅಭಿವೃದ್ಧಿ ಹೊಂದುವ ಮತ್ತು ನಮ್ಮ ಪೃಥ್ವಿಯು ಪ್ರವರ್ಧಮಾನಕ್ಕೆ ಬರುವ ವಿಶ್ವದ ಕಡೆಗೆ ತಿರುಗಿಸುತ್ತದೆ ಎಂದು ಶ್ರೀ ಹರಿವಂಶ್ ಹೇಳಿದ್ದಾರೆ.

ಜಿ-20 ರಾಷ್ಟ್ರಗಳ ಸಂಸತ್ತಿನ ಅಧ್ಯಕ್ಷರು ಚರ್ಚೆ ಸಮಯದಲ್ಲಿ ತಮ್ಮ ಸಲಹೆ ಸೂಚವೆಗಳನ್ನು ನೀಡಿದರು.

ಭಾರತದ ಜಿ-20 ಅಧ್ಯಕ್ಷತೆಯ ಮಾರ್ಗದರ್ಶಕ(ಶೆರ್ಪಾ) ಶ್ರೀ ಅಮಿತಾಭ್ ಕಾಂತ್ ಅವರು ಈ ಸಂದರ್ಭದಲ್ಲಿ ಮಾತನಾಡಿದರು. ಭಾರತ ಸರ್ಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಕಾರ್ಯದರ್ಶಿಶ್ರೀಮತಿ ಲೀನಾ ನಂದನ್ ಅವರು “ಲೈಫ್” ಕುರಿತು ಪ್ರಸ್ತುತಿ ನೀಡಿದರು, ನಂತರ ಮಿಷನ್ ಕುರಿತ ಕಿರುಚಿತ್ರ ಪ್ರದರ್ಶಿಸಲಾಯಿತು.

2023 ಅಕ್ಟೋಬರ್ 13ರ ಶುಕ್ರವಾರ ಭಾರತದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೆಹಲಿಯ ದ್ವಾರಕಾದ ಯಶೋಭೂಮಿಯಲ್ಲಿ 9ನೇ ಪಿ-20 ಶೃಂಗಸಭೆ ಉದ್ಘಾಟಿಸಲಿದ್ದಾರೆ. ಲೋಕಸಭೆಯ ಸ್ಪೀಕರ್ ಶ್ರೀ ಓಂ ಬಿರ್ಲಾ ಅವರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಜಿ-20 ರಾಷ್ಟ್ರಗಳ ಸಂಸತ್ತಿನ ಅಧ್ಯಕ್ಷರ ಜೊತೆಗೆ, ಆಹ್ವಾನಿತ ದೇಶಗಳ ಸಂಸತ್ತಿನ ಅಧ್ಯಕ್ಷರು ಸಹ ಶೃಂಗಸಭೆಯಲ್ಲಿ ಪಾಲ್ಗೊಳ್ಳುತ್ತಾರೆ. ಪ್ಯಾನ್ ಆಫ್ರಿಕನ್ ಸಂಸತ್ತಿನ ಅಧ್ಯಕ್ಷರು ಭಾರತದಲ್ಲಿ ಆಯೋಜಿಸಲಾದ ಪಿ-20 ಶೃಂಗಸಭೆಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

"ವಸುಧೈವ ಕುಟುಂಬಕಂ - ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯಕ್ಕಾಗಿ ಸಂಸತ್ತು" ಎಂಬ ತತ್ವಕ್ಕೆ ಬದ್ಧವಾಗಿ, 2 ದಿನಗಳ ಪಿ-20 ಶೃಂಗಸಭೆಯು ಸಮಕಾಲೀನ ಪ್ರಸ್ತುತತೆಯ ಈ ಕೆಳಗಿನ ವಿಷಯಗಳ ಕುರಿತು ಚರ್ಚಿಸಲಿದೆ.

ಸುಸ್ಥಿರ ಅಭಿವೃದ್ಧಿ ಗುರಿಗಳಿಗಾಗಿ ಕಾರ್ಯಸೂಚಿ 2030: ಸಾಧನೆಗಳನ್ನು ಪ್ರದರ್ಶಿಸುವುದು, ಪ್ರಗತಿಯನ್ನು ವೇಗಗೊಳಿಸುವುದು;

  1. ಸುಸ್ಥಿರ ಇಂಧನ ಪರಿವರ್ತನೆಯು ಹಸಿರು ಇಂಧನಗಳ ಉತ್ಪಾದನೆಗೆ ಪ್ರವೇಶ ದ್ವಾರವಾಗಲಿದೆ.
  2. ಮುಖ್ಯವಾಹಿನಿಯಲ್ಲಿ ಲಿಂಗ ಸಮಾನತೆ- ಮಹಿಳಾ ಅಭಿವೃದ್ಧಿಯಿಂದ ಮಹಿಳಾ ನೇತೃತ್ವದ ಅಭಿವೃದ್ಧಿಗೆ
  3. ಸಾರ್ವಜನಿಕ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಜನರ ಜೀವನ ಪರಿವರ್ತನೆ
  4. 9ನೇ ಪಿ-20 ಶೃಂಗಸಭೆಯು 2010ರಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಬೇರೂರಿರುವ ಜಿ-20 ರಾಷ್ಟ್ರಗಳ ಸಂಸತ್ತಿನ ಅಧ್ಯಕ್ಷರ ಸಾಮೂಹಿಕ ದೃಷ್ಟಿಯ ಅದ್ಭುತ ಪ್ರಯಾಣವನ್ನು ಪ್ರತಿಬಿಂಬಿಸುತ್ತದೆ.

ಲೈಫ್‌ ಸಂಸದೀಯ ವೇದಿಕೆಯು ಜಿ-20 ರಾಷ್ಟ್ರಗಳ ಸಂಸದರನ್ನು, ಆಹ್ವಾನಿತ ದೇಶಗಳು ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳ ಜತೆಗೆ ಸುಸ್ಥಿರ ಜೀವನಶೈಲಿಯನ್ನು ಮುನ್ನಡೆಸುವ ಮತ್ತು ಹವಾಮಾನ ಬದಲಾವಣೆಯನ್ನು ಎದುರಿಸುವ ಕಾರ್ಯತಂತ್ರಗಳ ಕುರಿತು ಚರ್ಚಿಸಲು ಒಟ್ಟುಗೂಡಿದೆ. ಈ ವೇದಿಕೆಯು ಗಣನೀಯ ಪ್ರಾಮುಖ್ಯತೆಯನ್ನು ಹೊಂದಿದೆ, ಸಂಸದರಿಗೆ ಒಳನೋಟಗಳನ್ನು ವಿನಿಮಯ ಮಾಡಿಕೊಳ್ಳಲು ಸೂಕ್ತ ವೇದಿಕೆಯಾಗಿ ಕಾರ್ಯ ನಿರ್ವಹಿಸುತ್ತದೆ. ಅಲ್ಲದೆ, ಸುಸ್ಥಿರ ಜೀವನ ಉತ್ತೇಜಿಸುವ ಯಶಸ್ವಿ ಮಾರ್ಗವಾಗಿದೆ. ಇದಲ್ಲದೆ, ಇದು ಲೈಫ್ ಆಂದೋಲನದ ಅರಿವು ಮತ್ತು ಅದರ ಹೆಚ್ಚಿನ ಉದ್ದೇಶಗಳನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಮಿಷನ್ ಲೈಫ್ ಎನ್ನುವುದು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ 2022 ಜೂನ್ ನಲ್ಲಿ ಕಾರ್ಯಕ್ರಮ ರೂಪಿಸಿದ್ದು, ಅವರು ಪರಿಸರ ಸ್ನೇಹಿ ಜೀವನಶೈಲಿ ಬೆಂಬಲಿಸಲು ಮತ್ತು ಪರಿಸರ ಸಂರಕ್ಷಿಸಲು ರೂಪಿಸಿರುವ ಜಾಗತಿಕ ಪ್ರಯತ್ನವಾಗಿದೆ.

ಪಿ-20 ಶೃಂಗಸಭೆಯ ಕುರಿತು ಹೆಚ್ಚಿನ ಮಾಹಿತಿ:

1. ಒಂಬತ್ತನೇ ಜಿ-20 ಸಂಸದೀಯ ಸ್ಪೀಕರ್‌ಗಳ ಶೃಂಗಸಭೆ (ಪಿ-20) ಮತ್ತು ಸಂಸದೀಯ ವೇದಿಕೆ

2. ಅಕ್ಟೋಬರ್ 13ರಂದು ನವದೆಹಲಿಯಲ್ಲಿ 9ನೇ G20 ಸಂಸದೀಯ ಸ್ಪೀಕರ್‌ಗಳ ಶೃಂಗಸಭೆ (ಪಿ-20) ಉದ್ಘಾಟಿಸಲಿರುವ ಪ್ರಧಾನಿ

3. ಜಿ-20 ರಾಷ್ಟ್ರಗಳ ಅಧ್ಯಕ್ಷರು 9ನೇ ಪಿ-20 ಶೃಂಗಸಭೆಗಾಗಿ ಭಾರತಕ್ಕೆ ಆಗಮಿಸುತ್ತಿದ್ದಾರೆ.

4. 9ನೇ ಪಿ-20 ಶೃಂಗಸಭೆಯು ಮಿಷನ್ ಲೈಫ್‌ನ ಸಂಸದೀಯ ವೇದಿಕೆಯಿಂದ ಮುಂಚಿತವಾಗಿ ನಡೆಯಲಿದೆ

5. ಆಫ್ರಿಕಾ ಒಕ್ಕೂಟದ ಅಧ್ಯಕ್ಷರು ಮತ್ತು ಆಸ್ಟ್ರೇಲಿಯಾ, ಯುಎಇ ಮತ್ತು ಬಾಂಗ್ಲಾದೇಶದ ಸಂಸತ್ತಿನ ಸ್ಪೀಕರ್‌ಗಳು 9ನೇ ಪಿ-20 ಶೃಂಗಸಭೆಯ ಸೇಪಥ್ಯದಲ್ಲಿ ಲೋಕಸಭೆ ಸ್ಪೀಕರ್ ಅವರನ್ನು ಭೇಟಿ ಮಾಡಿದರು

#Parliament20 ಎಂಬ ಹ್ಯಾಶ್‌ಟ್ಯಾಗ್ ಬಳಸಿ ಸಾಮಾಜಿಕ ಮಾಧ್ಯಮದಲ್ಲಿ ಸಂವಾದಕ್ಕೆ ಸೇರಿ.

 

***

 



(Release ID: 1967398) Visitor Counter : 143


Read this release in: English , Urdu , Hindi , Telugu