ಸಂಸದೀಯ ವ್ಯವಹಾರಗಳ ಸಚಿವಾಲಯ
azadi ka amrit mahotsav

​​​​​​​9ನೇ ಪಿ20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಜಿ20 ರಾಷ್ಟ್ರಗಳ ಪೀಠಾಸೀನಾಧಿಕಾರಿಗಳ ಆಗಮನ ಪ್ರಕ್ರಿಯೆ ಶುರು


ಇದೇ ಮೊದಲ ಬಾರಿಗೆ ಪಿ20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿರುವ ಪ್ಯಾನ್‌ ಆಫ್ರಿಕನ್‌ ಸಂಸತ್ತಿನ ಅಧ್ಯಕ್ಷರು ಭಾಗಿ

ಸಂಸತ್ತುಗಳು ಜಾಗತಿಕ ಆಡಳಿತವನ್ನು ಹೇಗೆ ಪರಿಣಾಮಕಾರಿಯಾಗಿ ಮುನ್ನಡೆಸಬಲ್ಲವು ಎಂಬ ಬಗ್ಗೆ ಪಿ20 ಶೃಂಗಸಭೆಯಲ್ಲಿ ವಿಚಾರಮಂಥನ

Posted On: 10 OCT 2023 8:14PM by PIB Bengaluru

ಜಿ20 ಸಂಸದೀಯ ಸ್ಪೀಕರ್‌ಗಳ (ಪೀಠಾಸೀನಾಧಿಕಾರಿಗಳು) ಶೃಂಗಸಭೆಯ (ಪಿ20 ಶೃಂಗಸಭೆ) 9ನೇ ಆವೃತ್ತಿಯ ಉದ್ಘಾಟನೆಗೆ ಕೇವಲ ಎರಡು ದಿನಗಳಿಗಿಂತ ತುಸು ಹೆಚ್ಚು ಸಮಯವಷ್ಟೇ ಬಾಕಿಯಿದ್ದು, ಜಿ20 ಸದಸ್ಯ ರಾಷ್ಟ್ರಗಳು ಮತ್ತು ಆಹ್ವಾನಿತ ರಾಷ್ಟ್ರಗಳ ಪೀಠಾಸೀನಾಧಿಕಾರಿಗಳ ನವದೆಹಲಿಗೆ ಆಗಮನ ಪ್ರಕ್ರಿಯೆ ಶುರುವಾಗಿದೆ. ಕಳೆದ ಸೆಪ್ಟೆಂಬರ್‌ನಲ್ಲಿ ನವದೆಹಲಿಯಲ್ಲಿ ನಡೆದ ನಾಯಕರ ಶೃಂಗಸಭೆಯಲ್ಲಿ ಕೈಗೊಂಡ ಮಹತ್ವದ ಘೋಷಣೆಯ ನಂತರ, ಪಿ 20 ಶೃಂಗಸಭೆಯು ಜಿ20 ಸದಸ್ಯ ರಾಷ್ಟ್ರಗಳು ಮತ್ತು ಅತಿಥಿ ರಾಷ್ಟ್ರಗಳ ಪೀಠಾಸೀನಾಧಿಕಾರಿಗಳು /  ಮುಖ್ಯಸ್ಥರನ್ನು ಇದೀಗ ಒಟ್ಟುಗೂಡಿಸುತ್ತಿದೆ. ಆ ಮೂಲಕ ಸಂಸತ್ತುಗಳು ಜಾಗತಿಕ ಆಡಳಿತವನ್ನು ಹೇಗೆ ಪರಿಣಾಮಕಾರಿಯಾಗಿ ಮುನ್ನಡೆಸಬಹುದು ಹಾಗೂ ಆಡಳಿತಕ್ಕೆ ಎದುರಾಗುವ ಸವಾಲುಗಳನ್ನು ಎದುರಿಸಲು, ಪರಿಹಾರವನ್ನು ಹೇಗೆ ಕಂಡುಕೊಳ್ಳುವ ಬಗ್ಗೆ ಮಹತ್ವದ ಸಮಾಲೋಚನೆಗೆ ವೇದಿಕೆಯಾಗಲಿದೆ. ಆಫ್ರಿಕನ್ ಒಕ್ಕೂಟಕ್ಕೆ ಜಿ20 ಸಮೂಹದಲ್ಲಿ ಕಾಯಂ ಸದಸ್ಯತ್ವ ನೀಡಲು ನವದೆಹಲಿಯಲ್ಲಿ ನಡೆದ ನಾಯಕರ ಸಮ್ಮೇಳನದ ತೀರ್ಮಾನದ ತರುವಾಯ ಪ್ಯಾನ್ ಆಫ್ರಿಕನ್ ಸಂಸತ್ತಿನ ಅಧ್ಯಕ್ಷರು ಭಾರತದಲ್ಲಿ ಮೊದಲ ಬಾರಿಗೆ ಜಿ 20 ಸಭೆಯಲ್ಲಿ ಪಾಲ್ಗೊಳ್ಳುತ್ತಿರುವುದು ವಿಶೇಷವಾಗಿದೆ.

ಗೌರವಾನ್ವಿತ ಬಾಂಗ್ಲಾದೇಶದ ಸಂಸತ್ತಿನ ಸ್ಪೀಕರ್ ಡಾ. ಶಿರಿನ್ ಶರ್ಮಿನ್ ಚೌಧರಿ ಅವರು ಇಂದು ನವದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದರು.  ಪಿ20 ಶೃಂಗಸಭೆಗೆ ಬಾಂಗ್ಲಾದೇಶದ ಸಂಸತ್ತು ಪೀಠಾಸೀನಾಧಿಕಾರಿಗಳು ವಿಶೇಷ ಆಹ್ವಾನಿತರಲ್ಲಿ ಒಬ್ಬರಾಗಿದ್ದು, ಸಂಸದರಾದ ಶ್ರೀಮತಿ ಲಾಕೆಟ್‌ ಚಟರ್ಜಿ ಅವರು ಭಾರತೀಯ ಸಂಸತ್ತಿನ ಪರವಾಗಿ ಗೌರವಾನ್ವಿತ ಚೌಧರಿ ಅವರನ್ನು ಆತ್ಮೀಯ ಮತ್ತು ಸಾಂಪ್ರದಾಯಿಕ ಶೈಲಿಯಲ್ಲಿ ಸ್ವಾಗತ ಕೋರಿ ಬರಮಾಡಿಕೊಂಡರು.

ಆಸ್ಟ್ರೇಲಿಯಾದ ಉಭಯ ಸದನಗಳ ಪೀಠಾಸೀನಾಧಿಕಾರಿಗಳು ಆಗಮಿಸಿದ್ದು, ಆಸ್ಟ್ರೇಲಿಯಾ ಸೆನೆಟ್‌ನ ಅಧ್ಯಕ್ಷರಾದ ಗೌರವಾನ್ವಿತ ಶ್ರೀಮತಿ ಸ್ಯೂ ಲೈನ್ಸ್‌, ಆಸ್ಟ್ರೇಲಿಯಾದ ಹೌಸ್‌ ಆಫ್‌ ರೆಪ್ರೆಸೆಂಟೇಟಿವ್ಸ್‌ನ ಸ್ಪೀಕರ್‌ ಆದ ಗೌರವಾನ್ವಿತ ಶ್ರೀ ಮಿಲ್ಟನ್‌ ಡಿಕ್‌ ಅವರು ಶನಿವಾರ ಅಂದರೆ 2023ರ ಅಕ್ಟೋಬರ್‌ 7ರಂದು ನವದೆಹಲಿಗೆ ಆಗಮಿಸಿದರು.  ಇಬ್ಬರೂ ಗಣ್ಯರನ್ನು ಸಂಸದ ಹರ್ಷವರ್ಧನ್‌ ಅವರು ಆತ್ಮೀಯವಾಗಿ ಬರಮಾಡಿಕೊಂಡರು.

ಕೊರಿಯಾ, ಸೌದಿ ಅರೇಬಿಯಾ, ಇಂಡೋನೇಷಿಯಾ ಗಣರಾಜ್ಯ ಹಾಗೂ ಯುನೈಟೆಡ್‌ ಕಿಂಗ್‌ಡಮ್‌ನ ಗಣ್ಯರು ಸಹ ಇಂದು ನವದೆಹಲಿಗೆ ಆಗಮಿಸುವ ನಿರೀಕ್ಷೆ ಇದೆ.

ಸುಮಾರು 200ಕ್ಕೂ ಹೆಚ್ಚು ಸಂಸತ್ತುಗಳ ಪೀಠಾಸೀನಾಧಿಕಾರಿಗಳು ಹಾಗೂ ಇತರೆ ನಾಯಕರು ಸಮ್ಮೇಳನದಲ್ಲಿ ಪಾಲ್ಗೊಳ್ಳುವುದನ್ನು ಖಾತರಿಪಡಿಸಿದ್ದು, ಕೆಳಕಂಡವರು ಪ್ರಮುಖರೆನಿಸಿದ್ದಾರೆ.

* ಗೌರವಾನ್ವಿತ ಶ್ರೀಮತಿ ಶಿರಿನ್‌ ಶಾರ್ಮಿನ್‌ ಚೌಧರಿ, ಸಂಸತ್ತಿನ ಸ್ಪೀಕರ್‌, ಬಾಂಗ್ಲಾದೇಶ

* ಗೌರವಾನ್ವಿತ ಮಿಲ್ಟನ್‌ ಡಿಕ್‌, ಹೌಸ್‌ ಆಫ್‌ ರೆಪ್ರೆಸೆಂಟೇಟಿವ್ಸ್‌ ಸ್ಪೀಕರ್‌, ಆಸ್ಟ್ರೇಲಿಯಾ

* ಗೌರವಾನ್ವಿತ ಲಿಂಡ್ಸೆ ಹೊಯ್ಲೆ, ಹೌಸ್‌ ಆಫ್‌ ಕಾಮನ್ಸ್‌ನ ಸ್ಪೀಕರ್‌, ಯುನೈಟೆಡ್‌ ಕಿಂಗ್‌ಡಮ್‌

* ಗೌರವಾನ್ವಿತ ತಾಜುದ್ದೀನ್‌ ಅಬ್ಬಾಸ್‌, ನೈಜೀರಿಯಾ ನ್ಯಾಷನಲ್‌ ಅಸೆಂಬ್ಲಿಯ ಸ್ಪೀಕರ್‌

* ಗೌರವಾನ್ವಿತ ಆನಾ ಲಿಲಿಯಾ ರಿವೆರಾ ರಿವೆರಾ, ಮೆಕ್ಸಿಕೋ ಸೆನೆಟ್‌ ಸ್ಪೀಕರ್‌

* ಗೌರವಾನ್ವಿತ ಕಿಮ್‌ ಜಿನ್‌ ಪ್ಯೋ, ನ್ಯಾಷನಲ್‌ ಅಸೆಂಬ್ಲಿಯ ಸ್ಪೀಕರ್‌, ಕೊರಿಯಾ ರಿಪಬ್ಲಿಕ್‌

* ಗೌರವಾನ್ವಿತ ಶ್ರೀ ಸಕ್ರ್‌ ಘೋಬಾಷ್‌, ಫೆಡರಲ್‌ ನ್ಯಾಷನಲ್‌ ಕೌನ್ಸಿಲ್‌ನ ಸ್ಪೀಕರ್‌, ಯುಎಇ

* ಗೌರವಾನ್ವಿತ ಸೂರೂಜ್‌ದೇವ್‌ ಪೂಕರ್‌, ನ್ಯಾಷನಲ್‌ ಅಸೆಂಬ್ಲಿ ಸ್ಪೀಕರ್‌, ಮೌರಿಷಸ್‌

* ಗೌರವಾನ್ವಿತ ನೊಸಿವ್ಯೂ ಮಾಪಿಸ-ನ್ಯಾಕುಲಾ, ನ್ಯಾಷನಲ್‌ ಅಸೆಂಬ್ಲಿ ಸ್ಪೀಕರ್‌, ದಕ್ಷಿಣ ಆಫ್ರಿಕಾ

* ಶ್ರೀಮತಿ ಪುವಾನ್‌ ಟ್ಜಾಜಾನಿ ಧ್ವಿರಿನಿ ಮಹಾರಾಣಿ, ಇಂಡೋನೇಷಿಯಾ ಗಣರಾಜ್ಯದ ಹೌಸ್‌ ಆಫ್‌ ರೆಪ್ರೆಸೆಂಟೇಟಿವ್ಸ್‌ ಸ್ಪೀಕರ್‌

* ಗೌರವಾನ್ವಿತ ಕಿಯಾನ್‌ ಪೆಂಗ್‌ ಸೀ, ಸಂಸತ್ತಿನ ಸ್ಪೀಕರ್‌, ಸಿಂಗಾಪುರ

* ಶ್ರೀಮತಿ ಫ್ರಾನ್ಸೆಸ್ಕಾ ಲಕ್‌ ಅರ್ಮೆಂಗೋಲ್‌ ಸೊಷಿಯಸ್‌, ಕಾಂಗ್ರೆಸ್‌ ಆಫ್‌ ಡೆಪ್ಯುಟೀಸ್‌ನ ಸ್ಪೀಕರ್‌, ಸ್ಪೈನ್‌

* ಶ್ರೀ ವೀ ಹೀ, ಡೆಪ್ಯುಟಿ ಸ್ಪೀಕರ್‌, ಚೀನಾ

* ಶ್ರೀ ಹಿರೊಯುಕಿ ನಾಗಹಮಾ, ಡೆಪ್ಯುಟಿ ಸ್ಪೀಕರ್‌, ಹೌಸ್‌ ಆಫ್‌ ಕೌನ್ಸಿಲರ್ಸ್‌, ಜಪಾನ್‌

* ಡಾ. ಅಬ್ದುಲ್ಲಾ ಅಲ್‌ಶೇಖ್‌, ಸ್ಪೀಕರ್‌ ಪ್ರೆಸಿಡೆಂಟ್‌, ಶುರಾ ಕೌನ್ಸಿಲ್‌, ಸೌದಿ ಅರೇಬಿಯಾ

* ಗೌರವಾನ್ವಿತ ಶೇಖ್‌ ಅಬ್ದುಲ್‌ಮಲಿಕ್‌ ಅಲ್‌ ಖಲಿಲಿ, ಚೇರ್ಮನ್‌ ಆಫ್‌ ಸ್ಟೇಟ್‌ ಕೌನ್ಸಿಲ್‌, ಓಮನ್‌

* ಗೌರವಾನ್ವಿತ ಅಮೋಸ್‌ ಮಸೊಂಡೋ, ಸಂಸದರು, ನ್ಯಾಷನಲ್‌ ಕೌನ್ಸಿಲ್‌ ಆಫ್‌ ಪ್ರಾವಿನ್ಸಸ್‌ನ ಅಧ್ಯಕ್ಷರು, ದಕ್ಷಿಣ ಆಫ್ರಿಕಾ

* ಶ್ರೀಮತಿ ಮಾರ್ಸೆಲಾ ಗುರ್ರಾ, ಅಧ್ಯಕ್ಷರು, ಚೇಂಬರ್ ಆಫ್ ಡೆಪ್ಯೂಟೀಸ್, ಮೆಕ್ಸಿಕೋ

* ಶ್ರೀ ಜಿಬ್ರಿನ್ ಬರುವಾ, ಸೆನೆಟ್‌ನ ಉಪಾಧ್ಯಕ್ಷರು, ಫೆಡರಲ್ ರಿಪಬ್ಲಿಕ್ ಆಫ್ ನೈಜೀರಿಯಾ

* ಗೌರವಾನ್ವಿತ ಶ್ರೀಮತಿ ವ್ಯಾಲೆಂಟಿನಾ ಮ್ಯಾಟ್ವಿಯೆಂಕೊ, ರಷ್ಯಾ ಒಕ್ಕೂಟದ ಫೆಡರೇಶನ್ ಕೌನ್ಸಿಲ್‌ ಅಧ್ಯಕ್ಷರು

* ಗೌರವಾನ್ವಿತ ಇಗ್ನಾಜಿಯೊ ಲಾ ರುಸ್ಸಾ, ಇಟಾಲಿಯನ್ ಸೆನೆಟ್ ಅಧ್ಯಕ್ಷರು, ಇಟಲಿ

* ಡಾ. ಜಾನ್ ಅಂಥೋನಿ ಬ್ರೂಯಿಜ್ನ್, ಸೆನೆಟ್ ಅಧ್ಯಕ್ಷರು, ನೆದರ್‌ಲ್ಯಾಂಡ್ಸ್

* ಗೌರವಾನ್ವಿತ ನಿಕೋಲಾ ಬೀರ್, ಉಪಾಧ್ಯಕ್ಷರು, ಯುರೋಪಿಯನ್ ಪಾರ್ಲಿಮೆಂಟ್, ಯುರೋಪಿಯನ್ ಒಕ್ಕೂಟ 

* ಶ್ರೀ ಫರ್ನಾಂಡೊ ಡೊರಾಡೊ ಫ್ರಿಯಾಸ್, ಡೆಪ್ಯುಟಿ ಸೆಕ್ರೆಟರಿ ಜನರಲ್ - ಸೆನೆಟ್, ಸ್ಪೇನ್

* ಗೌರವಾನ್ವಿತ ಡಾ. ಬದ್ರಿಯಾ ಇಬ್ರಾಹಿಂ ಅಲ್ ಶಿಹ್ಹಿ, ಸ್ಟೇಟ್‌ ಕೌನ್ಸಿಲ್‌ನ ಡೆಪ್ಯುಟಿ ಚೇರ್ಮನ್‌, ಒಮಾನ್‌

* ಶ್ರೀ ಕರೀಂ ಅಬ್ಡೆಲ್‌ಕರೀಂ ದರ್ವಿಸ್‌, ಹೌಸ್‌ ಆಫ್‌ ರೆಪ್ರೆಸೆಂಟೇಟಿವ್ಸ್‌ನ ಸದಸ್ಯ- ಲೀಡರ್‌ ಆಫ್‌ ದಿ ಡೆಲಿಗೇಷನ್‌, ಈಜಿಫ್ಟ್‌

* ಶ್ರೀ ಅರ್ತುರ್‌ ಸೀಸರ್‌ ಪೆರೇರಾ ಡಿ ಲಿರಾ, ಅಧ್ಯಕ್ಷರು, ಹೆಡ್‌ ಆಫ್‌ ಡೆಲಿಗೇಷನ್‌, ಬ್ರೆಜಿಲ್‌

* ಗೌರವಾನ್ವಿತ ಡಾ. ಅಶೇಬಿರ್‌ ವೊಲ್ಡಿಜಿಯೊರ್ಜಿಸ್‌ ಗಯೋ, ಪ್ಯಾನ್‌ ಅಮೆರಿಕನ್‌ ಸಂಸತ್ತಿನ ಹಂಗಾಮಿ ಅಧ್ಯಕ್ಷರು

* ಗೌರವಾನ್ವಿತ ಡೌರ್ಟೆ ಪಚೆಕೊ, ಅಧ್ಯಕ್ಷರು, ಇಂಟರ್‌ ಪಾರ್ಲಿಮೆಂಟರಿ ಯೂನಿಯನ್‌

ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ಜಿ 20 ಶೃಂಗಸಭೆ ಆಯೋಜನೆಯಾದ ಬೆನ್ನಲೇ ಇದೀಗ ಪ್ರಥಮ ಪೀಠಾಸೀನಾಧಿಕಾರಿಗಳ ಸಮ್ಮೇಳನವು (ಪಿ20) 2023ರ ಅಕ್ಟೋಬರ್‌ 13-14ರಂದು ನವದೆಹಲಿಯ ದ್ವಾರಕಾದ ಯಶೋಭೂಮಿಯಲ್ಲಿ ಹೊಸದಾಗಿ ನಿರ್ಮಾಣಗೊಂಡಿರುವ ಇಂಡಿಯಾ ಇಂಟರ್‌ನ್ಯಾಷನಲ್‌ ಕನ್ವೆನ್ಷನ್‌ ಆ್ಯಂಡ್‌ ಎಕ್ಸ್‌ಪೋ ಸೆಂಟರ್‌ (ಐಐಸಿಸಿ)ನಲ್ಲಿ ನಡೆಯಲಿದೆ. ಪೀಠಾಸೀನಾಧಿಕಾರಿಗಳ ಸಮ್ಮೇಳನವನ್ನು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಉದ್ಘಾಟಿಸಲಿದ್ದಾರೆ.

Image

9ನೇ ಆವೃತ್ತಿಯ ಪೀಠಾಸೀನಾಧಿಕಾರಿಗಳ ಸಮ್ಮೇಳನಕ್ಕೂ ಮೊದಲು ಅಂದರೆ ಅಕ್ಟೋಬರ್ 12, 2023ರಂದು ʼಲೈಫ್ʼ (ಸುಸ್ಥಿರ ಅಭಿವೃದ್ಧಿಗಾಗಿ ಜೀವನಶೈಲಿ) ಕುರಿತು ಸಂಸದೀಯ ವೇದಿಕೆ ವತಿಯಿಂದ ನಡೆಯಲಿದ್ದು, ಶೃಂಗಸಭೆಯು ನಾಲ್ಕು ಉನ್ನತ ಮಟ್ಟದ ಅಧಿವೇಶನಗಳು ಜರುಗಲಿವೆ. ಸಂಸದರು ಚರ್ಚಿಸಲಿರುವ ನಾಲ್ಕು ಪ್ರಮುಖ ವಿಷಯಗಳೆಂದರೆ (i) ಸುಸ್ಥಿರ ಅಭಿವೃದ್ಧಿ ಗುರಿ 2030ಕ್ಕೆ ಕಾರ್ಯಸೂಚಿ: ಸಾಧನೆಗಳ ಪ್ರದರ್ಶನದ ಜತೆಗೆ ಪ್ರಗತಿಯ ವೇಗ ಹೆಚ್ಚಿಸುವುದು; (ii) ಸುಸ್ಥಿರ ಶಕ್ತಿ ಪರಿವರ್ತನೆಗಳು: ಹಸಿರು ಭವಿಷ್ಯಕ್ಕೆ ರಹದಾರಿಗಳು; (iii) ಮುಖ್ಯವಾಹಿನಿಯಲ್ಲಿ ಲಿಂಗ ಸಮಾನತೆ: ಮಹಿಳಾ ಸಬಲೀಕರಣದಿಂದ ಮಹಿಳಾ ನೇತೃತ್ವದ ಅಭಿವೃದ್ಧಿಯಡೆಗೆ; ಮತ್ತು (iv) ಸಾರ್ವಜನಿಕ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಜನರ ಜೀವನದಲ್ಲಿ ಪರಿವರ್ತನೆ.

"ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯಕ್ಕಾಗಿ ಸಂಸತ್ತುಗಳು" ಎಂಬ ಧ್ಯೇಯದೊಂದಿಗೆ ಪೀಠಾಸೀನಾಧಿಕಾರಿಗಳ ಶೃಂಗಸಭೆಯು ಅಂತರರಾಷ್ಟ್ರೀಯ ಸಹಕಾರ, ಸಾಂಸ್ಕೃತಿಕ ವಿನಿಮಯ ಮತ್ತು ರಾಷ್ಟ್ರಗಳ ನಡುವೆ ರಾಜತಾಂತ್ರಿಕ ಸಂಬಂಧಗಳನ್ನು ಬಲವರ್ಧನೆಗೆ ಅವಕಾಶಗಳನ್ನು ಸೃಷ್ಟಿಸುವ ನಿರೀಕ್ಷೆ ಮೂಡಿಸಿದೆ.

ಪ್ರಮುಖ ಜಾಗತಿಕ ಸವಾಲುಗಳಿಗೆ ಸಮಾನತೆ, ಒಳಗೊಳ್ಳುವಿಕೆ ಮತ್ತು ಶಾಂತಿಯನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಗಳ ಮೂಲಕ ಪರಿಹಾರಗಳನ್ನು ಕಂಡುಕೊಳ್ಳಲು ಜಿ20 ಸರಕಾರಗಳನ್ನು ಒತ್ತಾಯಿಸುವ ಜಂಟಿ ಹೇಳಿಕೆಯ ಅಂಗೀಕಾರದೊಂದಿಗೆ ಈ ಚರ್ಚೆಗಳು ತೆರೆ ಕಾಣಲಿವೆ

****


(Release ID: 1966609) Visitor Counter : 143


Read this release in: Urdu , English , Hindi