ಹಣಕಾಸು ಸಚಿವಾಲಯ
azadi ka amrit mahotsav

ಜಿಎಸ್ ಟಿ ಗುಪ್ತಚರ ಮಹಾ ನಿರ್ದೇಶನಾಲಯದಿಂದ ( ಡೈರೆಕ್ಟರೇಟ್ ಜನರಲ್ ಆಫ್ ಜಿಎಸ್ಟಿ ಇಂಟೆಲಿಜೆನ್ಸ್ - ಡಿಜಿಜಿಐ) ಭಾರತದಾದ್ಯಂತ ಶ್ರಮದಾನ ಮತ್ತು ಜನ ಭಾಗೀದಾರಿ ಮತ್ತು ಸ್ವಚ್ಛತಾ ಹಿ ಸೇವಾ ಅಭಿಯಾನ.

Posted On: 09 OCT 2023 2:36PM by PIB Bengaluru

"ಸ್ವಚ್ಛ ಭಾರತ ಸುಂದರ ಭಾರತ" ವನ್ನು ಖಚಿತಪಡಿಸಿಕೊಳ್ಳುವ ದೃಷ್ಟಿಯೊಂದಿಗೆ ಜಿಎಸ್ ಟಿ  ಗುಪ್ತಚರ ಮಹಾ ನಿರ್ದೇಶನಾಲಯ (ಡಿಜಿಜಿಐ )  ಶ್ರಮದಾನ ಮತ್ತು ಜನ ಭಾಗಿದರಿ ಮತ್ತು ಸ್ವಚ್ಛತಾ ಸ್ವಚ್ಛತೆಯೇ ಸೇವೆ (ಸ್ವಚ್ಛತಾ ಹಿ ಸೇವೆ) ಅಭಿಯಾನಗಳನ್ನು ಕೈಗೊಂಡಿತು  ಮತ್ತು ಭಾರತದಾದ್ಯಂತ  ತನ್ನ ವಲಯ ಘಟಕಗಳು ಮತ್ತು ಪ್ರಾದೇಶಿಕ ಘಟಕಗಳಿಂದ  ಕಚೇರಿಗಳ ಆವರಣ, ಉದ್ಯಾನವನಗಳು ಮತ್ತು ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛಗೊಳಿಸಲಾಯಿತು.  

ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಅನೇಕ ಸ್ಥಳಗಳಲ್ಲಿ ನೆಡುತೋಪು ಅಭಿಯಾನವನ್ನು ನಡೆಸಿದರು, ಅಲ್ಲಿನ ನಿವಾಸಿಗಳು ಮತ್ತು ನೌಕರರು ಸಸಿಗಳನ್ನು ನೆಟ್ಟರು. ಈ ಅಭಿಯಾನದಲ್ಲಿ ಅಧಿಕಾರಿಗಳೊಂದಿಗೆ ಸ್ಥಳೀಯ ನಿವಾಸಿಗಳು ಸಹ ಮನಃಪೂರ್ವಕವಾಗಿ ಭಾಗವಹಿಸಿದ್ದರು.

 

ಘೋಷಣೆಗಳು ಮತ್ತು ಬ್ಯಾನರ್ಗಳ ಮೂಲಕ ಜಾಗೃತಿ ಅಭಿಯಾನವನ್ನು ಪ್ರಾರಂಭಿಸಲಾಯಿತು. ಸ್ಥಳೀಯ ನಿವಾಸಿಗಳಿಗೆ ಜಾಗೃತಿ ಮೂಡಿಸಿ ಸೆಣಬಿನ ಚೀಲಗಳನ್ನು ವಿತರಿಸಲಾಯಿತು. ಏಕ ಬಳಕೆಯ ಪ್ಲಾಸ್ಟಿಕ್ ಬಳಕೆ ನಿಲ್ಲಿಸುವಂತೆ ಜಾಗೃತಿ ಮೂಡಿಸಲಾಯಿತು. ಜಾಗೃತಿ ಮೂಡಿಸುವ ಮೂಲಕ, ಡಿಜಿಜಿಐ ಸ್ವಚ್ಛ, ಹಸಿರು ಮತ್ತು ಆರೋಗ್ಯಕರ ಭಾರತವನ್ನು ರಚಿಸುವ ಗುರಿಯನ್ನು ಹೊಂದಿದೆ.

ದೇಶಾದ್ಯಂತ ಅನೇಕ ವಾಹನ ನಿಲ್ದಾಣದ ಪ್ರದೇಶಗಳು, ಮಾರುಕಟ್ಟೆ ಸ್ಥಳಗಳು, ಉದ್ಯಾನವನಗಳು, ಶಾಲೆಗಳು, ಪುರಾತನ / ಪಾರಂಪರಿಕ ದೇವಾಲಯಗಳು, ಅಂಡರ್ ಪಾಸ್ಗಳು ಇತ್ಯಾದಿಗಳನ್ನು ಸ್ವಚ್ಛಗೊಳಿಸಲಾಯಿತು. ಸಫಾಯಿ ಮಿತ್ರರನ್ನು ಸಹ ಶುಚಿತ್ವವನ್ನು ಖಾತರಿಪಡಿಸುವಲ್ಲಿನ ಅವರ ಪ್ರಯತ್ನಗಳಿಗಾಗಿ ಸನ್ಮಾನಿಸಲಾಯಿತು ಮತ್ತು ಗೌರವಿಸಲಾಯಿತು.

 

ಸ್ವಚ್ಛತಾ ವಿಶೇಷ ಅಭಿಯಾನ 3.0 ಅಡಿಯಲ್ಲಿ, ಡಿಜಿಜಿಐ ಹಳೆಯ ದಾಖಲೆಗಳು, ಇ-ತ್ಯಾಜ್ಯ ಸೇರಿದಂತೆ ಬಳಕೆಯಲ್ಲಿಲ್ಲದ ಸರಕುಗಳು ಮತ್ತು ಗುಜುರಿ ವಾಹನಗಳ ವಿಲೇವಾರಿಗೆ ಬದ್ಧವಾಗಿದೆ.

****


(Release ID: 1965999) Visitor Counter : 93


Read this release in: English , Urdu , Hindi , Telugu