ಜಲ ಶಕ್ತಿ ಸಚಿವಾಲಯ
azadi ka amrit mahotsav

ಕರ್ನಾಟಕ: ಹಿನ್ನೀರಿನಿಂದ 500 ಕಿಲೋಗ್ರಾಂಗಳಷ್ಟು ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸುವ ಮೂಲಕ ಉಡುಪಿ ಜಿಲ್ಲೆಯಲ್ಲಿ ‘ಸ್ವಚ್ಛತಾ ಹಿ ಸೇವೆ” ಅಭಿಯಾನ

Posted On: 30 SEP 2023 5:00PM by PIB Bengaluru

ಕರ್ನಾಟಕದ ಉಡುಪಿ ಜಿಲ್ಲಾ ಪಂಚಾಯತ್ ಕೋಟತಟ್ಟು ಮತ್ತು ಕೋಡಿ ಗ್ರಾಮ ಪಂಚಾಯತ್ ಗಳ ಸಹಯೋಗದಲ್ಲಿ ಸಾಲಿಗ್ರಾಮ ಕಯಾಕಿಂಗ್ ಪಾಯಿಂಟ್ ನಲ್ಲಿ ‘ಸ್ವಚ್ಛತಾ ಹಿ ಸೇವಾ” ಅಭಿಯಾನದಡಿ ಸಾಲಿಗ್ರಾಮ ಕೋಡಿ ಹಿನ್ನೀರು ಬಿಂದುವಿನಲ್ಲಿ ವಿಶೇಷ ಸ್ವಚ್ಛತಾ ಅಭಿಯಾನವನ್ನು ಕೈಗೊಳ್ಳಲಾಯಿತು.
ಹಿನ್ನೀರಿನ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಕಸ ಶೇಖರಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯಿತಿ ಜತೆಗೆ ಜಿಲ್ಲಾಡಳಿತ ಸ್ವಚ್ಛತೆಗೆ ಈ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ವಿವಿಧ ಗಣ್ಯರು ಮತ್ತು ಸಮುದಾಯದ ಸದಸ್ಯರು ಭಾಗವಹಿಸಿದ್ದರು. ಇದು ಸ್ವಚ್ಛತೆ ಮತ್ತು ಪರಿಸರ ಜಾಗೃತಿಯನ್ನು ಉತ್ತೇಜಿಸುವಲ್ಲಿ ಮಹತ್ವದ ಪ್ರಯತ್ನವಾಗಿದೆ.

ಸ್ವಚ್ಚತಾ ಪ್ರಮಾಣ ವಚನ ಸ್ವೀಕಾರ ಸಮಾರಂಭ ಮತ್ತು ರಾಷ್ಟ್ರಧ್ವಜಾರೋಹಣದೊಂದಿಗೆ ಸ್ವಚ್ಛತೆ ಮತ್ತು ಪರಿಸರ ಸಂರಕ್ಷಣೆಯ ಬದ್ಧತೆಯನ್ನು ಹೇಳುವ ಮೂಲಕ ಕಾರ್ಯಕ್ರಮ ಪ್ರಾರಂಭವಾಯಿತು. ಈ ಸಂದರ್ಭದಲ್ಲಿ, ಹಿನ್ನೀರಿನಿಂದ 500 ಕಿಲೋಗ್ರಾಂಗಳಷ್ಟು ಪ್ಲಾಸ್ಟಿಕ್ ತ್ಯಾಜ್ಯ ಮತ್ತು ಇತರ ಅವಶೇಷಗಳನ್ನು ಸಂಗ್ರಹಿಸಲಾಯಿತು. ಈ ಸಂಗ್ರಹಿಸಿದ ತ್ಯಾಜ್ಯವನ್ನು ನಂತರ ಸರಿಯಾದ ಮತ್ತು ವೈಜ್ಞಾನಿಕ ವಿಲೇವಾರಿಗಾಗಿ ಘನ ತ್ಯಾಜ್ಯ ನಿರ್ವಹಣೆ (SWM) ಕೇಂದ್ರಕ್ಕೆ ಕಳುಹಿಸಲಾಯಿತು.

ಜಲಮಾಲಿನ್ಯವನ್ನು ತಡೆಗಟ್ಟುವ ಮಹತ್ವದ ಬಗ್ಗೆ ಪ್ರವಾಸಿಗರು ಮತ್ತು ಸ್ಥಳೀಯ ಸಮುದಾಯದಲ್ಲಿ ಜಾಗೃತಿ ಮೂಡಿಸುವುದು ಈ ಕಾರ್ಯಕ್ರಮದ ಪ್ರಾಥಮಿಕ ಉದ್ದೇಶವಾಗಿದೆ. ವೈವಿಧ್ಯಮಯ ಗುಂಪನ್ನು ಒಳಗೊಳ್ಳುವ ಮೂಲಕ ಮತ್ತು ಗಣನೀಯ ಪ್ರಮಾಣದ ತ್ಯಾಜ್ಯವನ್ನು ಸಂಗ್ರಹಿಸುವ ಮೂಲಕ, ಈ ಉಪಕ್ರಮವು ಪರಿಸರವನ್ನು, ವಿಶೇಷವಾಗಿ ಹಿನ್ನೀರಿನ ಪರಿಸರ ವ್ಯವಸ್ಥೆಯನ್ನು ರಕ್ಷಿಸಲು ಮತ್ತು ನಮ್ಮ ನೈಸರ್ಗಿಕ ಸುತ್ತಮುತ್ತಲಿನ ಬಗ್ಗೆ ಜವಾಬ್ದಾರಿಯ ಪ್ರಜ್ಞೆಯನ್ನು ಬೆಳೆಸುವ ಬಲವಾದ ಬದ್ಧತೆಯನ್ನು ಪ್ರದರ್ಶಿಸಿತು. ಪರಿಸರದ ಸುಸ್ಥಿರತೆಯನ್ನು ಉತ್ತೇಜಿಸುವಲ್ಲಿ ಮತ್ತು ಈ ಪ್ರದೇಶದಲ್ಲಿ ಜವಾಬ್ದಾರಿಯುತ ಪ್ರವಾಸೋದ್ಯಮ ಅಭ್ಯಾಸಗಳನ್ನು ಉತ್ತೇಜಿಸುವಲ್ಲಿ ಇಂತಹ ಕಾರ್ಯಕ್ರಮಗಳು ನಿರ್ಣಾಯಕವಾಗಿವೆ.

ಉಡುಪಿ ಜಿಲ್ಲಾಧಿಕಾರಿ ಶ್ರೀಮತಿ ವಿದ್ಯಾ ಕುಮಾರಿ, ಜಿಲ್ಲಾ ಪಂಚಾಯತ್ ಉಡುಪಿ ಸಿಇಒ ಪ್ರಸನ್ನ ಕುಂದಾಪುರ ಎಸಿ  ಎಚ್, ರಶ್ಮಿ, ಎಸ್ಬಿಎಂ-ಜಿ ಉಡುಪಿಯ ನೋಡಲ್ ಅಧಿಕಾರಿ ಎ ಶ್ರೀನಿವಾಸ್ ರಾವ್, ಪಿಆರ್ಐ (ಪಂಚಾಯತಿ ರಾಜ್ ಸಂಸ್ಥೆ), ಜಿಪಿ (ಗ್ರಾಮ ಪಂಚಾಯತ್) ) ಕೋಡಿ ಮತ್ತು ಕೋಟತಟ್ಟು GP ಅಧಿಕಾರಿಗಳು, ಸ್ಥಳೀಯ ವಿದ್ಯಾರ್ಥಿಗಳು, SHG (ಸ್ವ-ಸಹಾಯ ಗುಂಪುಗಳು) ಸದಸ್ಯರು ಮತ್ತು ನೈರ್ಮಲ್ಯ ಸಿಬ್ಬಂದಿ ಭಾಗವಹಿಸಿದ್ದರು. ಒಟ್ಟಾರೆಯಾಗಿ ಈ ಅರ್ಥಪೂರ್ಣ ಅಭಿಯಾನದಲ್ಲಿ ಸುಮಾರು 70ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು.

****


(Release ID: 1962513) Visitor Counter : 117


Read this release in: English , Urdu , Hindi , Telugu