ಗಣಿ ಸಚಿವಾಲಯ
azadi ka amrit mahotsav g20-india-2023

​​​​​​​ರಾಷ್ಟ್ರೀಯ ಖನಿಜ ಪರಿಶೋಧನಾ ಟ್ರಸ್ಟ್‌ ಕಾರ್ಯನಿರ್ವಹಣೆಯನ್ನು ಪರಿಶೀಲಿಸಿದ ಕಲ್ಲಿದ್ದಲು ಮತ್ತು ಗಣಿ ಸಚಿವಾಲಯದ ಸಲಹಾ ಸಮಿತಿ


ಖನಿಜ ಉತ್ಪಾದನೆಯಲ್ಲಿ ಭಾರತ ಸ್ವಾವಲಂಬಿಯಾಗಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಸರ್ಕಾರ ಕೈಗೊಂಡಿದೆ : ಸಚಿವ ಪ್ರಹ್ಲಾದ್‌ ಜೋಶಿ

ನಿರ್ಣಾಯಕ ಖನಿಜ ಪರಿಶೋಧನೆಗಾಗಿ ಯೋಜನಾ ವೆಚ್ಚದ 25% ರಷ್ಟು ಪ್ರೋತ್ಸಾಹಧನ ಘೋಷಣೆ

ಎನ್.ಎಂ.ಇ.ಟಿ ಮಂಜೂರು ಮಾಡಿದ 309 ಯೋಜನೆಗಳ ಪೈಕಿ 151 ಯೋಜನೆಗಳು ಪೂರ್ಣ

16 ಖಾಸಗಿ ಪರಿಶೋಧನಾ ಸಂಸ್ಥೆಗಳ ಅಧಿಸೂಚನೆ

Posted On: 20 SEP 2023 3:17PM by PIB Bengaluru

ಕಲ್ಲಿದ್ದಲು ಮತ್ತು ಗಣಿ ಸಚಿವಾಲಯದ ಸಲಹಾ ಸಮಿತಿ ಸಭೆ 2023 ರ ಸೆಪ್ಟೆಂಬರ್‌ 19 ರಂದು ಸಂಸತ್‌ ಭವನದಲ್ಲಿ ನಡೆಯಿತು. ರಾಷ್ಟ್ರೀಯ ಖನಿಜ ಪರಿಶೋಧನಾ ಟ್ರಸ್ಟ್‌ [ಎನ್.ಎಂ.ಇ.ಟಿ] ಸಮಿತಿ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಶಿ, ಹೆಚ್ಚಿನ ರೀತಿಯಲ್ಲಿ ಖನಿಜ ಪರಿಶೋಧನೆಗಾಗಿ ರಾಜ್ಯ ಸರ್ಕಾರಗಳಿಗೆ ಸೂಕ್ತ ಪ್ರಮಾಣದಲ್ಲಿ ಹಣಕಾಸು ಮತ್ತು ತಾಂತ್ರಿಕ ನೆರವು ಒದಗಿಸಲಾಗುವುದು ಮತ್ತು ಖನಿಜ ಉತ್ಪಾದನೆಯಲ್ಲಿ ಭಾರತ ಸ್ವಾವಲಂಬನೆ ಸಾಧಿಸಲು ಅಗತ್ಯವಿರುವ ಎಲ್ಲಾ ರೀತಿಯ ನೆರವು ನೀಡಲಾಗುವುದು ಎಂದರು. ಇತ್ತೀಚೆಗೆ ಬಿಡುಗಡೆ ಮಾಡಲಾದ ಭಾರತದ 30 ನಿರ್ಣಾಯಕ ಖನಿಜಗಳ ಪಟ್ಟಿಯ ಮಹತ್ವ ಕುರಿತು ಬೆಳಕು ಚೆಲ್ಲಿದ ಶ್ರೀ ಜೋಶಿ ಅವರು, ಭಾರತದಲ್ಲಿ ನಿರ್ಣಾಯಕ ಖನಿಜಗಳ ಹರಾಜು ಪ್ರಕ್ರಿಯೆಯನ್ನು ತ್ವರಿತಗೊಳಿಸಲಾಗುವುದು ಎಂದರು.   

“ದೇಶದಲ್ಲಿ ಅನ್ವೇಷಣೆಯನ್ನು ಉತ್ತೇಜಿಸುವಲ್ಲಿ ಎನ್.ಎಂ.ಇ.ಟಿಯ ಪಾತ್ರ, ಜವಾಬ್ದಾರಿ ಮತ್ತು ಕಾರ್ಯಕ್ಷಮತೆ” ಕುರಿತ ಕಾರ್ಯಸೂಚಿ ಹೊಂದಿದ್ದ ಸಭೆಯಲ್ಲಿ, ಗಣಿ ಸಚಿವಾಲಯದ ಕಾರ್ಯದರ್ಶಿ ಶ್ರೀ ವಿ.ಎಲ್.‌ ಕಾಂಥಾ ರಾವ್‌ ಅವರು ಸಮಿತಿ ಸಭೆಯಲ್ಲಿ ಎನ್.ಎಂ.ಇ.ಟಿ ಸಾಮರ್ಥ್ಯ ಕುರಿತು ಪ್ರಾತ್ಯಕ್ಷಿಕೆ ನೀಡಿದರು. ಆಳವಾದ ನಿರ್ಣಾಯಕ ಖನಿಜ ಪರಿಶೋಧನೆಗಾಗಿ ಯೋಜನಾ ವೆಚ್ಚದ 25% ರಷ್ಟು ಪ್ರೋತ್ಸಾಹಧನವನ್ನು ಘೋಷಿಸಿದರು.  

ಖನಿಜ ಪರಿಶೋಧನೆಗೆ ಇದು ಪುಷ್ಟಿ ನೀಡಲಿದ್ದು, ಎನ್.ಎಂ.ಇ.ಟಿ ₹ 2100 ಕೋಟಿ ಮೊತ್ತದ  309 ಯೋಜನೆಗಳಿಗೆ ಮಂಜೂರಾತಿ ನೀಡಿದೆ. ಪ್ರಾದೇಶಿಕ ಮತ್ತು ದೇಶದ ವಿವಿಧ ಭಾಗಗಳಲ್ಲಿ ವಿವಿಧ ಅಧಿಸೂಚಿತ ಸಂಸ್ಥೆಗಳು ಮತ್ತು ಅಧಿಸೂಚಿತ ಖಾಸಗಿ ಸಂಸ್ಥೆಗಳು [ಎನ್.ಇ.ಎಸ್‌ ಮತ್ತು ಎನ್.ಪಿ.ಇ.ಎಗಳು] ವಿಸ್ತೃತ ಪರಿಶೋಧನೆಯಲ್ಲಿ ತೊಡಗಿವೆ. ಎನ್.ಎಂ.ಇ.ಟಿ ಮಂಜೂರು ಮಾಡಿದ 309 ಯೋಜನೆಗಳ ಪೈಕಿ 151 ಯೋಜನೆಗಳು ಈವರೆಗೆ ಪೂರ್ಣಗೊಂಡಿದ್ದು, ಉಳಿದವು ಪ್ರಗತಿಯಲ್ಲಿವೆ. ಸಂಬಂಧಪಟ್ಟ ರಾಜ್ಯ ಸರ್ಕಾರಗಳು ಹನ್ನೊಂದು ಬ್ಲಾಕ್‌ ಗಳನ್ನು ಯಶಸ್ವಿಯಾಗಿ ಹರಾಜು ಹಾಕಿದ್ದು, ಇದರಿಂದ [ಅಂದಾಜು] ₹1.69 ಆದಾಯ ನಿರೀಕ್ಷಿಸಲಾಗಿದೆ ಮತ್ತು ಇದು ಗಣಿ ವಲಯದಲ್ಲಿ ಜೀವಮಾನದ ಸಾಧನೆಯಾಗಿದೆ.

ಇದಲ್ಲದೇ ಖನಿಜ ಪರಿಶೋಧನೆ ಯೋಜನೆಗಳಿಗೆ ಎನ್.ಎಂ.ಇ.ಟಿ ರಾಷ್ಟ್ರೀಯ ವಾಯು – ಭೌಗೋಳಿಕ ನಕ್ಷೆ ರೂಪಿಸುವ ಕಾರ್ಯಕ್ರಮ [ಎನ್.ಎ.ಜಿ.ಎಂ.ಪಿ], ರಾಷ್ಟ್ರೀಯ ಭೂ ಭೌತಿಕ ನಕ್ಷೆ ಕಾರ್ಯಕ್ರಮ[ಎನ್.ಜಿ.ಪಿ.ಎಂ]ದಡಿ ಬಹು ಸಂವೇದನೆಯ ವಾಯು – ಭೂ ಭೌಗೋಳಿಕ ಸಮೀಕ್ಷೆಗಳನ್ನು ಭಾರತೀಯ ಭೂ ಸರ್ವೇಕ್ಷಣಾ ಇಲಾಖೆ [ಜಿ.ಎಸ್.ಐ] ಮೂಲಕ ಹೆಚ್ಚು ಸಾಂದ್ರತೆಯ ಮೂಲ ದತ್ತಾಂಶವನ್ನು ಪಡೆದುಕೊಳ್ಳಬಹುದಾಗಿದ್ದು, ಸಂಭವನೀಯ ಪ್ರದೇಶಗಳನ್ನು ಗುರುತಿಸಲು ಇದು ನೆರವಾಗುತ್ತದೆ ಮತ್ತು ಆಳವಾದ ಪ್ರದೇಶಗಳಲ್ಲಿ ಇನ್ನಷ್ಟು ಖನಿಜ ಪರಿಶೋಧನೆ ಸಾಧ್ಯವಾಗಲಿದೆ. ಜಿ.ಎಸ್.ಐ ಪೋರ್ಟಲ್‌ ನ ರಾಷ್ಟ್ರೀಯ ಭೂ ವಿಜ್ಞಾನ ದತ್ತಾಂಶ ಬಂಢಾರ [ಎನ್.ಜಿ.ಡಿ.ಆರ್]‌ಕ್ಕಾಗಿ ಹಣಕಾಸು ನೆರವು ಒದಗಿಸಲಾಗುತ್ತಿದೆ. ಇಷ್ಟರಲ್ಲೇ ಎನ್.ಜಿ.ಡಿ.ಆರ್‌ ಪೋರ್ಟಲ್‌ ಅನ್ನು ಆರಂಭಿಸಲಾಗುತ್ತಿದೆ.  

ಈ ವರೆಗೆ ಹೆಚ್ಚುವರಿಯಾಗಿ 16 ಖಾಸಗಿ ಪರಿಶೋಧನಾ ಸಂಸ್ಥೆಗಳನ್ನು ಅಧಿಸೂಚಿಸಲಾಗಿದೆ ಮತ್ತು ಐದು ಅಧಿಸೂಚಿತ ಖಾಸಗಿ ಪರಿಶೋಧನಾ ಸಂಸ್ಥೆಗಳಿಗಾಗಿ ಎನ್.ಎಂ.ಇ.ಟಿ 11 ಯೋಜನೆಗಳಿಗೆ ₹ 7.60  ಕೋಟಿ ಒದಗಿಸಿದೆ. ಈ ಒಟ್ಟು 11 ಯೋಜನೆಗಳ ಪೈಕಿ 5  ಯೋಜನೆಗಳಿಗಾಗಿ ₹ 5.07 ಕೋಟಿಯನ್ನು ನಿರ್ಣಾಯಕ ಮತ್ತು ಕಾರ್ಯತಂತ್ರ ಖನಿಜ ವಲಯಗಳಿಗಾಗಿ ಒದಗಿಸಲಾಗಿದೆ.  

ತಾಂತ್ರಿಕ ಮೂಲ ಸೌಕರ್ಯ ಬಲಪಡಿಸುವ ಗುರಿಯನ್ನು ಹೊಂದಿರುವ ಕೇಂದ್ರ ಸರ್ಕಾರದ ಸಂಸ್ಥೆಗಳು ಮತ್ತು ರಾಜ್ಯ ಡಿಜಿಎಂಗಳು/ಡಿಎಂಜಿಗಳಲ್ಲಿ ಯಂತ್ರೋಪಕರಣಗಳು/ಉಪಕರಣಗಳು/ಅಸ್ಥಿತ್ವದಲ್ಲಿರುವ ತಂತ್ರಾಂಶ ಮತ್ತು ಇತ್ತೀಚಿನ ತಂತ್ರಜ್ಞಾನ ಮತ್ತು ಉಪಕರಣಗಳ ಉನ್ನತೀಕರಣಕ್ಕಾಗಿ ಹಣಕಾಸಿನ ನೆರವು ನೀಡಲು ಎನ್.ಎಂ.ಇ.ಟಿ ಯೋಜನೆಗಳನ್ನು ರೂಪಿಸಿದೆ. ಇದಕ್ಕಾಗಿ 19  ರಾಜ್ಯಗಳು, ಜಿ.ಎಸ್.ಐ ಮತ್ತು ಐಬಿಎಂ ಗಳಿಗಾಗಿ ₹ 182.52 ಕೋಟಿ ಮಂಜೂರಾಗಿದೆ ಮತ್ತು ₹ 23.78 ಕೋಟಿ ಬಿಡುಗಡೆಯಾಗಿದೆ.

ಹರಾಜು ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಎನ್.ಎಂ.ಇ.ಟಿ ರಾಜ್ಯಗಳ ಡಿಜಿಎಂ/ಡಿಎಂಜಿಗಳಿಗೆ ಪ್ರೋತ್ಸಾಹ ಧನ ನೀಡುತ್ತಿದೆ. ಎನ್.ಎಂ.ಇ.ಟಿ 20 ರಾಜ್ಯಗಳಿಗೆ ಅಗತ್ಯವಿರುವ ಬ್ಲಾಕ್‌ ಗಳ ಹರಾಜು ಪ್ರಕ್ರಿಯೆಗಾಗಿ ₹ 37.34 ಕೋಟಿ ಬಿಡುಗಡೆ ಮಾಡಿದೆ ಮತ್ತು ಬ್ಲಾಕ್‌ ಗಳ ಹರಾಜು ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ.  

ಸಮಾಲೋಚನಾ ಸಮಿತಿಯ ಸದಸ್ಯರು ಸಚಿವಾಲಯವನ್ನು ‍ಶ್ಲಾಘಿಸಿದರು ಮತ್ತು ಖನಿಜ ಪರಿಶೋಧನೆಯನ್ನು ಹೆಚ್ಚಿಸಲು ಹಲವು ಸಲಹೆಗಳನ್ನು ನೀಡಿದರು ಮತ್ತು ಎನ್.ಎಂ.ಇ.ಟಿ ಸಾಧನೆಗಳನ್ನು ಶ್ಲಾಘಿಸಿದರು. ಖನಿಜ ವಲಯ, ವಿಶೇಷವಾಗಿ ನಿರ್ಣಾಯಕ ಮತ್ತು ಕಾರ್ಯತಂತ್ರ ಖನಿಜ ಕ್ಷೇತ್ರದಲ್ಲಿ ಭಾರತ ಸ್ವಾವಲಂಬಿಯಾಗಲು ಗಣಿ ಸಚಿವಾಲಯ ಕೈಗೊಂಡಿರುವ ಹೆಜ್ಜೆಗಳನ್ನು ಸದಸ್ಯರು ಶ್ಲಾಘಿಸಿದರು.  

ಸಭೆಯಲ್ಲಿ ಸಂಸದರಾದ ಶ್ರೀ ಅಜಯ್‌ ಕುಮಾರ್‌ ಮಂಡಲ್‌, ಶ್ರೀ ಚುನ್ನಿ ಲಾಲ್‌ ಸಾಹು, ‍ಶ್ರೀ ಕೃಪಾಲ್‌ ಬಾಲಾಜಿ ತುಮನೆ, ಶ್ರೀ ಮಿಟೇಶ್‌ ರಮೇಶ್‌ ಭಾಯಿ ಪಟೇಲ್‌, ‍ಶ್ರೀ ಮೋಹನ್‌ ಮಾಂಡವಿ, ಶ್ರೀ ಪಕೌರಿ ಲಾಲ್‌, ಶ್ರೀ ಸುನಿಲ್‌ ಸೊರೇನ್‌, ಶ್ರೀ ಸುರೇಶ್‌ ಕುಮಾರ್‌ ಪುಜಾರಿ, ಶ್ರೀ ಖಿರು ಮಹ್ತೋ, ಶ್ರೀಮತಿ ಸೀಮಾ ದ್ವಿವೇದಿ ಮತ್ತು ಡಾ. ಪ್ರಶಾಂತ ನಂದಾ ಅವರು ಉಪಸ್ಥಿತರಿದ್ದರು.

***



(Release ID: 1959091) Visitor Counter : 104


Read this release in: English , Urdu , Hindi , Tamil