ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ

ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರಿಂದ  ಕ್ರೀಡಾಳುಗಳಿಗಾಗಿರುವ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ರಾಷ್ಟ್ರೀಯ ಕಲ್ಯಾಣ ನಿಧಿ (ಪಿಡಿಯುಎನ್ ಡಬ್ಲ್ಯೂಎಫ್ ಎಸ್) ಅಡಿಯಲ್ಲಿ ಕ್ರೀಡಾಳುಗಳಿಗೆ  ಸನ್ಮಾನ


ಪ್ರಧಾನಮಂತ್ರಿ ಶ್ರೀ.  ನರೇಂದ್ರ ಮೋದಿ ಅವರು ಕ್ರೀಡಾಪಟುಗಳಿಗೆ ಸಾಧ್ಯವಿರುವ ಎಲ್ಲ ಬೆಂಬಲವನ್ನು ನೀಡಿದ್ದಾರೆ ಮತ್ತು ಕ್ರೀಡಾಪಟುಗಳಿಗೆ ಬೆಂಬಲ ನೀಡುವುದನ್ನು ಮುಂದುವರಿಸಲಾಗುವುದು : ಶ್ರೀ ಅನುರಾಗ್ ಸಿಂಗ್ ಠಾಕೂರ್

Posted On: 19 SEP 2023 9:03PM by PIB Bengaluru

ಕೇಂದ್ರ ಯುವಜನ  ವ್ಯವಹಾರ ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರು 2023 ರ  ಸೆಪ್ಟೆಂಬರ್ 19 ರಂದು ಹೊಸದಿಲ್ಲಿಯಲ್ಲಿ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ರಾಷ್ಟ್ರೀಯ ಕ್ರೀಡಾಪಟುಗಳ ಕಲ್ಯಾಣ ನಿಧಿ (ಪಿಡಿಯುಎನ್ಡಬ್ಲ್ಯೂಎಫ್ಎಸ್) ಅಡಿಯಲ್ಲಿ ಆಟಗಾರರನ್ನು ಸನ್ಮಾನಿಸಿದರು.

ಸಂದರ್ಭದಲ್ಲಿ ಮಾತನಾಡಿದ ಶ್ರೀ ಅನುರಾಗ್ ಸಿಂಗ್ ಠಾಕೂರ್, ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ರಾಷ್ಟ್ರೀಯ ಕ್ರೀಡಾಪಟುಗಳ ಕಲ್ಯಾಣ ನಿಧಿ (ಪಿಡಿಯುಎನ್ ಡಬ್ಲ್ಯೂಎಫ್ಎಸ್) ಯನ್ನು ಉತ್ತಮವಾಗಿ ಆಡುವ ಆದರೆ ಬಡ ಮತ್ತು ಸವಲತ್ತುಗಳ ಅವಶ್ಯಕತೆಯುಳ್ಳ ನಿರ್ಗತಿಕ ಕುಟುಂಬದಿಂದ ಬಂದ ಕ್ರೀಡಾಪಟುಗಳಿಗೆ ಸಹಾಯ ಮಾಡಲು ರೂಪಿಸಲಾಗಿದೆ ಎಂದು ಹೇಳಿದರು. ಈ ಯೋಜನೆಯು ಕ್ರೀಡಾ ಸಲಕರಣೆಗಳ ಖರೀದಿಗೆ  ಮತ್ತು ತರಬೇತಿಗಾಗಿ ಸಹಾಯ ಮಾಡುತ್ತದೆ ಮತ್ತು ಇಲ್ಲಿಯವರೆಗೆ 270 ಕ್ರೀಡಾಪಟುಗಳಿಗೆ ಸುಮಾರು 8 ಕೋಟಿ 15 ಲಕ್ಷ ರೂಪಾಯಿಗಳ ಬೆಂಬಲವನ್ನು ನೀಡಲಾಗಿದೆ ಎಂದೂ ಅವರು ಹೇಳಿದರು. ಇಂದು ನೆರವು ನೀಡಿದ ಕ್ರೀಡಾಪಟುಗಳು ಸಹ ಉತ್ತಮವಾಗಿ ಆಡುತ್ತಾರೆ ಮತ್ತು ಅವರಿಗೆ ಕೆಲವು ಸೌಲಭ್ಯಗಳ ಅಗತ್ಯವಿದೆ ಎಂದು ಅವರು ನುಡಿದರು.  ಟಿಒಪಿಎಸ್ ಮೂಲಕ ಅಥವಾ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ರಾಷ್ಟ್ರೀಯ ಕ್ರೀಡಾಪಟುಗಳ ಕಲ್ಯಾಣ ನಿಧಿ (ಪಿಡಿಯುನ್ ಡಬ್ಲ್ಯೂಎಫ್ಎಸ್) ಮೂಲಕ ಸರ್ಕಾರವು ಕ್ರೀಡಾಪಟುಗಳಿಗೆ ನೆರವು ನೀಡುತ್ತಿದೆ ಎಂದೂ ಅವರು ಹೇಳಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕ್ರೀಡಾಪಟುಗಳಿಗೆ ಸಾಧ್ಯವಿರುವ ಎಲ್ಲ ಬೆಂಬಲವನ್ನು ನೀಡಿದ್ದಾರೆ ಮತ್ತು ಕ್ರೀಡಾಪಟುಗಳಿಗೆ ಬೆಂಬಲ ನೀಡುವುದನ್ನು ಮುಂದುವರಿಸುತ್ತಾರೆ ಎಂದೂ  ಅವರು ಹೇಳಿದರು.

ಏಶ್ಯನ್ ಗೇಮ್ಸ್ ಬಗ್ಗೆ ಮಾತನಾಡಿದ ಅವರು, ಈ ವರ್ಷ ಭಾರತವು ಇಲ್ಲಿಯವರೆಗೆ ಗೆದ್ದಿರುವುದಕ್ಕಿಂತ ಅತಿ ಹೆಚ್ಚು ಪದಕಗಳನ್ನು ಗೆಲ್ಲುತ್ತದೆ ಎಂದು ನಾವು ಭರವಸೆ ಹೊಂದಿದ್ದೇವೆ ಎಂದರು.

ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ರಾಷ್ಟ್ರೀಯ ಕ್ರೀಡಾಪಟುಗಳ ಕಲ್ಯಾಣ ನಿಧಿ (ಪಿಡಿಯುಎನ್ ಡಬ್ಲ್ಯೂಎಫ್ಎಸ್) ಯೋಜನೆಯನ್ನು ಬಡತನದ  ಪರಿಸ್ಥಿತಿಗಳಲ್ಲಿ ವಾಸಿಸುವ ಅತ್ಯುತ್ತಮ ಕ್ರೀಡಾಪಟುಗಳು, ತರಬೇತುದಾರರು ಮತ್ತು ಅವರ ಕುಟುಂಬ ಸದಸ್ಯರಿಗೆ ವೈದ್ಯಕೀಯ ಚಿಕಿತ್ಸೆ, ಗಾಯಗಳ ಚಿಕಿತ್ಸೆ, ಕ್ರೀಡಾ ಉಪಕರಣಗಳ ಖರೀದಿ ಮತ್ತು ರಾಷ್ಟ್ರೀಯ ಹಾಗು ಅಂತರರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾಗವಹಿಸುವುದು ಮುಂತಾದ ವಿವಿಧ ಉದ್ದೇಶಗಳಿಗಾಗಿ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಜಾರಿಗೆ ತರಲಾಗುತ್ತಿದೆ.

ಕ್ರೀಡಾಪಟುಗಳಿಗೆ ನೀಡಲಾಗಿರುವ ಆರ್ಥಿಕ ನೆರವಿನ    ವಿವರಗಳು ಈ ಕೆಳಗಿನ ಕೋಷ್ಠಕದಲ್ಲಿವೆ:

ಕ್ರಮ ಸಂಖ್ಯೆ

ಕ್ರೀಡಾಳುವಿನ ಹೆಸರು ಮತ್ತು ಸಾಧನೆಗಳು

ಉದ್ದೇಶ

1

ಶ್ರೀ ವಿಕಾಸ್ ನರ್ವಾಲ್,

ಅವರು ಪ್ಯಾರಾ ಲಾನ್ ಬೌಲ್ಸ್ ಕ್ರೀಡಾಶಿಸ್ತಿನ ಕ್ರೀಡಾಪಟು. ಮಲೇಷ್ಯಾದ ಜೋಹರ್ ನಲ್ಲಿ ನಡೆದ ಏಷ್ಯನ್ ಚಾಂಪಿಯನ್ ಶಿಪ್ 2022 ರಲ್ಲಿ ಅವರು ಬೆಳ್ಳಿ ಪದಕಗಳನ್ನು ಗೆದ್ದಿದ್ದಾರೆ. ಮಹಾರಾಷ್ಟ್ರದ ನಾಸಿಕ್ ನಲ್ಲಿ ನಡೆದ 2021-22ರ ರಾಷ್ಟ್ರೀಯ ಚಾಂಪಿಯನ್ ಶಿಪ್ ನಲ್ಲಿ ಮಿಶ್ರ ಜೋಡಿ, ಪುರುಷ ಜೋಡಿ ಮತ್ತು ಪುರುಷ-ಸಿಂಗಲ್ ವಿಭಾಗಗಳಲ್ಲಿ ಮೂರು ಬೆಳ್ಳಿ ಪದಕಗಳನ್ನು ಅವರು ಗೆದ್ದಿದ್ದಾರೆ.

ಕಿಟ್ ಖರೀದಿ ಮತ್ತು ತರಬೇತಿಗಾಗಿ.

2

ಶ್ರೀ ಅನಿಲ್ ಕುಮಾರ್

ಅವರು ಅಥ್ಲೆಟಿಕ್ಸ್ ಕ್ರೀಡಾಪಟು. ಅವರು ಮಾರಿಷಸ್ ಮ್ಯಾರಥಾನ್ 2017  ಮತ್ತು ಗೋವಾ ರಿವರ್ ಮ್ಯಾರಥಾನ್ 2010 ರಲ್ಲಿ ಭಾಗವಹಿಸಿದ್ದಾರೆ.

 

ಸಲಕರಣೆಗಳ ಖರೀದಿ ಮತ್ತು ತರಬೇತಿ ಹಾಗು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ  ಭಾಗವಹಿಸಲು.

3

ಶ್ರೀಮತಿ ಸಂಜನಾ ಸುನಿಲ್ ಜೋಶಿ

 

ಅವರು ಅಥ್ಲೆಟಿಕ್ಸ್ (ಟ್ರಯಥ್ಲಾನ್) ಕ್ರೀಡಾಪಟು. ನೇಪಾಳದಲ್ಲಿ ನಡೆದ ದಕ್ಷಿಣ ಏಷ್ಯಾ ಚಾಂಪಿಯನ್ ಶಿಪ್ 2022 ರಲ್ಲಿ ಅವರು ಮೂರನೇ ಸ್ಥಾನ ಪಡೆದಿದ್ದಾರೆ.

 

ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾಗವಹಿಸಲು.

4

ಶ್ರೀ ದಿನೇಶ್ ರಾಜಶೇಖರನ್

ಅವರು ಪವರ್ ಲಿಫ್ಟಿಂಗ್ ನ ಕ್ರೀಡಾಪಟು. ಹೈದರಾಬಾದಿನಲ್ಲಿ ನಡೆದ ಪವರ್ಲಿಫ್ಟಿಂಗ್ ಚಾಂಪಿಯನ್ ಶಿಪ್ 2022 ರಲ್ಲಿ ಮೂರನೇ ಸ್ಥಾನ ಮತ್ತು ಅಲಪ್ಪುಳದಲ್ಲಿ ನಡೆದ ಏಷ್ಯನ್ ಪುರುಷರ  ಸುಸಜ್ಜಿತ (ಭಾರ ಎತ್ತಲು ಹೆಚ್ಚುವರಿ ಸಲಕರಣೆಗಳನ್ನು  ಬಳಸುವ ಅವಕಾಶ ಇರುವ) ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್, 2023 ರಲ್ಲಿ ಮೊದಲ ಸ್ಥಾನವನ್ನು ಗಳಿಸಿದ್ದಾರೆ.

 

ಸಲಕರಣೆಗಳ ಖರೀದಿ ಮತ್ತು ಅಂತರರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾಗವಹಿಸಲು.

 

 

****

 

 

 

 

 

 

 (Release ID: 1958958) Visitor Counter : 110


Read this release in: English , Urdu , Hindi , Manipuri