ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಭಾರತ-ಫ್ರಾನ್ಸ್ ಜಂಟಿ ಹೇಳಿಕೆ

Posted On: 10 SEP 2023 5:26PM by PIB Bengaluru

ಭಾರತದ ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಫ್ರೆಂಚ್ ಗಣರಾಜ್ಯದ ಅಧ್ಯಕ್ಷರಾದ ಘನತೆವೆತ್ತ ಶ್ರೀ ಎಮ್ಯಾನುಯೆಲ್ ಮ್ಯಾಕ್ರೋನ್ ಅವರೊಂದಿಗೆ ಭೋಜನಕೂಟದ ಸಮಯದಲ್ಲಿ ದ್ವಿಪಕ್ಷೀಯ ಸಭೆ ನಡೆಸಿದರು .

ಜುಲೈ 2023 ರಲ್ಲಿ ಪ್ಯಾರಿಸ್ ನಲ್ಲಿ ತಮ್ಮ ಕೊನೆಯ ಸಭೆಯ ನಂತರ ದ್ವಿಪಕ್ಷೀಯ ಸಂಬಂಧಗಳಲ್ಲಿನ ಪ್ರಗತಿಯನ್ನು ಸೆಪ್ಟೆಂಬರ್ 10, 2023 ರಂದು ನವದೆಹಲಿಯಲ್ಲಿ ನಡೆದ ಜಿ-20 ನಾಯಕರ ಶೃಂಗಸಭೆಯಲ್ಲಿ ಅವರು ಪರಿಶೀಲಿಸಿದರು ಮತ್ತು ಮೌಲ್ಯಮಾಪನ ಮಾಡಿದರು ಹಾಗೂ ಚರ್ಚಿಸಿದರು.  

ಅವರು ಪ್ರಮುಖ ಅಂತರರಾಷ್ಟ್ರೀಯ ಮತ್ತು ಪ್ರಾದೇಶಿಕ ಬೆಳವಣಿಗೆಗಳ ಬಗ್ಗೆ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು.

ಭಾರತ-ಫ್ರಾನ್ಸ್ ವ್ಯೂಹಾತ್ಮಕ ಪಾಲುದಾರಿಕೆಯ -ಕಾರ್ಯತಂತ್ರದ 25 ನೇ ವಾರ್ಷಿಕೋತ್ಸವದ ಸ್ಮರಣಾರ್ಥ 14 ಜುಲೈ 2023 ರಂದು ಫ್ರೆಂಚ್ ರಾಷ್ಟ್ರೀಯ ದಿನದ ಸಂದರ್ಭದಲ್ಲಿ ಪಾಲ್ಗೊಳ್ಳಲು , ದೇಶದ ಗೌರವ ಅತಿಥಿಯಾಗಿ ಜುಲೈ 13-14, 2023 ರಂದು ಪ್ಯಾರಿಸ್ ಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ನೀಡಿದ ಐತಿಹಾಸಿಕ ಭೇಟಿಯ ನಂತರ, ಇದೀಗ ಫ್ರಾನ್ಸ್ ಅಧ್ಯಕ್ಷ ಶ್ರೀ ಮ್ಯಾಕ್ರನ್ ಅವರು ಭಾರತ ಭೇಟಿ ಮಾಡಿದ್ದಾರೆ.  

ಆಳವಾದ ನಂಬಿಕೆ, ಹಂಚಿಕೆಯ ಮೌಲ್ಯಗಳು, ಸಾರ್ವಭೌಮತ್ವ ಮತ್ತು ಕಾರ್ಯತಂತ್ರದ ಸ್ವಾಯತ್ತತೆಯಲ್ಲಿ ನಂಬಿಕೆ, ಅಂತರರಾಷ್ಟ್ರೀಯ ಕಾನೂನು ಮತ್ತು ಯುಎನ್ ಚಾರ್ಟರ್ ನಲ್ಲಿ ಪ್ರತಿಪಾದಿಸಲಾದ ತತ್ವಗಳಿಗೆ ದೃಢವಾದ ಬದ್ಧತೆ, ಬಹುಪಕ್ಷೀಯತೆಯಲ್ಲಿ ಅಚಲವಾದ ವಿಶ್ವಾಸ ಮತ್ತು ಸ್ಥಿರ ಬಹುಸಂಖ್ಯೆಯ ಪರಸ್ಪರ ಅನ್ವೇಷಣೆಯಲ್ಲಿ ಸ್ಥಾಪಿತವಾದ ಭಾರತದ ಫ್ರಾನ್ಸ್ ಪಾಲುದಾರಿಕೆಯ ಬಲವನ್ನು ಅಂಗೀಕರಿಸುವುದು ಚರ್ಚೆಯಲ್ಲಿ ಸಹಮತಗೊಂಡಿತು. ಪೋಲಾರ್ ವರ್ಲ್ಡ್, ಪ್ರಾದೇಶಿಕ ಮತ್ತು ಜಾಗತಿಕ ಸವಾಲುಗಳನ್ನು ಎದುರಿಸಲು ತಮ್ಮ ಸಹಯೋಗವನ್ನು ವಿಸ್ತರಿಸುವ ಅಗತ್ಯವನ್ನು ಇಬ್ಬರೂ ನಾಯಕರು ಹೇಳಿದರು. 'ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ', ಪ್ರಕ್ಷುಬ್ಧ ಸಮಯದಲ್ಲಿ ಜಾಗತಿಕ ಒಳಿತಿನ ಉಪಕ್ರಮವನ್ನು ಮರುರೂಪಿಸುತ್ತದೆ. ‘ವಸುಧೈವ ಕುಟುಂಬಕಂ’ ಎಂಬ ಸಂದೇಶವನ್ನು ಸಾರುವ ಮೂಲಕ ಸಾಮೂಹಿಕವಾಗಿ ಒಳ್ಳೆಯ ಶಕ್ತಿಯಾಗಿ ಸೇವೆ ಸಲ್ಲಿಸುವ ತಮ್ಮ ಅಚಲ ಬದ್ಧತೆಯನ್ನು ಪ್ರಧಾನಮಂತ್ರಿಯವರು ಪುನರುಚ್ಚರಿಸಿದರು.  

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಫ್ರಾನ್ಸ್ ಭೇಟಿಯ ಸಮಯದಲ್ಲಿ ರೂಪಿಸಿದ 'ಹಾರಿಜಾನ್ 2047' ಮಾರ್ಗಸೂಚಿ, ಇಂಡೋ-ಪೆಸಿಫಿಕ್ ಮಾರ್ಗಸೂಚಿ ಮತ್ತು ಇತರ ಫಲಿತಾಂಶಗಳು ಇತ್ತೀಚಿನ ಉಲ್ಲೇಖದ ಅಂಶಗಳಾಗಿ ಕಾರ್ಯನಿರ್ವಹಿಸುತ್ತಿವೆ. ಉಭಯ ನಾಯಕರು ಒಟ್ಟಾರೆ ಪ್ರಗತಿ ಮತ್ತು ಸಹಕಾರಕ್ಕಾಗಿ ಹೊಸ ಮತ್ತು ಮಹತ್ವಾಕಾಂಕ್ಷೆಯ ಗುರಿಗಳ ಅನುಷ್ಠಾನದ ಮುಂದಿನ ಕ್ರಮಗಳ ಕುರಿತು ಚರ್ಚಿಸಿದರು. 

ಕ್ಷೇತ್ರಗಳು, ಬಾಹ್ಯಾಕಾಶ, ಪರಮಾಣು ಶಕ್ತಿ, ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ, ನಿರ್ಣಾಯಕ ತಂತ್ರಜ್ಞಾನ, ಹವಾಮಾನ ಬದಲಾವಣೆ, ಶಿಕ್ಷಣ ಮತ್ತು ಜನರಿಂದ ಜನರ ಸಂಪರ್ಕಗಳು,  ಮೂಲಸೌಕರ್ಯ, ಸಂಪರ್ಕ, ಇಂಧನ, ಜೀವವೈವಿಧ್ಯ, ಸುಸ್ಥಿರತೆ ಮತ್ತು ಕೈಗಾರಿಕಾ ಯೋಜನೆಗಳು ಸೇರಿದಂತೆ ಇಂಡೋ ಪೆಸಿಫಿಕ್ ಪ್ರದೇಶ ಮತ್ತು ಆಫ್ರಿಕಾದಲ್ಲಿ ಭಾರತ-ಫ್ರಾನ್ಸ್ ಸಹಭಾಗಿತ್ವದ ಕುರಿತು ಅವರು ತಮ್ಮ ಚರ್ಚೆಗಳನ್ನು ಮುಂದುವರೆಸಿದರು.  ಭಾರತ ಮತ್ತು ಫ್ರಾನ್ಸ್ ನಿಂದ  ಪ್ರಾರಂಭಿಸಿದ ಅಂತರರಾಷ್ಟ್ರೀಯ ಸೌರ ಒಕ್ಕೂಟ ಮತ್ತು ವಿಪತ್ತು ಸ್ಥಿತಿಸ್ಥಾಪಕ ಮೂಲಸೌಕರ್ಯಗಳ ಒಕ್ಕೂಟದ ಚೌಕಟ್ಟಿನಲ್ಲಿ ತಮ್ಮ ಸಹಕಾರದ ಮೂಲಕ ಇಂಡೋ-ಪೆಸಿಫಿಕ್ ಗೆ ಪರಿಹಾರಗಳನ್ನು ಒದಗಿಸುವ ನಿಟ್ಟನಲ್ಲಿ ದೇಶಗಳ  ಪಾತ್ರವನ್ನು ಅವರು ಹೇಳಿದರು. 

ಭಾರತದ ಮಿಷನ್ “ಚಂದ್ರಯಾನ 3” ರ ಯಶಸ್ಸಿಗೆ ಅಧ್ಯಕ್ಷ  ಶ್ರೀ ಮ್ಯಾಕ್ರನ್ ಅವರು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರನ್ನು ಅಭಿನಂದಿಸಿದರು. ಉಭಯ ನಾಯಕರು ಆರು ದಶಕಗಳ ಭಾರತ-ಫ್ರಾನ್ಸ್ ಬಾಹ್ಯಾಕಾಶ ಸಹಕಾರವನ್ನು ನೆನಪಿಸಿಕೊಂಡರು ಮತ್ತು ಜೂನ್ 2023 ರಲ್ಲಿ ಮೊದಲ ಕಾರ್ಯತಂತ್ರದ ಬಾಹ್ಯಾಕಾಶ ಸಂವಾದವನ್ನು ನಡೆಸಿದ ನಂತರದ ಪ್ರಗತಿಯನ್ನು ಪರಿಶೀಲಿಸಿದರು. ಭಾರತ-ಫ್ರಾನ್ಸ್ ಬಲವಾದ ನಾಗರಿಕತೆಯನ್ನು ಇಬ್ಬರೂ ಒಪ್ಪಿಕೊಂಡರು. ಪರಮಾಣು ಸಂಬಂಧಗಳು, ಜೈತಾಪುರ ಪರಮಾಣು ಸ್ಥಾವರ ಯೋಜನೆಗಾಗಿ ನಡೆದ ಚರ್ಚೆಯಲ್ಲಿ ಉತ್ತಮ ಪ್ರಗತಿ ಕಂಡಿತು. ಎಸ್.ಎಂ.ಆರ್. ಮತ್ತು ಎ.ಎಂ.ಆರ್. ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವ ಪಾಲುದಾರಿಕೆಯನ್ನು ಸ್ಥಾಪಿಸಲು ದ್ವಿಪಕ್ಷೀಯ ಸಹಕಾರವನ್ನು ವಿಸ್ತರಿಸಲು ಎರಡೂ ಕಡೆಯ ನಿರಂತರ ಪಾಲ್ಗೊಳ್ಳುವಿಕೆಯನ್ನು ಸ್ವಾಗತಿಸಿದರು. ಪರಮಾಣು ಪೂರೈಕೆದಾರರ ಗುಂಪಿನಲ್ಲಿ ಭಾರತದ ಸದಸ್ಯತ್ವಕ್ಕಾಗಿ ಫ್ರಾನ್ಸ್ ತನ್ನ ದೃಢವಾದ ಮತ್ತು ಅಚಲವಾದ ಬೆಂಬಲವನ್ನು ಪುನರುಚ್ಚರಿಸಿತು.

ವಿನ್ಯಾಸ, ಅಭಿವೃದ್ಧಿ, ಪರೀಕ್ಷೆ ಮತ್ತು ಸುಧಾರಿತ ರಕ್ಷಣಾ ತಂತ್ರಜ್ಞಾನಗಳು ಮತ್ತು ವೇದಿಕೆಗಳ ತಯಾರಿಕೆಯಲ್ಲಿ ಪಾಲುದಾರಿಕೆಯ ಮೂಲಕ ರಕ್ಷಣಾ ಸಹಕಾರವನ್ನು ಬಲಪಡಿಸಲು ಮತ್ತು ಇಂಡೋ-ಪೆಸಿಫಿಕ್ ಮತ್ತು ಅದರಾಚೆಗಿನ ಮೂರನೇ ದೇಶಗಳು ಸೇರಿದಂತೆ ಭಾರತದಲ್ಲಿ ಉತ್ಪಾದನೆಯನ್ನು ವಿಸ್ತರಿಸಲು ಇಬ್ಬರೂ ನಾಯಕರು ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು. ಈ ಸಂದರ್ಭದಲ್ಲಿ, ಅವರು ರಕ್ಷಣಾ ಕೈಗಾರಿಕಾ ಮಾರ್ಗಸೂಚಿಯನ್ನು ಶೀಘ್ರವಾಗಿ ಅಂತಿಮಗೊಳಿಸುವಂತೆ ಕರೆ ನೀಡಿದರು.

ಡಿಜಿಟಲ್, ವಿಜ್ಞಾನ, ತಾಂತ್ರಿಕ ಆವಿಷ್ಕಾರ, ಶಿಕ್ಷಣ, ಸಂಸ್ಕೃತಿ, ಆರೋಗ್ಯ ಮತ್ತು ಪರಿಸರ ಸಹಕಾರದಂತಹ ಕ್ಷೇತ್ರಗಳಿಗೆ ಒತ್ತು ನೀಡಿದ ಇಬ್ಬರೂ ನಾಯಕರು ಇಂಡೋ-ಪೆಸಿಫಿಕ್ ಗಾಗಿ ಇಂಡೋ-ಫ್ರೆಂಚ್ ಕ್ಯಾಂಪಸ್ ನ ಮಾದರಿಯಲ್ಲಿ ಈ ಕ್ಷೇತ್ರಗಳಲ್ಲಿ ಸಾಂಸ್ಥಿಕ ಸಂಪರ್ಕವನ್ನು ಬಲಪಡಿಸಲು ಕರೆ ನೀಡಿದರು. ಈ ಸಂದರ್ಭದಲ್ಲಿ, ಅವರು ಸಾಂಸ್ಕೃತಿಕ ವಿನಿಮಯವನ್ನು ವಿಸ್ತರಿಸಲು ಮತ್ತು ವಸ್ತುಸಂಗ್ರಹಾಲಯಗಳ ಅಭಿವೃದ್ಧಿಯಲ್ಲಿ ಒಟ್ಟಾಗಿ ಕೆಲಸ ಮಾಡುವ ಬದ್ಧತೆಯನ್ನು ಪುನರುಚ್ಚರಿಸಿದರು.

ಜಾಗತಿಕ ಸವಾಲುಗಳನ್ನು ಎದುರಿಸಲು ಮತ್ತು ಹೆಚ್ಚು ಸ್ಥಿರವಾದ ಜಾಗತಿಕ ಕ್ರಮವನ್ನು ನಿರ್ಮಿಸಲು ಅಂತರರಾಷ್ಟ್ರೀಯ ಪ್ರಯತ್ನಗಳಲ್ಲಿ ಸಮಗ್ರತೆ, ಏಕತೆ ಮತ್ತು ಒಗ್ಗಟ್ಟನ್ನು ಮುನ್ನಡೆಸಿರುವ ಭಾರತದ ಜಿ-20 ಅಧ್ಯಕ್ಷ ಸ್ಥಾನಕ್ಕೆ ಫ್ರಾನ್ಸ್ ನ ನಿರಂತರ ಬೆಂಬಲಕ್ಕಾಗಿ ಫ್ರಾನ್ಸ್ ಅಧ್ಯಕ್ಷ ಶ್ರೀ ಮ್ಯಾಕ್ರಾನ್ ಅವರಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಧನ್ಯವಾದ ಅರ್ಪಿಸಿದರು. ಜಿ-20 ಗುಂಪಿಗೆ ಆಫ್ರಿಕನ್ ಒಕ್ಕೂಟ (ಯೂನಿಯನ್) ಸದಸ್ಯತ್ವ ನೀಡಿರುವುದನ್ನು ಭಾರತ ಮತ್ತು ಫ್ರಾನ್ಸ್ ಉಭಯ ದೇಶಗಳೂ ಸ್ವಾಗತಿಸಿವೆ ಮತ್ತು ಆಫ್ರಿಕಾದ ಪ್ರಗತಿ, ಸಮೃದ್ಧಿ ಮತ್ತು ಅಭಿವೃದ್ಧಿಗಾಗಿ ಆಫ್ರಿಕನ್ ಒಕ್ಕೂಟ (ಯೂನಿಯನ್)ದೊಂದಿಗೆ ಕೆಲಸ ಮಾಡಸಲು ಉಭಯ ದೇಶಗಳೂ ಸಂತಸ ವ್ಯಕ್ತ ಪಡಿಸಿವೆ.

*******
 


(Release ID: 1956237) Visitor Counter : 158