ಇಂಧನ ಸಚಿವಾಲಯ
ಒಂದು ಸೂರ್ಯ, ಒಂದು ಪ್ರಪಂಚ, ಒಂದು ಗ್ರಿಡ್ (ಒ.ಎಸ್. ಒ.ಡಬ್ಲ್ಯೂ. ಒ.ಜಿ.) ಗಾಗಿ ಅಂತರರಾಷ್ಟ್ರೀಯ ಗ್ರಿಡ್ ಗಳ ಪರಸ್ಪರ ಸಂಪರ್ಕ ಕುರಿತು ಸಮಾವೇಶ ಹೊಸದಿಲ್ಲಿಯಲ್ಲಿ ನಡೆಯಿತು
ಒಮ್ಮೆ ನಾವು “ಒಂದು ಸೂರ್ಯ, ಒಂದು ಪ್ರಪಂಚ, ಒಂದು ಗ್ರಿಡ್ (ಒ.ಎಸ್. ಒ.ಡಬ್ಲ್ಯೂ. ಒ.ಜಿ.)” ಹೊಂದಿದರೆ, ಆನಂತರ ಯಾರೂ ವಿದ್ಯುತ್ ಸಮಸ್ಯೆ ಹೊಂದಬೇಕಾಗಿಲ್ಲ: ಕೇಂದ್ರ ಇಂಧನ ಮತ್ತು ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಶ್ರೀ ಆರ್. ಕೆ. ಸಿಂಗ್
Posted On:
06 SEP 2023 6:30PM by PIB Bengaluru
18 ನೇ ಜಿ20 ಶೃಂಗಸಭೆಯ ಪೂರ್ವಭಾವಿಯಾಗಿ, "ಒಂದು ಸೂರ್ಯ, ಒಂದು ಪ್ರಪಂಚ, ಒಂದು ಗ್ರಿಡ್ (ಒ.ಎಸ್. ಒ.ಡಬ್ಲ್ಯೂ. ಒ.ಜಿ.)ಗಾಗಿ ಟ್ರಾನ್ಸ್ ನ್ಯಾಷನಲ್ ಗ್ರಿಡ್ ಇಂಟರ್ಕನೆಕ್ಷನ್ಸ್" ಕುರಿತು ಒಂದು ದಿನದ ಸಮ್ಮೇಳನವನ್ನು 6 ನೇ ಸೆಪ್ಟೆಂಬರ್, 2023 ರಂದು ನವದೆಹಲಿಯಲ್ಲಿ ಆಯೋಜಿಸಲಾಯಿತು. ಭಾರತ ಸರಕಾರದ ಇಂಧನ ಸಚಿವಾಲಯದ ಅಡಿಯಲ್ಲಿರುವ 'ಮಹಾರತ್ನ' ಕಂಪನಿಯಾದ ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ಸಂಸ್ಥೆ ವತಿಯಿಂದ ಈ ಸಮ್ಮೇಳನವನ್ನು ಆಯೋಜಿಸಲಾಗಿದೆ.
ಸಮ್ಮೇಳನವನ್ನು ಉದ್ದೇಶಿಸಿ ವಿಡಿಯೊ ಸಮಾವೇಶ ಮೂಲಕ ಮಾತನಾಡಿದ ಕೇಂದ್ರ ಇಂಧನ ಮತ್ತು ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಶ್ರೀ ಆರ್ . ಶ್ರೀ ಆರ್. ಕೆ. ಸಿಂಗ್ ಅವರು "ಎಲ್ಲಾ ರಾಷ್ಟ್ರಗಳು ಸೂರ್ಯಗ್ರಹದಿಂದ ಇಂಧನದ ಲಾಭವನ್ನು ಪಡೆದುಕೊಳ್ಳಲು ಒ.ಎಸ್. ಒ.ಡಬ್ಲ್ಯೂ. ಒ.ಜಿ. ಅನುವು ಮಾಡಿಕೊಡುತ್ತದೆ. ನಾವು ನವೀಕರಿಸಬಹುದಾದ ಇಂಧನಕ್ಕೆ ಪರಿವರ್ತನೆಯಾಗುತ್ತಿರುವ ಇಂದಿನ ಸಂದರ್ಭಕ್ಕೆ ಇದು ವಿಶೇಷವಾಗಿ ಬಹಳ ಪ್ರಸ್ತುತವಾಗಿದೆ. ಇದು ನವೀಕರಿಸಬಹುದಾದ ಇಂಧನವು ಹೆಚ್ಚು ಅಗ್ಗವಾಗಿ, ಪ್ರತಿದಿನವೂ ಹಗಲು-ರಾತ್ರಿ ಲಭ್ಯವಿರುತ್ತದೆ. ಇದು ಮೀಸಲು ಅಗತ್ಯವನ್ನು ಸಹ ಕಡಿಮೆ ಮಾಡುತ್ತದೆ. ಇದು ಸಾಮಾನ್ಯ ಜನರಿಗೆ ವಿದ್ಯುತ್ ವೆಚ್ಚವನ್ನು ಕಡಿಮೆ ಮಾಡುತ್ತದೆ ಮತ್ತು ಇಂಧನಗಳ ಪರಿವರ್ತನೆಗೆ ಸಹಾಯ ಮಾಡುತ್ತದೆ.
ಒಮ್ಮೆ ಟ್ರಾನ್ಸ್ ನ್ಯಾಷನಲ್ ಗ್ರಿಡ್ ಇಂಟರ್ ಕನೆಕ್ಷನ್ ಪ್ರಾರಂಭವಾದರೆ, ಇದು ಇಂದು ತುಂಬಾ ದುಬಾರಿಯಾಗಿರುವ ಇಂಧನ ಶೇಖರಣೆಯ ಮೇಲಿನ ಅವಲಂಬನೆಯನ್ನು ತೊಡೆದುಹಾಕುತ್ತದೆ, ಮತ್ತು ನವೀಕರಿಸಬಹುದಾದ ಪ್ರತಿದಿನವೂ ಹಗಲು-ರಾತ್ರಿ ಲಭ್ಯವಿರುವ ಇಂಧನಕ್ಕೆ ಅವಕಾಶ ನೀಡುತ್ತದೆ. "ಒಮ್ಮೆ ನಾವು ಒ.ಎಸ್. ಒ.ಡಬ್ಲ್ಯೂ. ಒ.ಜಿ. ಅನ್ನು ಹೊಂದಿದರೆ, ಯಾರೂ ವಿದ್ಯುತ್ ಕೊರತೆ ಹೊಂದಬೇಕಾಗಿಲ್ಲ. ಇದು ಜಗತ್ತನ್ನು ಒಂದುಗೂಡಿಸುತ್ತದೆ ಮತ್ತು ವಿದ್ಯುತ್ ಅವಕಾಶ ಹೊಂದಿರದ ಲಕ್ಷಾಂತರ ಜನರಿಗೆ ಇಂಧನಗಳ ಅವಕಾಶವನ್ನು ಖಚಿತಪಡಿಸುತ್ತದೆ. ನಾವೆಲ್ಲರೂ ಇದನ್ನು ಮುಂದಕ್ಕೆ ಕೊಂಡೊಯ್ಯುವುದು ಅತ್ಯಗತ್ಯ, ಇದು ನಿಜವಾಗುತ್ತದೆ ಎಂದು ನನಗೆ ಖಾತ್ರಿಯಿದೆ. ವಿಚಾರ ಸಂಕಿರಣ ಯಶಸ್ವಿಯಾಗಲಿ” ಎಂದು ಸಚಿವರು ಶುಭ ಹಾರೈಸಿದರು.
ಕೇಂದ್ರ ಇಂಧನ ಸಚಿವಾಲಯದ ವಿಶೇಷ ಕಾರ್ಯದರ್ಶಿ ಮತ್ತು ಹಣಕಾಸು ಸಲಹೆಗಾರ ಶ್ರೀ ಆಶಿಶ್ ಉಪಾಧ್ಯಾಯ; ಸಿಇಎ ಅಧ್ಯಕ್ಷ ಶ್ರೀ ಘನಶ್ಯಾಮ್ ಪ್ರಸಾದ್; ಕೇಂದ್ರ ಇಂಧನ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಶ್ರೀ ಅಜಯ್ ತಿವಾರಿ; ಮತ್ತು ಪವರ್ ಗ್ರಿಡ್ ಸಿ.ಎಂ.ಡಿ ಶ್ರೀ ಕೆ. ಶ್ರೀಕಾಂತ್ ಅವರು ಸಮ್ಮೇಳನದಲ್ಲಿ ಭಾ಼ಷಣ ಮಾಡಿದರು. ಈ ಸಭೆಯಲ್ಲಿ ಭಾರತ ಮತ್ತು ವಿದೇಶಗಳ ಪ್ರಖ್ಯಾತ ಇಂಧನ ತಜ್ಞರು ಪಾಲ್ಗೊಂಡಿದ್ದರು.
“ಟ್ರಾನ್ಸ್ ನ್ಯಾಷನಲ್ ಗ್ರಿಡ್ ಇಂಟರ್ಕನೆಕ್ಷನ್ ಇದರ ಮಧ್ಯಪ್ರಾಚ್ಯ ಮತ್ತು ಆಫ್ರಿಕಾದ ದೃಷ್ಟಿಕೋನ”ವನ್ನು ಸಭೆಯಲ್ಲಿ ಪ್ರಸ್ತುತಪಡಿಸಿದರು. “ಒಮ್ಮೆ ಪೂರ್ಣ ಪ್ಯಾನ್ ಅರಬ್ ಎಲೆಕ್ಟ್ರಿಸಿಟಿ ಮಾರ್ಕೆಟ್ (ಪಿ.ಎ.ಇ.ಎಂ.) ಕಾರ್ಯಾರಂಭಗೊಂಡರೆ, ಅದು ಜಿ.ಸಿ.ಸಿ, ಇ.ಯು ಮತ್ತು ಆಫ್ರಿಕಾದ ಮೂಲಕ ದಕ್ಷಿಣ ಏಷ್ಯಾದ ನಡುವೆ ಅಂತರ್ ಪ್ರಾದೇಶಿಕ ಗ್ರಿಡ್ ಗಳ ಏಕೀಕರಣ ಮತ್ತು 5 ಪ್ರಾದೇಶಿಕ ವಿದ್ಯುತ್ ಮಾರುಕಟ್ಟೆಗಳೊಂದಿಗೆ ವ್ಯಾಪಾರವನ್ನು ಸಕ್ರಿಯಗೊಳಿಸುತ್ತದೆ. ಈ ಪ್ರಸ್ತಾವಿತ ಪಿ.ಎ.ಇ.ಎಂ. ಗ್ರಿಡ್ 3 ಉಪ-ಪ್ರದೇಶಗಳನ್ನು ಸಂಪರ್ಕಿಸುತ್ತದೆ ಮತ್ತು ಇತರ ಪ್ರಾದೇಶಿಕ ಮಾರುಕಟ್ಟೆಗಳೊಂದಿಗೆ ಮತ್ತಷ್ಟು ಏಕೀಕರಣದ ಸಾಮರ್ಥ್ಯವನ್ನು ಬಲಪಡಿಸುತ್ತದೆ” ಎಂದು ವಿಶ್ವ ಬ್ಯಾಂಕ್ ವತಿಯಿಂದ ಭಾಗವಹಿಸಿದ ಶ್ರೀ ವಲೀದ್ ಎಸ್. ಅಲ್ಸುರೈಹ್ ಅವರು ಹೇಳಿದರು.
ಐ.ಆರ್.ಎ.ಡಿ.ಇ. ಹಿರಿಯ ಸಲಹೆಗಾರ ಶ್ರೀ ಪಂಕಜ್ ಬಾತ್ರಾ ಅವರು “ಆಸೀನ್ ದೇಶಗಳ ಇಂಧನ ದೃಷ್ಟಿಕೋನ”ವನ್ನು ವಿವರಿಸಿದರು, “ಸಾರ್ಕ್, ಬಿ.ಐ.ಎಂ.ಎಸ್.ಟಿ.ಇ.ಸಿ. ಮತ್ತು ಆಸೀನ್ ದೇಶಗಳ ಇಂಧನ ಸಂಪನ್ಮೂಲಗಳ ಪೂರೃಕೆಯನ್ನು ಬಹುರಾಷ್ಟ್ರೀಯ ಅಂತರ್ ಸಂಪರ್ಕಗಳ ಮೂಲಕ ಬಳಸಿಕೊಳ್ಳಬಹುದು” ಎಂದು ಹೇಳಿದರು.
ತಾಂತ್ರಿಕ ಪರಿಗಣನೆಗಳು ಮತ್ತು ಅಸ್ತಿತ್ವದಲ್ಲಿರುವ ಭಾರತೀಯ ಗಡಿಯಾಚೆಗಿನ ಪರಸ್ಪರ ಸಂಪರ್ಕಗಳ ವ್ಯವಹಾರ ಮಾದರಿಗಳನ್ನುಸಿ.ಟಿ.ಯು.ಐ.ಎಲ್. ಸಂಸ್ಥೆಯ ಸಿ.ಒ.ಒ. ಶ್ರೀ ಅಶೋಕ್ ಪಾಲ್ ಅವರು ಚರ್ಚಿಸಿದರು.
ಪ್ರಾದೇಶಿಕ ಗ್ರಿಡ್ ಇಂಟರ್ ಕನೆಕ್ಷನ್ ಗಾಗಿ ಸಿಸ್ಟಮ್ ಆಪರೇಷನ್ ಅಂಶಗಳನ್ನು ಗ್ರಿಡ್ ಕಂಟ್ರೋಲರ್ ಆಫ್ ಇಂಡಿಯಾದ ಸಿ.ಎಂ.ಡಿ ಶ್ರೀ ಎಸ್.ಆರ್. ನರಸಿಂಹನ್ ಅವರು ಸಭೆಯಲ್ಲಿ ಹಂಚಿಕೊಂಡಿದ್ದಾರೆ.
ಪ್ರಾದೇಶಿಕ ಗ್ರಿಡ್ ಇಂಟರ್ಕನೆಕ್ಷನ್ ಗಾಗಿ ನಿಯಂತ್ರಕ ಮತ್ತು ಕಾನೂನು ಅಂಶಗಳ ಒಳನೋಟಗಳನ್ನು ಸಿ.ಇ.ಆರ್.ಸಿ. ಮುಖ್ಯಸ್ಥ ಡಾ. ಎಸ್. ಕೆ. ಚಟರ್ಜಿ ಅವರು ನೀಡಿದರು. ದೇಶೀಯ ಪರಸ್ಪರ ಇಂಧನ ಸಂಪರ್ಕಗಳಿಗಾಗಿ ವಿವಿಧ ತಂತ್ರಜ್ಞಾನಗಳ ಕುರಿತಾಗ ಸೀಮೆನ್ಸ ಎನರ್ಜಿಯ ಮುಖ್ಯ ವ್ಯವಸ್ಥಾಪಕರಾದ ಶ್ರೀ ನಿಕೇತ್ ಜೈನ್ ಅವರು ಚರ್ಚಿಸಿದರು. ಒ.ಎಸ್. ಒ.ಡಬ್ಲ್ಯೂ. ಒ.ಜಿ. ಕುರಿತ ಅಧಿವೇಶನವನ್ನು ಡೆಲಾಯ್ಟ್ ಇಂಡಿಯಾದ ಶ್ರೀ ಶುಭ್ರಾಂಶು ಪಟ್ನಾಯಕ್ ಅವರು ನಿರ್ವಹಣೆ ಮಾಡಿದರು.ಪವರ್ ಗ್ರಿಡ್ ನಿರ್ದೇಶಕ (ಪ್ರಾಜೆಕ್ಟ್) ಶ್ರೀ ಅಭಯ್ ಚೌಧರಿಯವರ ಧನ್ಯವಾದದೊಂದಿಗೆ ಸಭೆ ಕೊನೆಗೊಂಡಿತು.
ಜಾಗತಿಕವಾಗಿ, ನವೀಕರಿಸಬಹುದಾದ ಸಾಮರ್ಥ್ಯದ ಸೇರ್ಪಡೆಯಿಂದ ಚಾಲಿತವಾಗಿರುವ ನೂತನ ಇಂಧನ ಪರಿವರ್ತನೆ ಕಾರ್ಯವು ಅಧುನಿಕ ಇಂಧನ ಭದ್ರತೆಯ ಸುಸ್ಥಿರತೆಯ ಕಡೆಗೆ ಒತ್ತು ನೀಡುವ ಕ್ಷೇತ್ರಗಳಾಗಿವೆ. ಸೂರ್ಯಗ್ರಹ ಅಸ್ತಮಿಸುವುದಿಲ್ಲ ಮತ್ತು ಪ್ರತಿ ಗಂಟೆಗೆ ಅರ್ಧದಷ್ಟು ಭೂಗ್ರಹವು ಸೂರ್ಯನ ಬೆಳಕಿನಲ್ಲಿ ಸಂಪೂರ್ಣ ಸ್ನಾನ ಮಾಡುತ್ತದೆ ಎಂಬುದನ್ನು ಪರಿಗಣಿಸಿಬೇಕಾಗಿದೆ. ಸೂರ್ಯ, ಗಾಳಿ ಮತ್ತು ನೀರಿನಿಂದ ತಯಾರಿಸಬಹುದಾದ ಇಂಧನಗಳನ್ನು ಬಳಸಿಕೊಳ್ಳುವುದರಿಂದ ಭೂಮಿಯ ಮೇಲಿನ ಪ್ರತಿಯೊಬ್ಬರ ಅಗತ್ಯಗಳನ್ನು ಪೂರೈಸಲು ಸಾಕಷ್ಟು ಶುದ್ಧ ಇಂಧನದ ಉತ್ಪಾದನೆಗೆ ಅನುಕೂಲವಾಗುತ್ತದೆ. ಆದರ ಜೊತೆಗೆ, ಗ್ರಿಡ್ ಇಂಟರ್ಕನೆಕ್ಷನ್ಗಳ ಮೂಲಕ ದೇಶೀಯ ವಿದ್ಯುತ್ ವಿನಿಮಯದ ಅಗತ್ಯವಿದೆ. ಈ ಪ್ರಯತ್ನಗಳನ್ನು ಅಂತರ್-ಸಂಪರ್ಕಿತ ಜಾಗತಿಕ ವಿದ್ಯುತ್ ಗ್ರಿಡ್ ಸ್ಥಾಪಿಸುವ ಮೂಲಕ ಪೂರಕ ಸಂಯೋಜನೆ ಮಾಡಬೇಕಾಗಿದೆ. ಇದು “ಒಂದು ಸೂರ್ಯ, ಒಂದು ಜಗತ್ತು, ಒಂದು ಗ್ರಿಡ್”ಗೆ ಪೂರಕ ದೃಷ್ಟಿಕೋನವಾಗಿದೆ; ಸುಸ್ಥಿರ ಭವಿಷ್ಯಕ್ಕಾಗಿ ಇಂಧನ ಭದ್ರತೆಯನ್ನು ಖಾತ್ರಿಪಡಿಸುವ ನಿಟ್ಟಿನಲ್ಲಿ ಟ್ರಾನ್ಸ್ ನ್ಯಾಷನಲ್ ಗ್ರಿಡ್ ಸಂಪರ್ಕಗಳ ಅಭಿವೃದ್ಧಿ ಕೂಡಾ ಆಗಬೇಕಾಗಿದೆ.
ಜಿ20ಯ ಸಂಕಲ್ಪ ಚಿಂತನೆ(ಥೀಮ್)ಯಾದ "ವಸುಧೈವ ಕುಟುಂಬಕಂ" ಅಂದರೆ - ಒಂದು ಭೂಮಿ, ಒಂದು ಕುಟುಂಬ ಮತ್ತು ಒಂದು-ಭವಿಷ್ಯ ವನ್ನು ಅನುಸರಿಸಿ, ಭಾರತವು ತನ್ನ ಜಿ20 ಅಧ್ಯಕ್ಷತೆಯಲ್ಲಿ ಇಂಧನ ಭದ್ರತೆಯನ್ನು ಹೆಚ್ಚಿಸುವಲ್ಲಿ, ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುವಲ್ಲಿ ಮತ್ತು ಎಲ್ಲರಿಗೂ ಸಾರ್ವತ್ರಿಕ ಇಂಧನ ಅವಕಾಶಗಳನ್ನು ಒದಗಿಸುವಲ್ಲಿ ಬಹುರಾಷ್ಟ್ರೀಯ ಗ್ರಿಡ್ ಇಂಟರ್ ಕನೆಕ್ಷನ್ ಗಳ ಪ್ರಾಮುಖ್ಯತೆಯನ್ನು ಎತ್ತಿ ತೋರಿಸಿದೆ. ಕೈಗೆಟುಕುವ, ವಿಶ್ವಾಸಾರ್ಹ ಮತ್ತು ಸುಸ್ಥಿರ ರೀತಿಯ ಮೌಲ್ಯವರ್ಧಿತ, ಸ್ಥಿತಿಸ್ಥಾಪಕತ್ವದ ಶುದ್ಧ ಇಂಧನ ಪರಿವರ್ತನೆಯ ಕಡೆಗೆ ನವೀಕರಿಸಬಹುದಾದ ಇಂಧನಗಳ ಏಕೀಕರಣವನ್ನು ವೇಗಗತಿಯಲ್ಲಿ ಮಾಡಬೇಕಾಗಿದೆ.
ಗೋವಾದಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಇಂಧನ ಸಚಿವರ ಸಭೆಯಲ್ಲಿ, ಎಲ್ಲಾ ಜಿ-20 ದೇಶಗಳು ಸಹಮತದಲ್ಲಿ ಒಟ್ಟುಗೂಡಿದವು. ಈ ಸಂದರ್ಭದಲ್ಲಿ ಇ.ಟಿ.ಡಬ್ಲ್ಯೂ.ಜಿ. ಫಲಿತಾಂಶದ ದಾಖಲೆ ಮತ್ತು ಅಧ್ಯಕ್ಷೀಯ ಸಂದೇಶದ ಸಾರಾಂಶದ ಪ್ಯಾರಾ ಸಂಖ್ಯೆ 5ರಲ್ಲಿ ಸೂಚಿಸಿದಂತೆ ಈ ಕೆಳಗಿನವುಗಳನ್ನು ಘೋಷಿಸಲಾಯಿತು.
" ಗ್ರಿಡ್ ಇಂಟರ್ ಕನೆಕ್ಷನ್ಗಳು, ಚೇತರಿಸಿಕೊಳ್ಳುವ ಇಂಧನ ಮೂಲಸೌಕರ್ಯ ಮತ್ತು ಪ್ರಾದೇಶಿಕ / ಗಡಿಯಾಚೆಗಿನ ವಿದ್ಯುತ್ ವ್ಯವಸ್ಥೆಗಳ ಏಕೀಕರಣದ ಪಾತ್ರವನ್ನು ಸಹ ನಾವು ಗುರುತಿಸುತ್ತೇವೆ. ಇಂಧನ ಭದ್ರತೆಯನ್ನು ಹೆಚ್ಚಿಸುವಲ್ಲಿ, ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುವಲ್ಲಿ ಮತ್ತು ಎಲ್ಲರಿಗೂ ಸಾರ್ವತ್ರಿಕ ಇಂಧನದ ಅವಕಾಶವನ್ನು ಕೈಗೆಟುಕುವ, ವಿಶ್ವಾಸಾರ್ಹ ಮತ್ತು ಸಮರ್ಥನೀಯ ರೀತಿಯಲ್ಲಿ ಪೂರೈಸುವುದನ್ನು ಸುಗಮಗೊಳಿಸುತ್ತದೆ. ನಿರ್ದಿಷ್ಟವಾಗಿ, ನವೀಕರಿಸಬಹುದಾದವುಗಳನ್ನು ಒಳಗೊಂಡಂತೆ ಶೂನ್ಯ ಮತ್ತು ಕಡಿಮೆ ಹೊರಸೂಸುವಿಕೆಯ ತಂತ್ರಜ್ಞಾನಗಳ ನಿಯೋಜನೆಯನ್ನು ಹೆಚ್ಚಿಸಲು, ಇನ್ನೂ ವಿಸ್ತರಿಸಿದ ಮತ್ತು ಆಧುನೀಕರಿಸಿದ ವಿದ್ಯುತ್ ಜಾಲಗಳು ಅತ್ಯಗತ್ಯ ಎಂದು ನಾವು ಗುರುತಿಸುತ್ತೇವೆ. ವಿನ್ಯಾಸ, ಯೋಜನೆ ಮತ್ತು ವ್ಯವಸ್ಥೆಯ ಕಾರ್ಯಾಚರಣೆಗಳಿಗಾಗಿ ನಿಯಂತ್ರಕ ಚೌಕಟ್ಟುಗಳ ನೆರವು, ತಂತ್ರಜ್ಞಾನ ಅಭಿವೃದ್ಧಿ ಮತ್ತು ಸಮನ್ವಯಗೊಳಿಸುವಿಕೆ ಸುಗಮವಾಗುತ್ತದೆ. ಈ ನಿಟ್ಟಿನಲ್ಲಿ, ನವೀಕರಿಸಬಹುದಾದ ಇಂಧನಗಳನ್ನು ವರ್ಗಾಯಿಸಲು ಪರಸ್ಪರ ಸಂಪರ್ಕಗಳ ಮೂಲಕ ವಿವಿಧ ಪ್ರಾದೇಶಿಕ ಗ್ರಿಡ್ ಗಳನ್ನು ಸಂಪರ್ಕಿಸಲು ನಾವು ಅಧ್ಯಕ್ಷೀಯತೆಯ ಉಪಕ್ರಮಗಳನ್ನು ಬಳಸುತ್ತೇವೆ. ನಾವು ಎಲ್ಲಾ ಸಾರ್ವಜನಿಕ ಮತ್ತು ಖಾಸಗಿ ಹೂಡಿಕೆಗಳಿಗೆ ಕರೆ ನೀಡುತ್ತೇವೆ. ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ಪ್ರಾದೇಶಿಕ /ಅಡ್ಡ ಗಡಿಯ ಅಂತರ್ ಸಂಪರ್ಕಗಳ ಸಂಪೂರ್ಣ ಪ್ರಯೋಜನಗಳನ್ನು ಬಳಸಿಕೊಳ್ಳುವಲ್ಲಿ ಬಹುಪಕ್ಷೀಯ ಅಭಿವೃದ್ಧಿ ಬ್ಯಾಂಕುಗಳು (ಎಂ.ಡಿ.ಬಿ.ಗಳು) ಸೇರಿದಂತೆ ಅಂತರ್ ರಾಷ್ಟ್ರೀಯ ಹಣಕಾಸು ಸಂಸ್ಥೆಗಳು ಸಹಾಯ ಮಾಡುತ್ತದೆ. "
ಸಂಬಂಧಿತ ಮಾಹಿತಿ:
* ಭಾರತ ಸರ್ಕಾರದ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ ನಡುವೆ ಒ.ಎಸ್. ಒ.ಡಬ್ಲ್ಯೂ. ಒ.ಜಿ. ಕುರಿತು ವಿಶ್ವ ಬ್ಯಾಂಕ್; ಮತ್ತು ಇಂಟರ್ ನ್ಯಾಷನಲ್ ಸೋಲಾರ್ ಅಲೈಯನ್ಸ್ ಇವುಗಳ ನಡವೆ ತ್ರಿಪಕ್ಷೀಯ ಒಪ್ಪಂದ ಕುರಿತು ಮಾಹಿತಿಗಾಗಿ ಈ ಕೊಂಡಿ ಬಳಸಿ
* http:// https://isolaralliance.org/work/osowog/
***
(Release ID: 1955435)
Visitor Counter : 117