ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

2021ನೇ ಸಾಲಿನ 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಪ್ರಕಟ; “ರಾಕೆಟ್ರಿ: ದಿ ನಂಬಿ ಎಫೆಕ್ಟ್”ಗೆ ಅತ್ಯುತ್ತಮ ಫೀಚರ್ ಫಿಲ್ಮ್ (ಚಲನಚಿತ್ರ) ಪ್ರಶಸ್ತಿ


ಸೃಷ್ಟಿ ಲಖೇರಾ ಅವರ “ಏಕ್ ಥಾ ಗಾಂವ್” ಅತ್ಯುತ್ತಮ ಸಾಕ್ಷ್ಯಚಿತ್ರ(ನಾನ್-ಫೀಚರ್) ಪ್ರಶಸ್ತಿ ಗೆದ್ದಿದೆ

ಪುಷ್ಪಾ (ದಿ ರೈಸ್ - ಭಾಗ 1) ಚಿತ್ರದ ಅಮೋಘ ಅಭಿನಯಕ್ಕಾಗಿ ಅಲ್ಲು ಅರ್ಜುನ್ ಅತ್ಯುತ್ತಮ ನಟ ಪ್ರಶಸ್ತಿ ಗೆದ್ದರೆ, ಆಲಿಯಾ ಭಟ್ ಮತ್ತು ಕೃತಿ ಸನೋನ್ ಇಬ್ಬರೂ ಅತ್ಯುತ್ತಮ ನಟಿ ಪ್ರಶಸ್ತಿ ಗೆದ್ದಿದ್ದಾರೆ

ಪಂಕಜ್ ತ್ರಿಪಾಠಿ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಪಡೆದರೆ, ಪಲ್ಲವಿ ಜೋಶಿಗೆ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ

ಇದು ನಮ್ಮ ಸಮಯ; ಭಾರತೀಯ ಚಲನಚಿತ್ರಗಳು ಇಡೀ ವಿಶ್ವಾದ್ಯಂತ ಗುರುತಿಸಲ್ಪಡುತ್ತಿವೆ: ಕೇಂದ್ರ ಸಚಿವ ಶ್ರೀ ಅನುರಾಗ್ ಠಾಕೂರ್

Posted On: 24 AUG 2023 6:10PM by PIB Bengaluru

2021ನೇ ಸಾಲಿನ 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ವಿಜೇತರ ಪಟ್ಟಿ ಪ್ರಕಟಿಸಲಾಗಿದೆ. ಪ್ರಶಸ್ತಿಗಳ ಪ್ರಕಟಣೆಗೆ ಮುನ್ನ, ಆಯ್ಕೆ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಶ್ರೀ ಅನುರಾಗ್ ಠಾಕೂರ್ ಅವರನ್ನು ಭೇಟಿ ಮಾಡಿ, ಪ್ರಶಸ್ತಿ ವಿಜೇತರ ಪಟ್ಟಿ ಹಸ್ತಾಂತರಿಸಿದರು. ಎಲ್ಲಾ ನಮೂದುಗಳನ್ನು ಶ್ರದ್ಧೆಯಿಂದ ಪರಿಶೀಲಿಸಿ ಪ್ರಶಸ್ತಿಗಳಿಗೆ ಅರ್ಹರಾದವರನ್ನು ಆಯ್ಕೆ ಮಾಡಿದ್ದಕ್ಕಾಗಿ ಸಚಿವರು ತೀರ್ಪುಗಾರರಿಗೆ ಧನ್ಯವಾದಗಳನ್ನು ತಿಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಶ್ರೀ ಠಾಕೂರ್, “ಈ ಬಾರಿ ಪ್ರತಿ ವಿಭಾಗದಲ್ಲೂ ಚಲನಚಿತ್ರಗಳ ಆಯ್ಕೆ ಪ್ರಕ್ರಿಯೆಯಲ್ಲಿ ಕಠಿಣ ಸ್ಪರ್ಧೆ ಏರ್ಪಟ್ಟಿತ್ತು. ವಿಜೇತರಿಗೆ ನನ್ನ ಅಭಿನಂದನೆಗಳು ಮತ್ತು ಶುಭಾಶಯಗಳು. ಇದೀಗ ಭಾರತವು ವಿಶ್ವದಲ್ಲೇ ಅತಿ ದೊಡ್ಡ ಚಲನಚಿತ್ರ ನಿರ್ಮಾಣ ರಾಷ್ಟ್ರವಾಗಿದೆ. ವಿಶ್ವದ ವಿಷಯ ಗಮ್ಯತಾಣ(ಕಂಟೆಂಟ್ ಹಬ್) ಆಗುವ ಎಲ್ಲಾ ಸಾಮರ್ಥ್ಯವನ್ನು ನಾವು ಹೊಂದಿದ್ದೇವೆ. ಇದು ನಮ್ಮ ಸಮಯ. ಅದು ಬಾಫ್ಟಾ ಪ್ರಶಸ್ತಿಯೇ ಆಗಿರಬಹುದು ಅಥವಾ ಆಸ್ಕರ್ ಪ್ರಶಸ್ತಿಯೇ ಆಗಿರಬಹುದು, ಇಂದು ನಮ್ಮ ಚಲನಚಿತ್ರಗಳು ವಿಶ್ವಾದ್ಯಂತ ಗುರುತಿಸಲ್ಪಡುತ್ತಿವೆ ಎಂದರು.

ಭಾರತೀಯ ಸಿನಿಮಾ ರಂಗದ ಖ್ಯಾತ ಚಿತ್ರ ನಿರ್ಮಾಪಕರು ಮತ್ತು ಚಲನಚಿತ್ರ ಕಲಾವಿದರು ಆಯ್ಕೆ ಅಥವಾ ತೀರ್ಪುಗಾರರ ಸಮಿತಿಯಲ್ಲಿ ಕಾರ್ಯ ನಿರ್ವಹಿಸಿದ್ದರು.  ಫೀಚರ್ ಫಿಲ್ಮ್ (ಚಲನಚಿತ್ರ) ಆಯ್ಕೆ ಸಮಿತಿ ಅಧ್ಯಕ್ಷ ಶ್ರೀ ಕೇತನ್ ಮೆಹ್ತಾ, ಸಾಕ್ಷ್ಯಚಿತ್ರ(ನಾನ್-ಫೀಚರ್) ತೀರ್ಪುಗಾರರ ಸಮಿತಿ ಅಧ್ಯಕ್ಷ ವಸಂತ್ ಎಸ್ ಸಾಯಿ ಹಾಗೂ ಅತ್ಯುತ್ತಮ ಸಿನಿಮಾ ಬರಹ ಆಯ್ಕೆ ಸಮಿತಿಯ ಅಧ್ಯಕ್ಷ ಯತೀಂದ್ರ ಮಿಶ್ರಾ ಅವರು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಶ್ರೀಮತಿ ನೀರ್ಜಾ ಶೇಖರ್ ಸಮ್ಮುಖ ಅಥವಾ ಉಪಸ್ಥಿತಿಯಲ್ಲಿ ವಿವಿಧ ಪ್ರಶಸ್ತಿಗಳನ್ನು ಪ್ರಕಟಿಸಿದರು.

“ರಾಕೆಟ್ರಿ: ದಿ ನಂಬಿ ಎಫೆಕ್ಟ್” ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಗೆ ಆಯ್ಕೆಯಾದರೆ,  ಸೃಷ್ಟಿ ಲಖೇರಾ ನಿರ್ದೇಶನದ ಏಕ್ ಥಾ ಗಾಂವ್ ಅತ್ಯುತ್ತಮ ಸಾಕ್ಷ್ಯಚಿತ್ರ(ನಾನ್-ಫೀಚರ್) ಪ್ರಶಸ್ತಿ  ಪಡೆದಿದೆ.

ರಾಷ್ಟ್ರೀಯ ಭಾವೈಕ್ಯತೆಯ ಸಂದೇಶ ಸಾರುವ “ಕಾಶ್ಮೀರ್ ಫೈಲ್ಸ್” ಅತ್ಯುತ್ತಮ ಫೀಚರ್ ಫಿಲ್ಮ್ (ಚಲನಚಿತ್ರ) ವಿಭಾಗದಲ್ಲಿ “ನರ್ಗೀಸ್ ದತ್ ಪ್ರಶಸ್ತಿ” ಪಡೆದಿದೆ. RRR ಸಂಪೂರ್ಣ ಮನರಂಜನೆ ಒದಗಿಸುವ ಅತ್ಯುತ್ತಮ ಜನಪ್ರಿಯ ಚಲನಚಿತ್ರ ಪ್ರಶಸ್ತಿ ಪಡೆದಿದೆ.

ಪುಷ್ಪ (ದಿ ರೈಸ್ ಭಾಗ-1) ಚಿತ್ರದಲ್ಲಿನ ಅತ್ಯುತ್ತಮ ನಟನೆಗಾಗಿ ಅಲ್ಲು ಅರ್ಜುನ್ ಅತ್ಯುತ್ತಮ ನಟ ಪ್ರಶಸ್ತಿ ಗೆದ್ದಿದ್ದಾರೆ. ಆಲಿಯಾ ಭಟ್ ಮತ್ತು ಕೃತಿ ಸನೋನ್ ಇಬ್ಬರೂ ಕ್ರಮವಾಗಿ ಗಂಗೂಬಾಯಿ ಕಥಿಯಾವಾಡಿ ಮತ್ತು ಮಿಮಿ ಅತ್ಯುತ್ತಮ ನಟಿ ಪ್ರಶಸ್ತಿ ವಿಜೇತರಾಗಿದ್ದಾರೆ.

ಪ್ರಶಸ್ತಿ ವಿಜೇತರ ಸಂಪೂರ್ಣ ಪಟ್ಟಿ ಕೆಳಗೆ ನೀಡಲಾಗಿದೆ

69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು 2021

ಅತ್ಯುತ್ತಮ ಸಿನಿಮಾ ಬರವಣಿಗೆ

ಅತ್ಯುತ್ತಮ ಸಿನಿಮಾ ಕೃತಿ ಪ್ರಶಸ್ತಿ:

 

ಸರಣಿ ಸಂಖ್ಯೆ

ಕೃತಿಯ ಟೈಟಲ್

ಭಾಷೆ

ಲೇಖಕರ ಹೆಸರು

ಪ್ರಕಾಶಕರ ಹೆಸರು

Medal and Cash prize

1.

ಮ್ಯೂಸಿಕ್ ಬೈ ಲಕ್ಷ್ಮೀಕಾಂತ್ ಪ್ಯಾರೆಲಾಲ್: ದಿ ಇನ್ ಕ್ರೆಡಿಬ್ಲಿ ಮೆಲೋಡಿಯಸ್ ಜರ್ನಿ

ಇಂಗ್ಲೀಷ್

ರಾಜೀವ್ ವಿಜಯಕರ್

ರೂಪ ಪಬ್ಲಿಕೇಷನ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್

ಸ್ವರ್ಣ ಕಮಲ ಮತ್ತು 75,000 ರೂ.

 

ಅತ್ಯುತ್ತಮ ಚಲನಚಿತ್ರ ವಿಮರ್ಶೆ ಪ್ರಶಸ್ತಿ:

ಸರಣಿ ಸಂಖ್ಯೆ

ವಿಮರ್ಶಕರ ಹೆಸರು

ಭಾಷೆ

ಪದಕ ಮತ್ತು ನಗದು ಪ್ರಶಸ್ತಿ

  1.  

ಪುರುಷೋತ್ತಮ ಚಾರ್ಯುಲು

ತೆಲುಗು

ಸ್ವರ್ಣ ಕಮಲ ಮತ್ತು 75,000 ರೂ.

 

ವಿಶೇಷ ಉಲ್ಲೇಖ(ನಮೂದು) - ವಿಮರ್ಶೆ

ಸರಣಿ ಸಂಖ್ಯೆ

ವಿಮರ್ಶಕರ ಹೆಸರು

ಭಾಷೆ

Prize

1.

ಸುಬ್ರಹ್ಮಣ್ಯ ಬದೂರ್

ಕನ್ನಡ

Certificate only

 

69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು - 2021

ಸಾಕ್ಷ್ಯಚಿತ್ರ(ನಾನ್-ಫೀಚರ್)ಗಳ ಫಲಿತಾಂಶ

 

ಸರಣಿ ಸಂಖ್ಯೆ

ಪ್ರಶಸ್ತಿ ವಿಭಾಗ

ಚಲನಚಿತ್ರದ ಟೈಟಲ್

ಪ್ರಶಸ್ತಿ ಪುರಸ್ಕೃತರು

ಪದಕ ಮತ್ತು ನಗದು ಪ್ರಶಸ್ತಿ

  1.  

ಅತ್ಯುತ್ತಮ ಸಾಕ್ಷ್ಯಚಿತ್ರ(ನಾನ್-ಫೀಚರ್ ಫಿಲ್ಮ್)

ಏಕ್ ಥಾ ಗಾಂವ್

ನಿರ್ಮಾಪಕರು & ನಿರ್ದೇಶಕರು: ಸೃಷ್ಟಿ ಲಖೇರಾ

ಸ್ವರ್ಣ ಕಮಲ್ ಮತ್ತು 1,50,000 ರೂ. ತಲಾ

  1.  

ನಿರ್ದೇಶಕರ ಅತ್ಯುತ್ತಮ ಚೊಚ್ಚಲ ನಾನ್-ಫೀಚರ್ ಚಿತ್ರ

ಪಾಂಚಿಕಾ

ನಿರ್ಮಾಪಕರು: ಶ್ರೇಯಾ ಕಪಾಡಿಯಾ

 

ನಿರ್ದೇಶಕರು: ಅಂಕಿತ್ ಕೊಠಾರಿ

ರಜತ ಕಮಲ ಮತ್ತು 75,000 ರೂ. ತಲಾ

  1.  

ಅತ್ಯುತ್ತಮ ಸಾಮಾಜಿಕ ಸಂಬಂಧಗಳ ಚಿತ್ರ

ಫೈರ್ ಆನ್ ಎಡ್ಜ್

ನಿರ್ಮಾಪಕರು: ರೈಸನ್ ನಾರ್ಥ್ ಈಸ್ಟ್, ಸರ್ಕಾರೇತರ ಸಂಘಟನೆ

 

ನಿರ್ದೇಶಕರು: ಪ್ರಣಬ್ ಜ್ಯೋತಿ ದೇಕ

ರಜತ ಕಮಲ ಮತ್ತು 50,000 ರೂ.

  1.  

ಅತ್ಯುತ್ತಮ ಜೀವನಚರಿತ್ರೆವುಳ್ಳ ಚಲನಚಿತ್ರ/ಇತಿಹಾಸ ಪುನರ್ ನಿರ್ಮಾಣ/ಸಂಕಲನ ಚಿತ್ರ

1. ರುಖು ಮತಿರ್ ದುಖು ಮಾಝಿ

 

2. ಬಿಯಾಂಡ್ ಬ್ಲಾಸ್ಟ್

1.ನಿರ್ಮಾಪಕ ಮತ್ತು ನಿರ್ದೇಶಕ: ಸೋಮನಾಥ್ ಮೊಂಡಲ್

 

2.ನಿರ್ಮಾಪಕ: ಲುವಾಂಗ್ ಅಪೋಕ್ಪಾ ಮಾಮಿಕಾನ್

ನಿರ್ದೇಶಕ: ಸಾಯಿಖೋಮ್ ರತನ್

ರಜತ್ ಕಮಲ್ ಮತ್ತು ರೂ. 50,000/- (ಹಂಚಿಕೊಳ್ಳಲಾಗಿದೆ)

 

  1.  

ಅತ್ಯುತ್ತಮ ಕಲಾತ್ಮಕ ಚಲನಚಿತ್ರ

ಟಿ.ಎನ್. ಕೃಷ್ಣನ್ ಬೌ ಸ್ಟ್ರಿಂಗ್ಸ್ ಟು ಡಿವೈನ್

ನಿರ್ಮಣ: ಎನ್ಎಫ್ ಡಿಸಿ

ನಿರ್ದೇಶಕ: ವಿ. ಪಕಿರಿಸಾಮಿ

ರಜತ್ ಕಮಲ್ ಮತ್ತು ರೂ. ತಲಾ 50,000/-

  1.  

ಅತ್ಯುತ್ತಮ ವಿಜ್ಞಾನ ಮತ್ತು ತಂತ್ರಜ್ಞಾನ ಚಲನಚಿತ್ರ

ಎಥೋಸ್ ಆಫ್ ಡಾರ್ಕ್ ನೆಸ್

ನಿರ್ಮಾಣ: ಶ್ರೀ ಗಣೇಶ್ ಪ್ರೊಡಕ್ಷನ್ಸ್

ನಿರ್ದೇಶಕ: ಅವಿಜಿತ್ ಬ್ಯಾನರ್ಜಿ

ರಜತ್ ಕಮಲ್ ಮತ್ತು ರೂ. ತಲಾ 50,000/-

  1.  

ಅತ್ಯುತ್ತಮ ಪ್ರಚಾರದ ಚಲನಚಿತ್ರ (ಪ್ರವಾಸೋದ್ಯಮ, ರಫ್ತು, ಕರಕುಶಲ, ಉದ್ಯಮ, ಇತ್ಯಾದಿ ಒಳಗೊಂಡಂತೆ)

ಎನ್ ಡೇಂಜರ್ಡ್ ಹೆರಿಟೇಜ್

‘ವಾರ್ಲಿ ಆರ್ಟ್’

ನಿರ್ಮಾಣ: ಬಾಬಾ ಸಿನಿಮಾಸ್

 ನಿರ್ದೇಶಕ: ಹೇಮಂತ್ ವರ್ಮಾ

ರಜತ್ ಕಮಲ್ ಮತ್ತು ರೂ. ತಲಾ 50,000/-

  1.  

ಕೃಷಿ ಸೇರಿದಂತೆ ಅತ್ಯುತ್ತಮ ಪರಿಸರ ಚಲನಚಿತ್ರ

ಮುನ್ನಂ ವಲವು

ನಿರ್ಮಾಪಕ: ಶ್ರೀ ಗೋಕುಲಂ ಮೂವೀಸ್

 ನಿರ್ದೇಶಕ: ಆರ್ ಎಸ್ ಪ್ರದೀಪ್

ರಜತ್ ಕಮಲ್ ಮತ್ತು ರೂ. ತಲಾ 50,000/-

 

  1.  

ಸಾಮಾಜಿಕ ಸಮಸ್ಯೆಗಳ ಮೇಲಿನ ಅತ್ಯುತ್ತಮ ಚಲನಚಿತ್ರ

1. ಮಿಥು ಡಿ

2. ಮೂರು ಎರಡು ಒಂದು

ನಿರ್ಮಾಪಕ ಮತ್ತು ನಿರ್ದೇಶಕ: ಅಸಿಮ್ ಕುಮಾರ್ ಸಿನ್ಹಾ

ನಿರ್ಮಾಣ: FTII

ನಿರ್ದೇಶಕ: ಹಿಮಾಂಶು ಪ್ರಜಾಪತಿ

ರಜತ್ ಕಮಲ್ ಮತ್ತು ರೂ. 50,000/- (ಹಂಚಿಕೊಳ್ಳಲಾಗಿದೆ)

 

 

 

  1.  

ಅತ್ಯುತ್ತಮ ಶೈಕ್ಷಣಿಕ ಚಿತ್ರ

ಸಿರ್ಪಿಗಳಿನ್ ಸಿರ್ಪಂಗಲ್

ನಿರ್ಮಾಪಕ: ಕೆಕೆವಿ ಮೀಡಿಯಾ ವೆಂಚರ್

 ನಿರ್ದೇಶಕ: ಬಿ ಲೆನಿನ್

ರಜತ್ ಕಮಲ್ ಮತ್ತು ರೂ. ತಲಾ 50,000/-

 

  1.  

ಅತ್ಯುತ್ತಮ ಅನ್ವೇಷಣೆ / ಸಾಹಸ ಚಲನಚಿತ್ರ (ಕ್ರೀಡೆಗಳನ್ನು ಸೇರಿಸಲು)

ಆಯುಷ್ಮಾನ್

ನಿರ್ಮಾಪಕರು: ಮ್ಯಾಥ್ಯೂ ವರ್ಗೀಸ್, ದಿನೇಶ್ ರಾಜ್ ಕುಮಾರ್ ಎನ್, ನವೀನ್ ಫ್ರಾನ್ಸಿಸ್

ನಿರ್ದೇಶಕ: ಜೇಕಬ್ ವರ್ಗೀಸ್

ರಜತ್ ಕಮಲ್ ಮತ್ತು 50,000 ರೂ. ತಲಾ

 

 

 

 

 

  1.  

ಅತ್ಯುತ್ತಮ ತನಿಖಾ ಚಿತ್ರ

ಲುಕಿಂಗ್ ಫಾರ್ ಚಲನ್

ನಿರ್ಮಾಣ: IGNCA

 ನಿರ್ದೇಶಕ: ಬಪ್ಪಾ ರೇ

ರಜತ್ ಕಮಲ್ ಮತ್ತು 50,000 ರೂ. ತಲಾ

 

  1.  

ಅತ್ಯುತ್ತಮ ಅನಿಮೇಷನ್ ಚಿತ್ರ

ಕಂಡಿತುಂಡು

ನಿರ್ಮಾಣ: ಸ್ಟುಡಿಯೋ ಈಕ್ಸಾರಸ್ ಪ್ರೊಡಕ್ಷನ್ಸ್ ಪ್ರೈ.ಲಿ

ನಿರ್ದೇಶಕರು: ಅದಿತಿ ಕೃಷ್ಣದಾಸ್

ರಜತ್ ಕಮಲ್ ಮತ್ತು 50,000 ರೂ. ತಲಾ

 

  1.  

ವಿಶೇಷ ತೀರ್ಪುಗಾರರ(ಜ್ಯೂರಿ) ಪ್ರಶಸ್ತಿ

ರೇಖಾ

ನಿರ್ದೇಶಕ: ಶೇಖರ್ ಬಾಪು ರಂಖಾಂಬೆ

ರಜತ್ ಕಮಲ್ ಮತ್ತು 50,000 ರೂ. ತಲಾ

  1.  

ಅತ್ಯುತ್ತಮ ಕಿರು ಕಾಲ್ಪನಿಕ ಚಲನಚಿತ್ರ

ದಾಲ್ ಭಟ್

ನಿರ್ಮಾಪಕ: ನೆಮಿಲ್ ಶಾ

 ನಿರ್ದೇಶಕ: ನೆಮಿಲ್ ಶಾ

ರಜತ್ ಕಮಲ್ ಮತ್ತು 50,000 ರೂ. ತಲಾ

  1.  

ಕೌಟುಂಬಿಕ ಮೌಲ್ಯಗಳ ಮೇಲಿನ ಅತ್ಯುತ್ತಮ ಚಲನಚಿತ್ರ

ಚಾಂದ್ ಸಾನ್ಸೆ

ನಿರ್ಮಾಪಕ: ಚಂದ್ರಕಾಂತ್ ಕುಲಕರ್ಣಿ

ನಿರ್ದೇಶಕರು: ಪ್ರತಿಮಾ ಜೋಶಿ

ರಜತ್ ಕಮಲ್ ಮತ್ತು 50,000 ರೂ. ತಲಾ

  1.  

ಅತ್ಯುತ್ತಮ ನಿರ್ದೇಶನ

ಸ್ಮೈಲ್ ಪ್ಲೀಸ್

ನಿರ್ದೇಶಕ: ಬಕುಲ್ ಮತಿಯಾನಿ

ಸ್ವರ್ಣ ಕಮಲ್ ಮತ್ತು 1,50,000 ರೂ. ತಲಾ

  1.  

ಅತ್ಯುತ್ತಮ ಸಿನಿಮಾಟೋಗ್ರಫಿ

ಪಟಾಲ್ - ಟೀ

ಛಾಯಾಗ್ರಾಹಕ: ಬಿಟ್ಟು ರಾವತ್

 

ರಜತ್ ಕಮಲ್ ಮತ್ತು 50,000 ರೂ. ತಲಾ

 

  1.  

ಅತ್ಯುತ್ತಮ ಆಡಿಯೋಗ್ರಫಿ (ಅಂತಿಮ ಮಿಶ್ರ ಟ್ರ್ಯಾಕ್‌ನ ಮರು-ರೆಕಾರ್ಡಿಸ್ಟ್)

ಏಕ್ ಥಾ ಗಾಂವ್

ಮರು-ರೆಕಾರ್ಡಿಸ್ಟ್ (ಅಂತಿಮ ಮಿಶ್ರ ಟ್ರ್ಯಾಕ್): ಉನ್ನಿ ಕೃಷ್ಣನ್

ರಜತ್ ಕಮಲ್ ಮತ್ತು 50,000 ರೂ. ತಲಾ

  1.  

ಅತ್ಯುತ್ತಮ ಪ್ರೊಡಕ್ಷನ್ ಸೌಂಡ್ ರೆಕಾರ್ಡಿಸ್ಟ್ (ಸ್ಥಳ/ಸಿಂಕ್ ಸೌಂಡ್)

ಮೀನ್ ರಾಗ್

ಪ್ರೊಡಕ್ಷನ್ ಸೌಂಡ್ ರೆಕಾರ್ಡಿಸ್ಟ್: ಸುರುಚಿ ಶರ್ಮಾ

ರಜತ್ ಕಮಲ್ ಮತ್ತು 50,000 ರೂ. ತಲಾ

  1.  

ಅತ್ಯುತ್ತಮ ಸಂಕಲನ

If Memory Serves Me Right

ಸಂಕಲನಕಾರ: ಅಬ್ರೋ ಬ್ಯಾನರ್ಜಿ

ರಜತ್ ಕಮಲ್ ಮತ್ತು 50,000 ರೂ. ತಲಾ

 

 

  1.  

ಅತ್ಯುತ್ತಮ ಸಂಗೀತ ನಿರ್ದೇಶನ

Succelent (ರಸಭರಿತ)

ಸಂಗೀತ ನಿರ್ದೇಶಕ: ಇಶಾನ್ ದಿವೇಚಾ

ರಜತ್ ಕಮಲ್ ಮತ್ತು 50,000 ರೂ. ತಲಾ

  1.  

ಅತ್ಯುತ್ತಮ ನಿರೂಪಣೆ/ ಧ್ವನಿ

Hathibondhu

ಹತಿಬೊಂಧು

 

ವಾಯ್ಸ್ ಓವರ್: ಕುಲದ ಕುಮಾರ್ ಭಟ್ಟಾಚಾರ್ಜಿ

 

 

ರಜತ್ ಕಮಲ್ ಮತ್ತು 50,000 ರೂ. ತಲಾ

 

 

  1.  

ವಿಶೇಷ ಉಲ್ಲೇಖ

1.ಬಾಳೆ ಬಂಗಾರ

 

2.ಕರುವಾರೈ

3. ಹೀಲಿಂಗ್ ಟಚ್

 

4.ಏಕ್ ದುವಾ

ಅನಿರುದ್ಧ ಜಾತ್ಕರ್

 

ಶ್ರೀಕಾಂತ್ ದೇವಾ

ಶ್ವೇತಾ ಕುಮಾರ್ ದಾಸ್

 

ರಾಮ್ ಕಮಲ್ ಮುಖರ್ಜಿ

ಪ್ರಮಾಣಪತ್ರ ಮಾತ್ರ

 

69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು 2021

ಫೀಚರ್ ಫಿಲ್ಮ್ಸ್ (ಚಲನಚಿತ್ರಗಳು) - ಫಲಿತಾಂಶಗಳು

ಸರಣಿ ಸಂಖ್ಯೆ

ಪ್ರಶಸ್ತಿ ವಿಭಾಗ

ಚಲನಚಿತ್ರ ಟೈಟಲ್

ಪ್ರಶಸ್ತಿ ವಿಜೇತರು

ಪದಕು ಮತ್ತು ನಗದು ಬಹುಮಾನ

  1.  

ಅತ್ಯುತ್ತಮ ಚಲನಚಿತ್ರ

ರಾಕೆಟ್ರಿ: ನಂಬಿ ಎಫೆಕ್ಟ್

 

(ಹಿಂದಿ)

ನಿರ್ಮಾಪಕ: ರಾಕೆಟ್ರಿ ಎಂಟರ್ ಟೈನ್ ಮೆಂಟ್ ಎಲ್ಎಲ್ ಪಿ

 

ನಿರ್ದೇಶಕ: ಆರ್ ಮಾಧವನ್

ಸ್ವರ್ಣ ಕಮಲ್ ಮತ್ತು 2,50,000 ರೂ. ತಲಾ

  1.  

ನಿರ್ದೇಶಕರ ಅತ್ಯುತ್ತಮ ಚೊಚ್ಚಲ ಚಿತ್ರಕ್ಕಾಗಿ ಇಂದಿರಾ ಗಾಂಧಿ ಪ್ರಶಸ್ತಿ

ಮೆಪ್ಪಾಡಿಯನ್ (ಮೇಲೆ ತಿಳಿಸಿದ ವ್ಯಕ್ತಿ)

(ಮಲಯಾಳಂ)

ನಿರ್ಮಾಣ: ಉನ್ನಿ ಮುಕುಂದನ್ ಫಿಲ್ಮ್ಸ್ ಪ್ರೈವೇಟ್ ಲಿಮಿಟೆಡ್.

ನಿರ್ದೇಶಕ: ವಿಷ್ಣು ಮೋಹನ್

ಸ್ವರ್ಣ ಕಮಲ್ ಮತ್ತು 1,25,0000 ರೂ. ತಲಾ

  1.  

ಸಂಪೂರ್ಣ ಮನರಂಜನೆ ಒದಗಿಸುವ ಅತ್ಯುತ್ತಮ ಜನಪ್ರಿಯ ಚಲನಚಿತ್ರ ಪ್ರಶಸ್ತಿ

RRR (ತೆಲುಗು)

ನಿರ್ಮಾಣ: ಡಿವಿವಿ ಎಂಟರ್ ಟೈನ್ ಮೆಂಟ್ಸ್ ಎಲ್ಎಲ್ ಪಿ

ನಿರ್ದೇಶಕ: ಎಸ್ ಎಸ್ ರಾಜಮೌಳಿ

ಸ್ವರ್ಣ ಕಮಲ ಮತ್ತು 2,00,000 ರೂ. ತಲಾ

  1.  

ರಾಷ್ಟ್ರೀಯ ಭಾವೈಕ್ಯತೆ ಸಾರುವ ಅತ್ಯುತ್ತಮ ಚಲನಚಿತ್ರದ ನರ್ಗಿಸ್ ದತ್ ಪ್ರಶಸ್ತಿ

 

ಕಾಶ್ಮೀರ್ ಫೈಲ್ಸ್

(ಹಿಂದಿ)

 

ನಿರ್ಮಾಪಕ: Zee ಸ್ಟುಡಿಯೋಸ್ ಲಿಮಿಟೆಡ್

ನಿರ್ದೇಶಕ: ವಿವೇಕ್ ರಂಜನ್ ಅಗ್ನಿಹೋತ್ರಿ

ರಜತ ಕಮಲ ಮತ್ತು 1,50,00 ರೂ. ತಲಾ

  1.  

ಸಾಮಾಜಿಕ ಸಮಸ್ಯೆಗಳ ಮೇಲಿನ ಅತ್ಯುತ್ತಮ ಚಲನಚಿತ್ರ

 

ಅನುನಾದ್-ದಿ ರೆಸೋನೆನ್ಸ್

(ಅಸ್ಸಾಮಿ)

 

ನಿರ್ಮಾಣ: ಅಸ್ಸಾಂ ರಾಜ್ಯ ಚಲನಚಿತ್ರ ನಿಗಮ ಲಿಮಿಟೆಡ್.

 ನಿರ್ದೇಶಕ: ರೀಮಾ ಬೋರಾ

ರಜತ ಕಮಲ ಮತ್ತು 1,50,00 ರೂ. ತಲಾ

  1.  

ಪರಿಸರ ಸಂರಕ್ಷಣೆ ಕುರಿತ ಅತ್ಯುತ್ತಮ ಚಲನಚಿತ್ರ

ಆವಾಸವ್ಯೂಹಮ್

(ಮಲಯಾಳಂ)

ನಿರ್ಮಾಪಕ: ಕ್ರಿಶಾಂದ್ ಫಿಲ್ಮ್ಸ್

 ನಿರ್ದೇಶಕ: ಕ್ರಿಶಾಂದ್

ರಜತ ಕಮಲ ಮತ್ತು 1,50,00 ರೂ. ತಲಾ

  1.  

ಅತ್ಯುತ್ತಮ ಮಕ್ಕಳ ಚಿತ್ರ

ಗಾಂಧಿ&ಕೋ.

(ಗುಜರಾತಿ)

ನಿರ್ಮಾಣ: ಎಂಡಿ ಮೀಡಿಯಾ ಕಾರ್ಪೊರೇಷನ್

 ನಿರ್ದೇಶಕ: ಮನೀಶ್ ಸೈನಿ

ಸ್ವರ್ಣ ಕಮಲ ಮತ್ತು 1,50,000 ರೂ. ತಲಾ

 

  1.  

ಅತ್ಯುತ್ತಮ ನಿರ್ದೇಶನ

ಗೋದಾವರಿ (ಪವಿತ್ರ ನೀರು)

(ಮರಾಠಿ)

ನಿರ್ದೇಶಕ: ನಿಖಿಲ್ ಮಹಾಜನ್

ಸ್ವರ್ಣ ಕಮಲ ಮತ್ತು 2,50,000 ರೂ. ತಲಾ

  1.  

ಅತ್ಯುತ್ತಮ ನಟ

ಪುಷ್ಪಾ (ದಿ ರೈಸ್-ಭಾಗ 1)

 (ತೆಲುಗು)

ನಾಯಕ ನಟ: ಅಲ್ಲು ಅರ್ಜುನ್

 

 

ರಜತ ಕಮಲ ಮತ್ತು 50,000 ರೂ. ತಲಾ

 

 

  1.  

ಅತ್ಯುತ್ತಮ ನಟಿ

1. ಗಂಗೂಬಾಯಿ ಕಥಿಯಾವಾಡಿ (ಹಿಂದಿ)

2. ಮಿಮಿ (ಹಿಂದಿ)

ನಾಯಕಿ ನಟಿ: ಆಲಿಯಾ ಭಟ್

 

 

ನಾಯಕಿ ನಟಿ: ಕೃತಿ ಸನನ್

ರಜತ ಕಮಲ ಮತ್ತು 50,000 ರೂ. ತಲಾ

 

  1.  

ಅತ್ಯುತ್ತಮ ಪೋಷಕ ನಟ

ಮಿಮಿ (ಹಿಂದಿ)

ಪೋಷಕ ನಟ: ಪಂಕಜ್ ತ್ರಿಪಾಠಿ

ರಜತ ಕಮಲ ಮತ್ತು 50,000 ರೂ. ತಲಾ

  1.  

ಅತ್ಯುತ್ತಮ ಪೋಷಕ ನಟಿ

ಕಾಶ್ಮೀರ್ ಫೈಲ್ಸ್

(ಹಿಂದಿ)

ಪೋಷಕ ನಟಿ: ಪಲ್ಲವಿ ಜೋಶಿ

ರಜತ ಕಮಲ ಮತ್ತು 50,000 ರೂ. ತಲಾ

  1.  

ಅತ್ಯುತ್ತಮ ಬಾಲ ಕಲಾವಿದ

ಕೊನೆಯ ಚಲನಚಿತ್ರ ಪ್ರದರ್ಶನ (ಚೆಲೋ ಶೋ)

(ಗುಜರಾತಿ)

ಬಾಲ ಕಲಾವಿದ: ಭಾವಿನ್ ರಬಾರಿ

 

 

ರಜತ ಕಮಲ ಮತ್ತು 50,000 ರೂ. ತಲಾ

  1.  

ಅತ್ಯುತ್ತಮ ಹಿನ್ನೆಲೆ ಗಾಯಕ

RRR

(ತೆಲುಗು)

ಗಾಯಕ: ಕಾಲ ಭೈರವ

 (ಹಾಡು: ಕೊಮುರಂ ಭೀಮುದೋ)

ರಜತ ಕಮಲ ಮತ್ತು 50,000 ರೂ. ತಲಾ

  1.  

ಅತ್ಯುತ್ತಮ ಹಿನ್ನೆಲೆ ಗಾಯಕಿ

ಇರವಿನ್ ನಿಜಾಲ್ (ರಾತ್ರಿಯ ನೆರಳು)

(ತಮಿಳು)

ಗಾಯಕಿ: ಶ್ರೇಯಾ ಘೋಷಾಲ್

(ಹಾಡು : ಮಾಯವ ಛಾಯವ)

ರಜತ ಕಮಲ ಮತ್ತು 50,000 ರೂ. ತಲಾ

  1.  

ಅತ್ಯುತ್ತಮ ಛಾಯಾಗ್ರಹಣ

ಸರ್ದಾರ್ ಉಧಮ್

(ಹಿಂದಿ)

 

ಛಾಯಾಗ್ರಾಹಕ(ಕ್ಯಾಮೆರಾಮನ್): ಅವಿಕ್ ಮುಖೋಪಾಧಾಯ

ರಜತ ಕಮಲ ಮತ್ತು 50,000 ರೂ. ತಲಾ

  1.  

ಅತ್ಯುತ್ತಮ ಚಿತ್ರಕಥೆ

ನಯಟ್ಟು (ಬೇಟೆ)

(ಮಲಯಾಳಂ)

 

ಗಂಗೂಬಾಯಿ ಕಥಿಯಾವಾಡಿ

(ಹಿಂದಿ)

 

 

ಗಂಗೂಬಾಯಿ ಕಥಿಯಾವಾಡಿ

(ಹಿಂದಿ)

 

ಚಿತ್ರಕಥೆ ಬರಹಗಾರ (ಮೂಲ): ಶಾಹಿ ಕಬೀರ್

 

 

ಚಿತ್ರಕಥೆ ಬರಹಗಾರ (ಹೊಂದಾಣಿಕೆ) : ಸಂಜಯ್ ಲೀಲಾ ಬನ್ಸಾಲಿ & ಉತ್ಕರ್ಷಿಣಿ ವಶಿಷ್ಠ

 

ಸಂಭಾಷಣೆಕಾರ: ಉತ್ಕರ್ಷಿಣಿ ವಶಿಷ್ಠ ಮತ್ತು ಪ್ರಕಾಶ್ ಕಪಾಡಿಯಾ

ರಜತ ಕಮಲ ಮತ್ತು 50,000 ರೂ. ತಲಾ

  1.  

ಅತ್ಯುತ್ತಮ ಆಡಿಯೋಗ್ರಫಿ

ಚವಿಟ್ಟು

(ಮಲಯಾಳಂ)

 

 

ಜಿಲ್ಲಿ (ತಿರಸ್ಕರಿಸು)

(ಬಂಗಾಳಿ)

ಸರ್ದಾರ್ ಉಧಮ್

(ಹಿಂದಿ)

ಅತ್ಯುತ್ತಮ ಪ್ರೊಡಕ್ಷನ್ ಸೌಂಡ್ ರೆಕಾರ್ಡಿಸ್ಟ್ (ಸ್ಥಳ / ಸಿಂಕ್ ಧ್ವನಿ):

 ಅರುಣ್ ಅಶೋಕ್ ಮತ್ತು ಸೋನು ಕೆ.ಪಿ

ಸೌಂಡ್ ಡಿಸೈನರ್: ಅನೀಶ್ ಬಸು

 

ಮರು-ರೆಕಾರ್ಡಿಂಗ್ (ಅಂತಿಮ ಮಿಶ್ರಣ): ಸಿನೋಯ್ ಜೋಸೆಫ್

ರಜತ ಕಮಲ ಮತ್ತು 50,000 ರೂ. ತಲಾ

  1.  

ಅತ್ಯುತ್ತಮ ಸಂಕಲನ

ಗಂಗೂಬಾಯಿ ಕಥಿಯಾವಾಡಿ

(ಹಿಂದಿ)

ಸಂಕಲನಕಾರ: ಸಂಜಯ್ ಲೀಲಾ ಬನ್ಸಾಲಿ

ರಜತ ಕಮಲ ಮತ್ತು 50,000 ರೂ. ತಲಾ

  1.  

ಅತ್ಯುತ್ತಮ ನಿರ್ಮಾಣ ವಿನ್ಯಾಸ

ಸರ್ದಾರ್ ಉಧಮ್

(ಹಿಂದಿ)

ಪ್ರೊಡಕ್ಷನ್ ಡಿಸೈನರ್: ಡಿಮಿಟ್ರಿ ಮಾಲಿಚ್ ಮತ್ತು ಮಾನ್ಸಿ ಧ್ರುವ್ ಮೆಹ್ತಾ

ರಜತ ಕಮಲ ಮತ್ತು 50,000 ರೂ. (ಹಂಚಿಕೊಳ್ಳಲಾಗಿದೆ)

  1.  

ಅತ್ಯುತ್ತಮ ಕಾಸ್ಟ್ಯೂಮ್ ಡಿಸೈನರ್

ಸರ್ದಾರ್ ಉಧಮ್

(ಹಿಂದಿ)

ಕಾಸ್ಟ್ಯೂಮ್ ಡಿಸೈನರ್: ವೀರ ಕಪೂರ್ ಈ

ರಜತ ಕಮಲ ಮತ್ತು 50,000 ರೂ. (ಹಂಚಿಕೊಳ್ಳಲಾಗಿದೆ)

  1.  

ಅತ್ಯುತ್ತಮ ಪ್ರಸಾದನ(ಮೇಕಪ್) ಕಲಾವಿದ

ಗಂಗೂಬಾಯಿ ಕಥಿಯಾವಾಡಿ

(ಹಿಂದಿ)

 

ಪ್ರಸಾದನ ಕಲಾವಿದ: ಪ್ರೀತಿಶೀಲ್ ಸಿಂಗ್ ಡಿಸೋಜಾ

ರಜತ ಕಮಲ ಮತ್ತು 50,000 ರೂ. ತಲಾ

  1.  

ಅತ್ಯುತ್ತಮ ಸಂಗೀತ ನಿರ್ದೇಶನ

ಪುಷ್ಪಾ (ದಿ ರೈಸ್ ಭಾಗ I)

(ತೆಲುಗು)

 

RRR

(ತೆಲುಗು)

ಸಂಗೀತ ನಿರ್ದೇಶಕ (ಹಾಡುಗಳು):

 ದೇವಿ ಶ್ರೀ ಪ್ರಸಾದ್

 

ಸಂಗೀತ ನಿರ್ದೇಶಕ (ಹಿನ್ನೆಲೆ):

 ಎಂ.ಎಂ. ಕೀರವಾಣಿ

ರಜತ ಕಮಲ ಮತ್ತು 50,000 ರೂ. ತಲಾ

  1.  

ಅತ್ಯುತ್ತಮ ಸಾಹಿತ್ಯ

ಕೊಂಡ ಪೋಲಂ

(ತೆಲುಗು)

ಸಾಹಿತ್ಯ: ಚಂದ್ರಬೋಸ್

 (ಹಾಡು: ಧಂ ಧಂ ಧಂ)

ರಜತ ಕಮಲ ಮತ್ತು 50,000 ರೂ. ತಲಾ

  1.  

ವಿಶೇಷ ತೀರ್ಪುಗಾರರ ಪ್ರಶಸ್ತಿ

ಶೇರ್ ಶಹಾ

 

ನಿರ್ದೇಶಕ: ವಿಷ್ಣು ವರಧನ್

ರಜತ ಕಮಲ ಮತ್ತು 2,00,000 ರೂ. ತಲಾ

 

 

  1.  

ಬೆಸ್ಟ್ ಸ್ಪೆಷಲ್ ಎಫೆಕ್ಟ್ಸ್

RRR

(ತೆಲುಗು)

ಸ್ಪೆಷಲ್ ಎಫೆಕ್ಟ್ಸ್ ಕ್ರಿಯೇಟರ್: ವಿ ಶ್ರೀನಿವಾಸ್ ಮೋಹನ್

ರಜತ ಕಮಲ ಮತ್ತು 50,000 ರೂ. ತಲಾ

 

 

  1.  

ಅತ್ಯುತ್ತಮ ನೃತ್ಯ ಸಂಯೋಜನೆ

RRR

(ತೆಲುಗು)

ನೃತ್ಯ ನಿರ್ದೇಶಕ: ಪ್ರೇಮ್ ರಕ್ಷಿತ್

ರಜತ ಕಮಲ ಮತ್ತು 50,000 ರೂ. ತಲಾ

 

  1.  

ಅತ್ಯುತ್ತಮ ಸಾಹಸ ನಿರ್ದೇಶನ ಪ್ರಶಸ್ತಿ (ಸ್ಟಂಟ್ ಕೊರಿಯೋಗ್ರಫಿ)

RRR

(ತೆಲುಗು)

ಸ್ಟಂಟ್ ಕೊರಿಯೋಗ್ರಾಫರ್: ಕಿಂಗ್ ಸೊಲೊಮನ್

ರಜತ ಕಮಲ ಮತ್ತು 50,000 ರೂ. ತಲಾ

  1.  

ಸಂವಿಧಾನದ ಪರಿಚ್ಛೇದ VIII ರಲ್ಲಿ ನಿರ್ದಿಷ್ಟಪಡಿಸಿದ ಪ್ರತಿ ಭಾಷೆಯ ಅತ್ಯುತ್ತಮ ಚಲನಚಿತ್ರ

 

 

 

  1.  

ಅತ್ಯುತ್ತಮ ಅಸ್ಸಾಮಿ ಚಿತ್ರ

ಅನುರ್ (ಐಸ್ ಆನ್ ದಿ ಸನ್ಶೈನ್)

ನಿರ್ಮಾಪಕ: ಗೋಪೇಂದ್ರ ಮೋಹನ್ ದಾಸ್

 ನಿರ್ದೇಶಕ: ಮಂಜುಲ್ ಬರುವಾ

ರಜತ ಕಮಲ ಮತ್ತು 1,00,000 ರೂ. ತಲಾ

  1.  

ಅತ್ಯುತ್ತಮ ಬಂಗಾಳಿ ಚಿತ್ರ

ಕಲ್ಕೊಕ್ಖೋ - ಸಮಯದ ಮನೆ

ನಿರ್ಮಾಣ: ಅರೋರಾ ಫಿಲ್ಮ್ ಕಾರ್ಪೊರೇಷನ್ ಪ್ರೈ.ಲಿ

ನಿರ್ದೇಶಕರು: ರಾಜದೀಪ್ ಪಾಲ್ ಮತ್ತು ಸರ್ಮಿಸ್ತಾ ಮೈತಿ

ರಜತ ಕಮಲ ಮತ್ತು 1,00,000 ರೂ. ತಲಾ

  1.  

ಅತ್ಯುತ್ತಮ ಹಿಂದಿ ಚಿತ್ರ

 

ಸರ್ದಾರ್ ಉದಾಮ್

(ಹಿಂದಿ)

ನಿರ್ಮಾಪಕ: ಕಿನೋ ವರ್ಕ್ಸ್ LLP

 ನಿರ್ದೇಶಕ: ಸುಜಿತ್ ಸಿರ್ಕಾರ್

ರಜತ ಕಮಲ ಮತ್ತು 1,00,000 ರೂ. ತಲಾ

  1.  

ಅತ್ಯುತ್ತಮ ಗುಜರಾತಿ ಚಿತ್ರ

ಕೊನೆಯ ಚಲನಚಿತ್ರ ಪ್ರದರ್ಶನ

(ಚೆಲೋ ಶೋ)

ನಿರ್ಮಾಣ: ಜುಗಾದ್ ಮೋಷನ್ ಪಿಕ್ಚರ್ಸ್

 ನಿರ್ದೇಶಕ: ಪಾನ್ ನಳಿನ್

ರಜತ ಕಮಲ ಮತ್ತು 1,00,000 ರೂ. ತಲಾ

  1.  

ಅತ್ಯುತ್ತಮ ಕನ್ನಡ ಚಿತ್ರ

777 ಚಾರ್ಲಿ

ನಿರ್ಮಾಣ: Parmvah Studios Pvt.Ltd

 ನಿರ್ದೇಶಕ: ಕಿರಣರಾಜ್ ಕೆ

ರಜತ ಕಮಲ ಮತ್ತು 1,00,000 ರೂ. ತಲಾ

  1.  

ಅತ್ಯುತ್ತಮ ಮೈಥಿಲಿ ಚಿತ್ರ

ಸಮನಾಂತರ

ನಿರ್ಮಾಣ: ಅನಿರತಿ ಫಿಲ್ಮ್ಸ್

 ನಿರ್ದೇಶಕ: ನೀರಜ್ ಕುಮಾರ್ ಮಿಶ್ರಾ

ರಜತ ಕಮಲ ಮತ್ತು 1,00,000 ರೂ. ತಲಾ

  1.  

ಅತ್ಯುತ್ತಮ ಮರಾಠಿ ಚಿತ್ರ

ಏಕದಾ ಕೇ ಝಲಾ

ನಿರ್ಮಾಣ: ಗಜವದನ ಶೋಬಾಕ್ಸ್ ಎಲ್ಎಲ್ ಪಿ

 ನಿರ್ದೇಶಕ: ಸಲೀಲ್ ಶ್ರೀನಿವಾಸ ಕುಲಕರ್ಣಿ

ರಜತ ಕಮಲ ಮತ್ತು 1,00,000 ರೂ. ತಲಾ

  1.  

ಅತ್ಯುತ್ತಮ ಮಲಯಾಳಂ ಚಿತ್ರ

 

ಹೋಮ್

ನಿರ್ಮಾಪಕ: ಶುಕ್ರವಾರ ಫಿಲ್ಮ್ ಹೌಸ್ ಪ್ರೈ.ಲಿ.

 ನಿರ್ದೇಶಕ: ರೋಜಿನ್.ಪಿ.ಥಾಮಸ್

ರಜತ ಕಮಲ ಮತ್ತು 1,00,000 ರೂ. ತಲಾ

  1.  

ಅತ್ಯುತ್ತಮ ಮಣಿಪುರಿ ಚಲನಚಿತ್ರ

ಐಖೋಗಿ ಯಂ

(ನಮ್ಮ ಮನೆ)

ನಿರ್ಮಾಪಕ: ಚಿಂಗ್ಸುಬಮ್ ಶೀತಲ್

 ನಿರ್ದೇಶಕ: ಮಾಯಾಂಗ್ಲಂಬಮ್ ರೋಮಿ ಮೈತೇಯಿ

ರಜತ ಕಮಲ ಮತ್ತು 1,00,000 ರೂ. ತಲಾ

  1.  

ಅತ್ಯುತ್ತಮ ಒಡಿಯಾ ಚಿತ್ರ

ಪ್ರತೀಕ್ಷ್ಯ

(ದಿ ವೇಯ್ಟ್)

ನಿರ್ಮಾಪಕರು: ಅಮಿಯಾ ಪಟ್ನಾಯಕ್ ಪ್ರೊಕ್ಯೂಷನ್ಸ್

 ನಿರ್ದೇಶಕ: ಅನುಪಮ್ ಪಟ್ನಾಯಕ್

ರಜತ ಕಮಲ ಮತ್ತು 1,00,000 ರೂ. ತಲಾ

  1.  

ಅತ್ಯುತ್ತಮ ತಮಿಳು ಚಿತ್ರ

ಕಡೈಸಿ ವಿವಾಸಾಯಿ

(ಕೊನೆಯ ರೈತ)

ನಿರ್ಮಾಣ: ಟ್ರೈಬಲ್ ಆರ್ಟ್ಸ್

 ನಿರ್ದೇಶಕ: ಎಂ. ಮಣಿಕಂದನ್

ರಜತ ಕಮಲ ಮತ್ತು 1,00,000 ರೂ. ತಲಾ

 

  •  

ಅತ್ಯುತ್ತಮ ತೆಲುಗು ಚಿತ್ರ

ಉಪ್ಪೇನ (ಅಲೆ)

ನಿರ್ಮಾಣ: ಮೈತ್ರಿ ಮೂವಿ ಮೇಕರ್ಸ್

ನಿರ್ದೇಶಕ: ಸನಾ ಬುಚ್ಚಿಬಾಬು

ರಜತ ಕಮಲ ಮತ್ತು 1,00,000 ರೂ. ತಲಾ

31

ಸಂವಿಧಾನದ ಶೆಡ್ಯೂಲ್ VIII ರಲ್ಲಿ ನಿರ್ದಿಷ್ಟಪಡಿಸಿದ ಭಾಷೆಗಳನ್ನು ಹೊರತುಪಡಿಸಿ ಪ್ರತಿಯೊಂದು ಭಾಷೆಯ ಅತ್ಯುತ್ತಮ ಚಲನಚಿತ್ರ

 

 

 

(ಎ)

ಅತ್ಯುತ್ತಮ ಆದಿವಾಸಿಗಳು ಅಥವಾ ಬುಡಕಟ್ಟು ಸಮುದಾಯಗಳ ಚಲನಚಿತ್ರ

ಬೂಂಬಾ ರೈಡ್

ನಿರ್ಮಾಣ: ಕ್ವಾರ್ಟರ್ ಮೂನ್ ಪ್ರೊಡಕ್ಷನ್ಸ್

 ನಿರ್ದೇಶಕ: ಬಿಸ್ವಜಿತ್ ಬೋರಾ

ರಜತ ಕಮಲ ಮತ್ತು 1,00,000 ರೂ. ತಲಾ

32.

ವಿಶೇಷ ಉಲ್ಲೇಖ

1. ಕಡೈಸಿ ವಿವಸಾಯಿ (ಕೊನೆಯ ರೈತ)

2. ಜಿಲ್ಲಿ

  1. ಹೋಮ್
  2. ಅನುರ್-ಐ ಆನ್ ದಿ ಸನ್ ಶೈನ್

 

ದಿವಂಗತ ಶ್ರೀ ನಲ್ಲಂಡಿ

 ಅರಣ್ಯ ಗುಪ್ತಾ ಮತ್ತು ಬಿಥಾನ್ ಬಿಸ್ವಾಸ್

 ಇಂದ್ರನ್ಸ್

 ಜಹನಾರಾ ಬೇಗಂ

ಪ್ರಮಾಣಪತ್ರ ಮಾತ್ರ

 

69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು 2021

ತೀರ್ಪುಗಾರರು

 

ಫೀಚರ್ ಫಿಲ್ಮ್ಸ್ ತೀರ್ಪುಗಾರರು

 

ಕೇಂದ್ರೀಯ ಸಮಿತಿ

  1.  

ಶ್ರೀ ಕೇತನ್ ಮೆಹ್ತಾ (ಅಧ್ಯಕ್ಷರು)

  1.  

ಶ್ರೀ ಸಬ್ಯಸಾಚಿ ಮಹಾಪಾತ್ರ (ಸದಸ್ಯರು)

  1.  

ಶ್ರೀ ವಿ.ಎನ್. ಆದಿತ್ಯ (ಸದಸ್ಯ)

  1.  

ಶ್ರೀ ಪರೇಶ್ ವೋರಾ (ಸದಸ್ಯ)

  1.  

ಶ್ರೀ ಮಾನಸ್ ಚೌಧರಿ (ಸದಸ್ಯರು)

  1.  

ಶ್ರೀ ಮಲಯ ರೇ (ಸದಸ್ಯ)

  1.  

ಶ್ರೀ ಜಿ.ಸುರೇಶ್ ಕುಮಾರ್ (ಸದಸ್ಯ)

  1.  

ಶ್ರೀ  ಸುನೀಲ್ ಕುಮಾರ್ ದೇಸಾಯಿ (ಸದಸ್ಯರು)

  1.  

ಶ್ರೀಮತಿ ಪಾಪಿಯಾ ಅಧಿಕಾರಿ (ಸದಸ್ಯರು)

  1.  

ಶ್ರೀ ಮುತ್ತು ಗಣೇಶ್ (ಸದಸ್ಯರು)

  1.  

ಶ್ರೀ. ಶಾಂತನು ಗಣೇಶ್ ರೋಡೆ (ಸದಸ್ಯರು)

 

ಪ್ರಾದೇಶಿಕ ತೀರ್ಪುಗಾರರು

 

ಉತ್ತರ ಭಾಗದ ಸಮಿತಿ

  1.  

ಶ್ರೀ ವಿ.ಎನ್.ಆದಿತ್ಯ, (ಅಧ್ಯಕ್ಷರು)

  1.  

ಶ್ರೀ ಆರ್ ವಿ ರಮಣಿ (ಸದಸ್ಯರು)

  1.  

ಶ್ರೀ ಆನಂದ್ ಕುಮಾರ್ ಸಿಂಗ್ (ಸದಸ್ಯರು)

  1.  

ಶ್ರೀ. ಮುರ್ತಜಾ ಅಲಿ ಖಾನ್ (ಸದಸ್ಯ)

  1.  

ಶ್ರೀ ಶಿವಂ ಛಾಬ್ರಾ (ಸದಸ್ಯರು)

 

 

ಪೂರ್ವ ಭಾಗದ ಸಮಿತಿ

  1.  

ಶ್ರೀ ಪರೇಶ್ ವೋರಾ (ಅಧ್ಯಕ್ಷರು)

  1.  

ಶ್ರೀಮತಿ ರೂನಾ ಆಶಿಶ್ (ಸದಸ್ಯರು)

  1.  

ಶ್ರೀಮತಿ ಜಯಶ್ರೀ ಭಟ್ಟಾಚಾರ್ಯ (ಸದಸ್ಯರು)

  1.  

ಶ್ರೀಮತಿ ಬಾಬಿ ಶರ್ಮಾ ಬರುವಾ (ಸದಸ್ಯರು)

  1.  

ಶ್ರೀ ಶಿಲಾದಿತ್ಯ ಮೌಲಿಕ್ (ಸದಸ್ಯರು)

 

 

ಪಶ್ಚಿಮ ಭಾಗದ ಸಮಿತಿ

  1.  

ಶ್ರೀಮತಿ ಮಲಯ್ ರೇ,(ಅಧ್ಯಕ್ಷರು)

  1.  

ಶ್ರೀ. ಮಂದರ್ ತಲೌಲಿಕರ್ (ಸದಸ್ಯರು)

  1.  

ಶ್ರೀಮತಿ ಒಲಿವಿಯಾ ದಾಸ್ (ಸದಸ್ಯರು)

  1.  

ಶ್ರೀ ಪ್ರಿತೇಶ್ ಸೋಧಾ (ಸದಸ್ಯರು)

  1.  

ಶ್ರೀ ಭೌರಾವ್ ಕರ್ಹಾಡೆ (ಸದಸ್ಯರು)

 

 

ದಕ್ಷಿಣ ಭಾಗ – 1ರ ಸಮಿತಿ

  1.  

ಶ್ರೀ ಸಬ್ಯಸಾಚಿ ಮಹಾಪಾತ್ರ (ಅಧ್ಯಕ್ಷರು)

  1.  

ಶ್ರೀ ಸುಕುಮಾರ್ ಜಟಾನಿಯಾ (ಸದಸ್ಯರು)

  1.  

ಶ್ರೀಮತಿ ಜಿ ಕಲಾ (ಸದಸ್ಯರು)

  1.  

ಶ್ರೀಮತಿ ಗೀತಾ ಗುರಪ್ಪ (ಸದಸ್ಯರು)

  1.  

ಶ್ರೀ ಸಜಿನ್ ಬಾಬು (ಸದಸ್ಯ)

 

 

ದಕ್ಷಿಣ ಭಾಗ – 2ರ ಸಮಿತಿ

  1.  

ಶ್ರೀ ಮಾನಸ್ ಚೌಧರಿ, (ಅಧ್ಯಕ್ಷರು)

  1.  

ಶ್ರೀ ಎಂ ಎನ್ ಸ್ವಾಮಿ (ಸದಸ್ಯರು)

  1.  

ಶ್ರೀಮತಿ ಬಲಭದ್ರಪಾತ್ರುಣಿ ರಮಣಿ (ಸದಸ್ಯರು)

  1.  

ಶ್ರೀಮತಿ ಎಂ ಎಂ ಶ್ರೀಲೇಖಾ (ಸದಸ್ಯರು)

  1.  

ಶ್ರೀ ಸೂರ್ಯಪಾಲ್ ಸಿಂಗ್ (ಸದಸ್ಯರು)

 

ನಾನ್ – ಫೀಚರ್ (ಸಾಕ್ಷ್ಯಚಿತ್ರಗಳು) ಚಲನಚಿತ್ರಗಳ ತೀರ್ಪುಗಾರರು

  1.  

ಶ್ರೀ ವಸಂತ್ ಎಸ್ ಸಾಯಿ, (ಅಧ್ಯಕ್ಷರು)

  1.  

ಶ್ರೀ ಬೋರುನ್ ತೊಕ್ಚೋಮ್ (ಸದಸ್ಯ)

  1.  

ಶ್ರೀ ಶಂಖಜೀತ್ ಡಿ (ಸದಸ್ಯರು)

  1.  

  ಶ್ರೀ ಪಂಚಾಕ್ಷರಿ ಸಿ ಇ (ಸದಸ್ಯರು)

  1.  

ಶ್ರೀ ಹರಿಪ್ರಸಾದ್ (ಸದಸ್ಯರು)

  1.  

ಶ್ರೀ ಅಮೋಲ್ ವಸಂತ ಗೋಲೆ (ಸದಸ್ಯ)

  1.  

ಶ್ರೀ ಕಾಮಾಖ್ಯ ನಾರಾಯಣ ಸಿಂಗ್ (ಸದಸ್ಯರು)

 

ಅತ್ಯುತ್ತಮ ಸಿನಿಮಾ ಬರಹ ವಿಭಾಗದ ತೀರ್ಪುಗಾರರು

1

ಶ್ರೀ ಯತೀಂದ್ರ ಮಿಶ್ರಾ (ಅಧ್ಯಕ್ಷರು)

2

ಶ್ರೀ ವೀಜಯ್ ಸಾಯಿ (ಸದಸ್ಯರು)

3

ಶ್ರೀ ರಾಮದಾಸ ನಾಯ್ಡು (ಸದಸ್ಯರು)

 

 

 

****

 


(Release ID: 1951949) Visitor Counter : 540