ಗಣಿ ಸಚಿವಾಲಯ

ಖನಿಜ ಪೂರೈಕೆ ವ್ಯವಸ್ಥೆಗಳನ್ನು ಬಲಪಡಿಸುವುದು

Posted On: 07 AUG 2023 4:21PM by PIB Bengaluru

ಭಾರತವು ಜೂನ್ 2023 ರಲ್ಲಿ ಖನಿಜ ಭದ್ರತಾ ಸಹಭಾಗಿತ್ವ (ಎಂ.ಎಸ್.ಪಿ.) ಒಕ್ಕೂಟದ 14 ನೇ ಸದಸ್ಯರಾಗಿ ಸೇರ್ಪಡೆಯಾಗಿದೆ. ಯುನೈಟೆಡ್ ಸ್ಟೇಟ್ಸ್, ಆಸ್ಟ್ರೇಲಿಯಾ, ಕೆನಡಾ, ಫಿನ್ಲ್ಯಾಂಡ್, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ನಾರ್ವೆ, ರಿಪಬ್ಲಿಕ್ ಆಫ್ ಕೊರಿಯಾ, ಸ್ವೀಡನ್, ಯುನೈಟೆಡ್  ಕಿಂಗ್ಡಮ್ ಮತ್ತು ಯುರೋಪಿಯನ್ ಕಮಿಷನ್ ರಾಷ್ಟ್ರಗಳು ಖನಿಜ ಭದ್ರತಾ ಸಹಭಾಗಿತ್ವ (ಎಂ.ಎಸ್.ಪಿ) ಒಕ್ಕೂಟದ ಇತರ ಸದಸ್ಯ ರಾಷ್ಟ್ರಗಳಾಗಿವೆ. 

ಆರ್ಥಿಕ ಸಮೃದ್ಧಿ ಮತ್ತು ಹವಾಮಾನ ಉದ್ದೇಶಗಳನ್ನು ಬೆಂಬಲಿಸಲು ನಿರ್ಣಾಯಕ ಖನಿಜಗಳ ಪೂರೈಕೆ ಸರಪಳಿಗಳನ್ನು ಹೆಚ್ಚಿಸಲು ಖನಿಜ ಭದ್ರತಾ ಸಹಭಾಗಿತ್ವ (ಎಂ.ಎಸ್.ಪಿ.) ಒಕ್ಕೂಟ ಪ್ರಯತ್ನಿಸುತ್ತಿದೆ.  ಸರ್ಕಾರಗಳು ಮತ್ತು ಖಾಸಗಿ ವಲಯದಿಂದ ಹೂಡಿಕೆಗಳನ್ನು ವೇಗವರ್ಧಿಸುವ ಮೂಲಕ ನಿರ್ಣಾಯಕ ಖನಿಜಗಳನ್ನು ಉತ್ಪಾದಿಸಲಾಗುತ್ತದೆ, ಸಂಸ್ಕರಿಸಲಾಗುತ್ತದೆ ಮತ್ತು ಮರುಬಳಕೆ ಮಾಡಲಾಗುತ್ತದೆ ಎಂದು ಪೂರ್ಣ ಮೌಲ್ಯ ಸರಪಳಿ ವ್ಯವಸ್ಥೆಯಲ್ಲಿ ಖಚಿತಪಡಿಸಿಕೊಳ್ಳಲು ಖನಿಜ ಭದ್ರತಾ ಸಹಭಾಗಿತ್ವ (ಎಂ.ಎಸ್.ಪಿ.) ಒಕ್ಕೂಟ ಪ್ರಯತ್ನಿಸುತ್ತದೆ.

ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಶ್ರೀ ಪ್ರಲ್ಹಾದ್ ಜೋಶಿ ಅವರು ಇಂದು ರಾಜ್ಯಸಭೆಯಲ್ಲಿ ಲಿಖಿತ ಉತ್ತರದಲ್ಲಿ ಈ ಮಾಹಿತಿಯನ್ನು ನೀಡಿದ್ದಾರೆ.

 ** **



(Release ID: 1946442) Visitor Counter : 93


Read this release in: Urdu , English , Punjabi