ಗಣಿ ಸಚಿವಾಲಯ
ʻರಾಷ್ಟ್ರೀಯ ಭೂವಿಜ್ಞಾನ ಪ್ರಶಸ್ತಿ-2022ʼ ಪ್ರದಾನ ಮಾಡಿದ ರಾಷ್ಟ್ರಪತಿಗಳು
ಡಾ. ಓಂ ನಾರಾಯಣ್ ಭಾರ್ಗವ ಅವರಿಗೆ `ಜೀವಮಾನ ಸಾಧನೆಗಾಗಿ ರಾಷ್ಟ್ರೀಯ ಭೂವಿಜ್ಞಾನ ಪ್ರಶಸ್ತಿ’ ಪ್ರದಾನ
ರಾಷ್ಟ್ರಪತಿಗಳಿಂದ ಪ್ರಶಸ್ತಿ ಸ್ವೀಕರಿಸಿದ ಇಪ್ಪತ್ತೆರಡು ಭೂವಿಜ್ಞಾನಿಗಳು
Posted On:
24 JUL 2023 7:54PM by PIB Bengaluru
ರಾಷ್ಟ್ರಪತಿ ಭವನದ `ಸಾಂಸ್ಕೃತಿಕ ಕೇಂದ್ರ’ದಲ್ಲಿ ಇಂದು ಆಯೋಜಿಸಿದ್ದ ಭವ್ಯ ಸಮಾರಂಭದಲ್ಲಿ ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಗಣಿ ಸಚಿವಾಲಯದ ಪ್ರತಿಷ್ಠಿತ `ರಾಷ್ಟ್ರೀಯ ಭೂವಿಜ್ಞಾನ ಪ್ರಶಸ್ತಿಗಳು -2022’(ಎನ್ ಜಿಎ) ಪ್ರದಾನ ಮಾಡಿದರು. ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಶ್ರೀ ಪ್ರಲ್ಹಾದ್ ಜೋಶಿ; ಕಲ್ಲಿದ್ದಲು, ಗಣಿ ಮತ್ತು ರೈಲ್ವೆ ಖಾತೆ ಸಹಾಯಕ ಸಚಿವ ಶ್ರೀ ರಾವ್ ಸಾಹೇಬ್ ಪಾಟೀಲ್ ದಾನ್ವೆ ಹಾಗೂ ಗಣಿ ಸಚಿವಾಲಯ, ಭಾರತೀಯ ಭೂವೈಜ್ಞಾನಿಕ ಸಮೀಕ್ಷೆಯ ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ದೇಶಾದ್ಯಂತ ಕಾರ್ಯನಿರತ ವೃತ್ತಿಪರರು ಮತ್ತು ಶಿಕ್ಷಣ ತಜ್ಞರು ಸೇರಿದಂತೆ ಇಪ್ಪತ್ತೆರಡು ಭೂವಿಜ್ಞಾನಿಗಳು ಮೂರು ವಿಭಾಗಗಳ ಅಡಿಯಲ್ಲಿ ಪ್ರಶಸ್ತಿಗಳನ್ನು ಪಡೆದರು, ಇವುಗಳಲ್ಲಿ ಒಂದು ʻಜೀವಮಾನ ಸಾಧನೆಗಾಗಿ ರಾಷ್ಟ್ರೀಯ ಭೂವಿಜ್ಞಾನ ಪ್ರಶಸ್ತಿʼ, ಒಂದು ʻರಾಷ್ಟ್ರೀಯ ಯುವ ಭೂವಿಜ್ಞಾನಿ ಪ್ರಶಸ್ತಿʼ ಮತ್ತು ಭೂವಿಜ್ಞಾನದ ವಿವಿಧ ಕ್ಷೇತ್ರಗಳಲ್ಲಿ ಎಂಟು ʻರಾಷ್ಟ್ರೀಯ ಭೂವಿಜ್ಞಾನ ಪ್ರಶಸ್ತಿಗಳುʼ ಸೇರಿವೆ.
ಜೀವಮಾನ ಸಾಧನೆಗಾಗಿ ರಾಷ್ಟ್ರೀಯ ಭೂವಿಜ್ಞಾನ ಪ್ರಶಸ್ತಿಯನ್ನು ಕಳೆದ ನಾಲ್ಕು ದಶಕಗಳಿಂದ ಹಿಮಾಲಯದಲ್ಲಿ ಮುಂಚೂಣಿ ಕೆಲಸಕ್ಕಾಗಿ ಹೆಸರುವಾಸಿಯಾದ ಡಾ.ಓಂ ನಾರಾಯಣ್ ಭಾರ್ಗವ ಅವರಿಗೆ ನೀಡಲಾಯಿತು. ಭಾರತೀಯ ಭೂಖಂಡದ ವಿವಿಧ ಆರ್ಕಿಯನ್ ಕ್ರೇಟಾನ್‌ಳ ಕೆಳಗೆ ಉಪಖಂಡದ ʻಲಿಥೋಸ್ಫೆರಿಕ್ ಮ್ಯಾಂಟಲ್ʼನಲ್ಲಿ (ಎಸ್‌ಸಿಎಲ್ಎಂ) ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳುವಲ್ಲಿ ಮಹತ್ವದ ಕೊಡುಗೆ ನೀಡಿದ ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ಅಮಿಯಾ ಕುಮಾರ್ ಸಮಲ್ ಅವರಿಗೆ ʻರಾಷ್ಟ್ರೀಯ ಯುವ ಭೂವಿಜ್ಞಾನಿ ಪ್ರಶಸ್ತಿʼಯನ್ನು ಪ್ರದಾನ ಮಾಡಲಾಯಿತು.
1966ರಲ್ಲಿ ಸ್ಥಾಪಿಸಲಾದ ʻರಾಷ್ಟ್ರೀಯ ಭೂವಿಜ್ಞಾನ ಪ್ರಶಸ್ತಿಗಳುʼ (ಎನ್‌ಜಿಎ), ಭೂವಿಜ್ಞಾನ ಕ್ಷೇತ್ರದಲ್ಲಿ ಶ್ರೇಷ್ಠತೆ, ಸಮರ್ಪಣೆ ಮತ್ತು ನಾವೀನ್ಯತೆಯನ್ನು ಪ್ರದರ್ಶಿಸಿದ ಅಸಾಧಾರಣ ವ್ಯಕ್ತಿಗಳು ಮತ್ತು ಸಂಸ್ಥೆಗಳಿಗೆ ಮಾನ್ಯತೆ ಮತ್ತು ಮೆಚ್ಚುಗೆಯ ಸಂಕೇತವಾಗಿವೆ. ಖನಿಜ ಅನ್ವೇಷಣೆ ಮತ್ತು ಪರಿಶೋಧನೆ, ಮೂಲ ಭೂವಿಜ್ಞಾನ, ಅನ್ವಯಿಕ ಭೂವಿಜ್ಞಾನ ಮತ್ತು ಗಣಿಗಾರಿಕೆ, ಖನಿಜ ಲಾಭದಾಯಕತೆ ಮತ್ತು ಸುಸ್ಥಿರ ಖನಿಜ ಅಭಿವೃದ್ಧಿ ಕ್ಷೇತ್ರದಲ್ಲಿ ಪ್ರಶಸ್ತಿಗಳನ್ನು ನೀಡಲಾಗುತ್ತದೆ.
ಈ ಸಂದರ್ಭದಲ್ಲಿ ಮಾತನಾಡಿದ ರಾಷ್ಟ್ರಪತಿಗಳು, “ಭೂವಿಜ್ಞಾನ ಕ್ಷೇತ್ರವು ಬಹಳ ವಿಶಾಲವಾಗಿದೆ. ಇದು ಭೂಕುಸಿತಗಳು, ಭೂಕಂಪಗಳು, ಪ್ರವಾಹಗಳು ಮತ್ತು ಸುನಾಮಿಗಳಂತಹ ನೈಸರ್ಗಿಕ ವಿಪತ್ತುಗಳ ಅಧ್ಯಯನವನ್ನು ಸಹ ಒಳಗೊಂಡಿದೆ. ಈ ವಿಷಯಗಳನ್ನು ʻಸಾರ್ವಜನಿಕ ಕಲ್ಯಾಣ ಭೂವಿಜ್ಞಾನʼ ಎಂದು ಕರೆಯಲಾಗುತ್ತದೆ, ಏಕೆಂದರೆ ಅವು ಹೆಚ್ಚಿನ ಸಂಖ್ಯೆಯ ಜನರ ರಕ್ಷಣೆಯಲ್ಲಿ ಉಪಯುಕ್ತವಾಗಿವೆ,ʼʼ ಎಂದು ಹೇಳಿದರು.
ಗಣಿಗಾರಿಕೆ ನಮ್ಮ ಆರ್ಥಿಕತೆಯ ಪ್ರಾಥಮಿಕ ವಲಯವಾಗಿದೆ ಎಂದು ರಾಷ್ಟ್ರಪತಿ ಹೇಳಿದರು. ಖನಿಜ ಅಭಿವೃದ್ಧಿಯು ದೇಶದ ಆರ್ಥಿಕ ಅಭಿವೃದ್ಧಿಗೆ ಪ್ರಧಾನ ಕೊಡುಗೆ ನೀಡಿದೆ. ಕಳೆದ ಕೆಲವು ವರ್ಷಗಳಲ್ಲಿ, ಸರ್ಕಾರವು ಗಣಿಗಾರಿಕೆ ಕ್ಷೇತ್ರದಲ್ಲಿ ಅನೇಕ ಪ್ರಗತಿಪರ ಬದಲಾವಣೆಗಳನ್ನು ತಂದಿದೆ. ಈ ಬದಲಾವಣೆಗಳು ಗಣಿಗಾರಿಕೆ ಕ್ಷೇತ್ರದ ಸಾಮರ್ಥ್ಯ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುತ್ತಿವೆ ಎಂದರು.
ಮನುಕುಲದ ಕಲ್ಯಾಣಕ್ಕೆ ದಾರಿ ಮಾಡುವ ಅಭಿವೃದ್ಧಿಯ ಮಾರ್ಗವು ಸರಿಯಾಗಿದೆ ಎಂಬುದನ್ನು ವಿಜ್ಞಾನ ಮಾತ್ರ ಸಾಬೀತುಪಡಿಸುತ್ತದೆ ಎಂದು ರಾಷ್ಟ್ರಪತಿಗಳು ಅಭಿಪ್ರಾಯಪಟ್ಟರು. ಅದಕ್ಕಾಗಿಯೇ ಭೂವಿಜ್ಞಾನಿ ಸಮುದಾಯವು ಮಾನವ ಕೇಂದ್ರಿತ ಗಣಿಗಾರಿಕೆಯ ದಿಕ್ಕಿನಲ್ಲಿ ಮುಂದುವರಿಯಬೇಕಾಗಿದೆ ಎಂದರು. ಖನಿಜಗಳ ಸಮರ್ಥ ಬಳಕೆಗೆ ಕೊಡುಗೆ ನೀಡುವ ಮೂಲಕ ಭಾರತದ ಆರ್ಥಿಕತೆಯನ್ನು ಬಲಪಡಿಸಿದ್ದಕ್ಕಾಗಿ ಅವರು ಭಾರತೀಯ ಭೂವಿಜ್ಞಾನಿಗಳನ್ನು ಶ್ಲಾಘಿಸಿದರು.
ಇತ್ತೀಚಿನ ದಿನಗಳಲ್ಲಿ ʻಅಪರೂಪದ ಭೂಮಿಯ ಮೂಲವಸ್ತುಗಳುʼ(ಆರ್‌ಇಇ), ʻಪ್ಲಾಟಿನಂ ಗುಂಪಿನ ಮೂಲವಸ್ತುಗಳುʼ ಹಾಗೂ ಮತ್ತು ʻಅರೆವಾಹಕ ಮೂಲವಸ್ತುʼಗಳಂತಹ ಖನಿಜಗಳಿಗೆ ವಿಶೇಷ ಗಮನ ನೀಡಲಾಗುತ್ತಿದೆ ಎಂದು ರಾಷ್ಟ್ರಪತಿ ಹೇಳಿದರು. ಪರಿಸರ ಸಂರಕ್ಷಣೆಯ ಆದ್ಯತೆಯನ್ನು ಗಮನದಲ್ಲಿಟ್ಟುಕೊಂಡು, ಕೆಲವು ಸಾಂಪ್ರದಾಯಿಕ ಖನಿಜಗಳ ಗಣಿಗಾರಿಕೆ ಮತ್ತು ಅವುಗಳ ಫಲಿತಾಂಶಗಳನ್ನು ಹೊಸ ದೃಷ್ಟಿಕೋನದಿಂದ ವಿಶ್ಲೇಷಿಸಲಾಗುತ್ತಿದೆ ಎಂದು ಹೇಳಿದರು. ಇಂದಿನ ಪ್ರಶಸ್ತಿಗಳಲ್ಲಿ ಸುಸ್ಥಿರ ಖನಿಜ ಅಭಿವೃದ್ಧಿ ಕ್ಷೇತ್ರದಲ್ಲಿನ ಕೊಡುಗೆಯನ್ನು ಗುರುತಿಸಿದ್ದಕ್ಕಾಗಿ ಗಣಿ ಸಚಿವಾಲಯವನ್ನು ಅವರು ಶ್ಲಾಘಿಸಿದರು. ಸುಸ್ಥಿರ ಖನಿಜ ಅಭಿವೃದ್ಧಿಗಾಗಿ, ಆರ್ಥಿಕ, ಸಾಮಾಜಿಕ ಮತ್ತು ಪರಿಸರ ಈ ಮೂರು ಆಯಾಮಗಳಿಗೆ ಸಮಾನ ಗಮನ ನೀಡಲಾಗುತ್ತಿರುವುದಕ್ಕೆ ಅವರು ಸಂತಸ ವ್ಯಕ್ತಪಡಿಸಿದರು.
ರಾಷ್ಟ್ರಪತಿಗಳ ಭಾಷಣದ ಪಠ್ಯ: https://static.pib.gov.in/WriteReadData/specificdocs/documents/2023/jul/doc2023724227801.pdf
ಸಚಿವ ಶ್ರೀ ಪ್ರಲ್ಹಾದ್ ಜೋಶಿ ಅವರು ಮಾತನಾಡಿ, ದೇಶದ ವ್ಯೂಹಾತ್ಮಕ ಅಭಿವೃದ್ಧಿಗೆ ನಿರ್ಣಾಯಕ ಖನಿಜಗಳ ಅನ್ವೇಷಣೆಯತ್ತ ಗಮನ ಹರಿಸುವಂತೆ ಭೂವಿಜ್ಞಾನಿಗಳನ್ನು ಒತ್ತಾಯಿಸಿದರು. ಪ್ರಶಸ್ತಿ ವಿಜೇತರನ್ನು ಶ್ಲಾಘಿಸಿದ ಅವರು, ಹೊಸ ಖನಿಜಗಳನ್ನು ಕಂಡುಹಿಡಿಯಲು ಭೂವಿಜ್ಞಾನಿಗಳು ʻಬೇಸ್ ಲೈನ್ ಡೇಟಾʼವನ್ನು ಸರಿಯಾಗಿ ಬಳಸಬೇಕಾಗಿದೆ ಎಂದು ಹೇಳಿದರು. ʻನವ ಭಾರತʼಕ್ಕೆ ಆಕಾರ ನೀಡುವಲ್ಲಿ ಗಣಿಗಾರಿಕೆ ಕ್ಷೇತ್ರವು ನಿರ್ಣಾಯಕ ಪಾತ್ರ ವಹಿಸಬಲ್ಲದು ಎಂದು ಅವರು ಹೇಳಿದರು. ಭಾರತೀಯ ಆರ್ಥಿಕತೆಯ ನಿರೀಕ್ಷಿತ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಅಸ್ತಿತ್ವದಲ್ಲಿರುವ ಕಾನೂನುಗಳಿಗೆ ತಿದ್ದುಪಡಿಗಳು, ಖಾಸಗಿ ವಲಯದ ಭಾಗವಹಿಸುವಿಕೆ ಮತ್ತು ಇತರೆ ಸುಧಾರಣೆಗಳ ರೂಪದಲ್ಲಿ ಗಣಿ ಸಚಿವಾಲಯವು ಕೈಗೊಳ್ಳುತ್ತಿರುವ ಕ್ರಮಗಳನ್ನು ಅವರು ಒತ್ತಿ ಹೇಳಿದರು. ಗಣಿ ಮತ್ತು ಖನಿಜಗಳ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯ್ದೆಯನ್ನು (ಎಂಎಂಡಿಆರ್) ಮತ್ತಷ್ಟು ತಿದ್ದುಪಡಿ ಮಾಡಲಾಗುವುದು ಎಂದು ಹೇಳಿದರು.
ಸಹಾಯಕ ಖಾತೆ ಸಚಿವ ಶ್ರೀ ರಾವ್ ಸಾಹೇಬ್ ಪಾಟೀಲ್ ದಾನ್ವೆ ಅವರು ಪ್ರಶಸ್ತಿ ವಿಜೇತರನ್ನು ಅಭಿನಂದಿಸಿದರು ಮತ್ತು ದೇಶದ ಅಭಿವೃದ್ಧಿಯ ಅವಶ್ಯಕತೆಗಳಿಗೆ ಕೊಡುಗೆ ನೀಡುವುದರ ಜೊತೆಗೆ, ನೈಸರ್ಗಿಕ ವಿಪತ್ತುಗಳಿಂದ ಉಂಟಾಗುವ ತೊಂದರೆಗಳನ್ನು ತಗ್ಗಿಸುವಲ್ಲಿ ಭೂವಿಜ್ಞಾನಿಗಳು ನಿರ್ಣಾಯಕ ಪಾತ್ರ ವಹಿಸುತ್ತಾರೆ ಎಂದು ಹೇಳಿದರು.
ಇದಕ್ಕೂ ಮುನ್ನ ಸ್ವಾಗತ ಭಾಷಣ ಮಾಡಿದ ಗಣಿ ಸಚಿವಾಲಯದ ಕಾರ್ಯದರ್ಶಿ ಶ್ರೀ ವಿವೇಕ್ ಭಾರದ್ವಾಜ್ ಅವರು, ಗಣಿ ಸಚಿವಾಲಯವು 1966ರಲ್ಲಿ ಸ್ಥಾಪಿಸಿದ ಈ ಪ್ರಶಸ್ತಿಗಳ ಹಿನ್ನೆಲೆಯನ್ನು ವಿವರಿಸಿದರು. ಅಂದಿನಿಂದ ಭೂ ವಿಜ್ಞಾನದ ಹೊಸ ಕ್ಷೇತ್ರಗಳನ್ನು ಸೇರಿಸುವುದರೊಂದಿಗೆ ಪ್ರಶಸ್ತಿಗಳು ವಿಕಸನಗೊಂಡಿವೆ ಎಂದು ಅವರು ಹೇಳಿದರು.
ರಾಷ್ಟ್ರೀಯ ಭೂವಿಜ್ಞಾನ ಪ್ರಶಸ್ತಿಗಳು-2022 ರ ಪ್ರಶಸ್ತಿ ವಿಜೇತರು
ʻರಾಷ್ಟ್ರೀಯ ಭೂವಿಜ್ಞಾನ ಪ್ರಶಸ್ತಿ-2022ʼಕ್ಕೆ ಒಟ್ಟು 173 ನಾಮನಿರ್ದೇಶನಗಳನ್ನು ಸ್ವೀಕರಿಸಲಾಗಿದೆ. ಮೂರು ಪ್ರಶಸ್ತಿ ವಿಭಾಗಗಳ ಅಡಿಯಲ್ಲಿ ಮಾನ್ಯ ನಾಮನಿರ್ದೇಶನಗಳ ಸಂಖ್ಯೆ 168 ಆಗಿದೆ. ಒಟ್ಟು 12 ಪ್ರಶಸ್ತಿಗಳಲ್ಲಿ, ಗಣಿ ಮತ್ತು ಭೂ ವಿಜ್ಞಾನ ಸಚಿವಾಲಯವು ಅಂತಿಮವಾಗಿ 10 ಪ್ರಶಸ್ತಿಗಳನ್ನು ಆಯ್ಕೆ ಮಾಡಿದೆ, ಇದರಲ್ಲಿ 4 ವೈಯಕ್ತಿಕ ಪ್ರಶಸ್ತಿಗಳು, 3 ತಂಡ ಪ್ರಶಸ್ತಿಗಳು ಮತ್ತು 3 ಜಂಟಿ ಪ್ರಶಸ್ತಿಗಳು ಸೇರಿವೆ. 04 ವೈಯಕ್ತಿಕ ಪ್ರಶಸ್ತಿಗಳಲ್ಲಿ ಒಂದು ʻಜೀವಮಾನ ಸಾಧನೆಗಾಗಿ ರಾಷ್ಟ್ರೀಯ ಭೂವಿಜ್ಞಾನ ಪ್ರಶಸ್ತಿʼ ಮತ್ತು ಒಂದು ʻರಾಷ್ಟ್ರೀಯ ಯುವ ಭೂವಿಜ್ಞಾನಿ ಪ್ರಶಸ್ತಿʼಗಳೂ ಸೇರಿವೆ. ಪ್ರಶಸ್ತಿಗಳ ವಿವರಗಳು ಈ ಕೆಳಗಿನಂತಿವೆ:
ಕ್ರ.ಸಂ.
|
ಪ್ರಶಸ್ತಿಯ ವರ್ಗ
|
ಪ್ರಶಸ್ತಿಗಳ ಸಂಖ್ಯೆ
|
1.
|
ಜೀವಮಾನ ಸಾಧನೆಗಾಗಿ ರಾಷ್ಟ್ರೀಯ ಭೂವಿಜ್ಞಾನ ಪ್ರಶಸ್ತಿ
|
1 ಪ್ರಶಸ್ತಿ
|
2.
|
ರಾಷ್ಟ್ರೀಯ ಭೂವಿಜ್ಞಾನ ಪ್ರಶಸ್ತಿಗಳು
|
8 ಪ್ರಶಸ್ತಿ
(3 ತಂಡ ಪ್ರಶಸ್ತಿ + 3 ಜಂಟಿ ಪ್ರಶಸ್ತಿ + 2 ವೈಯಕ್ತಿಕ ಪ್ರಶಸ್ತಿಗಳು = 20 ಪ್ರಶಸ್ತಿ ವಿಜೇತರು)
|
3.
|
ರಾಷ್ಟ್ರೀಯ ಯುವ ಭೂವಿಜ್ಞಾನಿ ಪ್ರಶಸ್ತಿ
|
1 ಪ್ರಶಸ್ತಿ
|
|
ಒಟ್ಟು
|
10 ಪ್ರಶಸ್ತಿಗಳು
(22 ಪ್ರಶಸ್ತಿ ಪುರಸ್ಕೃತರು)
|
ʻರಾಷ್ಟ್ರೀಯ ಭೂವಿಜ್ಞಾನ ಪ್ರಶಸ್ತಿ-2022ʼ ಪುರಸ್ಕೃತರ ಪಟ್ಟಿ ಈ ಕೆಳಗಿನಂತಿದೆ:-
ಜೀವಮಾನ ಸಾಧನೆಗಾಗಿ ರಾಷ್ಟ್ರೀಯ ಭೂವಿಜ್ಞಾನ ಪ್ರಶಸ್ತಿ - 2022
|
ಡಾ. ಓಂ ನಾರಾಯಣ್ ಭಾರ್ಗವ
ಗೌರವ ಪ್ರಾಧ್ಯಾಪಕರು
ಭೂವಿಜ್ಞಾನ ಇಲಾಖೆ
ಪಂಜಾಬ್ ವಿಶ್ವವಿದ್ಯಾಲಯ, ಚಂಡೀಗಢ
|
ರಾಷ್ಟ್ರೀಯ ಭೂವಿಜ್ಞಾನ ಪ್ರಶಸ್ತಿಗಳು - 2022
|
ವಿಭಾಗ-1 - ಖನಿಜ ಪರಿಶೋಧನೆ ಮತ್ತು ಅನ್ವೇಷಣೆ
|
ಕ್ಷೇತ್ರ (i): ಆರ್ಥಿಕ ಮತ್ತು / ಅಥವಾ ವ್ಯೂಹಾತ್ಮಕ ಪ್ರಾಮುಖ್ಯತೆಯ ಖನಿಜಗಳ ಅನ್ವೇಷಣೆ ಮತ್ತು ಪರಿಶೋಧನೆ (ಪಳೆಯುಳಿಕೆ ಇಂಧನಗಳನ್ನು ಹೊರತುಪಡಿಸಿ) ಹಾಗೂ ನವೀನ ತಂತ್ರಗಳ ಅನ್ವಯಿಕೆ
- ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾದ(ಜಿಎಸ್‌ಐ) ತಂಡವು ಈ ಕೆಳಗಿನವರನ್ನು ಒಳಗೊಂಡಿದೆ
- ಶ್ರೀಮತಿ ಸೌಭಾಗ್ಯಲಕ್ಷ್ಮಿ ಸಾಹೂ, ಭೂವಿಜ್ಞಾನಿ
- ಶ್ರೀಮತಿ ಸ್ವಪ್ನಿತಾ ಬ್ರಹ್ಮ, ಭೂವಿಜ್ಞಾನಿ
- ಶ್ರೀ ಯೋಗೀಶ ಎಸ್.ಎನ್., ಭೂವಿಜ್ಞಾನಿ
- ಶ್ರೀ ಪಿ.ರಾಜೇಶ್ ದುರೈ, ನಿರ್ದೇಶಕರು
- ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾ(ಜಿಎಸ್‌ಐ) ತಂಡವು ಈ ಕೆಳಗಿನವರನ್ನು ಒಳಗೊಂಡಿದೆ
- ಶ್ರೀ ಜಿತೇಂದ್ರ ಕುಮಾರ್, ಭೂವಿಜ್ಞಾನಿ
- ಶ್ರೀ ಎನ್ಗಾಜಿಪ್ಮಿ ಚಾಹೋಂಗ್, ಭೂವಿಜ್ಞಾನಿ
- ಶ್ರೀ ಬಿಕಾಶ್ ಕುಮಾರ್ ಆಚಾರ್ಯ, ಹಿರಿಯ ಭೂವಿಜ್ಞಾನಿ
- ಶ್ರೀ ಅನಿಂದ್ಯಾ ಭಟ್ಟಾಚಾರ್ಯ, ನಿರ್ದೇಶಕರು
|
ತಂಡ ಪ್ರಶಸ್ತಿ
ತಂಡ ಪ್ರಶಸ್ತಿ
|
ಕ್ಷೇತ್ರ (ii): ಆರ್ಥಿಕ ಮತ್ತು / ಅಥವಾ ವ್ಯೂಹಾತ್ಮಕ ಪ್ರಾಮುಖ್ಯತೆಯ ಕಲ್ಲಿದ್ದಲು, ಲಿಗ್ನೈಟ್ ಮತ್ತು ಕೋಲ್ ಬೆಡ್ ಮೀಥೇನ್ ಅನ್ವೇಷಣೆ ಹಾಗೂ ನವೀನ ತಂತ್ರಗಳ ಅನ್ವಯಿಕೆ; ತೈಲ, ನೈಸರ್ಗಿಕ ಅನಿಲ, ಶೇಲ್ ಅನಿಲ ಮತ್ತು ಅನಿಲ ಹೈಡ್ರೇಡ್‌ಗಳ ಅನ್ವೇಷಣೆ ಮತ್ತು ಪರಿಶೋಧನೆ (ಸಂಪನ್ಮೂಲಗಳ ಸದ್ಬಳಕೆಗೆ ಕಾರಣವಾಗುವ ಯೋಜನಾ ಅಭಿವೃದ್ಧಿ ಮತ್ತು ಯೋಜನೆ ಮತ್ತು ಭಂಡಾರ ನಿರ್ವಹಣೆ ಸೇರಿದಂತೆ);
ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾ (ಜಿಎಸ್‌ಐ) ತಂಡವು ಈ ಕೆಳಗಿನವರನ್ನು ಒಳಗೊಂಡಿದೆ
- ಸತ್ಯ ನಾರಾಯಣ ಸೇಥಿ, ಭೂವಿಜ್ಞಾನಿ
- ಶ್ರೀ ನಿತಿನ್ ನರೇಂದ್ರ ರಾವತ್, ಭೂವಿಜ್ಞಾನಿ
- ಶ್ರೀ ರಾಕೇಶ್ ದೀಪಂಕರ್, ಹಿರಿಯ ಭೂವಿಜ್ಞಾನಿ
- ಶ್ರೀ ಸುಮಿತ್ ಜೈಸ್ವಾಲ್, ಭೂವಿಜ್ಞಾನಿ
|
ತಂಡ ಪ್ರಶಸ್ತಿ
|
ವಿಭಾಗ-2 - ಗಣಿಗಾರಿಕೆ, ಖನಿಜ ಲಾಭದಾಯಕತೆ ಮತ್ತು ಸುಸ್ಥಿರ ಖನಿಜ ಅಭಿವೃದ್ಧಿ
|
ಕ್ಷೇತ್ರ (iv) ಖನಿಜ ಲಾಭದಾಯಕತೆ (ಖನಿಜ ಸಂಸ್ಕರಣೆ, ಕಡಿಮೆ ದರ್ಜೆಯ ಅದಿರುಗಳ ಬಳಕೆಗಾಗಿ ಯೋಜನಾ ಅಭಿವೃದ್ಧಿ ಮತ್ತು ಮೌಲ್ಯವರ್ಧಿತ ಖನಿಜ ಉತ್ಪನ್ನಗಳ ಉತ್ಪಾದನೆ ಹಾಗೂ ಖನಿಜ ಅರ್ಥಶಾಸ್ತ್ರ ಸೇರಿದಂತೆ) ಮತ್ತು ಸುಸ್ಥಿರ ಖನಿಜ ಅಭಿವೃದ್ಧಿ (ಗಣಿ ಮುಚ್ಚುವಿಕೆ, ಯೋಜನಾ ಅಭಿವೃದ್ಧಿ, ಸಾಂಸ್ಥಿಕ ಅಭಿವೃದ್ಧಿ ಮತ್ತು ಸಾಮರ್ಥ್ಯವರ್ಧನೆ ಸೇರಿದಂತೆ)
ಶ್ರೀ ಪಂಕಜ್ ಕುಮಾರ್ ಸತಿಜಾ
ವ್ಯವಸ್ಥಾಪಕ ನಿರ್ದೇಶಕರು
ಟಾಟಾ ಸ್ಟೀಲ್ ಮೈನಿಂಗ್ ಲಿಮಿಟೆಡ್
ನಯಪಲ್ಲಿ, ಭುವನೇಶ್ವರ, ಒಡಿಶಾ
|
ವೈಯಕ್ತಿಕ ಪ್ರಶಸ್ತಿ
|
ವಿಭಾಗ-III - ಮೂಲ ಭೂವಿಜ್ಞಾನ
|
ಕ್ಷೇತ್ರ (v): ಸ್ಟ್ರಾಟಿಗ್ರಫಿ, ರಚನಾತ್ಮಕ ಭೂವಿಜ್ಞಾನ, ಪ್ಯಾಲಿಯೊಂಟಾಲಜಿ, ಜಿಯೋಡೈನಾಮಿಕ್ಸ್, ಜಿಯೋಕೆಮಿಸ್ಟ್ರಿ, ಜಿಯೋಕ್ರೊನಾಲಜಿ ಮತ್ತು ಐಸೊಟೋಪ್ ಭೂವಿಜ್ಞಾನ, ಸಾಗರ ಅಭಿವೃದ್ಧಿ (ಸಮುದ್ರಶಾಸ್ತ್ರ ಮತ್ತು ಸಾಗರ ಭೂವಿಜ್ಞಾನ), ಗ್ಲಾಸಿಯಾಲಜಿ ಮತ್ತು ಆರ್ಕ್ಟಿಕ್ ಮತ್ತು ಅಂಟಾರ್ಕ್ಟಿಕ್ ಸಂಶೋಧನೆ, ಭೂ-ವೈಜ್ಞಾನಿಕ ಸಂಶೋಧನಾಯಾತ್ರೆಗಳು ಸೇರಿದಂತೆ ಮೂಲ ಭೂವಿಜ್ಞಾನ; ಹಾಗೂ ಭೂವೈಜ್ಞಾನಿಕ ಮತ್ತು ಭೂರಾಸಾಯನಿಕ ಮ್ಯಾಪಿಂಗ್ ಮತ್ತು ಸಮೀಕ್ಷೆ ಸೇರಿದಂತೆ ವಿಜ್ಞಾನ ಸಮೀಕ್ಷೆಗಳು / ಬೇಸ್ ಲೈನ್ ಭೂವಿಜ್ಞಾನ ದತ್ತಾಂಶ ಸಂಗ್ರಹಣೆ, ಮತ್ತು ವ್ಯವಸ್ಥಿತ ವಿಷಯಾಧಾರಿತ ನಕ್ಷೆ;
1. ಪ್ರೊ. ಸಾಯಿಬಲ್ ಗುಪ್ತಾ
ಭೂವಿಜ್ಞಾನ ಮತ್ತು ಭೂಭೌತಶಾಸ್ತ್ರ ವಿಭಾಗ
ಐಐಟಿ ಖರಗ್ಪುರ, ಪಶ್ಚಿಮ ಬಂಗಾಳ
- ಇವರಿಗೆ ಜಂಟಿ ಪ್ರಶಸ್ತಿ-
i ಡಾ. ವಲಿಯುರ್ ರಹಮಾನ್
ವಿಜ್ಞಾನಿ - ಇ
ನ್ಯಾಷನಲ್ ಸೆಂಟರ್ ಫಾರ್ ಪೋಲಾರ್ ಅಂಡ್ ಓಷನ್ ರಿಸರ್ಚ್,
ಭೂ ವಿಜ್ಞಾನ ಸಚಿವಾಲಯ, ಗೋವಾ
ಮತ್ತು
ii ಪ್ರೊ. ದೀಪಕ್ ಚಂದ್ರ ಪಾಲ್
ಭೂವೈಜ್ಞಾನಿಕ ವಿಜ್ಞಾನಗಳ ವಿಭಾಗ,
ಜಾದವ್‌ಪುರ ವಿಶ್ವವಿದ್ಯಾಲಯ, ಕೋಲ್ಕತಾ
|
ವೈಯಕ್ತಿಕ ಪ್ರಶಸ್ತಿ
ಜಂಟಿ ಪ್ರಶಸ್ತಿ
|
ವಿಭಾಗ- IV - ಅನ್ವಯಿಕ ಭೂವಿಜ್ಞಾನ
|
ಕ್ಷೇತ್ರ (vi): ಅನ್ವಯಿಕ ಭೂವಿಜ್ಞಾನ: ಎಂಜಿನಿಯರಿಂಗ್ ಭೂವಿಜ್ಞಾನ, ಭೂಶಾಖದ ಶಕ್ತಿ, ಸೀಸ್ಮೋಟೆಕ್ಟೋನಿಕ್ಸ್, ಜಿಯೋಸ್ಟಾಟಿಸ್ಟಿಕ್ಸ್, ರಿಮೋಟ್ ಸೆನ್ಸಿಂಗ್ ಮತ್ತು ಜಿಯೋ-ಇನ್‌ಫರ್‌ಮೇಷನ್ ಸಿಸ್ಟಮ್ (ಪ್ರಾದೇಶಿಕ ಡೇಟಾ ನಿರ್ವಹಣಾ ಅನ್ವಯಿಕೆಗಳು ಮತ್ತು ಡೇಟಾ ಏಕೀಕರಣ ಸೇರಿದಂತೆ); ಅಂತರ್ಜಲ ಪರಿಶೋಧನೆ (ಯೋಜನಾ ಅಭಿವೃದ್ಧಿ, ಜಲಭೌಗೋಳಿಕ ಅಧ್ಯಯನಗಳು ಮತ್ತು ಅಂತರ್ಜಲ ಸಂಪನ್ಮೂಲಗಳ ನಿರ್ವಹಣೆ ಸೇರಿದಂತೆ; ಗಣಿಗಾರಿಕೆ, ನಗರ, ಕೈಗಾರಿಕಾ, ಕರಾವಳಿ ಮತ್ತು ಮರುಭೂಮಿ ನಿರ್ವಹಣೆ, ಪ್ಯಾಲಿಯೊಕ್ಲೈಮೇಟ್, ಪ್ಯಾಲಿಯೊ ಪರಿಸರ, ವೈದ್ಯಕೀಯ ಭೂವಿಜ್ಞಾನ, ಹವಾಮಾನ ಬದಲಾವಣೆ ಮತ್ತು ಪರಿಸರ ವ್ಯವಸ್ಥೆಯ ಮೇಲೆ ಅವುಗಳ ಪ್ರಭಾವಕ್ಕೆ ಸಂಬಂಧಿಸಿದ ಅಧ್ಯಯನಗಳಿಗೆ ಸಂಬಂಧಿಸಿದ ಭೂ-ಪರಿಸರ ಅಧ್ಯಯನಗಳು.
- ಇವರಿಗೆ ಜಂಟಿ ಪ್ರಶಸ್ತಿ-
i ಡಾ. ಹರೀಶ್ ಬಹುಗುಣ
ನಿರ್ದೇಶಕರು,
ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾ, ಜಮ್ಮು
ಮತ್ತು
ii ಡಾ. ಕೀಸರಿ ತಿರುಮಲೇಶ್
ವೈಜ್ಞಾನಿಕ ಅಧಿಕಾರಿ,
ಭಾಭಾ ಪರಮಾಣು ಸಂಶೋಧನಾ ಕೇಂದ್ರ, ಮುಂಬೈ
|
ಜಂಟಿ ಪ್ರಶಸ್ತಿ
|
ಕ್ಷೇತ್ರ (viii): ಭೂಕಂಪಗಳು, ಭೂಕುಸಿತಗಳು, ಪ್ರವಾಹಗಳು ಮತ್ತು ಸುನಾಮಿಗಳಂತಹ ನೈಸರ್ಗಿಕ ಅಪಾಯಗಳಿಗೆ ಸಂಬಂಧಿಸಿದ ವೈಜ್ಞಾನಿಕ ಅಧ್ಯಯನಗಳು ಸೇರಿದಂತೆ ನೈಸರ್ಗಿಕ ವಿಪತ್ತು ತನಿಖೆಗಳು.
- ಇವರಿಗೆ ಜಂಟಿ ಪ್ರಶಸ್ತಿ-
i ಡಾ. ಸಾಯಿಬಲ್ ಘೋಷ್
ಉಪ ಮಹಾನಿರ್ದೇಶಕರು,
ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾ, ಕೋಲ್ಕತಾ
ಮತ್ತು
ii ಡಾ. ವಿಕ್ರಮ್ ಗುಪ್ತಾ
ವಿಜ್ಞಾನಿ - ಎಫ್
ವಾಡಿಯಾ ಇನ್ಸ್ಟಿಟ್ಯೂಟ್ ಆಫ್ ಹಿಮಾಲಯನ್ ಜಿಯಾಲಜಿ,
ಡೆಹ್ರಾಡೂನ್
|
ಜಂಟಿ ಪ್ರಶಸ್ತಿ
|
ರಾಷ್ಟ್ರೀಯ ಯುವ ಭೂವಿಜ್ಞಾನಿ ಪ್ರಶಸ್ತಿ - 2022
|
ಡಾ. ಅಮಿಯಾ ಕುಮಾರ್ ಸಮಲ್
ಸಹಾಯಕ ಪ್ರಾಧ್ಯಾಪಕ
ಭೂವಿಜ್ಞಾನ ಇಲಾಖೆ
ಬನಾರಸ್ ಹಿಂದೂ ವಿಶ್ವವಿದ್ಯಾಲಯ, ವಾರಣಾಸಿ
|
ಉಲ್ಲೇಖ ಕಿರು ಹೊತ್ತಿಗೆ : sendgb.com/uIHstavdMZe
****
(Release ID: 1942353)
Visitor Counter : 162