ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
ನಾಳೆ ಗಾಂಧಿನಗರದಲ್ಲಿ ಸೆಮಿಕಾನ್ಇಂಡಿಯಾ 2023 ಪ್ರದರ್ಶನ ಉದ್ಘಾಟನೆ
ಕೇಂದ್ರ ವಿದ್ಯುನ್ಮಾನ, ಮಾಹಿತಿ ಮತ್ತು ತಂತ್ರಜ್ಞಾನ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಉಪಸ್ಥಿತಿಯಲ್ಲಿ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರಭಾಯಿ ಪಟೇಲ್ ಅವರಿಂದ ಉದ್ಘಾಟನೆ
ತಮ್ಮ ಆವಿಷ್ಕಾರಗಳನ್ನು ಪ್ರದರ್ಶಿಸಲು ಪ್ರಮುಖ 80 ಅರೆವಾಹಕ(semiconductor) ಕಂಪನಿಗಳಿಂದ 150 ಮಳಿಗೆಗಳು
Posted On:
24 JUL 2023 8:31PM by PIB Bengaluru
'ಸೆಮಿಕಾನ್ಇಂಡಿಯಾ 2023' ಪ್ರದರ್ಶನವನ್ನು ನಾಳೆ ಗಾಂಧಿನಗರದಲ್ಲಿ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರಭಾಯಿ ಪಟೇಲ್ ಅವರು ಕೇಂದ್ರ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ,ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅವರ ಸಮ್ಮುಖದಲ್ಲಿ ಉದ್ಘಾಟಿಸಲಿದ್ದಾರೆ.
ಈ ಪ್ರದರ್ಶನವು ಸೆಮಿಕಾನ್ ಇಂಡಿಯಾ 2023ರ ಎರಡನೇ ಆವೃತ್ತಿಯ ಪ್ರಾರಂಭವಾಗಿದೆ. ಇದನ್ನು ಇಂಡಿಯಾ ಸೆಮಿಕಂಡಕ್ಟರ್ ಮಿಷನ್ ಕೈಗಾರಿಕೆ ಮತ್ತು ಕೈಗಾರಿಕೆ ಸಂಘಗಳ ನಿಕಟ ಸಹಯೋಗದೊಂದಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವದಡಿಯಲ್ಲಿ ಆಯೋಜಿಸಿದೆ.
ಇಂದು ಜುಲೈ 25 ರಿಂದ ಜುಲೈ 30ರವರೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಅರೆವಾಹಕ(ಸೆಮಿಕಂಡಕ್ಟರ್) ವಿನ್ಯಾಸ, ಉತ್ಪಾದನೆ ಮತ್ತು ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಭಾರತ ಸೆಮಿಕಂಡಕ್ಟರ್ ಮಿಷನ್‌ನ ದೃಷ್ಟಿಕೋನಕ್ಕೆ ಅನುಗುಣವಾಗಿ ಜಾಗತಿಕ ಮಟ್ಟದಲ್ಲಿ ಶಕ್ತಿಕೇಂದ್ರವಾಗುವತ್ತ ಭಾರತದ ಪಯಣವನ್ನು ಪ್ರದರ್ಶಿಸುತ್ತದೆ.
ಸೆಮಿಕಾನ್‌ಇಂಡಿಯಾ 2023 ಪ್ರದರ್ಶನದಲ್ಲಿ, ಪ್ರಮುಖ ಸೆಮಿಕಂಡಕ್ಟರ್ ಮೈಕ್ರಾನ್ ಟೆಕ್ನಾಲಜಿ ಅಂಡ್ ಅಪ್ಲೈಡ್ ಮೆಟೀರಿಯಲ್ಸ್ ನಂತಹ ದೈತ್ಯ ಕಂಪೆನಿಗಳು ಭಾಗವಹಿಸಲಿವೆ. ಈ ಸಂಸ್ಥೆ ಇತ್ತೀಚೆಗೆ ಭಾರತದ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಯಲ್ಲಿ ಗಣನೀಯ ಹೂಡಿಕೆ ಮಾಡುವುದಾಗಿ ವಾಗ್ದಾನ ಮಾಡಿಕೊಂಡಿದೆ. ಮೈಕ್ರಾನ್ ಟೆಕ್ನಾಲಜಿ ಗುಜರಾತ್ ಮೂಲದ ಸೆಮಿಕಂಡಕ್ಟರ್ ಜೋಡಣೆ ಮತ್ತು ಪರೀಕ್ಷಾ ಘಟಕ ಮತ್ತು ಅನ್ವಯಿಕ ಸಾಮಗ್ರಿಗಳಲ್ಲಿ(assembly and test plant and Applied Materials) 825 ಡಾಲರ್ ಮಿಲಿಯನ್ ಹೂಡಿಕೆ ಮಾಡಲಿದೆ. ಮೈಕ್ರಾನ್ ಟೆಕ್ನಾಲಜಿಸ್ ತಮ್ಮ ಇಂಜಿನಿಯರಿಂಗ್ ಸಹಯೋಗ ಕೇಂದ್ರಕ್ಕೆ 400 ಮಿಲಿಯನ್ ಡಾಲರ್ ಹೂಡಿಕೆ ಮಾಡಲು ಬದ್ಧವಾಗಿದೆ.
ಪ್ರದರ್ಶನದಲ್ಲಿ 80 ಪ್ರಮುಖ ಕಂಪನಿಗಳನ್ನು ಪ್ರತಿನಿಧಿಸುವ 150 ಮಳಿಗೆಗಳು ತಮ್ಮ ಆವಿಷ್ಕಾರ ಸಂಶೋಧನೆಗಳು ಮತ್ತು ಉತ್ಪನ್ನಗಳನ್ನು ಪ್ರದರ್ಶಿಸಲು ಸಿದ್ಧವಾಗಿವೆ. ಈ ವೈವಿಧ್ಯಮಯ ಕಂಪೆನಿಗಳು ಪೂರೈಕೆ ಸರಪಳಿ, ಜಾಗತಿಕ ಸಂಯೋಜಿತ ಸಾಧನ ತಯಾರಕರು ಮತ್ತು ದೇಶದ ಪ್ರಮುಖರು ಸೇರಿದಂತೆ ಅರೆವಾಹಕಗಳ ಸಂಪೂರ್ಣ ಸ್ಪೆಕ್ಟ್ರಮ್ ನ್ನು ಒಳಗೊಳ್ಳುತ್ತವೆ.
ಪ್ರದರ್ಶನದಲ್ಲಿ ಕಂಪೆನಿಗಳು ನಾವೀನ್ಯತೆಗಳನ್ನು ಪ್ರದರ್ಶಿಸುವುದರ ಜೊತೆಗೆ 25 ಸ್ಟಾರ್ಟ್‌ಅಪ್‌ಗಳನ್ನು ಭಾಗಿಯಾಗಲಿವೆ. ಅವುಗಳು ತಮ್ಮ ನಾವೀನ್ಯತೆಗಳನ್ನು ಪ್ರದರ್ಶಿಸಿ ಉದ್ಯಮದ ಪ್ರಮುಖರೊಂದಿಗೆ ಸಂಪರ್ಕ ಸಾಧಿಸುತ್ತಾರೆ.
ಸೆಮಿಕಾನ್‌ಇಂಡಿಯಾ 2023ರಲ್ಲಿ, ಉತ್ತರ ಪ್ರದೇಶ ಮತ್ತು ಗುಜರಾತ್ ರಾಜ್ಯಗಳ ಮಳಿಗೆಗಳೊಂದಿಗೆ 23 ದೇಶಗಳು ಮತ್ತು ಬಹು ರಾಜ್ಯಗಳು ಭಾಗವಹಿಸುತ್ತಿವೆ. ಅರೆವಾಹಕ ಉದ್ಯಮದ ಬೆಳವಣಿಗೆಯನ್ನು ಬೆಂಬಲಿಸುವಲ್ಲಿ ರಾಜ್ಯ ಸರ್ಕಾರಗಳ ಸಾಮೂಹಿಕ ಪ್ರಯತ್ನವನ್ನು ಪ್ರದರ್ಶಿಸುತ್ತದೆ.
ಎಸ್ ಸಿಎಲ್, ಇಸ್ರೊ ಮತ್ತು ಬಾಹ್ಯಾಕಾಶ ಅನ್ವಯಿಕ ಕೇಂದ್ರದಂತಹ ಸಂಸ್ಥೆಗಳು ಪ್ರದರ್ಶನದಲ್ಲಿ ಮಳಿಗೆಗಳನ್ನು ಹಾಕಲಿವೆ, ಐಐಟಿ ಬಾಂಬೆ, ಐಐಟಿ ಮದ್ರಾಸ್, ಬಿಐಟಿಎಸ್ ಪಿಲಾನಿ, ಗಣಪತ್ ವಿಶ್ವವಿದ್ಯಾಲಯ ಮತ್ತು ನಿರ್ಮಾ ವಿಶ್ವವಿದ್ಯಾಲಯದಂತಹ ಶಿಕ್ಷಣ ಸಂಸ್ಥೆಗಳು ಸಕ್ರಿಯವಾಗಿ ಭಾಗವಹಿಸುತ್ತವೆ. ಇದು ಭಾರತದ ಅರೆವಾಹಕ ಪ್ರಗತಿಯನ್ನು ಚಾಲನೆ ಮಾಡುವಲ್ಲಿ ಶಿಕ್ಷಣದ ಪ್ರಮುಖ ಪಾತ್ರವನ್ನು ಎತ್ತಿ ತೋರಿಸುತ್ತದೆ.
ಸೆಮಿಕಾನ್‌ಇಂಡಿಯಾ 2023 ದೃಢವಾದ ಅರೆವಾಹಕ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ಭಾರತದ ಬಲವಾದ ಬದ್ಧತೆಗೆ ಸಾಕ್ಷಿಯಾಗಿದೆ. ಅದರ ದೊಡ್ಡ ಪ್ರಮಾಣದ ಮತ್ತು ನವೀನ ಪ್ರದರ್ಶನಗಳೊಂದಿಗೆ, ಅರೆವಾಹಕ ಶ್ರೇಷ್ಠತೆಗಾಗಿ ಉದಯೋನ್ಮುಖ ಜಾಗತಿಕ ಕೇಂದ್ರವಾಗಿ ಭಾರತದ ಸಾಮರ್ಥ್ಯವನ್ನು ಹೆಮ್ಮೆಯಿಂದ ಪ್ರದರ್ಶಿಸುತ್ತದೆ.
****
(Release ID: 1942341)
Visitor Counter : 104