ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ

ದುಡಿಯುವ ಸ್ಥಳಗಳಲ್ಲಿನ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ(ತಡೆ, ನಿಷೇಧ ಮತ್ತು ಪರಿಹಾರ) ಕಾಯ್ದೆ 2013ರ ಅಂಶಗಳು ಎಲ್ಲಾ ರಾಷ್ಟ್ರೀಯ ಕ್ರೀಡಾ ಒಕ್ಕೂಟಗಳು(ಎನ್ಎಸ್ಎಫ್)ಗಳಿಗೂ ಅನ್ವಯ: ಶ್ರೀ ಅನುರಾಗ್ ಸಿಂಗ್ ಠಾಕೂರ್

Posted On: 20 JUL 2023 6:59PM by PIB Bengaluru

ದುಡಿಯುವ ಸ್ಥಳಗಳಲ್ಲಿನ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ(ತಡೆ, ನಿಷೇಧ ಮತ್ತು ಪರಿಹಾರ) (ಪಿಒಎಸ್ಎಚ್) ಕಾಯ್ದೆ  2013ರ ಅಂಶಗಳು ಕಾಯ್ದೆಯಲ್ಲಿ ವ್ಯಾಖ್ಯಾನಿಸಿರುವಂತೆ ಇತರೆ ಸಂಸ್ಥೆಗಳಿಗೆ ಅನ್ವಯವಾಗುವಂತೆ ಎಲ್ಲಾ ರಾಷ್ಟ್ರೀಯ ಕ್ರೀಡಾ ಒಕ್ಕೂಟಗಳು (ಎನ್ಎಸ್ಎಫ್) ಗಳಿಗೂ ಅನ್ವಯವಾಗುತ್ತದೆ. ಎನ್ಎಸ್ಎಫ್ ಗಳು ತಮ್ಮಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣಗಳು ವರದಿಯಾದರೆ ಅಂತಹ ಸಂದರ್ಭಗಳಲ್ಲಿ ಕಾಯ್ದೆಯ ಕಾನೂನು ಅಂಶಗಳ ಪ್ರಕಾರ ಕ್ರಮಗಳನ್ನು ಕೈಗೊಳ್ಳಬೇಕು. ಕ್ರೀಡೆಯಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ತಡೆಗಟ್ಟಲು ಸಚಿವಾಲಯ ಎಲ್ಲ ಎನ್ಎಸ್ಎಫ್ ಗಳಿಗೆ ಕಾಲ ಕಾಲಕ್ಕೆ ನಿರ್ದೇಶನಗಳನ್ನು ನೀಡುತ್ತಿದೆ.

ಕಳೆದ ಮೂರು ವರ್ಷಗಳಲ್ಲಿ ಮತ್ತು ಪ್ರಸಕ್ತ ವರ್ಷ ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ನಲ್ಲಿ(ಐಒಎ)ನಲ್ಲಿನ ಲೈಂಗಿಕ ದೌರ್ಜನ್ಯ ದೂರುಗಳ ಬಗ್ಗೆ ಮಾಹಿತಿಯನ್ನು ಆಧರಿಸಿ ಮತ್ತು ಎಲ್ಲಾ ಸದ್ಯದ ಮಾನ್ಯತೆ ಪಡೆದ ಎನ್ಎಸ್ಎಫ್ ಗಳ ಪೈಕಿ 4 ಎನ್ಎಸ್ಎಫ್ ಗಳಲ್ಲಿ ಲೈಂಗಿಕ ದೌರ್ಜನ್ಯ ದೂರುಗಳು ವರದಿಯಾಗಿವೆ.

ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ, ಸುಪ್ರೀಂಕೋರ್ಟ್ ವಿಶಾಖ ಮತ್ತಿತರರು ವರ್ಸಸ್ ಸ್ಟೇಟ್ ಆಫ್ ರಾಜಸ್ತಾನ ಮತ್ತಿತರ ಪ್ರಕರಣಗಳಲ್ಲಿ ನೀಡಿರುವ ಮಾರ್ಗಸೂಚಿ ಅನ್ವಯ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ 12.08.2010ರಲ್ಲಿ ಎಲ್ಲ ಎನ್ಎಸ್ಎಫ್ ಗಳಿಗೆ ವಿಸ್ತೃತ ನಿರ್ದೇಶನಗಳನ್ನು ನೀಡಿದೆ. ಆನಂತರ ದುಡಿಯುವ ಸ್ಥಳಗಳಲ್ಲಿನ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ(ತಡೆ, ನಿಷೇಧ ಮತ್ತು ಪರಿಹಾರ) (ಪಿಒಎಸ್ಎಚ್) ಕಾಯ್ದೆ  2013ರ ನಿಯಮಗಳು ಎಲ್ಲ ಎನ್ಎಸ್ಎಫ್ ಗಳಿಗೆ ಅನ್ವಯಿಸುತ್ತದೆ. ಎಲ್ಲ ಎನ್ಎಸ್ಎಫ್ ಗಳು ಲೈಂಗಿಕ ದೌರ್ಜನ್ಯ ಪ್ರಕರಣಗಳು ವರದಿಯಾದರೆ ಅಂತಹ ಪ್ರಕರಣಗಳಲ್ಲಿ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ.

ಸಚಿವಾಲಯ ಮತ್ತೆ 2023ರ ಜನವರಿಯಲ್ಲಿ ಐಒಎ ಮತ್ತು ಎನ್ಎಸ್ಎಫ್ ಗಳಿಗೆ ಮೇಲಿನ ಕಾಯ್ದೆಯ ನಿಯಮಗಳಿಗನುಸಾರ ತಮ್ಮ ವ್ಯವಸ್ಥೆಗಳನ್ನು ಮರು ಪರಿಶೀಲಿಸುವಂತೆ ಮತ್ತು ಅಗತ್ಯ ಬದಲಾವಣೆ/ಪರಿಷ್ಕರಣೆಯನ್ನು ಮಾಡುವಂತೆ ಸೂಚಿಸಿದೆ. ಅಲ್ಲದೆ ಸಚಿವಾಲಯ ಎಲ್ಲ ಐಒಎ ಮತ್ತು ಎನ್ಎಸ್ಎಫ್ ಗಳಿಗೆ ಕ್ರೀಡೆಯಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನಯ ತಡೆ ಕುರಿತಂತೆ ಎಲ್ಲಾ ಪದಾಧಿಕಾರಿಗಳು, ತರಬೇತುದಾರರು ಮತ್ತು ಆಡಳಿತ ಸಿಬ್ಬಂದಿ ಹಾಗೂ ಆಟಗಾರರಿಗೆ ಜಾಗೃತಿ ಮೂಡಿಸುವಂತೆ ಸೂಚಿಸಿದೆ.

ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ಆಡಳಿತಕ್ಕೆ ಒಳಪಟ್ಟಿರುವ ಸ್ವಾಯತ್ತ ಸಂಸ್ಥೆ ಭಾರತೀಯ ಕ್ರೀಡಾ ಪ್ರಾಧಿಕಾರ(ಎಸ್ಎಐ) ಎಲ್ಲಾ ಬಾಧ್ಯಸ್ಥರಿಂದ ಏನೇನು ನಿರೀಕ್ಷಿಸಲಾಗುತ್ತದೆ ಮತ್ತು ಸುರಕ್ಷಿತ ಹಾಗೂ ಸಕಾರಾತ್ಮಕ ವಾತಾವರಣ ಖಾತ್ರಿಪಡಿಸಬೇಕು, ಎಲ್ಲಾ ಕಾಲದಲ್ಲೂ ಸೂಕ್ತ ನಡವಳಿಕೆ ಪಾಲಿಸಬೇಕು ಮತ್ತು ಕ್ರೀಡಾ ಮೌಲ್ಯಗಳನ್ನು ಎತ್ತಿಹಿಡಿಯಬೇಕು ಹಾಗೂ ಸೂಕ್ತ ನೈತಿಕ ನಡವಳಿಕೆಯನ್ನು ಖಾತ್ರಿಪಡಿಸಬೇಕೆಂದು ಸೂಚಿಸಿದೆ. ಕ್ರೀಡೆಯಲ್ಲಿ ಸುರಕ್ಷಿತ ವಾತಾವರಣವನ್ನು ನಿರ್ಮಿಸಲು ಎಸ್ಎಐ ಆಟಗಾರರಿಗಾಗಿ ದಿನದ 24 ಗಂಟೆ ಕಾರ್ಯ ನಿರ್ವಹಿಸುವ ಸಹಾಯವಾಣಿ ಆರಂಭಿಸಿದೆ. ಎನ್ಎಸ್ಎಫ್ ಗಳಿಗೆ ಈ ಕೆಳಗಿನ ಕ್ರಮಗಳನ್ನು ಪಾಲಿಸುವಂತೆ ಸೂಚಿಸಲಾಗಿದೆ.

  1. ದೇಶೀಯ/ಅಂತಾರಾಷ್ಟ್ರೀಯ ಶಿಬಿರಗಳು ಮತ್ತು ಸ್ಪರ್ಧೆಗಳಲ್ಲಿ ಮಹಿಳಾ ಅಥ್ಲೀಟ್ ಗಳ ತಂಡದ ಭಾಗವಾಗಿ ಮಹಿಳಾ ತರಬೇತುದಾರರು ಕಡ್ಡಾಯವಾಗಿರಬೇಕು.
  2. ಎಲ್ಲಾ ರಾಷ್ಟ್ರೀಯ ತರಬೇತಿ ಶಿಬಿರ ಮತ್ತು ವಿದೇಶಿ ಕ್ರೀಡೆಗಳಲ್ಲಿ ಪಾಲನಾ ಅಧಿಕಾರಿ (ಪುರುಷರು ಮತ್ತು ಮಹಿಳೆಯರನ್ನು ನೇಮಕ ಮಾಡಬೇಕು) ಈ ಪಾಲನಾ ಅಧಿಕಾರಿಯ ಪಾತ್ರ ಮತ್ತು ಹೊಣೆಗಾರಿಕೆಯಲ್ಲಿ ಅವರು ಅಥ್ಲೀಟ್ ಗಳೊಂದಿಗೆ ನಿರಂತಹ ಸಂವಹನ ನಡೆಸುತ್ತಿರಬೇಕು. ಕ್ರೀಡೆಯಲ್ಲಿ ಲೈಂಗಿಕ ದೌರ್ಜನ್ಯವನ್ನು ನಿಯಂತ್ರಿಸಲು ನಿಗದಿಪಡಿಸಿರುವ ಎಸ್ ಒಪಿ ಮಾರ್ಗಸೂಚಿಗಳನ್ನು ಖಾತ್ರಿಪಡಿಸಬೇಕು ಎಂಬುದು ಸೇರಿದೆ. ಈ ಅನುಪಾಲನಾ ಅಧಿಕಾರಿ ಇತರೆ ಕರ್ತವ್ಯಗಳೊಂದಿಗೆ ಯಾವುದೇ ಸದಸ್ಯರು ನಿಯಮ ಉಲ್ಲಂಘನೆ ಬಗ್ಗೆ ಮಾಹಿತಿ ನೀಡಿದರೆ ಅದನ್ನು ಸಂಬಂಧಿಸಿದ ಜವಾಬ್ದಾರಿಯುತ ಅಧಿಕಾರಿಗಳಿಗೆ ಆದಷ್ಟು ಶೀಘ್ರ ಮಾಹಿತಿಯನ್ನು ನೀಡಬೇಕು.
  3. ಯಾವುದೇ ರಾಷ್ಟ್ರೀಯ ತರಬೇತಿ ಶಿಬಿರ ಅಥವಾ ವಿದೇಶಿ ಕ್ರೀಡಾಕೂಟಗಳು ಆರಂಭಕ್ಕೆ ಮುನ್ನ ಉಪಸ್ಥಿತರಿರುವ ಮತ್ತು ನಿಯೋಜಿತ ಅಥ್ಲೀಟ್ ಗಳು, ಕೋಚ್ ಗಳು ಮತ್ತು ನೆರವಿನ ಸಿಬ್ಬಂದಿಗೆ ಜಾಗೃತಿಯನ್ನು ಮೂಡಿಬೇಕು.
  4. ಆಯಾ ಎನ್ಎಸ್ಎಫ್ ಗಳು ರಾಷ್ಟ್ರೀಯ ತರಬೇತಿ ಶಿಬಿರಗಳಲ್ಲಿ ಮಹಿಳಾ ಕೋಚ್ ಗಳು/ನೆರವಿನ ಸಿಬ್ಬಂದಿಯ ಪ್ರಮಾಣವನ್ನು ಹೆಚ್ಚಿಸಬೇಕು.

 

ಕೇಂದ್ರ ಕ್ರೀಡಾ ಮತ್ತು ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರು ರಾಜ್ಯಸಭೆಗೆ ಲಿಖಿತ ರೂಪದಲ್ಲಿ ಇಂದು ಈ ಉತ್ತರ ನೀಡಿದ್ದಾರೆ.

****

NB/SK


 (Release ID: 1941573) Visitor Counter : 432


Read this release in: English , Urdu , Hindi