ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ
azadi ka amrit mahotsav

ರಾಷ್ಟ್ರೀಯ ಹೆದ್ದಾರಿಗಳ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರುವ ಭಾರೀ ಮಳೆಯಿಂದ ಉಂಟಾಗುವ ಸಮಸ್ಯೆಗಳನ್ನು ಮೇಲ್ವಿಚಾರಣೆ ಮಾಡಲು ನಿಯಂತ್ರಣ ಕೊಠಡಿಯ ಸ್ಥಾಪನೆ

Posted On: 28 JUN 2023 7:40PM by PIB Bengaluru

ಮಾನ್ಸೂನ್ ಆರಂಭವಾಗುವ ದೃಷ್ಟಿಯಿಂದ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು  ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಿದೆ.  ಈ ನಿಯಂತ್ರಣ ಕೊಠಡಿಯು  ಮಾನ್ಸೂನ್ ಋತುವಿನಲ್ಲಿ ಇಪ್ಪತ್ತನಾಲ್ಕು ಗಂಟೆ ಕಾರ್ಯನಿರ್ವಹಿಸುತ್ತಿರುತ್ತದೆ (ದೂರವಾಣಿ ಸಂಖ್ಯೆ. 011-23718525,http://https://morth.nic.in).

ದೇಶದ ರಾಷ್ಟ್ರೀಯ ಹೆದ್ದಾರಿಗಳ ಕಾರ್ಯಾಚರಣೆಯ ಮೇಲೆ ಪರಿಣಾಮ ಬೀರುವ ಭಾರೀ ಮಳೆಯಿಂದ ಉಂಟಾಗುವ ತೊಂದರೆಗಳು, ಅಂದರೆ, ಸಂಚಾರ ಅಸ್ತವ್ಯಸ್ತತೆ, ಕಡಿಮೆ ಗೋಚರತೆ ಮತ್ತು ಗುಂಡಿಗಳಿಂದ ಉಂಟಾಗುವ ಅಪಘಾತಗಳು, ನೀರು ನಿಲ್ಲುವುದು, ರಸ್ತೆಯಲ್ಲಿ ಅಡಚಣೆ ಮತ್ತು ಭೂಕುಸಿತ ಇತ್ಯಾದಿಗಳ ಮೇಲ್ವಿಚಾರಣೆಗಾಗಿ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಲಾಗಿದೆ.

ರಾಷ್ಟ್ರೀಯ ಹೆದ್ದಾರಿಗಳ ಕಾರ್ಯಾಚರಣೆಗೆ ಸಂಬಂಧಿಸಿದ ಮಾನ್ಸೂನ್  ಋತುವಿನ ಸಮಸ್ಯೆಗಳಿಗಾಗಿ ಸಾರ್ವಜನಿಕ ಮತ್ತು ಸರ್ಕಾರಿ ಏಜೆನ್ಸಿಗಳಿಂದ ಕರೆಗಳನ್ನು ಸ್ವೀಕರಿಸುವುದು ಮತ್ತು ಎಲೆಕ್ಟ್ರಾನಿಕ್ ಮಾಧ್ಯಮ ವೇದಿಕೆಗಳ ಮೇಲ್ವಿಚಾರಣೆಯನ್ನು ಒಳಗೊಂಡಿರುವ ನಿಯಂತ್ರಣ ಕೊಠಡಿಯ ಕರ್ತವ್ಯಗಳಿಗೆ ಮೀಸಲಾದ ತಂಡಗಳನ್ನು ನಿಯೋಜಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಡೆತಡೆ ಅಥವಾ ಹಾನಿಗೆ ಸಂಬಂಧಿಸಿದ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಲು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ, ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ರಾಷ್ಟ್ರೀಯ ಹೆದ್ದಾರಿಗಳು ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತದ ಸಂಬಂಧಪಟ್ಟ ಪ್ರಾದೇಶಿಕ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಲು  ತಂಡಗಳನ್ನು ನಿಯೋಜಿಸಲಾಗಿದೆ.


 ***




(Release ID: 1936294) Visitor Counter : 101