ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ

ಆಧಾರ್ ಆಧಾರಿತ ಮುಖ ದೃಢೀಕರಣ ವಹಿವಾಟುಗಳು ಮೇ ತಿಂಗಳಿನಲ್ಲಿ ಸಾರ್ವಕಾಲಿಕ ಗರಿಷ್ಠ 10.6 ದಶಲಕ್ಷ ದಾಟಿವೆ

Posted On: 29 JUN 2023 5:10PM by PIB Bengaluru

ಸೇವಾ ವಿತರಣೆಗಾಗಿ ಆಧಾರ್ ಆಧಾರಿತ ಮುಖ ದೃಢೀಕರಣ ವಹಿವಾಟುಗಳು ಕಳೆದ ಮೇ ತಿಂಗಳಿನಲ್ಲಿ ಸಾರ್ವಕಾಲಿಕ ಗರಿಷ್ಠ 10.6 ದಶಲಕ್ಷವನ್ನು ಮುಟ್ಟುವ ಮೂಲಕ 2021 ರ ಅಕ್ಟೋಬರ್‌ನಲ್ಲಿ ಪ್ರಾರಂಭವಾದಾಗಿನಿಂದ ದೃಢವಾದ ವೇಗವನ್ನು ಪಡೆಯುತ್ತಿವೆ.

10 ದಶಲಕ್ಷಕ್ಕಿಂತಲೂ ಹೆಚ್ಚು ಮುಖ ದೃಢೀಕರಣ ವಹಿವಾಟುಗಳು ದಾಖಲಾಗಿರುವುದು ಇದು ಸತತ ಎರಡನೇ ತಿಂಗಳು. ಮುಖದ ದೃಢೀಕರಣ ವಹಿವಾಟುಗಳ ಸಂಖ್ಯೆಯು ಮೇಲ್ಮುಖದ ಹಾದಿಯಲ್ಲಿದೆ ಮತ್ತು ಮೇ ತಿಂಗಳಿನಲ್ಲಿ ಮಾಸಿಕ ಸಂಖ್ಯೆಗಳು ಶೇ.38 ರಷ್ಟು ಹೆಚ್ಚಳವಾಗಿವೆ, ಜನವರಿ 2023 ರಲ್ಲಿ ವರದಿಯಾದ ಇಂತಹ ವಹಿವಾಟುಗಳಿಗೆ ಹೋಲಿಸಿದರೆ, ಈ ಹೆಚ್ಚಳವು ಅದರ ಏರುತ್ತಿರುವ ಬಳಕೆಯನ್ನು ಸೂಚಿಸುತ್ತದೆ.

ಎಐ/ಎಂಎಲ್ ಆಧಾರಿತ ಮುಖ ದೃಢೀಕರಣ ಪರಿಹಾರವನ್ನು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಅಭಿವೃದ್ಧಿಪಡಿಸಿದೆ, ಈಗ ರಾಜ್ಯ ಸರ್ಕಾರದ ಇಲಾಖೆಗಳು, ಕೇಂದ್ರ ಸರ್ಕಾರದಲ್ಲಿನ ಸಚಿವಾಲಯಗಳು ಮತ್ತು ಕೆಲವು ಬ್ಯಾಂಕ್‌ಗಳು ಸೇರಿದಂತೆ 47 ಘಟಕಗಳು ಇದನ್ನು ಬಳಸುತ್ತಿವೆ.

ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯಡಿ ಫಲಾನುಭವಿಗಳನ್ನು ನೋಂದಾಯಿಸಲು ಇದನ್ನು ಬಳಸಲಾಗುತ್ತಿದೆ; ಪ್ರಧಾನಮಂತ್ರಿ ಕಿಸಾನ್ ಯೋಜನೆಯಲ್ಲಿ ಫಲಾನುಭವಿಗಳ ದೃಢೀಕರಣಕ್ಕಾಗಿ ಮತ್ತು ಪಿಂಚಣಿದಾರರಿಂದ ಮನೆಯಲ್ಲಿ ಡಿಜಿಟಲ್ ಜೀವಚನ ಪ್ರಮಾಣಪತ್ರಗಳನ್ನು ರಚಿಸಲು ಬಳಸಲಾಗುತ್ತಿದೆ. ಹಲವಾರು ಸರ್ಕಾರಿ ಇಲಾಖೆಗಳಲ್ಲಿ ಸಿಬ್ಬಂದಿ ಹಾಜರಾತಿಯನ್ನು ಗುರುತಿಸಲು ಮತ್ತು ಕೆಲವು ಪ್ರಮುಖ ಬ್ಯಾಂಕ್‌ಗಳಲ್ಲಿ ತಮ್ಮ ವ್ಯವಹಾರ ಮಧ್ಯವರ್ತಿಗಳ ಮೂಲಕ ಬ್ಯಾಂಕ್ ಖಾತೆಗಳನ್ನು ತೆರೆಯಲು ಇದನ್ನು ಬಳಸಲಾಗುತ್ತಿದೆ.

ಹಲವಾರು ರಾಜ್ಯಗಳ ಪೈಕಿ, ಆಂಧ್ರಪ್ರದೇಶ ಸರ್ಕಾರವು ಜಗನ್ನ ವಿದ್ಯಾ ದೀವೆನಾ ಯೋಜನೆಯ ಅರ್ಹ ಉನ್ನತ ಶಿಕ್ಷಣ ವಿದ್ಯಾರ್ಥಿಗಳಿಗೆ ಶುಲ್ಕ ಮರುಪಾವತಿಗಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳ ಮಹಿಳೆಯರಿಗೆ ಪ್ರಯೋಜನಗಳ ವಿತರಣೆಗಾಗಿ ಇಬಿಸಿ ನೆಸ್ತಮ್ ಯೋಜನೆಯಡಿಯಲ್ಲಿ ಆಧಾರ್ ಆಧಾರಿತ ಮುಖದ ದೃಢೀಕರಣವನ್ನು ಬಳಸುತ್ತಿದೆ.

ಮುಖದ ದೃಢೀಕರಣವು ಬಳಕೆಯ ಸುಲಭತೆ, ವೇಗವಾದ ದೃಢೀಕರಣದಂತಹ ವೈಶಿಷ್ಟ್ಯಗಳನ್ನು ಒದಗಿಸುತ್ತದೆ ಮತ್ತು ಫಿಂಗರ್‌ಪ್ರಿಂಟ್ ಮತ್ತು ಒಟಿಪಿಗಳೊಂದಿಗೆ ದೃಢೀಕರಣದ ಯಶಸ್ಸಿನ ಪ್ರಮಾಣವನ್ನು ಬಲಪಡಿಸಲು ಹೆಚ್ಚುವರಿ ವಿಧಾನವಾಗಿ ಆದ್ಯತೆ ನೀಡಲಾಗುತ್ತಿದೆ. ಇದು ದೃಢೀಕರಣಕ್ಕಾಗಿ ಲೈವ್ ಚಿತ್ರಗಳನ್ನು ಸೆರೆಹಿಡಿಯುತ್ತದೆ. ಸಮಾಜ ವಿರೋಧಿ ಶಕ್ತಿಗಳ ಯಾವುದೇ ವೀಡಿಯೊ ದಾಳಿಗಳು ಮತ್ತು ಸ್ಥಿರಚಿತ್ರಗಳ ದೃಢೀಕರಣ ಪ್ರಯತ್ನಗಳಿಂದ ಇದು ಸುರಕ್ಷಿತವಾಗಿದೆ.

ಮುಖದ ದೃಢೀಕರಣವು ಬಲವಾದ ಪರ್ಯಾಯವಾಗಿ ಕಾರ್ಯನಿರ್ವಹಿಸುತ್ತಿದೆ ಮತ್ತು ಕೈಯಿಂದ ಮಾಡುವ ಕೆಲಸ ಅಥವಾ ಆರೋಗ್ಯದಂತಹ ಸಮಸ್ಯೆಗಳಿರುವ ಹಿರಿಯ ನಾಗರಿಕರಿಗೆ ಮತ್ತು ಫಿಂಗರ್‌ಪ್ರಿಂಟ್‌ಗಳ ಗುಣಮಟ್ಟದಲ್ಲಿ ಸಮಸ್ಯೆಗಳನ್ನು ಹೊಂದಿರುವವರಿಗೆ ಸಹಾಯ ಮಾಡುತ್ತದೆ. ಮೇ ತಿಂಗಳಲ್ಲಿ ಯುಐಡಿಎಐ 14.86 ದಶಲಕ್ಷ ಆಧಾರ್ ಅಪ್‌ಡೇಟ್‌ಗಳನ್ನು ನಿವಾಸಿಗಳ ಕೋರಿಕೆಯ ಮೇರೆಗೆ ಕಾರ್ಯಗತಗೊಳಿಸಿದೆ.

ಆಧಾರ್ ಇ-ಕೆವೈಸಿ ಸೇವೆಯು ಬ್ಯಾಂಕಿಂಗ್ ಮತ್ತು ಬ್ಯಾಂಕಿಂಗ್‌ಯೇತರ ಹಣಕಾಸು ಸೇವೆಗಳ ವಲಯಗಳಲ್ಲಿ ಪಾರದರ್ಶಕ ಮತ್ತು ಸುಧಾರಿತ ಗ್ರಾಹಕರ ಅನುಭವವನ್ನು ಒದಗಿಸುವ ಮೂಲಕ ಮತ್ತು ಸುಲಭವಾಗಿ ವ್ಯವಹಾರ ಮಾಡಲು ಸಹಾಯ ಮಾಡುವ ಮೂಲಕ ಪ್ರಮುಖ ಪಾತ್ರವನ್ನು ವಹಿಸುತ್ತಿದೆ. ಮೇ ತಿಂಗಳೊಂದರಲ್ಲೇ 254 ದಶಲಕ್ಷಕ್ಕಿಂತಲೂ ಹೆಚ್ಚು ಇ-ಕೆವೈಸಿ ವಹಿವಾಟು ನಡೆಸಲಾಗಿದೆ.

ಮೇ 2023 ರ ಅಂತ್ಯದ ವೇಳೆಗೆ, ಆಧಾರ್ ಇ-ಕೆವೈಸಿ ವಹಿವಾಟುಗಳ ಒಟ್ಟು ಸಂಖ್ಯೆ 15.2 ಶತಕೋಟಿ ದಾಟಿದೆ. ಇ-ಕೆವೈಸಿಯ ಸುಧಾರಿತ ಅಳವಡಿಕೆಯು ಹಣಕಾಸು ಸಂಸ್ಥೆಗಳು, ಟೆಲಿಕಾಂ ಸೇವಾ ಪೂರೈಕೆದಾರರಂತಹ ಘಟಕಗಳಿಗೆ ಗ್ರಾಹಕರನ್ನು ಸೇರಿಸಿಕೊಳ್ಳುವ ವೆಚ್ಚವನ್ನು ಗಣನೀಯವಾಗಿ ಕಡಿಮೆ ಮಾಡುತ್ತಿದೆ.

ಇದು ಕೊನೆಯ ಮೈಲಿಯ ಬ್ಯಾಂಕಿಂಗ್‌ ಒದಗಿಸುವ AePS ಆಗಿರಲಿ, ಗುರುತಿನ ಪರಿಶೀಲನೆಯ ಇ-ಕೆವೈಸಿ ಆಗಿರಲಿ, ನೇರ ಹಣ ವರ್ಗಾವಣೆ ಅಥವಾ ದೃಢೀಕರಣಕ್ಕಾಗಿ ಆಧಾರ್ ಡಿಬಿಟಿಯನ್ನು ಸಕ್ರಿಯಗೊಳಿಸಿದೆ, ಭಾರತದ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯದ ಅಡಿಪಾಯ ಮತ್ತು ಉತ್ತಮ ಆಡಳಿತದ ಸಾಧನವಾದ ಆಧಾರ್ ನಾಗರಿಕರ ಜೀವನವನ್ನು ಸುಲಭಗೊಳಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿದೆ.

****



(Release ID: 1936277) Visitor Counter : 170