ಕಲ್ಲಿದ್ದಲು ಸಚಿವಾಲಯ
azadi ka amrit mahotsav

ಭಾರತದಲ್ಲಿ ವಾಣಿಜ್ಯ ಕಲ್ಲಿದ್ದಲು ಗಣಿಗಳಿಗೆ ಧನಸಹಾಯ

Posted On: 26 JUN 2023 6:09PM by PIB Bengaluru

ಭಾರತದ ಇಂಧನ ಬೇಡಿಕೆಗಳನ್ನು ಪೂರೈಸಲು ಮತ್ತು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಆತ್ಮನಿರ್ಭರ ಭಾರತ್ ಯೋಜನೆಯನ್ನು ಸಕ್ರಿಯವಾಗಿ ಮುಂದುವರಿಸಲು ಹಾಗೂ ಸಹಾಯ ಮಾಡುವ ಬದ್ಧತೆಯ ಭಾಗವಾಗಿ, "ಭಾರತದಲ್ಲಿ ವಾಣಿಜ್ಯ ಕಲ್ಲಿದ್ದಲು ಗಣಿಗಳ ನಿಧಿಯನ್ನು" ಉತ್ತೇಜಿಸಲು ಕಲ್ಲಿದ್ದಲು ಸಚಿವಾಲಯವು ನವದೆಹಲಿಯಲ್ಲಿ ವಿಶೇಷ ಸಮಾಲೋಚನಾ ಸಭೆಯನ್ನು ಆಯೋಜಿಸಿತು. ಕಲ್ಲಿದ್ದಲು ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಮತ್ತು ನಾಮನಿರ್ದೇಶಿತ ಪ್ರಾಧಿಕಾರದ ಶ್ರೀ ಎಂ. ನಾಗರಾಜು ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಲ್ಲಿದ್ದಲು ಗಣಿ ಹಂಚಿಕೆದಾರರು ಮತ್ತು ಬ್ಯಾಂಕ್ಗಳು/ಹಣಕಾಸು ಸಂಸ್ಥೆಗಳ (ಎಫ್ಐ) ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ಶ್ರೀ ಎಂ. ನಾಗರಾಜು ಮಾತನಾಡಿ, ಜಾಗತಿಕ ಉದ್ಯಮದ ಸನ್ನಿವೇಶ ಮತ್ತು ಭಾರತದಲ್ಲಿ ಕಲ್ಲಿದ್ದಲು ಕ್ಷೇತ್ರದ ದೃಷ್ಟಿಕೋನವನ್ನು ಗಮನದಲ್ಲಿರಿಸಿಕೊಂಡು ಕಲ್ಲಿದ್ದಲು ಗಣಿಗಳಿಗೆ ಹಣಕಾಸು ಒದಗಿಸುವ ಸನ್ನಿಹಿತದ ಬಗ್ಗೆ ಹೇಳಿದರು. ಇಲ್ಲಿಯವರೆಗೆ ಹರಾಜಾದ 87 ಗಣಿಗಳಲ್ಲಿ ಕೆಲವು ಮಾತ್ರ ಹಣಕಾಸಿನ ಬೆಂಬಲವನ್ನು ಪಡೆಯುವಲ್ಲಿ ಯಶಸ್ವಿಯಾಗಿವೆ ಮತ್ತು ಕಲ್ಲಿದ್ದಲು ವಲಯದಲ್ಲಿ ಹಣಕಾಸು ಒದಗಿಸಲು ಬ್ಯಾಂಕ್ಗಳು/ಎಫ್ಐಗಳು ಮುಂದಾಗಬೇಕು ಎಂದು ತಿಳಿಸಿದರು.

ವಾಣಿಜ್ಯ ಕಲ್ಲಿದ್ದಲು ಗಣಿ ಹರಾಜು ಪ್ರಕ್ರಿಯೆ ಮತ್ತು ವಾಣಿಜ್ಯ ಕಲ್ಲಿದ್ದಲು ಗಣಿಗಳಿಗೆ ಧನಸಹಾಯ ಕುರಿತು ಕಲ್ಲಿದ್ದಲು ಸಚಿವಾಲಯದ ನಿರ್ದೇಶಕರಾದ ಶ್ರೀ ಅಜಿತೇಶ್ ಕುಮಾರ್ ಮತ್ತು ವಾಣಿಜ್ಯ ಕಲ್ಲಿದ್ದಲು ನಿಧಿ ನೀತಿಯ ಕುರಿತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಪಿಎಫ್ಎಸ್ಬಿಯು) ಸಿಜಿಎಂ ಶ್ರೀ ಅಶೋಕ್ ಶರ್ಮಾ ಅವರು ವಿವರವಾದ ಮಾಹಿತಿಯನ್ನು ನೀಡಿದರು. ಹಣಕಾಸು ಸೇವೆಗಳ ಇಲಾಖೆ (DFS) ನಿರ್ದೇಶಕರಾದ ಡಾ. ಸಂಜಯ್ ಕುಮಾರ್  ಸಭೆಯನ್ನು ಉದ್ದೇಶಿಸಿ ಮಾತನಾಡಿ, ಕಲ್ಲಿದ್ದಲು ಗಣಿ ನಿಧಿಯನ್ನು ಸುಗಮಗೊಳಿಸಲು ಹಣಕಾಸು ಸಚಿವಾಲಯದ ಪ್ರಸ್ತಾವಕ್ಕೆ ಬೆಂಬಲ ವ್ಯಕ್ತಪಡಿಸಿದರು.

ವಾಣಿಜ್ಯ ಕಲ್ಲಿದ್ದಲು ಗಣಿಗಾರಿಕೆಯ ಹಣಕಾಸು ಮತ್ತು ಎಲ್ಲ ಮಧ್ಯಸ್ಥಗಾರರಿಂದ ಪ್ರತಿಕ್ರಿಯೆ/ಸಲಹೆಗಳನ್ನು ಪಡೆಯಲು ಸಭೆಯಲ್ಲಿ ಹೆಚ್ಚು ಆದ್ಯತೆ ನೀಡಲಾಗಿತ್ತು. ಕಲ್ಲಿದ್ದಲು ಗಣಿಗಾರಿಕೆಗೆ ಭಾರಿ ಬಂಡವಾಳ ಬೇಕಾಗಿರುವುದರಿಂದ  ಹಾಗೂ ಕಲ್ಲಿದ್ದಲು ಗಣಿ ಹಂಚಿಕೆದಾರರು ಹಣಕಾಸಿನ ನೆರವು ಪಡೆಯುವಲ್ಲಿ ಎದುರಿಸುತ್ತಿರುವ ಸಂಭವನೀಯ ಅಡಚಣೆಗಳ ಬಗ್ಗೆ ಮಾಹಿತಿ ಪಡೆಯಲಾಯಿತು. (ಬಿಜಿ ನೀಡಿಕೆಯಲ್ಲಿ ಹೆಚ್ಚಿನ ನಗದು ಮಾರ್ಜಿನ್, ಕಟ್ಟುನಿಟ್ಟಾದ ಪೂರ್ವ-ವಿತರಣಾ ಪರಿಸ್ಥಿತಿಗಳು, ಬ್ಯಾಂಕಿಂಗ್ ಸಭಾಗಿತ್ವದಲ್ಲಿ ಕಲ್ಲಿದ್ದಲು ವಲಯದ ಋಣಾತ್ಮಕ ದೃಷ್ಟಿಕೋನ ಇತ್ಯಾದಿ.) ಮತ್ತು ಕೆಲವು ವಿನಾಯಿತಿಗಳನ್ನು  ಕೋರಲಾಯಿತು. ಈ ವಿಷಯದ ಬಗ್ಗೆ ಬ್ಯಾಂಕುಗಳು ತಮ್ಮ ಅಭಿಪ್ರಾಯವನ್ನು ಮಂಡಿಸಿದವು. ವಿವರವಾದ ವ್ಯವಹಾರ ಯೋಜನೆಯ ಉಪಸ್ಥಿತಿಯಲ್ಲಿ ಇತರ ವಿಷಯಗಳ ಜೊತೆಗೆ, ಯೋಜನೆಯ ಕಾರ್ಯಸಾಧ್ಯತೆ, ಇಕ್ವಿಟಿ ಇನ್ಫ್ಯೂಷನ್ ಇತ್ಯಾದಿಗಳು ಹಾಗೂ ಕಲ್ಲಿದ್ದಲು ಗಣಿಗಳಿಗೆ ಹಣಕಾಸು ಒದಗಿಸುವ ಕುರಿತು ಸಮಗ್ರವಾಗಿ ಸಮಾಲೋಚಿಸಲಾಯಿತು. ಖಾತರಿಪಡಿಸಲಾಯಿತು.

ನಾಮನಿರ್ದೇಶಿತ ಪ್ರಾಧಿಕಾರವು ಭಾರತದಲ್ಲಿ ಕಲ್ಲಿದ್ದಲು ಹಣಕಾಸು ಸುಲಭಗೊಳಿಸಲು ಕೆಲವು ಮಾಹಿತಿ ಸೂಚಿಸಿದೆ, ಉದಾಹರಣೆಗೆ, ಬ್ಯಾಂಕ್ಗಳು/ಎಫ್ಐಗಳು ಕಲ್ಲಿದ್ದಲು ಗಣಿ ಹಣಕಾಸುಗಾಗಿ ನೋಡಲ್ ಅಧಿಕಾರಿಯನ್ನು ನೇಮಿಸಬಹುದು ಮತ್ತು ವಿವರವಾದ ನೀತಿಗಳನ್ನು ಸ್ಥಾಪಿಸಬಹುದು, ಬ್ಯಾಂಕ್ಗಳು/ಎಫ್ಐಗಳು ಆರಂಭಿಕ ಹಂತಗಳಲ್ಲಿ ಭಾಗವಹಿಸುವಿಕೆಯನ್ನು ಅನ್ವೇಷಿಸಲು (ವೆಸ್ಟಿಂಗ್ ಆರ್ಡರ್ /EC/FC ಮತ್ತು ಇತರ ಅನುಮೋದನೆಗಳು) ಮತ್ತು ಕಲ್ಲಿದ್ದಲು ಗಣಿ ಹಂಚಿಕೆದಾರರು ಹಣಕಾಸು ಅಗತ್ಯಗಳಿಗಾಗಿ ಬ್ಯಾಂಕುಗಳನ್ನು ಸಂಪರ್ಕಿಸುವ ಮೊದಲು ಯೋಜನೆಯ ಕಾರ್ಯಸಾಧ್ಯತೆಯ ಬಗ್ಗೆ ಗಮನಹರಿಸಲಾಯಿತು.

***


(Release ID: 1935559) Visitor Counter : 108