ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ
azadi ka amrit mahotsav g20-india-2023

​​​​​​​ಮೇ 2023ರಲ್ಲಿ ಭಾರತದ ಒಟ್ಟಾರೆ ರಫ್ತು 60.29 ಶತಕೋಟಿ ಅಮೆರಿಕನ್‌ ಡಾಲರ್‌ ದಾಖಲಾಗಿದೆ


ಎಲೆಕ್ಟ್ರಾನಿಕ್ ಸರಕುಗಳ ರಫ್ತು ಮೇ 2023ರಲ್ಲಿ 73.96% ಮತ್ತು ಏಪ್ರಿಲ್-ಮೇ 2023ರಲ್ಲಿ ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ 48.06% ರಷ್ಟು ಗಮನಾರ್ಹ ಏರಿಕೆ ಕಂಡಿದೆ

ಕೃಷಿ ರಫ್ತು ದೃಢವಾದ ಬೆಳವಣಿಗೆಯನ್ನು ದಾಖಲಿಸಿದೆ; ಸಂಬಾರ ಪದಾರ್ಥಗಳ ರಫ್ತು ಏಪ್ರಿಲ್-ಮೇ 2022ಕ್ಕೆ ಹೋಲಿಸಿದರೆ 2023ರ ಏಪ್ರಿಲ್-ಮೇನಲ್ಲಿ 31.81% ರಷ್ಟು ಹೆಚ್ಚಾದರೆ, ಅಕ್ಕಿ ರಫ್ತು ಏಪ್ರಿಲ್-ಮೇ 2022ಕ್ಕೆ ಹೋಲಿಸಿದರೆ 2023ರ ಏಪ್ರಿಲ್-ಮೇನಲ್ಲಿ 19%ರಷ್ಟು ಏರಿಕೆಯಾಗಿದೆ.

2022ರ ಏಪ್ರಿಲ್-ಮೇ ತಿಂಗಳಿಗೆ ಹೋಲಿಸಿದರೆ 2023ರ ಏಪ್ರಿಲ್-ಮೇ ತಿಂಗಳಲ್ಲಿ ತೈಲ ಹಿಂಡಿ ರಫ್ತು 74.33%ರಷ್ಟು ಹೆಚ್ಚಾಗಿದೆ

ಸೆರಾಮಿಕ್ ಉತ್ಪನ್ನಗಳು ಮತ್ತು ಗ್ಲಾಸ್‌ವೇರ್‌ ರಫ್ತು ಮೇ 2023ರಲ್ಲಿ 17.36% ರಷ್ಟಿದ್ದು, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಏಪ್ರಿಲ್-ಮೇ 2023ರಲ್ಲಿ ಒಟ್ಟಾರೆಯಾಗಿ 17.29% ರಷ್ಟು ಗಮನಾರ್ಹ ಬೆಳವಣಿಗೆಗೆ ಸಾಕ್ಷಿಯಾಗಿದೆ

ಏಪ್ರಿಲ್-ಮೇ 2022ರ ಅವಧಿಯಲ್ಲಿ ವ್ಯಾಪಾರ ಸಮತೋಲನ ಗಮನಾರ್ಹವಾಗಿ ಸುಧಾರಿಸಿದೆ

ಏಪ್ರಿಲ್-ಮೇ 2023ರ ಒಟ್ಟಾರೆ ವ್ಯಾಪಾರ ಕೊರತೆಯನ್ನು 13.28 ಶತಕೋಟಿ ಅಮೆರಿಕನ್‌ ಡಾಲರ್‌ ಎಂದು ಅಂದಾಜಿಸಲಾಗಿದ್ದು, 2022ರ ಏಪ್ರಿಲ್‌-ಮೇ ಅವಧಿಯಲ್ಲಿದ್ದ 20.56 ಶತಕೋಟಿ ಅಮೆರಿಕನ್‌ ಡಾಲರ್ಗೆ ಹೋಲಿಸಿದರೆ, ಇದು (-) 35.41% ಕುಸಿತಕ್ಕೆ ಸಾಕ್ಷಿಯಾಗಿದೆ

ಸರಕುಗಳ ವ್ಯಾಪಾರ ಕೊರತೆಯು 2022ರ ಏಪ್ರಿಲ್-ಮೇ ಅವಧಿಯಲ್ಲಿದ್ದ 40.48 ಬಿಲಿಯನ್ ಅಮೆರಿಕನ್ ಡಾಲರ್ಗೆ ಹೋಲಿಸಿದರೆ 2023ರ ಏಪ್ರಿಲ್-ಮೇ ಅವಧಿಯಲ್ಲಿ 37.26 ಶತಕೋಟಿ ಅಮೆರಿಕನ್ ಡಾಲರ್ ಆಗಿದ್ದು, (-) 7.95 ಪ್ರತಿಶತದಷ್ಟು ಕುಸಿತ ಕಂಡಿದೆ

Posted On: 15 JUN 2023 5:12PM by PIB Bengaluru

2023ರ ಮೇನಲ್ಲಿ* ಭಾರತದ ಒಟ್ಟಾರೆ ರಫ್ತು (ಸರಕು ಮತ್ತು ಸೇವೆಗಳು ಸಂಯೋಜಿತ) 60.29 ಶತಕೋಟಿ ಅಮೆರಿಕನ್‌ ಡಾಲರ್‌ ಎಂದು ಅಂದಾಜಿಸಲಾಗಿದ್ದು, ಇದು ಮೇ 2022ಕ್ಕೆ ಹೋಲಿಸಿದರೆ (-) 5.99 ಪ್ರತಿಶತದಷ್ಟು ನಕಾರಾತ್ಮಕ ಬೆಳವಣಿಗೆಗೆ ಸಾಕ್ಷಿಯಾಗಿದೆ. 2023ರ ಮೇನಲ್ಲಿ* ಭಾರತದ ಒಟ್ಟಾರೆ ಆಮದು 70.64 ಶತಕೋಟಿ ಅಮೆರಿಕನ್‌ ಡಾಲರ್‌ ಎಂದು ಅಂದಾಜಿಸಲಾಗಿದ್ದು, ಇದು ಮೇ 2022ಕ್ಕೆ ಹೋಲಿಸಿದರೆ (-) 7.45 ರಷ್ಟು ನಕಾರಾತ್ಮಕ ಬೆಳವಣಿಗೆಯನ್ನು ಪ್ರದರ್ಶಿಸಿದೆ.

ಕೋಷ್ಟಕ 1: ಮೇ 2023 ರಲ್ಲಿ ವ್ಯಾಪಾರ*

 

 

ಮೇ 2023

(ಶತಕೋಟಿ ಡಾಲರ್‌ಗಳಲ್ಲಿ)

ಮೇ 2022

(ಶತಕೋಟಿ ಡಾಲರ್‌ಗಳಲ್ಲಿ)

ಸರಕುಗಳು

ರಫ್ತು

34.98

39.00

ಆಮದುಗಳು

57.10

61.13

ಸೇವೆಗಳು*

ರಫ್ತು

25.30

25.13

ಆಮದುಗಳು

13.53

15.20

ಒಟ್ಟಾರೆ ವ್ಯಾಪಾರ

(ಸರಕು +ಸೇವೆಗಳು)*

ರಫ್ತು

60.29

64.13

ಆಮದುಗಳು

70.64

76.32

ವ್ಯಾಪಾರ ಸಮತೋಲನ

-10.35

-12.20

 

 

 

 

 

 

 

 

 

 

 

 

 

 

 

 

* ಗಮನಿಸಿ: ಆರ್‌ಬಿಐ ಬಿಡುಗಡೆ ಮಾಡಿದ ಸೇವಾ ವಲಯದ ಇತ್ತೀಚಿನ ದತ್ತಾಂಶವು ಏಪ್ರಿಲ್ 2023 ಅವಧಿಯದ್ದಾಗಿದೆ. ಮೇ 2023ರ ದತ್ತಾಂಶವು ಒಂದು ಅಂದಾಜು, ಇದನ್ನು ಆರ್‌ಬಿಐನ ಮುಂದಿನ ಮಾಹಿತಿ ಬಿಡುಗಡೆಯ ಆಧಾರದ ಮೇಲೆ ಪರಿಷ್ಕರಿಸಲಾಗುವುದು. (ii) ಏಪ್ರಿಲ್-ಮೇ 2022 ರ ದತ್ತಾಂಶವನ್ನು ತ್ರೈಮಾಸಿಕ ಪಾವತಿಗಳ ಸಮತೋಲನ ದತ್ತಾಂಶವನ್ನು ಬಳಸಿಕೊಂಡು ಪ್ರೊ-ರಾಟಾ ಆಧಾರದ ಮೇಲೆ ಪರಿಷ್ಕರಿಸಲಾಗಿದೆ


ಚಿತ್ರ 1: ಮೇ 2023 ರಲ್ಲಿ ಒಟ್ಟಾರೆ ವ್ಯಾಪಾರ*

ಏಪ್ರಿಲ್-ಮೇ 2023ರಲ್ಲಿ ಭಾರತದ ಒಟ್ಟಾರೆ ರಫ್ತು (ಸರಕು ಮತ್ತು ಸೇವೆಗಳು ಸಂಯೋಜಿತ) 2022ರ ಏಪ್ರಿಲ್-ಮೇಗೆ ಹೋಲಿಸಿದರೆ (-) 5.48 ಶೇಕಡಾ ನಕಾರಾತ್ಮಕ ಬೆಳವಣಿಗೆಯನ್ನು ಪ್ರದರ್ಶಿಸುತ್ತದೆ ಎಂದು ಅಂದಾಜಿಸಲಾಗಿದೆ. 2023ರ ಏಪ್ರಿಲ್-ಮೇ ತಿಂಗಳಲ್ಲಿ ಒಟ್ಟಾರೆ ಆಮದು 2022ರ ಏಪ್ರಿಲ್-ಮೇಗೆ ಹೋಲಿಸಿದರೆ (-) 9.63 ರಷ್ಟು ನಕಾರಾತ್ಮಕ ಬೆಳವಣಿಗೆಯನ್ನು ಪ್ರದರ್ಶಿಸುತ್ತದೆ ಎಂದು ಅಂದಾಜಿಸಲಾಗಿದೆ.

 

ಕೋಷ್ಟಕ 2: 2023ರ ಏಪ್ರಿಲ್-ಮೇ ವ್ಯಾಪಾರ*

 

 

ಏಪ್ರಿಲ್-ಮೇ 2023

(ಶತಕೋಟಿ ಅಮೆರಿಕನ್‌ ಡಾಲರ್‌)

ಏಪ್ರಿಲ್-ಮೇ 2022

(ಶತಕೋಟಿ ಅಮೆರಿಕನ್‌ ಡಾಲರ್‌)

ಸರಕುಗಳು

ರಫ್ತು

69.72

78.70

ಆಮದುಗಳು

106.99

119.18

ಸೇವೆಗಳು*

ರಫ್ತು

51.14

49.17

ಆಮದುಗಳು

27.16

29.25

ಒಟ್ಟಾರೆ ವ್ಯಾಪಾರ
(ಸರಕು +ಸೇವೆಗಳು)*

ರಫ್ತು

120.87

127.88

ಆಮದುಗಳು

134.15

148.44

ವ್ಯಾಪಾರ ಸಮತೋಲನ

-13.28

-20.56

 

 

 

 

 

 

 

 

 

 

 

 

 

 

 

 

ಚಿತ್ರ 2: 2023ರ ಏಪ್ರಿಲ್-ಮೇ ಅವಧಿಯಲ್ಲಿ ಒಟ್ಟಾರೆ ವ್ಯಾಪಾರ*

ಸರಕುಗಳ ವ್ಯಾಪಾರ

  • ಮೇ 2023 ರಲ್ಲಿ ಸರಕು ರಫ್ತು 34.98 ಶತಕೋಟಿ ಡಾಲರ್‌ ಆಗಿದ್ದು, ಇದಕ್ಕೆ ಹೋಲಿಸಿದರೆ, ಮೇ 2022 ರಲ್ಲಿ 39.00 ಶತಕೋಟಿ ಡಾಲರ್ನಷ್ಟಿತ್ತು.
  • ಮೇ 2023ರಲ್ಲಿ ಸರಕುಗಳ ಆಮದು 57.10 ಶತಕೋಟಿ ಡಾಲರ್‌ ಆಗಿದ್ದು, ಇದಕ್ಕೆ ಹೋಲಿಸಿದರೆ ಮೇ 2022 ರಲ್ಲಿ 61.13 ಶತಕೋಟಿ ಡಾಲರ್ನಷ್ಟಿತ್ತು.

ಚಿತ್ರ 3: ಮೇ 2023 ರಲ್ಲಿ ಸರಕು ವ್ಯಾಪಾರ

 

2023ರ ಏಪ್ರಿಲ್-ಮೇ ಅವಧಿಯಲ್ಲಿ ಸರಕು ರಫ್ತು 69.72 ಶತಕೋಟಿ ಡಾಲರ್ ಆಗಿದ್ದು, 2022ರ ಏಪ್ರಿಲ್-ಮೇ ಅವಧಿಯಲ್ಲಿ 78.70 ಬಿಲಿಯನ್ ಡಾಲರ್ನಷ್ಟಿತ್ತು.

2023ರ ಏಪ್ರಿಲ್-ಮೇ ಅವಧಿಯಲ್ಲಿ ಸರಕುಗಳ ಆಮದು 106.99 ಶತಕೋಟಿ ಡಾಲರ್ ಆಗಿದ್ದು, 2022 ರ ಏಪ್ರಿಲ್-ಮೇ ಅವಧಿಯಲ್ಲಿ ಇದು 119.18 ಶತಕೋಟಿ ಡಾಲರ್‌ ಆಗಿತ್ತು.

2023ರ ಏಪ್ರಿಲ್-ಮೇ ತಿಂಗಳಲ್ಲಿ ಸರಕು ವ್ಯಾಪಾರ ಕೊರತೆಯನ್ನು 37.26 ಶತಕೋಟಿ ಡಾಲರ್ ಎಂದು ಅಂದಾಜಿಸಲಾಗಿದೆ, ಇದು 2022ರ ಏಪ್ರಿಲ್-ಮೇ ಅವಧಿಯಲ್ಲಿ 40.48 ಬಿಲಿಯನ್ ಡಾಲರ್‌ನಷ್ಟಿತ್ತು.

ಚಿತ್ರ 4: 2023ರ ಏಪ್ರಿಲ್-ಮೇ ಅವಧಿಯ ಸರಕು ವ್ಯಾಪಾರ

ಮೇ 2023ರಲ್ಲಿ ಪೆಟ್ರೋಲಿಯಂಯೇತರ ಉತ್ಪನ್ನಗಳು ಮತ್ತು ರತ್ನಗಳೇತರ ಆಭರಣಗಳ ರಫ್ತು 26.22 ಶತಕೋಟಿ ಡಾಲರ್ ಆಗಿದ್ದು, ಮೇ 2022ರಲ್ಲಿ ಈ ಪ್ರಮಾಣ 27.30 ಶತಕೋಟಿ ಡಾಲರ್ನಷ್ಟಿತ್ತು.

ಮೇ 2023ರಲ್ಲಿ ಪೆಟ್ರೋಲಿಯಂಯೇತರ ಉತ್ಪನ್ನಗಳು ಮತ್ತು ರತ್ನಗಳೇತರ ಆಭರಣಗಳ (ಚಿನ್ನ, ಬೆಳ್ಳಿ ಮತ್ತು ಅಮೂಲ್ಯ ಲೋಹಗಳು) ಆಮದು 35.88 ಶತಕೋಟಿ ಡಾಲರ್ ಆಗಿದ್ದು, ಮೇ 2022ರಲ್ಲಿ ಈ ಪ್ರಮಾಣ 35.29 ಶತಕೋಟಿ ಡಾಲರ್ನಷ್ಟಿತ್ತು.

ಕೋಷ್ಟಕ 3: ಮೇ 2023 ರಲ್ಲಿ ಪೆಟ್ರೋಲಿಯಂ, ರತ್ನಗಳು ಮತ್ತು ಆಭರಣಗಳನ್ನು ಹೊರತುಪಡಿಸಿ ವ್ಯಾಪಾರ

      

 

ಮೇ 2023

(ಶತಕೋಟಿ ಅಮೆರಿಕನ್‌ ಡಾಲರ್‌)

ಮೇ 2022

(ಶತಕೋಟಿ ಅಮೆರಿಕನ್‌ ಡಾಲರ್‌)

ಪೆಟ್ರೋಲಿಯಂಯೇತರ ರಫ್ತು

29.04

30.53

ಪೆಟ್ರೋಲಿಯಂಯೇತರ ಆಮದು

41.48

44.51

ಪೆಟ್ರೋಲಿಯಂಯೇತರ ಮತ್ತು ರತ್ನಗಳೇತರ ಮತ್ತು ಆಭರಣ ರಫ್ತು

26.22

27.30

ಪೆಟ್ರೋಲಿಯಂಯೇತರ ಮತ್ತು ರತ್ನಗಳೇತರ ಮತ್ತು ಆಭರಣಗಳ ಆಮದು

35.88

35.29

 

ಗಮನಿಸಿ: ರತ್ನಗಳು ಮತ್ತು ಆಭರಣ ಆಮದುಗಳಲ್ಲಿ ಚಿನ್ನ, ಬೆಳ್ಳಿ ಮತ್ತು ಮುತ್ತುಗಳು, ಅಮೂಲ್ಯ ಮತ್ತು ಅರೆ-ಅಮೂಲ್ಯ ಕಲ್ಲುಗಳು ಸೇರಿವೆ

ಚಿತ್ರ 5: ಮೇ 2023 ರಲ್ಲಿ ಪೆಟ್ರೋಲಿಯಂ ಮತ್ತು ರತ್ನಗಳು ಹಾಗೂ ಆಭರಣಗಳನ್ನು ಹೊರತುಪಡಿಸಿ ವ್ಯಾಪಾರ

2023ರ ಏಪ್ರಿಲ್-ಮೇ ಅವಧಿಯಲ್ಲಿ ಪೆಟ್ರೋಲಿಯಂಯೇತಯರ ಮತ್ತು ರತ್ನಗಳೇತರ ಉತ್ಪನ್ನ ಹಾಗೂ ಆಭರಣಗಳ ರಫ್ತು 52.04 ಶತಕೋಟಿ ಡಾಲರ್ ಆಗಿದ್ದರೆ, 2022ರ ಏಪ್ರಿಲ್-ಮೇ ತಿಂಗಳಲ್ಲಿ ಈ ಪ್ರಮಾಣವು 55.67 ಶತಕೋಟಿ ಡಾಲರ್ ಆಗಿತ್ತು.

ಪೆಟ್ರೋಲಿಯಂಯೇತರ, ರತ್ನಗಳೇತರ ಉತ್ಪನ್ನ ಮತ್ತು ಆಭರಣ (ಚಿನ್ನ, ಬೆಳ್ಳಿ ಮತ್ತು ಅಮೂಲ್ಯ ಲೋಹಗಳು) ಆಮದು 2023ರ ಏಪ್ರಿಲ್-ಮೇ ತಿಂಗಳಲ್ಲಿ 67.36 ಶತಕೋಟಿ ಡಾಲರ್ ಆಗಿದ್ದರೆ, 2022ರ ಏಪ್ರಿಲ್-ಮೇ ತಿಂಗಳಲ್ಲಿ ಇದು 71.29 ಶತಕೋಟಿ ಡಾಲರ್ ಆಗಿತ್ತು.

ಕೋಷ್ಟಕ 4: ಏಪ್ರಿಲ್-ಮೇ 2023 ರ ಅವಧಿಯಲ್ಲಿ ಪೆಟ್ರೋಲಿಯಂ ಮತ್ತು ರತ್ನಗಳು ಹಾಗೂ ಆಭರಣಗಳನ್ನು ಹೊರತುಪಡಿಸಿ ವ್ಯಾಪಾರ

 

ಏಪ್ರಿಲ್-ಮೇ 2023

(ಶತಕೋಟಿ ಅಮೆರಿಕನ್‌ ಡಾಲರ್‌)

ಏಪ್ರಿಲ್-ಮೇ 2022

(ಶತಕೋಟಿ ಅಮೆರಿಕನ್‌ ಡಾಲರ್‌)

ಪೆಟ್ರೋಲಿಯಂಯೇತರ ರಫ್ತು

57.29

62.37

ಪೆಟ್ರೋಲಿಯಂಯೇತರ ಆಮದು

76.19

84.94

ಪೆಟ್ರೋಲಿಯಂಯೇತರ ಮತ್ತು ರತ್ನಗಳಲ್ಲದ ಮತ್ತು ಆಭರಣ ರಫ್ತು

52.04

55.67


  ಗಮನಿಸಿ: ರತ್ನಗಳು ಮತ್ತು ಆಭರಣ ಆಮದುಗಳಲ್ಲಿ ಚಿನ್ನ, ಬೆಳ್ಳಿ ಮತ್ತು ಮುತ್ತುಗಳು, ಅಮೂಲ್ಯ ಮತ್ತು ಅರೆ-ಅಮೂಲ್ಯ ಕಲ್ಲುಗಳು ಸೇರಿವೆ

ಚಿತ್ರ 6: 2023ರ ಏಪ್ರಿಲ್-ಮೇ ಅವಧಿಯಲ್ಲಿ ಪೆಟ್ರೋಲಿಯಂ ಮತ್ತು ರತ್ನಗಳು ಹಾಗೂ ಆಭರಣಗಳನ್ನು ಹೊರತುಪಡಿಸಿ ವ್ಯಾಪಾರ

ಸೇವೆಗಳ ವ್ಯಾಪಾರ

  • ಮೇ 2023ರಲ್ಲಿ ಸೇವೆಗಳ ರಫ್ತಿನ ಅಂದಾಜು ಮೌಲ್ಯವು 25.30 ಶತಕೋಟಿ ಅಮೆರಿಕನ್‌ ಡಾಲರ್‌ನಷ್ಟಿದ್ದು, ಮೇ 2022ರಲ್ಲಿ ಈ ಪ್ರಮಾಣ 25.13 ಶತಕೋಟಿ ಡಾಲರ್‌ ಇತ್ತು.
  • ಮೇ 2023ರಲ್ಲಿ ಸೇವೆಗಳ ಆಮದಿನ ಅಂದಾಜು ಮೌಲ್ಯವು 13.53 ಶತಕೋಟಿ ಡಾಲರ್ ಆಗಿದ್ದು, ಮೇ 2022ರಲ್ಲಿ ಇದು 15.20 ಶತಕೋಟಿ ಡಾಲರ್ನಷ್ಟಿತ್ತು.

ಚಿತ್ರ 7: ಮೇ 2023 ರಲ್ಲಿ ಸೇವಾ ವ್ಯಾಪಾರ*

ಸೇವೆಗಳ ರಫ್ತು ಅಂದಾಜು ಮೌಲ್ಯವು 2022ರ ಏಪ್ರಿಲ್-ಮೇ ಅವಧಿಯಲ್ಲಿ ಇದ್ದ 49.17 ಶತಕೋಟಿ ಡಾಲರ್‌ಗೆ ಹೋಲಿಸಿದರೆ 2023ರ ಏಪ್ರಿಲ್-ಮೇ ಅವಧಿಯಲ್ಲಿ 51.14 ಶತಕೋಟಿ ಡಾಲರ್‌ನಷ್ಟಿದೆ.

2023ರ ಏಪ್ರಿಲ್-ಮೇ ಅವಧಿಯಲ್ಲಿ ಸೇವೆಗಳ ಆಮದಿನ ಅಂದಾಜು ಮೌಲ್ಯವು 27.16 ಶತಕೋಟಿ ಡಾಲರ್ ಇದ್ದು, 2022ರ ಏಪ್ರಿಲ್-ಮೇ ತಿಂಗಳಲ್ಲಿ ಈ ಪ್ರಮಾಣ 29.25 ಶತಕೋಟಿ ಡಾಲರ್ ಆಗಿತ್ತು.

2023ರ ಏಪ್ರಿಲ್-ಮೇ ಅವಧಿಯಲ್ಲಿ ಸೇವೆಗಳ ವ್ಯಾಪಾರ ಹೆಚ್ಚುವರಿಯನ್ನು 23.98 ಶತಕೋಟಿ ಡಾಲರ್ ಎಂದು ಅಂದಾಜಿಸಲಾಗಿದೆ*. 2022ರ ಏಪ್ರಿಲ್-ಮೇ ಅವಧಿಯಲ್ಲಿ ಇದು 19.92 ಶತಕೋಟಿ ಡಾಲರ್ ಇತ್ತು.

ಚಿತ್ರ 8: 2023ರ ಏಪ್ರಿಲ್-ಮೇ ಸೇವಾ ವ್ಯಾಪಾರ

2022-23ರಲ್ಲಿ ಅತ್ಯಂತ ಬಲವಾದ ಬೆಳವಣಿಗೆಗೆ ಸಾಕ್ಷಿಯಾಗಿದ್ದ ಭಾರತದ ವ್ಯಾಪಾರ ಕಾರ್ಯಕ್ಷಮತೆಯು ಕಳೆದ ವರ್ಷದ ಅಧಿಕ ಮೂಲಗಳಿಗೆ ಹೋಲಿಸಿದರೆ ಕುಸಿತದ ಪ್ರವೃತ್ತಿಗಳನ್ನು ಪ್ರದರ್ಶಿಸಿದೆ. ಜಾಗತಿಕ ಸರಕು ರಫ್ತುಗಳಲ್ಲಿನ ಬೆಳವಣಿಗೆಯ ವೇಗವು 2023ರಲ್ಲಿ ಗಮನಾರ್ಹವಾಗಿ ಕಡಿಮೆಯಾಗಿರುವುದು ಇದಕ್ಕೆ ಕಾರಣವಾಗಿದೆ. ನಿರಂತರ ಭೌಗೋಳಿಕ ರಾಜಕೀಯ ಉದ್ವಿಗ್ನತೆ ಹಾಗೂ ಕಠಿಣ ವಿತ್ತೀಯ ಕ್ರಮ ಪ್ರೇರಿತ ಆರ್ಥಿಕ ಹಿಂಜರಿತದ ಭೀತಿಗಳು ಮುಂದುವರಿದ ರಾಷ್ಟ್ರಗಳಲ್ಲಿ ಗ್ರಾಹಕರ ವೆಚ್ಚದಲ್ಲಿ ಕುಸಿತವಾಗಿರುವುದೂ ಇದಕ್ಕೆ ಕಾರಣವಾಗಿದೆ.

2023ರ ಮೇ ತಿಂಗಳಲ್ಲಿ, ಸರಕುಗಳ ರಫ್ತು ಅಡಿಯಲ್ಲಿ, 30 ಪ್ರಮುಖ ವಲಯಗಳ ಪೈಕಿ 13 ವಲಯಗಳು ಕಳೆದ ವರ್ಷದ (ಮೇ 2022) ಅವಧಿಗೆ ಹೋಲಿಸಿದರೆ 2023 ಮೇನಲ್ಲಿ ಸಕಾರಾತ್ಮಕ ಬೆಳವಣಿಗೆಯನ್ನು ಪ್ರದರ್ಶಿಸಿವೆ. ಇವುಗಳಲ್ಲಿ ಎಲೆಕ್ಟ್ರಾನಿಕ್ ಸರಕುಗಳು (73.96%), ಇತರ ಧಾನ್ಯಗಳು (67.96%), ತೈಲ ಹಿಂಡಿ (52.91%), ಮಸಾಲೆ ಪದಾರ್ಥಗಳು (49.84%), ಕಬ್ಬಿಣದ ಅದಿರು (48.26%), ತೈಲ ಬೀಜಗಳು (25.02%), ಹಣ್ಣುಗಳು ಮತ್ತು ತರಕಾರಿಗಳು (19.91%), ಸೆರಾಮಿಕ್ ಉತ್ಪನ್ನಗಳು ಮತ್ತು ಗಾಜಿನ ವಸ್ತುಗಳು (17.36%), ಅಕ್ಕಿ (14.27%), ಚಹಾ (8.81%), ಗೋಡಂಬಿ(2.81%), ಕಾಫಿ(1.71%), ಔಷಧಗಳು(0.78%) ಸೇರಿವೆ.

ಎಲೆಕ್ಟ್ರಾನಿಕ್ ಸರಕುಗಳ ರಫ್ತು 2023ರ ಮೇ ತಿಂಗಳಲ್ಲಿ ಶೇಕಡಾ 73.96 ರಷ್ಟು ಏರಿಕೆಯಾಗಿ 2.42 ಶತಕೋಟಿ ಡಾಲರ್‌ಗೆ ತಲುಪಿದೆ. ಏಪ್ರಿಲ್-ಮೇ 2023ರ ಅವಧಿಯಲ್ಲಿ ಎಲೆಕ್ಟ್ರಾನಿಕ್ ಸರಕುಗಳ ರಫ್ತು 4.54 ಶತಕೋಟಿ ಡಾಲರ್ ಆಗಿದ್ದು, 2022ರ ಏಪ್ರಿಲ್-ಮೇ ಅವಧಿಯಲ್ಲಿ ಇದ್ದ 3.06 ಶತಕೋಟಿ ಡಾಲರ್‌ಗೆ ಹೋಲಿಸಿದರೆ, ಶೇಕಡಾ 48.06 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ.

ಎಲೆಕ್ಟ್ರಾನಿಕ್ಸ್, ಮೊಬೈಲ್ ಉತ್ಪಾದನೆ, ಔಷಧ ಇತ್ಯಾದಿಗಳಲ್ಲಿ ಹೆಚ್ಚಿನ ಹೂಡಿಕೆಗೆ ಅನುವು ಮಾಡಿಕೊಡುವ ನೀತಿಗಳನ್ನು ಸಕ್ರಿಯಗೊಳಿಸಿರುವುದು ಈ ಕ್ಷೇತ್ರಗಳಲ್ಲಿ ಕಂಡುಬಂದ ಬೆಳವಣಿಗೆಗೆ ಕಾರಣವಾಗಿದೆ.

ಕಬ್ಬಿಣದ ಅದಿರಿನ ಮೇಲಿನ ಸುಂಕ ಹಿಂತೆಗೆದುಕೊಂಡಿದ್ದರ ಪರಿಣಾಮವು ಭಾರತದ ಸರುಕುಗಳ ರಫ್ತಿನಲ್ಲಿ ಗೋಚರಿಸಿದೆ. ಇದು 2022ರ ಇದೇ ತಿಂಗಳಿಗೆ ಹೋಲಿಸಿದರೆ 2023ರ ಮೇ ತಿಂಗಳಲ್ಲಿ 48.26 ಪ್ರತಿಶತದಷ್ಟು ಸಕಾರಾತ್ಮಕ ಬೆಳವಣಿಗೆಗೆ ಸಾಕ್ಷಿಯಾಗಿದೆ.

ಪ್ರಮುಖ ಆರ್ಥಿಕತೆಗಳಲ್ಲಿನ ಆರ್ಥಿಕ ಹಿಂಜರಿತದ ಪರಿಣಾಮಗಳಿಂದಾಗಿ ಬೇಡಿಕೆ ಕಡಿಮೆಯಾದ ಕಾರಣ ಜವಳಿ, ಪ್ಲಾಸ್ಟಿಕ್ ಮತ್ತು ಲಿನೋಲಿಯಂ ರಫ್ತುಗಳ ಕುಸಿತವು ಮೇ 2023 ರಲ್ಲಿ ಮುಂದುವರಿದಿತ್ತು.

ವಿಶ್ವ ವ್ಯಾಪಾರ ಸಂಸ್ಥೆಯ(ಡಬ್ಲ್ಯುಟಿಒ) ವ್ಯಾಪಾರ ಬೆಳವಣಿಗೆಯ ಮುನ್ಸೂಚನೆಯನ್ನು ಹಿಂದಿನ ಅಂದಾಜಾದ ಶೇ. ರಿಂದ ಶೇ.1.7% ಕ್ಕೆ ಪರಿಷ್ಕರಿಸಲಾಗಿದೆ. ಜುಲೈ-ಆಗಸ್ಟ್ 2023 ರಿಂದ ಬೇಡಿಕೆ ಚೇತರಿಕೆ ನಿರೀಕ್ಷಿಸಲಾಗಿದೆ.

ಸರಕು ಆಮದಿನ ಅಡಿಯಲ್ಲಿ, 30 ಪ್ರಮುಖ ವಲಯಗಳ ಪೈಕಿ 16 ವಲಯಗಳು 2023ರ ಮೇನಲ್ಲಿ ನಕಾರಾತ್ಮಕ ಬೆಳವಣಿಗೆಯನ್ನು ಪ್ರದರ್ಶಿಸಿವೆ. ಇವುಗಳಲ್ಲಿ ಬೆಳ್ಳಿ(-93.92%), ಗಂಧಕ ಮತ್ತು ಸಂಸ್ಕರಿಸದ ಕಬ್ಬಿಣದ
ಪೈರೈಟ್ಸ್(-81.88%), ಕಚ್ಚಾ ಹತ್ತಿ ಮತ್ತು ತ್ಯಾಜ್ಯ(-39.81%), ಚಿನ್ನ(-38.71%), ಸಸ್ಯಜನ್ಯ ತೈಲ(-33.02%), ಮುತ್ತುಗಳು, ಅಮೂಲ್ಯ ಮತ್ತು ಅರೆ-ಅಮೂಲ್ಯ ಕಲ್ಲುಗಳು(-31.62%), ಸಾವಯವ ಮತ್ತು ಅಜೈವಿಕ ರಾಸಾಯನಿಕಗಳು(-20). ಕಲ್ಲಿದ್ದಲು, ಕೋಕ್‌ ಮತ್ತು ಬ್ರಿಕೆಟ್ಸ್‌ ಇತ್ಯಾದಿ (-16.88%), ಸಾರಿಗೆ
ಉಪಕರಣಗಳು(-12.85%), ಜವಳಿ ನೂಲು ಬಟ್ಟೆ, ಸಿದ್ಧಪಡಿಸಿದ ವಸ್ತುಗಳು (-11.93%), ಕೃತಕ ರೆಸಿನ್‌ಗಳು, ಪ್ಲಾಸ್ಟಿಕ್ ವಸ್ತುಗಳು, ಇತ್ಯಾದಿ(-9.17%), ತಿರುಳು ಮತ್ತು ತ್ಯಾಜ್ಯ ಕಾಗದ(-8.4%), ಯೋಜನಾ ಸರಕುಗಳು(-6.04%), ಪೆಟ್ರೋಲಿಯಂ, ಕಚ್ಚಾತೈಲ ಮತ್ತು ಉತ್ಪನ್ನಗಳು(-5.97%), ಮರ ಮತ್ತು ಮರದ ಉತ್ಪನ್ನಗಳು(-3.4%) ಮತ್ತು ಲೋಹೀಯ ಅದಿರುಗಳು ಮತ್ತು ಇತರ ಖನಿಜಗಳು(-0.58%) ಸೇರಿವೆ.

2023ರ ಏಪ್ರಿಲ್-ಮೇ ಅವಧಿಯಲ್ಲಿ, ಸರಕು ರಫ್ತು ಅಡಿಯಲ್ಲಿ, 30 ಪ್ರಮುಖ ವಲಯಗಳ ಪೈಕಿ 13 ವಲಯಗಳು ಏಪ್ರಿಲ್-ಮೇ 2022ಕ್ಕೆ ಹೋಲಿಸಿದರೆ 2023ರ ಏಪ್ರಿಲ್-ಮೇ ಅವಧಿಯಲ್ಲಿ ಸಕಾರಾತ್ಮಕ ಬೆಳವಣಿಗೆಯನ್ನು ಪ್ರದರ್ಶಿಸಿವೆ. ಇವುಗಳಲ್ಲಿ ತೈಲ ಹಿಂಡಿಗಳು (74.33%), ಎಲೆಕ್ಟ್ರಾನಿಕ್ ಸರಕುಗಳು (48.06%), ಮಸಾಲೆ ಪದಾರ್ಥಗಳು (31.81%), ತೈಲ ಬೀಜಗಳು (20.94%), ಅಕ್ಕಿ (19%), ಸೆರಾಮಿಕ್ ಉತ್ಪನ್ನಗಳು ಮತ್ತು ಗಾಜಿನ ವಸ್ತುಗಳು (17.29%), ಹಣ್ಣುಗಳು ಮತ್ತು ತರಕಾರಿಗಳು (14.13%), ಇತರ ಧಾನ್ಯಗಳು (10.43%), ಕಾಫಿ (10.43%), ಕಬ್ಬಿಣದ ಅದಿರು (5.2%), ಔಷಧಗಳು(5.11%), ಚಹಾ (3.03%), ಕಾಫಿ(2.98%) ಮತ್ತು ತಂಬಾಕು(2.01%) ಸೇರಿವೆ.

ಕೃಷಿ ರಫ್ತು ದೃಢವಾಗಿದ್ದು, ಭರವಸೆಯ ಬೆಳವಣಿಗೆ ಮುಂದುವರಿದಿದೆ.

ಸರಕುಗಳ ಆಮದಿನ ಅಡಿಯಲ್ಲಿ, 30 ಪ್ರಮುಖ ವಲಯಗಳಲ್ಲಿ 21 ವಲಯಗಳು 2022ರ ಏಪ್ರಿಲ್-ಮೇ ಅವಧಿಗೆ ಹೋಲಿಸಿದರೆ 2023ರ ಏಪ್ರಿಲ್-ಮೇ ತಿಂಗಳಲ್ಲಿ ನಕಾರಾತ್ಮಕ ಬೆಳವಣಿಗೆಯನ್ನು ಪ್ರದರ್ಶಿಸಿವೆ. ಇವುಗಳಲ್ಲಿ ಬೆಳ್ಳಿ (-74.8%), ಗಂಧಕ ಮತ್ತು ಸಂಸ್ಕರಿಸದ ಕಬ್ಬಿಣದ ಪೈರೈಟ್ಸ್ (-69.62%), ಯೋಜನಾ ಸರಕುಗಳು (-50.54%), ಚಿನ್ನ (-39.32%), ಸಸ್ಯಜನ್ಯ ತೈಲ (-35.4%), ಕಚ್ಚಾ ಹತ್ತಿ ಮತ್ತು ತ್ಯಾಜ್ಯ (-30.64%), ಸಾವಯವ ಮತ್ತು ಅಜೈವಿಕ ರಾಸಾಯನಿಕಗಳು (-26.05%), ಮುತ್ತುಗಳು, ಅಮೂಲ್ಯ ಮತ್ತು ಅಮೂಲ್ಯ ಕಲ್ಲುಗಳು (-25.36%), ಕಲ್ಲಿದ್ದಲು, ಕೋಕ್‌ ಮತ್ತು ಬ್ರಿಕೆಟ್ಸ್‌ ಮುಂತಾದವು(-22.55%), ಜವಳಿ ನೂಲು ಬಟ್ಟೆ, ಸಿದ್ಧಪಡಿಸಿದ ವಸ್ತುಗಳು(-14.37%), ರಸಗೊಬ್ಬರಗಳು, ಕಚ್ಚಾ ಮತ್ತು ತಯಾರಿಕೆ (-14.12%), ಸಾರಿಗೆ ಉಪಕರಣಗಳು (-13.76%), ಲೋಹೀಯ ಅದಿರುಗಳು ಮತ್ತು ಇತರ ಖನಿಜಗಳು (-13.23%), ಪೆಟ್ರೋಲಿಯಂ, ಕಚ್ಚಾ ಮತ್ತು ಉತ್ಪನ್ನಗಳು (-10.08%), ಔಷಧೀಯ ಉತ್ಪನ್ನ ಮತ್ತು ಔಷಧಗಳು (-8.78%). ಚರ್ಮ ಮತ್ತು ಚರ್ಮದ ಉತ್ಪನ್ನಗಳು(-7.77%), ಕೃತಕ ರೆಸಿನ್‌ಗಳು, ಪ್ಲಾಸ್ಟಿಕ್ ವಸ್ತುಗಳು, ಇತ್ಯಾದಿ (7.67%), ಹಣ್ಣುಗಳು ಮತ್ತು ತರಕಾರಿಗಳು (-6.55%), ಮರ ಮತ್ತು ಮರದ ಉತ್ಪನ್ನಗಳು (-4.62%), ವರ್ಣ/ ಟ್ಯಾನಿಂಗ್ / ಕಲರಿಂಗ್ ವಸ್ತುಗಳು (-2.8%), ರಾಸಾಯನಿಕ ವಸ್ತುಗಳು ಮತ್ತು ಉತ್ಪನ್ನಗಳು (-1.81%).

ಪೆಟ್ರೋಲಿಯಂ, ಸಸ್ಯಜನ್ಯ ತೈಲ, ಕಲ್ಲಿದ್ದಲು, ಕೋಕ್ ಮತ್ತು ಬ್ರಿಕೆಟ್ ಇತ್ಯಾದಿಗಳ ಆಮದು ಮೌಲ್ಯದ ಕುಸಿತಕ್ಕೆ  ಮುಖ್ಯವಾಗಿ ಸರಕುಗಳ ಬೆಲೆಗಳ ಕುಸಿತ ಕಾರಣವಾಗಿದೆ. ಆಮದು ಸುಂಕದಿಂದಾಗಿ ಚಿನ್ನದ ಆಮದಿನಲ್ಲಿ ಕುಸಿತ ಕಂಡುಬಂದಿದೆ.

ಬೆಳ್ಳಿ ಆಮದು ಮೇ 2022ರಲ್ಲಿ 0.45 ಶತಕೋಟಿ ಡಾಲರ್‌ ಇದ್ದದ್ದು, ಮೇ 2023ರಲ್ಲಿ 0.03 ಶತಕೋಟಿ ಡಾಲರ್‌ಗೆ ಶೇಕಡಾ 93.92ರಷ್ಟು ಕುಸಿದಿದೆ.

2022ರ ಏಪ್ರಿಲ್-ಮೇ ತಿಂಗಳಿಗೆ ಹೋಲಿಸಿದರೆ, 2023ರ ಏಪ್ರಿಲ್-ಮೇ ಅವಧಿಯಲ್ಲಿ ಸೇವಾ ರಫ್ತು ಶೇಕಡಾ 4.01 ರಷ್ಟು ಬೆಳೆಯುವ ನಿರೀಕ್ಷೆಯಿದೆ.

2023ರ ಏಪ್ರಿಲ್-ಮೇ ತಿಂಗಳಲ್ಲಿ ಭಾರತದ ವ್ಯಾಪಾರ ಕೊರತೆಯು ಗಣನೀಯವಾಗಿ ಕಡಿಮೆಯಾಗಿದೆ. ಏಪ್ರಿಲ್-ಮೇ 2023ರ ಒಟ್ಟಾರೆ ವ್ಯಾಪಾರ ಕೊರತೆಯನ್ನು 13.28 ಶತಕೋಟಿ ಡಾಲರ್ ಎಂದು ಅಂದಾಜಿಸಲಾಗಿದೆ, 2022ರ ಏಪ್ರಿಲ್-ಮೇ ಅವಧಿಯಲ್ಲಿದ್ದ 20.56 ಶತಕೋಟಿ ಡಾಲರ್ ಕೊರತೆಗೆ ಹೋಲಿಸಿದರೆ ಇದು (-)35.41 ಪ್ರತಿಶತದಷ್ಟು ಕಡಿಮೆಯಾಗಿದೆ. ಸರಕುಗಳ ವ್ಯಾಪಾರ ಕೊರತೆಯು 2022ರ ಏಪ್ರಿಲ್-ಮೇ ಅವಧಿಯಲ್ಲಿದ್ದ 40.48 ಶತಕೋಟಿ ಡಾಲರ್‌ಗೆ ಹೋಲಿಸಿದರೆ 2023ರ ಏಪ್ರಿಲ್-ಮೇ ಅವಧಿಯಲ್ಲಿ 37.26 ಶತಕೋಟಿ ಡಾಲರ್ ದಾಖಲಾಗಿದ್ದು, (-) 7.95 ರಷ್ಟು ಕಡಿಮೆಯಾಗಿದೆ.

***

 (Release ID: 1932812) Visitor Counter : 460


Read this release in: Tamil , English , Urdu , Hindi