ಪ್ರಧಾನ ಮಂತ್ರಿಯವರ ಕಛೇರಿ

ಸ್ವಿಜರ್ ಲೆಂಡ್ ನ ಜಿನೀವಾದಲ್ಲಿ ವಿಶ್ವ ಆರೋಗ್ಯ ಶೃಂಗಸಭೆ(ಅಸೆಂಬ್ಲಿ)ಯ 76ನೇ ಅಧಿವೇಶನ ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ


"ವಿಶ್ವದ ದಕ್ಷಿಣ ಭಾಗದ ದೇಶಗಳು ಸೇರಿದಂತೆ 100ಕ್ಕೂ ಹೆಚ್ಚು ರಾಷ್ಟ್ರಗಳಿಗೆ ಭಾರತವು ಸುಮಾರು 300 ಮಿಲಿಯನ್ ಡೋಸ್ ಕೋವಿಡ್-19 ಲಸಿಕೆಗಳನ್ನು ಪೂರೈಸಿದೆ"

"ಅನಾರೋಗ್ಯದ ಅನುಪಸ್ಥಿತಿಯು ಉತ್ತಮ ಆರೋಗ್ಯದಂತೆ ಅಲ್ಲ ಎಂದು ಭಾರತದ ಸಾಂಪ್ರದಾಯಿಕ ಪ್ರಜ್ಞೆ ಅಥವಾ ತಿಳಿವಳಿಕೆ ಹೇಳುತ್ತದೆ"

"ಜಗತ್ತನ್ನು ಒಂದೇ ಕುಟುಂಬವಾಗಿ ನೋಡುವಂತೆ ನಮಗೆ ಭಾರತದ ಪ್ರಾಚೀನ ಗ್ರಂಥಗಳು ಕಲಿಸುತ್ತವೆ"

"ಭಾರತದ ಪ್ರಯತ್ನಗಳು ಅನತಿ ದೂರದಲ್ಲಿರುವವರ ಆರೋಗ್ಯ ಹೆಚ್ಚಿಸುವ ಗುರಿ ಹೊಂದಿವೆ"

"ವೈವಿಧ್ಯತೆಯ ಪ್ರಮಾಣದೊಂದಿಗೆ ಕೆಲಸ ಮಾಡುವ ಭಾರತದ ಕಾರ್ಯವಿಧಾನವು ಇತರ ರಾಷ್ಟ್ರಗಳಿಗೆ ಮಾರ್ಗಸೂಚಿಯಾಗಬಲ್ಲದು"

Posted On: 21 MAY 2023 7:09PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸ್ವಿಜರ್ ಲೆಂಡ್ ನ ಜಿನೀವಾದಲ್ಲಿ ವಿಶ್ವ ಆರೋಗ್ಯ ಶೃಂಗಸಭೆಯ 76ನೇ ಅಧಿವೇಶನ ಉದ್ದೇಶಿಸಿ ವೀಡಿಯೊ ಸಂದೇಶದ ಮೂಲಕ ಭಾಷಣ ಮಾಡಿದರು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿ, ನೆರೆದಿದ್ದ ಎಲ್ಲರಿಗೂ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸಿ, 75 ವರ್ಷಗಳ ಕಾಲ ಜಗತ್ತಿಗೆ ಸೇವೆ ಸಲ್ಲಿಸುವ ಐತಿಹಾಸಿಕ ಮೈಲಿಗಲ್ಲು ಸಾಧಿಸಿದ ವಿಶ್ವ ಆರೋಗ್ಯ ಸಂಸ್ಥೆಯನ್ನು ಅಭಿನಂದಿಸಿದರು. ವಿಶ್ವ ಆರೋಗ್ಯ ಸಂಸ್ಥೆ 100 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದಾಗ ಮುಂದಿನ 25 ವರ್ಷಗಳ ಗುರಿಗಳನ್ನು ಸಹ ನಿಗದಿಪಡಿಸುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಆರೋಗ್ಯ ರಕ್ಷಣೆಯಲ್ಲಿ ಹೆಚ್ಚಿನ ಸಹಯೋಗದ ಅಗತ್ಯಕ್ಕೆ ಒತ್ತು ನೀಡಿದ ಪ್ರಧಾನ ಮಂತ್ರಿ,  ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಬಹಿರಂಗಗೊಂಡ ಜಾಗತಿಕ ಆರೋಗ್ಯ ವಾಸ್ತುಶಿಲ್ಪವನ್ನು ಎತ್ತಿ ತೋರಿಸಿದರು. ಚೇತರಿಸಿಕೊಳ್ಳುವ ಜಾಗತಿಕ ಆರೋಗ್ಯ ವ್ಯವಸ್ಥೆಗಳನ್ನು ನಿರ್ಮಿಸುವಲ್ಲಿ ಮತ್ತು ಜಾಗತಿಕ ಆರೋಗ್ಯ ಪಾಲನ್ನು ಹೆಚ್ಚಿಸುವಲ್ಲಿ ಸಾಮೂಹಿಕ ಅಥವಾ ಸಂಘಟಿತ ಪ್ರಯತ್ನದ ಅಗತ್ಯವಿದೆ ಎಂದು ಅವರು ಒತ್ತು ನೀಡಿದರು. ಆರೋಗ್ಯ ರಂಗದಲ್ಲಿ ಅಂತಾರಾಷ್ಟ್ರೀಯ ಸಹಕಾರ ಹೊಂದಲು ಭಾರತ ಹಾಕಿಕೊಂಡಿರುವ ಬದ್ಧತೆಯನ್ನು ಪ್ರಸ್ತಾಪಿಸಿದರು. ದೇಶವು ಸುಮಾರು 300 ಮಿಲಿಯನ್ ಡೋಸ್ ಕೋವಿಡ್-19 ಲಸಿಕೆಗಳನ್ನು ದಕ್ಷಿಣ ಭಾಗದ ದೇಶಗಳು ಸೇರಿದಂತೆ 100ಕ್ಕಿಂತ ಹೆಚ್ಚಿನ ದೇಶಗಳಿಗೆ ರವಾನಿಸಿದೆ. ಮುಂಬರುವ ವರ್ಷಗಳಲ್ಲಿ ಸಂಪನ್ಮೂಲಗಳಿಗೆ ಸಮಾನ ಪ್ರವೇಶ ಅವಕಾಶಗಳನ್ನು ಬೆಂಬಲಿಸುವುದು ವಿಶ್ವ ಆರೋಗ್ಯ ಸಂಸ್ಥೆಯ ಪ್ರಮುಖ ಆದ್ಯತೆಯಾಗಿದೆ ಎಂದು ಪ್ರಧಾನಿ ವಿಶ್ವಾಸ ವ್ಯಕ್ತಪಡಿಸಿದರು.

ಅನಾರೋಗ್ಯದ ಅನುಪಸ್ಥಿತಿಯು ಉತ್ತಮ ಆರೋಗ್ಯದಂತೆ ಅಲ್ಲ ಎಂದು ಭಾರತದ ಸಾಂಪ್ರದಾಯಿಕ ಬುದ್ಧಿವಂತಿಕೆ ಅಥವಾ ಪ್ರಜ್ಞೆ ಅಥವಾ ತಿಳಿವಳಿಕೆ  ಹೇಳುತ್ತದೆ. ಒಬ್ಬ ವ್ಯಕ್ತಿಯು ಕಾಯಿಲೆಗಳಿಂದ ಮುಕ್ತವಾಗಿರುವುದು ಮಾತ್ರವಲ್ಲದೆ, ಸ್ವಾಸ್ಥ್ಯದತ್ತ ಹೆಜ್ಜೆ ಇಡಬೇಕು. ಯೋಗ, ಆಯುರ್ವೇದ ಮತ್ತು ಧ್ಯಾನದಂತಹ ಸಾಂಪ್ರದಾಯಿಕ ವ್ಯವಸ್ಥೆಗಳ ಪ್ರಯೋಜನಗಳನ್ನು ಪ್ರಸ್ತಾಪಿಸಿದ ಪ್ರಧಾನ ಮಂತ್ರಿ, ಇದು ಆರೋಗ್ಯದ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಸ್ವಾಸ್ಥ್ಯ ಕಾಪಾಡುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ  ಸಾಂಪ್ರದಾಯಿಕ ಔಷಧಕ್ಕಾಗಿ ಮೊದಲ ಜಾಗತಿಕ ಕೇಂದ್ರವನ್ನು ಭಾರತದಲ್ಲಿ ಸ್ಥಾಪಿಸಲಾಗುತ್ತಿದೆ ಎಂದು ಪ್ರಧಾನಿ ಸಂತಸ ವ್ಯಕ್ತಪಡಿಸಿದರು. ಅಂತರಾಷ್ಟ್ರೀಯ ಸಿರಿಧಾನ್ಯ ವರ್ಷವು ಸಿರಿಧಾನ್ಯಗಳ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.

 

“ವಸುಧೈವ ಕುಟುಂಬಕಂ”, ಜಗತ್ತನ್ನು ಒಂದೇ ಕುಟುಂಬವಾಗಿ ನೋಡಲು ನಮಗೆ ಕಲಿಸುವ ಭಾರತದ ಪ್ರಾಚೀನ ಗ್ರಂಥಗಳನ್ನು ಪ್ರಸ್ತಾಪಿಸಿದ ಪ್ರಧಾನಿ, 'ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ' ಎಂಬ ಜಿ-20 ಶೃಂಗಸಭೆಯ ಘೋಷವಾಕ್ಯವನ್ನು ಉಲ್ಲೇಖಿಸಿದರು. ಉತ್ತಮ ಆರೋಗ್ಯಕ್ಕಾಗಿ ಭಾರತದ ದೃಷ್ಟಿ 'ಒಂದು ಭೂಮಿ ಒಂದು ಆರೋಗ್ಯ' ಎಂದು ಹೇಳಿದರು. ಭಾರತದ ದೃಷ್ಟಿ ಕೇವಲ ಮನುಷ್ಯರಿಗೆ ಮಾತ್ರ ಸೀಮಿತವಾಗಿಲ್ಲ, ಆದರೆ ಪ್ರಾಣಿಗಳು, ಸಸ್ಯಗಳು ಮತ್ತು ಪರಿಸರ ಸೇರಿದಂತೆ ಇಡೀ ಪರಿಸರ ವ್ಯವಸ್ಥೆಗೆ ವಿಸ್ತರಿಸುತ್ತದೆ. ನಮ್ಮ ಇಡೀ ಪರಿಸರ ಆರೋಗ್ಯದಿಂದ ಇದ್ದಾಗ ಮಾತ್ರ ನಾವು ಆರೋಗ್ಯವಾಗಿರಲು ಸಾಧ್ಯ ಎಂದರು.

ಆರೋಗ್ಯ ಸೇವೆಯ ಲಭ್ಯತೆ, ಪ್ರವೇಶ ಮತ್ತು ಕೈಗೆಟುಕುವಿಕೆಗೆ ಸಂಬಂಧಿಸಿದಂತೆ ಕಳೆದ ಕೆಲವು ವರ್ಷಗಳಲ್ಲಿ ಭಾರತದ ಸಾಧನೆಗಳನ್ನು ಪ್ರಸ್ತಾಪಿಸಿದ ಪ್ರಧಾನಿ, ವಿಶ್ವದ ಅತಿದೊಡ್ಡ ಆರೋಗ್ಯ ವಿಮಾ ಯೋಜನೆ - ಆಯುಷ್ಮಾನ್ ಭಾರತ್, ಆರೋಗ್ಯ ಮೂಲಸೌಕರ್ಯಗಳ ಬೃಹತ್ ಹೆಚ್ಚಳ ಮತ್ತು ದೇಶದ ಲಕ್ಷಾಂತರ ಕುಟುಂಬಗಳಿಗೆ ನೈರ್ಮಲ್ಯ ಮತ್ತು ಕುಡಿಯುವ ನೀರು ಒದಗಿಸುವ ಪ್ರಮುಖ  ಉದಾಹರಣೆಗಳನ್ನು ನೀಡಿದರು. ಭಾರತದ ಅನೇಕ ಪ್ರಯತ್ನಗಳು ದೇಶದ ಅನತಿ ದೂರದಲ್ಲಿರುವ ಜನರ ಆರೋಗ್ಯ ಹೆಚ್ಚಿಸುವ ಗುರಿ ಹೊಂದಿವ. ಭಾರತದ ವೈವಿಧ್ಯತೆಯ ಪ್ರಮಾಣದೊಂದಿಗೆ ಕೆಲಸ ಮಾಡುವ ಕಾರ್ಯ ವಿಧಾನವು ಇತರ ರಾಷ್ಟ್ರಗಳಿಗೆ ಮಾರ್ಗಸೂಚಿಯಾಗಬಲ್ಲದು. ಕಡಿಮೆ ಮತ್ತು ಮಧ್ಯಮ-ಆದಾಯದ ದೇಶಗಳ ಇದೇ ರೀತಿಯ ಪ್ರಯತ್ನಗಳಿಗೆ ವಿಶ್ವ ಆರೋಗ್ಯ ಸಂಸ್ಥೆ ಬೆಂಬಲ ನೀಡಬೇಕು ಮೋದಿ ಆಶಾವಾದ ವ್ಯಕ್ತಪಡಿಸಿದರು.

ಎಲ್ಲರಿಗೂ ಆರೋಗ್ಯ ವೃದ್ಧಿಸುವ 75 ವರ್ಷಗಳ ವಿಶ್ವ ಆರೋಗ್ಯ ಸಂಸ್ಥೆಯ ಪ್ರಯತ್ನಗಳನ್ನು ಪ್ರಧಾನಿ ಶ್ಲಾಘಿಸಿದರು. ಭವಿಷ್ಯದಲ್ಲಿ ಎದುರಾಗುವ ಸವಾಲುಗಳಿಗೆ ವಿಶ್ವ ಆರೋಗ್ಯ ಸಂಸ್ಥೆಯಂತಹ ಜಾಗತಿಕ ಸಂಸ್ಥೆಗಳ ಪಾತ್ರ ಇನ್ನಷ್ಟು ಮಹತ್ವದ್ದಾಗಿ. ಆರೋಗ್ಯಕರ ಜಗತ್ತನ್ನು ನಿರ್ಮಿಸುವ ಎಲ್ಲಾ ಪ್ರಯತ್ನಗಳಿಗೆ ಸಹಾಯ ಮಾಡಲು ಭಾರತ ಸದಾ ಬದ್ಧವಾಗಿದೆ" ಎಂದು ಪ್ರಧಾನ ಮಂತ್ರಿ ತಮ್ಮ ಭಾಷಣ ಮುಕ್ತಾಯಗೊಳಿಸಿದರು.

*****



(Release ID: 1928688) Visitor Counter : 101