ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ
2ನೇ ವ್ಯಾಪಾರ ಮತ್ತು ಹೂಡಿಕೆ ಕಾರ್ಯಕಾರಿ ಗುಂಪಿನ (ಟಿಐಡಬ್ಲ್ಯುಜಿ) ಸಭೆಯ ಜಿ20 ಪ್ರತಿನಿಧಿಗಳಿಗಾಗಿ ಮಾರ್ಗದರ್ಶಿ ನಗರ ಬಸ್ ಪ್ರವಾಸ 'ದಿ ಬೆಂಗಳೂರು ಸ್ಟೋರಿ' ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ
Posted On:
24 MAY 2023 1:45PM by PIB Bengaluru
ನಿನ್ನೆ ಸಂಜೆ ಬೆಂಗಳೂರಿನಲ್ಲಿ ನಡೆದ 2 ನೇ ವ್ಯಾಪಾರ ಮತ್ತು ಹೂಡಿಕೆ ಕಾರ್ಯಕಾರಿ ಗುಂಪಿನ (ಟಿಐಡಬ್ಲ್ಯುಜಿ) ಸಭೆಯ ಜಿ20 ಪ್ರತಿನಿಧಿಗಳಿಗಾಗಿ 'ದಿ ಬೆಂಗಳೂರು ಸ್ಟೋರಿ' ಮಾರ್ಗದರ್ಶಿ ನಗರ ಬಸ್ ಪ್ರವಾಸ ಮತ್ತು ಕರ್ನಾಟಕದ ಸಾಂಸ್ಕೃತಿಕ ಪರಂಪರೆಯ ಪ್ರದರ್ಶನ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಈ ಪ್ರವಾಸವು ಭಾರತದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರ, ಅದರ ಸುಂದರವಾದ ಉದ್ಯಾನಗಳು ಮತ್ತು ದೇಶದ ಸಿಲಿಕಾನ್ ವ್ಯಾಲಿಯಾಗಿ ಬೆಂಗಳೂರು ಗಳಿಸಿರುವ ಪರಿಣತಿಯ ಒಂದು ನೋಟವನ್ನು ನೀಡಿತು.
ಬೆಂಗಳೂರು ಅರಮನೆಯಲ್ಲಿ ಪ್ರತಿನಿಧಿಗಳು ಈ ರಾಜವವೈಭವದ ವಾಸ್ತುಶಿಲ್ಪವನ್ನು ಅಲಂಕರಿಸಿರುವ ಗೋಪುರದ ಪ್ಯಾರಪೆಟ್‌ಗಳು, ಯುದ್ಧ ಕಿಂಡಿಗಳು, ಕೋಟೆಯ ಗೋಪುರಗಳು ಮತ್ತು ಕಮಾನುಗಳನ್ನು ವೀಕ್ಷಿಸಿದರು. ಇದರ ವಿನ್ಯಾಸವು ಇಂಗ್ಲೆಂಡ್‌ನ ವಿಂಡ್ಸರ್ ಕ್ಯಾಸಲ್‌ನಿಂದ ಸ್ಫೂರ್ತಿ ಪಡೆದಿದೆ. ತೆರೆದ ಪ್ರಾಂಗಣವು ಕರ್ನಾಟಕದ ದೀರ್ಘಕಾಲದ ಸಾಂಸ್ಕೃತಿಕ, ಐತಿಹಾಸಿಕ ಮತ್ತು ಸಂಗೀತ ಪರಂಪರೆಯ ಪುರಾವೆಯಾಗಿದೆ. ಪ್ರತಿನಿಧಿಗಳು ಮ್ಯೂಸಿಯಂ ಆಫ್ ಆರ್ಟ್ ಅಂಡ್ ಫೋಟೋಗ್ರಫಿ, ಕಬ್ಬನ್ ಪಾರ್ಕ್ ಮತ್ತು ವಿಧಾನಸೌಧಕ್ಕೂ ಭೇಟಿ ನೀಡಿದರು. ಮಹಾತ್ಮಾ ಗಾಂಧಿ ಪ್ರತಿಮೆಯ ಬಳಿ ತಂಡದ ಛಾಯಾಚಿತ್ರ ತೆಗೆದ ಬಳಿಕ ಬಸ್ ಪ್ರವಾಸವನ್ನು ಮುಕ್ತಾಯಗೊಳಿಸಲಾಯಿತು. 'ದಿ ಬೆಂಗಳೂರು ಸ್ಟೋರಿ' ಪ್ರವಾಸವನ್ನು ಕರ್ನಾಟಕ ಪ್ರವಾಸೋದ್ಯಮ ಇಲಾಖೆ ವಿನ್ಯಾಸಗೊಳಿಸಿತ್ತು.
2ನೇ ಟಿಐಡಬ್ಲ್ಯುಜಿ ಸಭೆಯ ಮೊದಲ ದಿನವು ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ನಂತರ ಭೋಜನಕೂಟದೊಂದಿಗೆ ಮುಕ್ತಾಯವಾಯಿತು. ಸಾಂಸ್ಕೃತಿಕ ಕಾರ್ಯಕ್ರಮವು ಕರ್ನಾಟಕದ ಸಾಂಸ್ಕೃತಿಕ ಸಂಪ್ರದಾಯಗಳು ಮತ್ತು ನೃತ್ಯ ಪ್ರಕಾರಗಳ ಪ್ರಸಿದ್ಧ ಪರಂಪರೆಯನ್ನು ಪ್ರದರ್ಶಿಸಿತು ಮತ್ತು ಕಲಾನಿಧಿ ನೃತ್ಯ ಮಂದಿರಂ, ಸ್ಪೇಸ್ ಕಥಕ್ ಮತ್ತು ಶ್ರೀ ನಾಟ್ಯ ನಿಕೇತನದ ಪ್ರದರ್ಶನಗಳು ಇದರಲ್ಲಿ ಸೇರಿದ್ದವು.
2ನೇ ಟಿಐಡಬ್ಲ್ಯುಜಿ ಸಭೆ ನಿನ್ನೆ ಬೆಂಗಳೂರಿನಲ್ಲಿ ಪ್ರಾರಂಭವಾಯಿತು ಇದರಲ್ಲಿ 100 ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದಾರೆ. ಜಿ20 ದೇಶಗಳ ಪ್ರತಿನಿಧಿಗಳಲ್ಲದೆ, ಆಹ್ವಾನಿತ ದೇಶಗಳ ಪ್ರತಿನಿಧಿಗಳು ಮತ್ತು ಪ್ರಾದೇಶಿಕ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳು ಜಾಗತಿಕ ವ್ಯಾಪಾರ ಮತ್ತು ಹೂಡಿಕೆಯನ್ನು ವೇಗಗೊಳಿಸಲು ಸಹಭಾಗಿತ್ವದ ಚರ್ಚೆಗಳಲ್ಲಿ ತೊಡಗಿವೆ.
*****
(Release ID: 1926867)
Visitor Counter : 154