ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಗೃಹ ವ್ಯವಹಾರಗಳ ಸಚಿವಾಲಯವು 2023 ರ ಜುಲೈ 13 ಮತ್ತು 14 ರಂದು ಹರಿಯಾಣದ ಗುರುಗ್ರಾಮ್‌ನಲ್ಲಿ "ಎನ್‌ ಎಫ್‌ ಟಿಗಳು, ಕೃತಕ ಬುದ್ಧಿಮತ್ತೆ ಮತ್ತು ಮೆಟಾವರ್ಸ್‌ ಯುಗದಲ್ಲಿ ಅಪರಾಧ ಮತ್ತು ಭದ್ರತೆ ಕುರಿತು ಜಿ20 ಸಮ್ಮೇಳನವನ್ನು" ಆಯೋಜಿಸುತ್ತಿದೆ.

Posted On: 12 MAY 2023 8:03PM by PIB Bengaluru

 

ಗೃಹ ವ್ಯವಹಾರಗಳ ಸಚಿವಾಲಯವು 2023 ರ ಜುಲೈ 13 ಮತ್ತು 14 ರಂದು ಹರಿಯಾಣದ ಗುರುಗ್ರಾಮ್‌ನಲ್ಲಿ “ಎನ್‌ಎಫ್‌ಟಿಗಳು (ನಾನ್ ಫಂಗಿಬಲ್ ಟೋಕನ್‌ಗಳು), ಎಐ ಮತ್ತು ಮೆಟಾವರ್ಸ್‌ಯುಗದಲ್ಲಿ ಅಪರಾಧ ಮತ್ತು ಭದ್ರತೆ ಕುರಿತು ಜಿ20 ಸಮ್ಮೇಳನವನ್ನು ಆಯೋಜಿಸುತ್ತಿದೆ. ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ, ವಿದೇಶಾಂಗ ವ್ಯವಹಾರಗಳ ಸಚಿವಾಲಯ, ರಾಷ್ಟ್ರೀಯ ಭದ್ರತಾ ಮಂಡಳಿಯ ಸಚಿವಾಲಯ ಮತ್ತು ಸಿಬಿಐ ಸಹಭಾಗಿತ್ವದಲ್ಲಿ ಎರಡು ದಿನಗಳ ಈ ಕಾರ್ಯಕ್ರಮ ನಡೆಯಲಿದೆ. ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯ, ರಾಷ್ಟ್ರೀಯ ನ್ಯಾಯ ವಿಜ್ಞಾನ ವಿಶ್ವವಿದ್ಯಾಲಯ, ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ವಿಶ್ವವಿದ್ಯಾಲಯ, ಇಂಟರ್‌ಪೋಲ್ ಮತ್ತು ಯು ಎನ್‌ ಒ ಡಿ ಸಿ ಕಾರ್ಯಕ್ರಮ ಸಂಘಟನೆಯ ಸಹಭಾಗಿಗಳಾಗಿವೆ.

ಉದ್ದೇಶಿತ ಜಿ20 ಸಮ್ಮೇಳನದ ವಿವರಗಳನ್ನು ಪ್ರಸ್ತುತಪಡಿಸಲು ಇಂದು ನವದೆಹಲಿಯಲ್ಲಿ ಗೃಹ ವ್ಯವಹಾರಗಳ ಸಚಿವಾಲಯವು ದುಂಡುಮೇಜಿನ ಸಭೆಯನ್ನು ಆಯೋಜಿಸಿತು. ಭಾರತ ಸರ್ಕಾರದ ವಿವಿಧ ಸಚಿವಾಲಯಗಳು ಮತ್ತು ಸಂಸ್ಥೆಗಳು ಮತ್ತು ಪಾಲುದಾರ ಸಂಸ್ಥೆಗಳ ಹಿರಿಯ ಅಧಿಕಾರಿಗಳಲ್ಲದೇ 20 ಕ್ಕೂ ಹೆಚ್ಚು ದೇಶಗಳ ರಾಯಭಾರಿಗಳು, ಹೈಕಮಿಷನರ್‌ಗಳು ಮತ್ತು ಹಿರಿಯ ಗಣ್ಯರು ಭಾಗವಹಿಸಿದ್ದರು. ದುಂಡುಮೇಜಿನ ಸಭೆಯಲ್ಲಿ ಕೇಂದ್ರ ಗೃಹ ಕಾರ್ಯದರ್ಶಿ ಶ್ರೀ ಅಜಯ್ ಕುಮಾರ್ ಭಲ್ಲಾ ಅವರು ಭಾಗವಹಿಸುವ ಗಣ್ಯರಿಗೆ ಮುಂಬರುವ ಸಮ್ಮೇಳನದ ರೂಪರೇಖೆಗಳ ಬಗ್ಗೆ ತಿಳಿಸಿದರು ಮತ್ತು ಸಮ್ಮೇಳನಕ್ಕೆ ಉನ್ನತ ಮಟ್ಟದ ನಿಯೋಗಗಳನ್ನು ಕಳುಹಿಸುವಂತೆ ದೇಶಗಳಿಗೆ ವಿನಂತಿ ಮಾಡಿದರು.

ಸಮ್ಮೇಳನದಲ್ಲಿ ಜಿ-20 ದೇಶಗಳು, ಅತಿಥಿ/ಆಮಂತ್ರಿತ ದೇಶಗಳು ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳನ್ನು ಒಟ್ಟುಗೂಡಿಸುತ್ತದೆ. ಭಾರತ ಸರ್ಕಾರದ ಸಚಿವಾಲಯಗಳು/ಸಂಸ್ಥೆಗಳು, ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳು/ಆಡಳಿತಾಧಿಕಾರಿಗಳು, ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳ ಪೊಲೀಸ್ ಮಹಾನಿರ್ದೇಶಕರು, ಸೈಬರ್ ತಜ್ಞರು ಮತ್ತು ಕಾನೂನು, ಶೈಕ್ಷಣಿಕ ಸಮುದಾಯ, ತರಬೇತಿ ಸಂಸ್ಥೆಗಳು, ಹಣಕಾಸು ಮಧ್ಯವರ್ತಿಗಳು, ಫಿನ್‌ಟೆಕ್‌, ಸಾಮಾಜಿಕ ಮಾಧ್ಯಮ ಮಧ್ಯವರ್ತಿಗಳು, ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ, ಸೈಬರ್ ಫೋರೆನ್ಸಿಕ್ಸ್, ನಿಯಂತ್ರಕರು, ಸ್ಟಾರ್ಟ್‌ಅಪ್‌ಗಳು, ಉನ್ನತ ಸೇವಾ ಪೂರೈಕೆದಾರರು (ಒಟಿಟಿ), ಇ-ಕಾಮರ್ಸ್ ಕಂಪನಿಗಳು ಮತ್ತಿತರರು ಭಾಗವಹಿಸುತ್ತಾರೆ.

 


(Release ID: 1924160) Visitor Counter : 217