ಭಾರೀ ಕೈಗಾರಿಕೆಗಳ ಸಚಿವಾಲಯ

​​​​​​​7432 ಸಾರ್ವಜನಿಕ ಫಾಸ್ಟ್ ಚಾರ್ಜಿಂಗ್ ಕೇಂದ್ರಗಳಿಗೆ ಫೇಮ್ ಸ್ಕೀಮ್ ಹಂತ-2ರ ಅಡಿಯಲ್ಲಿ 800 ಕೋಟಿ ರೂ. ಮಂಜೂರಾತಿ


ತೈಲ ಮಾರುಕಟ್ಟೆ ಕಂಪನಿಗಳು ಶೀಘ್ರದಲ್ಲೇ ದೇಶಾದ್ಯಂತ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಕೇಂದ್ರಗಳ ವ್ಯಾಪಕ ಜಾಲವನ್ನು ಅಳವಡಿಸಲಿವೆ: ಡಾ.ಮಹೇಂದ್ರ ನಾಥ್ ಪಾಂಡೆ

Posted On: 28 MAR 2023 2:44PM by PIB Bengaluru

ದೇಶಾದ್ಯಂತ 7432 ಸಾರ್ವಜನಿಕ ಫಾಸ್ಟ್ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲು ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳಾದ ಇಂಡಿಯನ್ ಆಯಿಲ್ (ಐಒಸಿಎಲ್), ಭಾರತ್ ಪೆಟ್ರೋಲಿಯಂ (ಬಿಪಿಸಿಎಲ್) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ (ಹೆಚ್ ಪಿಸಿಎಲ್) ಗೆ ಫೇಮ್ ಇಂಡಿಯಾ ಯೋಜನೆ ಹಂತ-2ರ ಅಡಿಯಲ್ಲಿ 800 ಕೋಟಿ ರೂ.ಗಳನ್ನು ಮಂಜೂರು ಮಾಡಲಾಗಿದೆ ಎಂದು ಕೇಂದ್ರ ಭಾರೀ ಕೈಗಾರಿಕಾ ಸಚಿವ ಡಾ. ಮಹೇಂದ್ರ ನಾಥ್ ಪಾಂಡೆ ಇಂದು ಪ್ರಕಟಿಸಿದರು.

ಡಿಜಿ ಬಿಇಇ ನೇತೃತ್ವದ ಸಮಿತಿಯು ಸಾರ್ವಜನಿಕ ಚಾರ್ಜಿಂಗ್ ಮೂಲಸೌಕರ್ಯಗಳ ಅಭಿವೃದ್ಧಿಯ ಕಾರ್ಯಸಾಧ್ಯತೆಯನ್ನು ಸುಧಾರಿಸಲು ಕೆಲವು ಬದಲಾವಣೆಗಳನ್ನು ಶಿಫಾರಸು ಮಾಡಿದೆ. ಇದು ವಿತರಣಾ ಟ್ರಾನ್ಸ್ಫಾರ್ಮರ್, ಎಲ್ ಟಿ ಮತ್ತು ಹೆಚ್ ಟಿ ಕೇಬಲ್ ಗಳು, ಎಸಿ ವಿತರಣಾ ಪೆಟ್ಟಿಗೆಗಳು, ಸರ್ಕ್ಯೂಟ್ ಬ್ರೇಕರ್ ಗಳು / ಐಸೋಲೇಟರ್ ಗಳು, ರಕ್ಷಣಾ ಉಪಕರಣಗಳು, ಕೊಳವೆ ಅಥವಾ ಪಿಸಿಸಿ ಮೌಂಟಿಂಗ್ ರಚನೆಗಳು, ಫೆನ್ಸಿಂಗ್ ಮತ್ತು ಸಿವಿಲ್ ಕೆಲಸ ಮುಂತಾದ ಅಪ್ಸ್ಟ್ರೀಮ್ ಮೂಲಸೌಕರ್ಯವನ್ನು ಬೆಂಬಲಿಸುವುದನ್ನು ಒಳಗೊಂಡಿದೆ. ಇವು ಸಾಮಾನ್ಯವಾಗಿ ಸಾರ್ವಜನಿಕ ಇವಿ ಚಾರ್ಜಿಂಗ್ ಕೇಂದ್ರವನ್ನು ಸ್ಥಾಪಿಸಲು ಒಟ್ಟಾರೆ ವೆಚ್ಚದ ಶೇಕಡಾ 60ರಷ್ಟು ಮೊತ್ತವನ್ನು ಬಳಸುತ್ತವೆ. ಅಪ್ಸ್ಟ್ರೀಮ್ ಮೂಲಸೌಕರ್ಯವು ವಿದ್ಯುತ್ ಸಂಪರ್ಕವನ್ನು ಪಡೆಯಲು ವಿತರಣಾ ಕಂಪನಿಗಳಿಗೆ ಚಾರ್ಜಿಂಗ್ ಪಾಯಿಂಟ್ ಆಪರೇಟರ್ ಗಳು ಪಾವತಿಸಬೇಕಾದ ಹಣವನ್ನು ಒಳಗೊಂಡಿದೆ. ಸಮಿತಿಯ ಶಿಫಾರಸಿನ ಆಧಾರದ ಮೇಲೆ, ಎಂಎಚ್ಐ ಶೇಕಡಾ 80ರಷ್ಟು ಅಪ್ಸ್ಟ್ರೀಮ್ ಮೂಲಸೌಕರ್ಯವನ್ನು ಸ್ಥಾಪಿಸಲು ಆರ್ಥಿಕ ಸಹಾಯವನ್ನು ಅನುಮೋದಿಸಿದೆ.

ಇದು ಮುಂಗಡ ವೆಚ್ಚವನ್ನು ಕಡಿಮೆ ಮಾಡುವ ಮೂಲಕ ಚಾರ್ಜಿಂಗ್ ಕೇಂದ್ರಗಳ ಸ್ಥಾಪನೆಯನ್ನು ಸುಲಭಗೊಳಿಸುತ್ತದೆ. ಇದರ ಹೊರತಾಗಿಯೂ, ಇವಿ ಸರಬರಾಜು ಉಪಕರಣಗಳ ಮೇಲೆ ಹಿಂದಿನ ಶೇಕಡಾ 70ರಷ್ಟು ಸಬ್ಸಿಡಿ ಮೊದಲಿನಂತೆ ಮುಂದುವರಿಯುತ್ತದೆ.

ಇವಿ ಚಾರ್ಜಿಂಗ್ ಮೂಲಸೌಕರ್ಯವನ್ನು ಸ್ಥಾಪಿಸುವಾಗ, ಚಾರ್ಜ್ ಪಾಯಿಂಟ್ ಆಪರೇಟರ್ ಗಳು (ಸಿಪಿಓಗಳು) ಭೂಮಿಯ ಕೊರತೆಯ ಸಮಸ್ಯೆಯನ್ನು ಕೂಡಾ ಎದುರಿಸುತ್ತಾರೆ. ಈ ತೊಂದರೆಯನ್ನು ಪರಿಗಣಿಸಿ, ಎಂ.ಎಚ್.ಐ ಈ ವಿಷಯವನ್ನು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದೊಂದಿಗೆ ಚರ್ಚಿಸಿ, ತೈಲ ಮಾರುಕಟ್ಟೆ ಕಂಪನಿಗಳ ಚಿಲ್ಲರೆ ಮಳಿಗೆಗಳಲ್ಲಿ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸುವ ಸಾಧ್ಯತೆಯನ್ನು ಅನ್ವೇಷಿಸಲು ಕೈಗೆತ್ತಿಕೊಂಡಿದೆ. ತೈಲ ಮಾರುಕಟ್ಟೆ ಕಂಪನಿಗಳು ತಮ್ಮ ಆರ್.ಓ.ಗಳ ಆವರಣದಲ್ಲಿ ಸಾಕಷ್ಟು ಭೂಮಿಯನ್ನು ಹೊಂದಿದ್ದು, ಅದರ ಉಪಯೋಗವನ್ನು ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲು ಬಳಸಬಹುದಾಗಿದೆ.

ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳು ಅಪ್ಸ್ಟ್ರೀಮ್ ಮೂಲಸೌಕರ್ಯ ಸೇರಿದಂತೆ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲು ಪ್ರಸ್ತಾಪಿಸಿದ ಪ್ರಸ್ತಾವನೆ ಈ ಕೆಳಗಿನಂತಿದೆ:

ತೈಲ ಮಾರುಕಟ್ಟೆ ಕಂಪನಿಗಳು

50/60 KW ಸಾಮರ್ಥ್ಯದ ಚಾರ್ಜರ್ ಗಳು

100/120 KW ಸಾಮರ್ಥ್ಯದ ಚಾರ್ಜರ್ ಗಳು

ಮೊತ್ತ

ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್

2,707

731

3,438

ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್

1,739

595

2,334

ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್

1,216

444

1,660

ಮೊತ್ತ

5,662

1,770

7,432

ಮಾರ್ಚ್ 2024ರ ವೇಳೆಗೆ ಈ ಸ್ಥಾಪನೆಯು ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಪ್ರಸ್ತುತ, ದೇಶಾದ್ಯಂತ ಸುಮಾರು 6,586 ಚಾರ್ಜಿಂಗ್ ಕೇಂದ್ರಗಳಿವೆ. ಹೊಸದಾದ 7,432 ಸಾರ್ವಜನಿಕ ಚಾರ್ಜಿಂಗ್ ಕೇಂದ್ರಗಳ ಸೇರ್ಪಡೆಯು ಇವಿ ಚಾರ್ಜಿಂಗ್ ಪರಿಸರ ವ್ಯವಸ್ಥೆಗೆ ಮಹತ್ವದ ಉತ್ತೇಜನ ನೀಡಲಿದೆ. ಮೇಲಿನ ಚಾರ್ಜಿಂಗ್ ಸಾಮರ್ಥ್ಯವನ್ನು ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು, ನಾಲ್ಕು ಚಕ್ರದ ವಾಹನಗಳು, ಲಘು ವಾಣಿಜ್ಯ ವಾಹನಗಳು, ಮಿನಿ ಬಸ್ಸುಗಳ ಚಾರ್ಜಿಂಗ್ ಗೆ ಬಳಸಬಹುದು.

ಹೆಚ್ಚುವರಿಯಾಗಿ, ಸಮಿತಿಯು ಚಾರ್ಜಿಂಗ್ ಗನ್ ಗಳ ಸಂರಚನೆಯಲ್ಲಿ ಈ ಕೆಳಗಿನಂತೆ ಬದಲಾವಣೆಯನ್ನು ಶಿಫಾರಸು ಮಾಡಿದ್ದು, ಅದನ್ನು ಕೂಡಾ ಅನುಮೋದಿಸಲಾಗಿದೆ.
 

ಕ್ರಮ ಸಂಖ್ಯೆ.

ಚಾರ್ಜಿಂಗ್ ಕೇಂದ್ರಗಳ ವಿಧ

ಅಸ್ತಿತ್ವದಲ್ಲಿರುವ ಗನ್ ಗಳ ಸಂಖ್ಯೆ

ಉದ್ದೇಶಿತ ಗನ್ ಗಳ ಸಂಖ್ಯೆ

ಚಾರ್ಜರ್ ಗಳ ವಿಧ (ಕನಿಷ್ಠ.)

ರೇಟಿಂಗ್ (ಕನಿಷ್ಠ.)

ಚಾರ್ಜರ್ ಗಳ ಸಂಖ್ಯೆ

ಪಿಸಿಎಸ್ ನ ಒಟ್ಟು ರೇಟೆಡ್ ಸಾಮರ್ಥ್ಯ

 

ನಿಧಾನ/ವೇಗ

ಸಂಖ್ಯೆ.

ಸಂಖ್ಯೆ.

ವಿಧ

ಕಿಲೋವ್ಯಾಟ್

ಸಂಖ್ಯೆ

ಕಿಲೋವ್ಯಾಟ್

1

ನಿಧಾನ

10

5

ಟೈಪ್-2 ಎಸಿ

11

2

 

ಭಾರತ್ AC001

3.3 x 3

1

32

2

ವೇಗ

6

3

ಭಾರತ್ AC001

ಡ್ಯುಯಲ್ ಗನ್

15

1

 

 

65

ಸಿಸಿಎಸ್-II

50

1

ಮೇಲೆ ತಿಳಿಸಿದ ಚಾರ್ಜಿಂಗ್ ಗನ್ ಗಳ ಸಂಖ್ಯೆಯ ಸಡಿಲಿಕೆಗಳು ಚಾರ್ಜಿಂಗ್ ಸಾಮರ್ಥ್ಯದ ಬಳಕೆಯನ್ನು ಹೆಚ್ಚಿಸಲು ಮತ್ತು ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸುವ ವೆಚ್ಚವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಈ ಕ್ರಮವು ಭಾರತದಲ್ಲಿ ಎಲೆಕ್ಟ್ರಿಕ್ ವಾಹನ ಪರಿಸರ ವ್ಯವಸ್ಥೆಗೆ ಉತ್ತೇಜನ ನೀಡುತ್ತದೆ ಮತ್ತು ಹೆಚ್ಚಿನ ಜನರನ್ನು ಸ್ವಚ್ಛ ಸಾರಿಗೆ ವಿಧಾನಗಳನ್ನು ಬಳಸುವಂತೆ ಪ್ರೋತ್ಸಾಹಿಸುತ್ತದೆ ಎಂದು ಡಾ.ಪಾಂಡೆ ಹೇಳಿದರು. ಸುಸ್ಥಿರ ಹಸಿರು ಚಲನಶೀಲತೆ ಪರಿಹಾರಗಳನ್ನು ಉತ್ತೇಜಿಸಲು ಮತ್ತು ದೇಶದ ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಸರ್ಕಾರ ಬದ್ಧವಾಗಿದ್ದು, ಪ್ರಧಾನಿ ನರೇಂದ್ರ ಮೋದಿಯವರ ನೆಟ್ ಝೀರೋ ಮಿಷನ್ ಕಡೆಗೆ ಸರ್ಕಾರವು ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದರು. ಈ ಕ್ರಮವು ಭಾರತದಲ್ಲಿ ದೃಢವಾದ ಚಾರ್ಜಿಂಗ್ ಮೂಲಸೌಕರ್ಯ ಜಾಲವನ್ನು ಸೃಷ್ಟಿಸಿ, ಅದನ್ನು ಸಾರ್ವಜನಿಕರಿಗೆ ಹೆಚ್ಚು ಲಭ್ಯವಾಗುವಂತೆ ಮಾಡುತ್ತದೆ. ಇದು ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುವ ಮತ್ತು ಸುಸ್ಥಿರ ಸಾರಿಗೆ ಆಯ್ಕೆಗಳನ್ನು ಉತ್ತೇಜಿಸುವ ಸರ್ಕಾರದ ಗುರಿಯನ್ನು ಹೊಂದಿದೆ, ಜೊತೆಗೆ ಭಾರತೀಯ ವಾಹನ ಉದ್ಯಮದ ಬೆಳವಣಿಗೆಯನ್ನು ಕೂಡಾ ಇದು ಬೆಂಬಲಿಸುತ್ತದೆ.

ಇಂದು, ಮಾರ್ಚ್ 27, 2023ರಂದು, ಭಾರೀ ಕೈಗಾರಿಕಾ ಸಚಿವಾಲಯವು ಈ ಮೊತ್ತದ ಶೇಕಡಾ 70 ಅಂದರೆ 560 ಕೋಟಿ ರೂ.ಗಳನ್ನು ಒಟ್ಟು 800 ಕೋಟಿ ರೂ.ಗಳ ಮೊದಲ ಕಂತಾಗಿ ಒಎಂಸಿ (ಬಿಪಿಸಿಎಲ್, ಐಒಸಿಎಲ್ ಮತ್ತು ಎಚ್ ಪಿಸಿಎಲ್) ಗೆ ಬಿಡುಗಡೆ ಮಾಡಿದೆ. ಈ ಮೊತ್ತವನ್ನು ದೇಶದ ಆಯಾ ಚಿಲ್ಲರೆ ಮಳಿಗೆಗಳಲ್ಲಿ ಇವಿ ಸಾರ್ವಜನಿಕ ಚಾರ್ಜಿಂಗ್ ಕೇಂದ್ರಗಳ ಅಪ್ಸ್ಟ್ರೀಮ್ ಮೂಲಸೌಕರ್ಯ ಮತ್ತು ಚಾರ್ಜಿಂಗ್ ಉಪಕರಣಗಳ ಸ್ಥಾಪನೆ ಮತ್ತು ಕಾರ್ಯಾರಂಭಕ್ಕಾಗಿ ಮಂಜೂರು ಮಾಡಲಾಗಿದೆ.

ದೇಶದಲ್ಲಿ ಇವಿ ಅಳವಡಿಕೆಯ ಪ್ರಮುಖ ಉತ್ತೇಜನವಾಗಿ, ಈ ಫಾಸ್ಟ್ ಚಾರ್ಜಿಂಗ್ ಕೇಂದ್ರಗಳನ್ನು ಎಲ್ಲಾ ಮೆಟ್ರೋಗಳು, ದಶಲಕ್ಷಕ್ಕೂ ಹೆಚ್ಚು ನಗರಗಳು, ಎಂಒಹೆಚ್ ಯುಎ ಸೂಚಿತ ಸ್ಮಾರ್ಟ್ ನಗರಗಳು, ದೇಶಾದ್ಯಂತದ ಗುಡ್ಡಗಾಡು ರಾಜ್ಯಗಳ ನಗರಗಳು, ದೇಶಾದ್ಯಂತ ಹೆದ್ದಾರಿಗಳು ಮತ್ತು ಎಕ್ಸ್ಪ್ರೆಸ್ ವೇಗಳಲ್ಲಿ ಸ್ಥಾಪಿಸಲಾಗುವುದು. ಇದು ಇವಿ ಮಾಲೀಕರಿಗೆ ತಡೆರಹಿತ ಮತ್ತು ಅನುಕೂಲಕರ ಚಾರ್ಜಿಂಗ್ ಅನುಭವವನ್ನು ಒದಗಿಸುತ್ತದೆ. ಇದು ಇವಿ ಮಾಲೀಕರು ತಮ್ಮ ಅಂತರ-ನಗರ, ಮುಖ್ಯವಾಗಿ, ಅವರ ಅಂತರ-ನಗರ ಹಾಗೂ ದೂರದ ಪ್ರಯಾಣದ ಸಮಯದಲ್ಲಿ ಶ್ರೇಣಿ ಮತ್ತು ಚಾರ್ಜಿಂಗ್ ಸಮಯದ ಬಗ್ಗೆ ಆತಂಕಗಳನ್ನು ಬಹಳವಾಗಿ ಕಡಿಮೆ ಮಾಡುತ್ತದೆ. ಅನುಕೂಲಕರವಾಗಿ ನೆಲೆಗೊಂಡಿರುವ ಒಎಂಸಿ ಚಿಲ್ಲರೆ ಮಳಿಗೆಗಳ ವ್ಯಾಪಕ ಜಾಲವು ವಾಹನ ಚಾಲಕರ ನೈಸರ್ಗಿಕ ಪ್ರಯಾಣದ ಮಾರ್ಗದಲ್ಲಿದ್ದು, ಗ್ರಾಹಕರ ಅನುಕೂಲಕ್ಕಾಗಿ ಸುರಕ್ಷತೆ, ಉತ್ತಮ ಬೆಳಕು, ವಿಸ್ತೃತ ಕೆಲಸದ ಸಮಯ, ವಾಶ್ ರೂಮ್ ಗಳು, ತುರ್ತು ನೆರವು ಮುಂತಾದ ಹಲವಾರು ಸೌಲಭ್ಯಗಳನ್ನು ಸಹ ಒದಗಿಸುತ್ತದೆ.

ಇವಿ ಅಳವಡಿಕೆಯಲ್ಲಿನ ಪ್ರಸ್ತುತ ಸವಾಲುಗಳಲ್ಲಿ ವಾಹನಗಳನ್ನು ಚಾರ್ಜ್ ಮಾಡಲು ತೆಗೆದುಕೊಳ್ಳುವ ಸಮಯವೂ ಒಂದು. ಒಎಂಸಿಗಳ ಈ ಇವಿ ಚಾರ್ಜಿಂಗ್ ಕೇಂದ್ರಗಳು ಸಿಸಿಎಸ್ -2 ಮಾದರಿಯ 50 ಕಿಲೋವ್ಯಾಟ್ ಮತ್ತು ಅದಕ್ಕಿಂತ ಹೆಚ್ಚಿನ ಸಾಮರ್ಥ್ಯವನ್ನು ಹೊಂದಿರುವುದರಿಂದ, ಇದು ಇವಿ ಮಾಲೀಕರಿಗೆ ಪರಿಣಾಮಕಾರಿ ಮತ್ತು ವೇಗದ ಚಾರ್ಜಿಂಗ್ ಅನ್ನು, ವಿಶೇಷವಾಗಿ ಆನ್-ದಿ-ಗೋ ಟಾಪ್-ಅಪ್ ಚಾರ್ಜಿಂಗ್ ಅನ್ನು ಹುಡುಕುತ್ತಿರುವವರಿಗೆ, ನೀಡುತ್ತದೆ. 

***************(Release ID: 1911457) Visitor Counter : 122


Read this release in: English , Urdu , Tamil