ಕಲ್ಲಿದ್ದಲು ಸಚಿವಾಲಯ

ಪ್ರಮುಖ ಮತ್ತು ಕೈಗೆಟುಕುವ ಶಕ್ತಿಯ ಮೂಲವಾಗಿ ಕಲ್ಲಿದ್ದಲು ಮುಂದುವರಿಯುತ್ತದೆ

Posted On: 27 MAR 2023 3:58PM by PIB Bengaluru

ಸಿಒಪಿ26  ಸಮಾವೇಶದ ಸಂದರ್ಭದಲ್ಲಿ “ಪಂಚಾಮೃತ ಯೋಜನೆ”ಯ ಘೋಷಣೆಯ ಮೂಲಕ, ಭಾರತವು 2030 ರ ವೇಳೆಗೆ 500 ಗಿಗಾ ವ್ಯಾಟ್ ಪಳೆಯುಳಿಕೆ ರಹಿತ ಶಕ್ತಿಯ ಸಾಮರ್ಥ್ಯವನ್ನು ಸಾಧಿಸಲು ಮತ್ತು 2030 ರ ವೇಳೆಗೆ ನವೀಕರಿಸಬಹುದಾದ ಶಕ್ತಿಯಿಂದ ತನ್ನ ಶಕ್ತಿಯ ಅಗತ್ಯತೆಯ 50% ಅನ್ನು ಪೂರೈಸಲು ಸಮಯವನ್ನು ನಿಗದಿಪಡಿಸಿದೆ. 'ಗ್ಲಾಸ್ಗೋ ಹವಾಮಾನ ಒಪ್ಪಂದ'ಕ್ಕೆ ಅನುಗುಣವಾಗಿ ಭಾರತ ಶುದ್ಧ ಶಕ್ತಿ ಅನುಷ್ಠಾನಕ್ಕೆ ಬದ್ಧವಾಗಿದೆ; ಭಾರತದಲ್ಲಿ ಶುದ್ಧ ಇಂಧನ ಮೂಲಗಳಿಗೆ ಪರಿವರ್ತನೆಯ ವೇಗವನ್ನು ಸಾಮಾನ್ಯ ಆದರೆ ವಿಭಿನ್ನ ಜವಾಬ್ದಾರಿಗಳು ಮತ್ತು ಸಂಬಂಧಿತ ಸಾಮರ್ಥ್ಯಗಳ ತತ್ವ, ಹವಾಮಾನ ಹಣಕಾಸು ಮತ್ತು ಕಡಿಮೆ ವೆಚ್ಚದ ಹವಾಮಾನ ತಂತ್ರಜ್ಞಾನಗಳ ವರ್ಗಾವಣೆ ಮುಂತಾದ ರಾಷ್ಟ್ರೀಯ ಸನ್ನಿವೇಶಗಳಡಿಯಲ್ಲಿ ನೋಡಬೇಕಾಗುತ್ತದೆ.

ಕಲ್ಲಿದ್ದಲು ನಮ್ಮಲ್ಲಿ ಗಣನೀಯ ಪ್ರಮಾಣದ ಮೀಸಲು ಹೊಂದಿರುವ ಕೈಗೆಟುಕುವ ಶಕ್ತಿಯ ಮೂಲವಾಗಿರುವುದರಿಂದ, ನಿರೀಕ್ಷಿತ ಭವಿಷ್ಯದ ಅವಧಿಯ ವರೆಗೆ ಶಕ್ತಿಯ ಪ್ರಮುಖ ಮೂಲವಾಗಿ ಕಲ್ಲಿದ್ದಲು ಉಳಿಯಲಿದೆ. ಹೀಗಾಗಿ, ಕಲ್ಲಿದ್ದಲು ಪರಿವರ್ತನೆಯ ವ್ಯವಸ್ಥೆಯು ಕಲ್ಲಿದ್ದಲು ಗಣಿಗಾರಿಕೆಯಲ್ಲಿ ತೊಡಗಿರುವ ಕಾರ್ಮಿಕರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.

ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಶ್ರೀ ಪ್ರಲ್ಹಾದ್ ಜೋಶಿ ಅವರು ಇಂದು ರಾಜ್ಯಸಭೆಯಲ್ಲಿ ಲಿಖಿತ ಉತ್ತರದಲ್ಲಿ ಈ ಮಾಹಿತಿಯನ್ನು ನೀಡಿದ್ದಾರೆ.

****



(Release ID: 1911202) Visitor Counter : 119


Read this release in: English , Urdu