ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ

​​​​​​​ಅಂತರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾಗವಹಿಸಲು ತಯಾರಿ ನಡೆಸುತ್ತಿರುವ ಕ್ರೀಡಾಪಟುಗಳಿಗೆ ದೇಶ ಮತ್ತು ವಿದೇಶಗಳಲ್ಲಿ ತರಬೇತಿ ಮತ್ತು ಸ್ಪರ್ಧಾತ್ಮಕ ಮಾನ್ಯತೆಗಾಗಿ ನಿರಂತರವಾಗಿ ಸಹಾಯ ಮಾಡಲಾಗುತ್ತದೆ: ಶ್ರೀ ಅನುರಾಗ್ ಠಾಕೂರ್


ಪ್ರಸ್ತುತ 34 ಕ್ರೀಡಾ ವಿಭಾಗಗಳಲ್ಲಿ 7998 ಪ್ರತಿಭಾವಂತ ಕ್ರೀಡಾಪಟುಗಳು (4969 ಹುಡುಗರು ಮತ್ತು 3029 ಹುಡುಗಿಯರು) ವಸತಿ ಮತ್ತು ವಸತಿಯೇತರ ಆಧಾರದ ಮೇಲೆ ತರಬೇತಿ ಪಡೆಯುತ್ತಿದ್ದಾರೆ.

Posted On: 21 MAR 2023 7:21PM by PIB Bengaluru

ಅಂತರರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾಗವಹಿಸಲು ಉತ್ತಮ ತಯಾರಿ ನಡೆಸುತ್ತಿರುವ ಕ್ರೀಡಾಪಟುಗಳಿಗೆ ದೇಶ ಮತ್ತು ವಿದೇಶಗಳಲ್ಲಿ ತರಬೇತಿ ಮತ್ತು ಸ್ಪರ್ಧೆಗಳಿಗಾಗಿ ಹಾಗೂ ಸ್ಪರ್ಧಾತ್ಮಕ ಮಾನ್ಯತೆಗಾಗಿ ವಾರ್ಷಿಕ ಕ್ಯಾಲೆಂಡರ್ (ಎ.ಸಿ.ಟಿ.ಸಿ.) ಮೂಲಕ ರಾಷ್ಟ್ರೀಯ ಕ್ರೀಡಾ ಒಕ್ಕೂಟಗಳಿಗೆ ನೆರವು ನೀಡುವ ಯೋಜನೆಯಡಿಯಲ್ಲಿ ನಿರಂತರವಾಗಿ ಸಹಾಯ ಮಾಡಲಾಗುತ್ತದೆ. ಇದಲ್ಲದೆ, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್ ಮತ್ತು ಕಾಮನ್‌ವೆಲ್ತ್ ಕ್ರೀಡಾಕೂಟಗಳಂತಹ ಅಂತಾರಾಷ್ಟ್ರೀಯ ಬೃಹತ್‌ ಕ್ರೀಡಾಕೂಟಗಳಲ್ಲಿ ಪದಕ ನಿರೀಕ್ಷೆಯೊಂದಿಗೆ ಪಾಲ್ಗೊಳ್ಳುವ ಕ್ರೀಡಾಪಟುಗಳ ವೈಯ್ಯಕ್ತಿಕ ಸಾಮರ್ಥ್ಯಕ್ಕೆ ಅನುಗುಣವಾಗಿ, ತರಬೇತಿಯ ಅವಶ್ಯಕತೆಗಳನ್ನು ಪೂರೈಸಲು ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಸ್ಕೀಮ್  ಅನ್ನು 2014 ರಿಂದ ಜಾರಿಗೆ ತರಲಾಗಿದೆ. ಪ್ರಸ್ತುತ, 98 ವೈಯಕ್ತಿಕ ಕ್ರೀಡಾಪಟುಗಳು ಮತ್ತು 02 ಹಾಕಿ ತಂಡಗಳನ್ನು (ಪುರುಷರು ಮತ್ತು ಮಹಿಳೆಯರು) ಟಾಪ್ಸ್‌ ಕೋರ್ ಗುಂಪಿನಲ್ಲಿ ಸೇರಿಸಲಾಗಿದೆ. ಟಾಪ್ಸ್ ಡೆವಲಪ್‌ಮೆಂಟ್ ಗ್ರೂಪ್ ಅಡಿಯಲ್ಲಿ, 165 ಗಣ್ಯ ಕ್ರೀಡಾ ಪ್ರತಿಭೆಗಳ “ಕ್ರೀಡಾ ಪ್ರತಿಭಾ ಗುರುತಿಸುವಿಕೆ” ಪೂರ್ಣಗೊಂಡಿದೆ.   

ಸಾಮೂಹಿಕ ಭಾಗವಹಿಸುವಿಕೆ ಮತ್ತು ಕ್ರೀಡೆಯಲ್ಲಿ ಉತ್ಕೃಷ್ಟತೆಯನ್ನು ಉತ್ತೇಜಿಸುವ ಅವಳಿ ಉದ್ದೇಶಗಳೊಂದಿಗೆ ಸರ್ಕಾರವು ಖೇಲೋ ಇಂಡಿಯಾ ಕಾರ್ಯಕ್ರಮಗಳನ್ನು ಪ್ರಾರಂಭಿಸಿದೆ. ಕ್ರೀಡೆಯನ್ನು ಉತ್ತೇಜಿಸಲು ಮತ್ತು ದೇಶಾದ್ಯಂತ ಕ್ರೀಡಾಂಗಣಗಳು, ಆಟದ ಮೈದಾನಗಳು, ಟ್ರ್ಯಾಕ್‌ ಗಳು ಮತ್ತು ಕ್ರೀಡಾ ತರಬೇತಿ ಸೇರಿದಂತೆ ಕ್ರೀಡೆ ಮತ್ತು ಮೂಲಸೌಕರ್ಯ ಸೌಲಭ್ಯಗಳ ಮಟ್ಟವನ್ನು ಸುಧಾರಿಸಲು ಈ ಯೋಜನೆಯಡಿಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಪ್ರಾರಂಭಿಸಲಾಗಿದೆ. ಪ್ರಸ್ತುತ, ಖೇಲೋ ಇಂಡಿಯಾ ಯೋಜನೆಯಡಿಯಲ್ಲಿ ದೇಶದಾದ್ಯಂತ 2759 ಕ್ರೀಡಾಪಟುಗಳು ತರಬೇತಿ ಮತ್ತು ಹಣಕಾಸಿನ ನೆರವು ಪಡೆಯುತ್ತಿದ್ದಾರೆ.

ವಿವಿಧ ವಯೋಮಾನದ ಪ್ರತಿಭಾವಂತ ಕ್ರೀಡಾಪಟುಗಳನ್ನು ಗುರುತಿಸಲು ಮತ್ತು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಉತ್ಕೃಷ್ಟರಾಗಲು ಅವರನ್ನು ಪೋಷಿಸಲು ಭಾರತೀಯ ಕ್ರೀಡಾ ಪ್ರಾಧಿಕಾರ (ಎಸ್.ಎ.ಐ.) ಸಂಸ್ಥೆಯು ದೇಶಾದ್ಯಂತ ಈ ಕೆಳಗಿನ ಕ್ರೀಡಾ ಪ್ರಚಾರ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದೆ:-

ರಾಷ್ಟ್ರೀಯ ಉತ್ಕೃಷ್ಟತಾ ಕೇಂದ್ರ (ನ್ಯಾಷನಲ್ ಸೆಂಟರ್ಸ್ ಆಫ್ ಎಕ್ಸಲೆನ್ಸ್ - ಎನ್.ಸಿ.ಒ.ಇ)

 ಎಸ್.ಎ.ಐ. ತರಬೇತಿ ಕೇಂದ್ರ (ಎಸ್.ಟಿ.ಸಿ)

 ಎಸ್.ಟಿ.ಸಿ.ಯ ವಿಸ್ತರಣಾ ಕೇಂದ್ರ

 ರಾಷ್ಟ್ರೀಯ ಕ್ರೀಡಾ ಪ್ರತಿಭಾ ಸ್ಪರ್ಧೆ (ಎನ್.ಎಸ್.ಟಿ.ಸಿ)

ಎಸ್‌.ಎ.ಐ. ಸಂಸ್ಥೆಯ ಈ ಮೇಲಿನ ಕ್ರೀಡಾ ಪ್ರಚಾರ ಯೋಜನೆಗಳ ಅನುಷ್ಠಾನಕ್ಕಾಗಿ ಎನ್‌.ಸಿ.ಒ.ಇ.ಗಳು, ಎಸ್‌.ಟಿ.ಸಿ.ಗಳು, ವಿಸ್ತರಣಾ ಕೇಂದ್ರಗಳು ಇತ್ಯಾದಿ ಸೇರಿದಂತೆ ಒಟ್ಟು 188 ಕೇಂದ್ರಗಳು ಒಟ್ಟಾಗಿ ಕಾರ್ಯನಿರ್ವಹಿಸುತ್ತಿವೆ. ಪ್ರಸ್ತುತ, 34 ಕ್ರೀಡಾ ವಿಭಾಗಗಳಲ್ಲಿ 7998 ಪ್ರತಿಭಾವಂತ ಕ್ರೀಡಾಪಟುಗಳು (4969 ಹುಡುಗರು ಮತ್ತು 3029 ಹುಡುಗಿಯರು) ವಸತಿ ಮತ್ತು ವಸತಿ ರಹಿತ ಆಧಾರದ ಮೇಲೆ ತರಬೇತಿ ಪಡೆಯುತ್ತಿದ್ದಾರೆ.  

ಆಯ್ಕೆಯಾದ ಕ್ರೀಡಾಪಟುಗಳಿಗೆ ಪರಿಣಿತ ತರಬೇತುದಾರರು, ಕ್ರೀಡಾ ಸಲಕರಣೆಗಳು, ಊಟೋಪಚಾರ ಮತ್ತು ವಸತಿ, ಕ್ರೀಡಾ ಕಿಟ್, ಸ್ಪರ್ಧೆಯ ಮಾನ್ಯತೆ, ಶೈಕ್ಷಣಿಕ ವೆಚ್ಚಗಳು, ವೈದ್ಯಕೀಯ/ವಿಮೆ ಮತ್ತು ಸ್ಟೈಫಂಡ್ ಮುಂತಾದವುಗಳು ಅನುಮೋದಿತ ಯೋಜನೆಯ ಮಾನದಂಡಗಳ ಪ್ರಕಾರ ಎಲ್ಲಾ ರೀತಿಯ ಬೆಂಬಲವನ್ನು ಒದಗಿಸಲಾಗುತ್ತದೆ.

ಇಂದು ಲೋಕಸಭೆಯಲ್ಲಿ ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರು ಈ ಉತ್ತರವನ್ನು ನೀಡಿದ್ದಾರೆ.

 

* ***



(Release ID: 1909669) Visitor Counter : 109


Read this release in: English , Urdu , Hindi