ಕಲ್ಲಿದ್ದಲು ಸಚಿವಾಲಯ
azadi ka amrit mahotsav

ಗಣಿ ಡೆವಲಪರ್ ಮತ್ತು ಆಪರೇಟರ್ ಗುತ್ತಿಗೆಗಳ  ನೇಮಕಾತಿ

Posted On: 20 MAR 2023 5:31PM by PIB Bengaluru

ನೀತಿ ಆಯೋಗವು ಉಕ್ಕು ಸಚಿವಾಲಯ, ಗಣಿ ಸಚಿವಾಲಯ, ಕಲ್ಲಿದ್ದಲು ಸಚಿವಾಲಯ ಮತ್ತು ಹಣಕಾಸು ಸಚಿವಾಲಯದ ಕಂದಾಯ ಇಲಾಖೆಯೊಂದಿಗೆ ಸಮಾಲೋಚಿಸಿ, ಪ್ರಕ್ರಿಯೆಯನ್ನು ಪಾರದರ್ಶಕವಾಗಿಸಲು 2020 ರಲ್ಲಿ ಗಣಿಗಾರಿಕೆ ಅಭಿವೃದ್ಧಿ ಮತ್ತು ಕಾರ್ಯಾಚರಣೆ ಗುತ್ತಿಗೆಗಳನ್ನು (ಎಂಡಿಒ) ನೀಡುವ ಪ್ರಕ್ರಿಯೆಯನ್ನು ಪುನರ್ಪರಿಶೀಲನೆ ಮಾಡಿತ್ತು. ಕೋಲ್ ಇಂಡಿಯಾ ಲಿಮಿಟೆಡ್ (ಸಿಐಎಲ್), ಸಿಂಗರೇನಿ ಕೊಲಿಯರೀಸ್ ಕಂಪನಿ ಲಿಮಿಟೆಡ್ (ಎಸ್.ಸಿ.ಸಿ.ಎಲ್) ಮತ್ತು ಎನ್.ಎಲ್. ಸಿ ಇಂಡಿಯಾ ಲಿಮಿಟೆಡ್ (ಎನ್.ಎಲ್.ಸಿ.ಐ.ಎಲ್)ಗಳು  ಎಂಡಿಒ ಗುತ್ತಿಗೆಗಳನ್ನು ನೀಡಲು ಮುಕ್ತ ಟೆಂಡರ್ ಮೂಲಕ ಪಾರದರ್ಶಕ ಪ್ರಕ್ರಿಯೆಯನ್ನು ಅನುಸರಿಸುತ್ತವೆ.

ಹೊಸ ಹರಾಜು ನಡೆಸದೆ ಸಿಐಎಲ್, ಎಸ್.ಸಿ.ಸಿ.ಎಲ್. ಮತ್ತು ಎನ್.ಎಲ್.ಸಿ.ಐ.ಎಲ್ ಯಾವುದೇ ಎಂಡಿಒ ಒಪ್ಪಂದಗಳನ್ನು ಪುನರುಜ್ಜೀವನಗೊಳಿಸಿಲ್ಲ.

ಪ್ರಸ್ತುತ, ಕಲ್ಲಿದ್ದಲು ಗಣಿಗಳ (ವಿಶೇಷ ನಿಬಂಧನೆಗಳು) ಕಾಯ್ದೆ 2015 ರ ಸೆಕ್ಷನ್ 11 (1) ಅನ್ನು ತಿದ್ದುಪಡಿ ಮಾಡುವ ಯಾವುದೇ ಪ್ರಸ್ತಾಪವಿಲ್ಲ.

ಯಾವುದೇ ಸರ್ಕಾರಿ ಗಣಿಗಾರಿಕೆ ಕಂಪನಿಗೆ ಸಿಐಎಲ್ / ಎನ್ಎಲ್.ಸಿ.ಐ.ಎಲ್.ನ ಯಾವುದೇ ಎಂಡಿಒ ಗುತ್ತಿಗೆಯನ್ನು ನೀಡಲಾಗಿಲ್ಲ.

ಕಲ್ಲಿದ್ದಲು, ಗಣಿಗಳು  ಮತ್ತು ಸಂಸದೀಯ ವ್ಯವಹಾರಗಳ ಸಚಿವ ಶ್ರೀ ಪ್ರಲ್ಹಾದ್ ಜೋಶಿ ಅವರು ಇಂದು ರಾಜ್ಯಸಭೆಯಲ್ಲಿ ನೀಡಿದ ಲಿಖಿತ ಉತ್ತರದಲ್ಲಿ ಈ ಮಾಹಿತಿಯನ್ನು ಒದಗಿಸಿದ್ದಾರೆ.

****


(Release ID: 1908971) Visitor Counter : 157
Read this release in: English , Urdu , Telugu