ಕಲ್ಲಿದ್ದಲು ಸಚಿವಾಲಯ
azadi ka amrit mahotsav

ಕಲ್ಲಿದ್ದಲು ಎಂಡಿಒ ಒಪ್ಪಂದಗಳ ಸುಧಾರಣೆ

प्रविष्टि तिथि: 20 MAR 2023 5:29PM by PIB Bengaluru

ಕಲ್ಲಿದ್ದಲು ಗಣಿ ವಿಶೇಷ ನಿಬಂಧನೆಗಳ ಕಾಯಿದೆ, 2015 ರ ಸೆಕ್ಷನ್ 11(1) ರ ಪ್ರಕಾರ, ಕಲ್ಲಿದ್ದಲು ಗಣಿಗಾರಿಕೆ ಕಾರ್ಯಾಚರಣೆಗಳಿಗೆ ಸಂಬಂಧಿಸಿದಂತೆ ಯಾವುದೇ ಪೂರ್ವ ಮಂಜೂರಾತಿದಾರರೊಂದಿಗೆ ಅಸ್ತಿತ್ವದಲ್ಲಿರುವ ಒಪ್ಪಂದಗಳನ್ನು ಅಳವಡಿಸಿಕೊಳ್ಳಲು ಮತ್ತು ಮುಂದುವರಿಸಲು ಹಂಚಿಕೆದಾರರು ಆಯ್ಕೆ ಮಾಡಬಹುದು. ಇದಲ್ಲದೆ,ಗಣಿ ಅಭಿವೃದ್ಧಿಕಾರರು ಮತ್ತು ನಿರ್ವಾಹಕರ(MDO) ಪರವಾಗಿ ನಿಗದಿಪಡಿಸಿದ ಗಣಿಗಳಲ್ಲಿ ಯಾವುದೇ ಹಕ್ಕುಗಳ ವರ್ಗಾವಣೆ ಇಲ್ಲ. ಆದ್ದರಿಂದ, ಸುಪ್ರೀಂ ಕೋರ್ಟ್ ತೀರ್ಪು ಮತ್ತು ಪ್ರಮಾಣೀಕೃತ ಗಣಿ ಸುರಕ್ಷತೆ ವೃತ್ತಿಪರ ಪರೀಕ್ಷೆ-CMSP ಕಾಯಿದೆ, 2015 ರ ಯಾವುದೇ ಉಲ್ಲಂಘನೆಯಾಗುವುದಿಲ್ಲ.

ಕೇಂದ್ರ ಸರ್ಕಾರ ಎಂಡಿಒಗಳ ನೇಮಕದಲ್ಲಿ ಯಾವುದೇ ಪಾತ್ರವನ್ನು ಹೊಂದಿಲ್ಲ. ಕಲ್ಲಿದ್ದಲು ಗಣಿ ಅಭಿವೃದ್ಧಿ ಮತ್ತು ಉತ್ಪಾದನಾ ಒಪ್ಪಂದದ ನಿಬಂಧನೆಗಳ ಪ್ರಕಾರ ಪಾರದರ್ಶಕವಾಗಿ ಎಂಡಿಒಗಳನ್ನು ನೇಮಿಸುವುದು ರಾಜ್ಯ ಅಥವಾ ಕೇಂದ್ರ ಸರ್ಕಾರದ ಸಾರ್ವಜನಿಕ ಉದ್ದಿಮೆ ಘಟಕಗಳ ಜವಾಬ್ದಾರಿಯಾಗಿದೆ. 

ಕಲ್ಲಿದ್ದಲು ನಿಕ್ಷೇಪವನ್ನು ಹಂಚಿಕೆ ಮಾಡುವ ಮೊದಲು ಎಂಡಿಒಗಳ ನೇಮಕಾತಿಗೆ ಸಂಬಂಧಿಸಿದ ನಿಬಂಧನೆಗಳನ್ನು CMSP ಕಾಯಿದೆಯ ಸೆಕ್ಷನ್ 11 (1) ನಲ್ಲಿ ಉಲ್ಲೇಖಿಸಲಾಗಿದೆ. ಭವಿಷ್ಯದಲ್ಲಿ ಸರ್ಕಾರಿ ಕಂಪನಿಗಳಿಗೆ ಕಲ್ಲಿದ್ದಲು ಬ್ಲಾಕ್‌ಗಳನ್ನು ಹಂಚಿಕೆ ಮಾಡಿದ ನಂತರ ಎಂಡಿಒಗಳ ನೇಮಕಾತಿಯನ್ನು ಖಾತ್ರಿಪಡಿಸಿಕೊಳ್ಳಲು, ಸಿಎಂಎಸ್‌ಪಿ ಕಾಯ್ದೆಗೆ ತಿದ್ದುಪಡಿ ಮಾಡುವ ಬದಲು ಕಲ್ಲಿದ್ದಲು ಸಚಿವಾಲಯವು ಸರ್ಕಾರ ಮತ್ತು ಸರ್ಕಾರದ ಕಂಪೆನಿಗಳ ನಡುವೆ "ಕಲ್ಲಿದ್ದಲು ನಿಕ್ಷೇಪ ಹಂಚಿಕೆಗೆ ಮುನ್ನ ಎಂಡಿಒಗಳ ನೇಮಕಾತಿ"ಯನ್ನು ಹೊರತುಪಡಿಸಿ ಕಂಪನಿಗಳ ಹಂಚಿಕೆದಾರರು ಸಹಿ ಮಾಡಿದ ಕಲ್ಲಿದ್ದಲು ಗಣಿ ಅಭಿವೃದ್ಧಿ ಮತ್ತು ಉತ್ಪಾದನಾ ಒಪ್ಪಂದದಲ್ಲಿ ಒಂದು ಷರತ್ತು ಸೇರಿಸಬಹುದು ಎಂದು ನೀತಿ ಆಯೋಗವು ಶಿಫಾರಸು ಮಾಡಿದೆ. 

ಎಂಡಿಒ ಪರವಾಗಿ ಮಂಜೂರು ಮಾಡಿದ ಗಣಿಗಳಲ್ಲಿ ಹಕ್ಕುಗಳನ್ನು ವರ್ಗಾಯಿಸಲು ಯಾವುದೇ ನಿಬಂಧನೆ ಇಲ್ಲದಿರುವುದರಿಂದ ಸಾರ್ವಜನಿಕ ಬೊಕ್ಕಸಕ್ಕೆ ಯಾವುದೇ ನಷ್ಟ ಉಂಟಾಗುವುದಿಲ್ಲ.

ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಶ್ರೀ ಪ್ರಲ್ಹಾದ್ ಜೋಶಿ ಅವರು ಇಂದು ರಾಜ್ಯಸಭೆಯಲ್ಲಿ ಲಿಖಿತ ಉತ್ತರ ನೀಡುವ ವೇಳೆ ಈ ಮಾಹಿತಿ ತಿಳಿಸಿದ್ದಾರೆ.

*****


(रिलीज़ आईडी: 1908970) आगंतुक पटल : 141
इस विज्ञप्ति को इन भाषाओं में पढ़ें: English , Urdu , Telugu