ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav g20-india-2023

ಗುಜರಾತ್‌ನ ವಡೋದರದಲ್ಲಿ ನಡೆದ ಮಹಾರಾಜ ಸಯ್ಯಾಜಿರಾವ್ ವಿಶ್ವವಿದ್ಯಾಲಯದ 71ನೇ ಘಟಿಕೋತ್ಸವದಲ್ಲಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಮುಖ್ಯ ಅತಿಥಿಯಾಗಿ ಭಾಗಿ


ಮಹಾರಾಜ ಸಯ್ಯಾಜಿರಾವ್ ತಮ್ಮ ಆಡಳಿತಾವಧಿಯಲ್ಲಿ ಒಂದು ರೀತಿಯ ಆಡಳಿತ ಸ್ಥಾಪಿಸಲು ಪ್ರಯತ್ನಿಸಿದರು, ಇದು ಇಂದಿಗೂ ಉತ್ತಮ ಆಡಳಿತದ ಉದಾಹರಣೆಯಾಗಿದೆ.

ಒಬ್ಬ ದೊರೆ ತನ್ನ ಬದಲು ಜನರ ಹಿತಾಸಕ್ತಿಗಳ ಬಗ್ಗೆ ಯೋಚಿಸಿದಾಗ ಸಮಾಜದಲ್ಲಿ ದೊಡ್ಡ ಬದಲಾವಣೆಯಾಗುತ್ತದೆ ಎಂಬುದು ಮಹಾರಾಜ ಸಯ್ಯಾಜಿರಾವ್ ಅವರ ಜೀವನದಿಂದ ಸ್ಪಷ್ಟವಾಗಿದೆ.

ಮಹಾರಾಜ ಸಯ್ಯಾಜಿರಾವ್ ಅವರ ನಾಡು ಮತ್ತು ಇಡೀ ದೇಶ ಗುಲಾಮಗಿರಿ ಅನುಭವಿಸುತ್ತಿರುವ ಸಮಯದಲ್ಲಿ, ಮಹಾರಾಜ ಸಯ್ಯಾಜಿರಾವ್ ಅವರು ಈ ಇಡೀ ಪ್ರದೇಶದಲ್ಲಿ ಆ ರೀತಿ ಆಗಲು ಬಿಡಲಿಲ್ಲ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಹೊಸ ಶಿಕ್ಷಣ ನೀತಿಯು ಸಯ್ಯಾಜಿರಾವ್ ಅವರ ಲಭ್ಯ ಶಿಕ್ಷಣದ ಕಲ್ಪನೆ, ಸರ್ದಾರ್ ಪಟೇಲ್ ಅವರ ಸಬಲೀಕರಣದ ಕಲ್ಪನೆ, ಡಾ. ಅಂಬೇಡ್ಕರ್ ಜಿ ಅವರ ಜ್ಞಾನ ಆಧಾರಿತ ಶಿಕ್ಷಣದ ಕಲ್ಪನೆ, ಶ್ರೀ ಅರಬಿಂದೋ ಅವರ ಸಾಂಸ್ಕೃತಿಕ ಮತ್ತು ರಾಷ್ಟ್ರೀಯತೆಯ ಶಿಕ್ಷಣದ ಕಲ್ಪನೆ ಮತ್ತು ಮಾತೃಭಾಷೆಗೆ ಗಾಂಧೀಜಿ ನೀಡಿದ್ದ ಆದ್ಯತೆಗೆ ಒತ್ತು ನೀಡಿದೆ

ಹೊಸ ಶಿಕ್ಷಣ ನೀತಿಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶಿಕ್ಷಣವನ್ನು ತಡೆರಹಿತ ಮತ್ತು ವರ್ಗರಹಿತವಾಗಿಸಿದ್ದಾರೆ. ಇದು ಪರಿಪೂರ್ಣ ಮಾನವನನ್ನು ರೂಪಿಸುವ ಶಿಕ್ಷಣ ಗುರಿ ಸಾಧಿಸಲು ಸಹಾಯ ಮಾಡುತ್ತದೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ದೇಶದ ಯುವಕರಿಗೆ ಅಪಾರ ಅವಕಾಶಗಳನ್ನು ಒದಗಿಸಿದ್ದಾರೆ. ಕೌಶಲ್ಯ ಅಭಿವೃದ್ಧಿಯ ಮೂಲಕ ಕೌಶಲ್ಯ, ಕೌಶಲ್ಯ ಮೇಲ್ದರ್ಜೆ ಮತ್ತು ಮರುಕೌಶಲ್ಯದ 3 ಯೋಜನೆಗಳ ಮೂಲಕ ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆ ಹೊರತರಲು ಮತ್ತು ಹೆಚ್ಚಿಸಲು ಕೆಲಸ ಮಾಡಿದ್ದಾರೆ.

ಈ ವಿಶ್ವವಿದ್ಯಾನಿಲಯದಿಂದ ಪದವಿ ಪಡೆಯುವ ವಿದ್ಯಾರ್ಥಿಗಳು ಇಂದು ಇಲ್ಲಿ ಪಡೆದ ಶಿಕ್ಷಣ ಮತ್ತು ಮೌಲ್ಯಗಳ ಆಧಾರದ ಮೇಲೆ ಸಮಾಜದ ಕಾಳಜಿ ವಹಿಸಲು ಮತ್ತು ಅದನ್ನು ಮುನ್ನಡೆಸಲು ಪ್ರಯತ್ನಿಸಬೇಕಾಗಿದೆ.

Posted On: 18 MAR 2023 10:10PM by PIB Bengaluru

ಗುಜರಾತ್‌ನ ವಡೋದರದಲ್ಲಿ ನಡೆದ ಮಹಾರಾಜ ಸಯ್ಯಾಜಿರಾವ್ ವಿಶ್ವವಿದ್ಯಾಲಯದ 71ನೇ ಘಟಿಕೋತ್ಸವದಲ್ಲಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ನಂತರ ಭಾಷಣ ಮಾಡಿದ ಅವರು, ಇದು ಮಹಾರಾಜ ಸಯ್ಯಾಜಿರಾವ್ ಅವರ ನಾಡು, ಇದು ಸಂಸ್ಕಾರ ನಗರಿ ಎಂದು ಹೆಸರಾಗಿದೆ. ಇಡೀ ದೇಶವೇ ಗುಲಾಮಗಿರಿ ಅನುಭವಿಸುತ್ತಿದ್ದಾಗ ಮಹಾರಾಜ ಸಯ್ಯಾಜಿರಾವ್ ಅವರು ಈ ಇಡೀ ಪ್ರದೇಶದಲ್ಲಿ ಹಾಗೆ ಆಗಲು ಬಿಡಲಿಲ್ಲ. ಈ ನೆಲದಲ್ಲಿ ಶ್ರೀ ಅರಬಿಂದೊ, ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಹೆಚ್ಚಿನ ಅಧ್ಯಯನಕ್ಕೆ ಇಲ್ಲಿ ಅವಕಾಶ ಸಿಕ್ಕಿತು, ಇಲ್ಲಿಂದ ಶಿಕ್ಷಣ ಪಡೆಯುವ ಮೂಲಕ ವಿನೋಬಾ ಭಾವೆ, ಕೆ.ಎಂ. ಮುನ್ಷಿ, ಹಂಸಾ ಮೆಹ್ತಾ ಮತ್ತು ದಾದಾ ಸಾಹೇಬ್ ಫಾಲ್ಕೆ ಭಾರತವನ್ನು ಮುನ್ನಡೆಸುವಲ್ಲಿ ಅಪಾರ ಕೊಡುಗೆ ನೀಡಿದ್ದಾರೆ.

ಸಮಾಜ, ದೇಶ, ವಿಶ್ವಕ್ಕಾಗಿ ದುಡಿಯುವವರನ್ನು ಮಾತ್ರ ನೆನಪಿಸಿಕೊಳ್ಳಲಾಗುತ್ತದೆ. ಇದೇ  ದಿನ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಬರ್ಮಾವನ್ನು ಪ್ರವೇಶಿಸಿ ಸ್ವತಂತ್ರ ಭಾರತಕ್ಕೆ ಕಾಲಿಡುತ್ತಿದ್ದರು. ತಮ್ಮ ಜೀವನದಲ್ಲಿ ಸಾಕಷ್ಟು ನೋವುಗಳನ್ನು ಅನುಭವಿಸಿದ  ನಡುವೆಯೂ, ನೇತಾಜಿಯಂತಹ ವ್ಯಕ್ತಿ ಅನೇಕ ಪ್ರಯತ್ನಗಳನ್ನು ಮಾಡಿದ್ದಾರೆ. ಇಂದಿಗೂ ಜಗತ್ತು ನೇತಾಜಿ ಅವರನ್ನು ಗೌರವಿಸುತ್ತದೆ ಮತ್ತು ಸ್ಮರಿಸುತ್ತದೆ. ಏಕೆಂದರೆ ಅವರು ಯಾವಾಗಲೂ ಇತರರಿಗಾಗಿ ಕೆಲಸ ಮಾಡಿದರು.

ಇಂದು 6,713 ವಿದ್ಯಾರ್ಥಿಗಳು ಮತ್ತು 8,048 ವಿದ್ಯಾರ್ಥಿನಿಯರು ತಮ್ಮ ವಿದ್ಯಾರ್ಥಿ ಜೀವನವನ್ನು ಮುಗಿಸಿದ ನಂತರ ತಮ್ಮ ಮುಂದಿನ ಹೊಸ ಪಯಣಕ್ಕೆ ಹೆಜ್ಜೆ ಹಾಕುತ್ತಿದ್ದಾರೆ.  ಇಲ್ಲಿಂದ ಪಡೆದ ಶಿಕ್ಷಣದ ಆಧಾರದ ಮೇಲೆ ಸಮಾಜದಲ್ಲಿ ಸುಧಾರಣೆ ತಂದು, ಮುನ್ನಡೆಯಲು ಪ್ರಯತ್ನಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ ಸಚಿವರು, ಮಹಾರಾಜ ರಣಜಿತ್ ಸಿಂಗ್ ಗಾಯಕ್ ವಾಡ್ ಇನ್ ಸ್ಟಿಟ್ಯೂಟ್ ಆಫ್ ಡಿಸೈನ್ ಸಂಸ್ಥೆಯ  ವರ್ಚುವಲ್ ಉದ್ಘಾಟನೆಯೂ ಇಂದು ಇಲ್ಲಿ ನಡೆದಿದೆ ಎಂದರು.

ಮಹಾರಾಜ ಸಯ್ಯಾಜಿರಾವ್ ಅವರು ತಮ್ಮ ಆಡಳಿತಾವಧಿಯಲ್ಲಿ ಒಂದು ರೀತಿಯ ಆಡಳಿತ ಸ್ಥಾಪಿಸಲು ಪ್ರಯತ್ನಿಸಿದರು. ಅದು ಇಂದಿಗೂ ಉತ್ತಮವಾಗಿದೆ, ಪ್ರಸ್ತುತವಾಗಿದೆ. ಮಹಾರಾಜ ಸಯ್ಯಾಜಿರಾವ್ ಅವರ ಆಳ್ವಿಕೆಯಲ್ಲಿ ಗ್ರಂಥಾಲಯವಿಲ್ಲದ ಒಂದೇ ಒಂದು ಹಳ್ಳಿ ಇರಲಿಲ್ಲ, ಶಿಕ್ಷಣ ಪಡೆಯದ ಹೆಣ್ಣು ಮಗು ಇರಲಿಲ್ಲ. ತಮ್ಮ ಆಳ್ವಿಕೆಯಲ್ಲಿ ಮಹಾರಾಜರು ಶಿಕ್ಷಣ, ನ್ಯಾಯ ಸ್ಥಾಪನೆ, ದೀನದಲಿತರ ಉನ್ನತಿ, ನೀರಾವರಿ, ಕೃಷಿ ಮತ್ತು ಸಾಮಾಜಿಕ ಸುಧಾರಣೆಗಳಂತಹ ಅನೇಕ ವಿಷಯಗಳಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ. ಬಾಬಾಸಾಹೇಬ ಡಾ. ಬಿ.ಆರ್. ಅಂಬೇಡ್ಕರ್ ಅವರು ಮಹಿಳಾ ಶಿಕ್ಷಣವನ್ನು ಪ್ರೋತ್ಸಾಹಿಸಿದರು. ಆಗಿನ ಪರ್ದಾ ಪದ್ಧತಿ ರದ್ದುಗೊಳಿಸಿದರು, ಬಾಲ್ಯ ವಿವಾಹ ನಿಷೇಧಿಸಿದರು, ವಿಚ್ಛೇದನಕ್ಕೆ ಸ್ವತಂತ್ರ ಕಾನೂನು ಮಾಡಿದರು.ವಿಧವಾ ಮರುರ್ವಿವಾಹ ಕಾಯ್ದೆ  ತರುವ ಮೂಲಕ ಕ್ರಾಂತಿಕಾರಿ ಕೆಲಸಗಳನ್ನು ಮಾಡಿದರು, ಉದ್ಯೋಗ ಸೃಷ್ಟಿಗೆ ಶಿಕ್ಷಣದ ಆಯಾಮಗಳನ್ನು ಬದಲಾಯಿಸಿದರು ಎಂದರು.

ಹೊಸ ಶಿಕ್ಷಣ ನೀತಿಯನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದರೆ, ಶಿಕ್ಷಣದ ಉಪಯುಕ್ತತೆಯ ಬಗೆಗಿನ ಪರಿಕಲ್ಪನೆಗಳು ಸ್ಪಷ್ಟವಾಗುತ್ತವೆ ಎಂದು ಅಮಿತ್ ಶಾ ಅವರು, ಪದವಿ ಸ್ವೀಕರಿಸುವ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಹೇಳಿದರು. ಹೊಸ ಶಿಕ್ಷಣ ನೀತಿಯು ಸಯ್ಯಾಜಿರಾವ್ ಅವರ ಸುಲಭ ಶಿಕ್ಷಣದ ಪರಿಕಲ್ಪನೆ, ಸರ್ದಾರ್ ಪಟೇಲ್ ಅವರ ಸಬಲೀಕರಣ ಪರಿಕಲ್ಪನೆ, ಡಾ. ಅಂಬೇಡ್ಕರ್ ಅವರ ಜ್ಞಾನ ಆಧಾರಿತ ಶಿಕ್ಷಣದ ಪರಿಕಲ್ಪನೆ, ಶ್ರೀ ಅರಬಿಂದೊ ಅವರ ಸಾಂಸ್ಕೃತಿಕ ಮತ್ತು ರಾಷ್ಟ್ರೀಯತೆಯ ಪರಿಕಲ್ಪನೆ ಮತ್ತು ಗಾಂಧೀಜಿ ಅವರ ಮಾತೃಭಾಷೆಯಲ್ಲಿ ಶಿಕ್ಷಣದ ಪರಿಕಲ್ಪನೆಯನ್ನು ಹೊಂದಿದೆ.  ಮಾತೃಭಾಷೆಯನ್ನು ಎಂದಿಗೂ ತಪ್ಪಿಸಬಾರದು ಮತ್ತು ಮಾತೃಭಾಷೆ ಮೇಲಿನ ಕೀಳರಿಮೆಯಿಂದ ಹೊರಬರಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಯಾವುದೇ ವ್ಯಕ್ತಿ ಮಾತೃಭಾಷೆಯಲ್ಲಿ ಚೆನ್ನಾಗಿ ಆಲೋಚಿಸಬಲ್ಲ, ತನ್ನದೇ ಭಾಷೆಯಲ್ಲಿ ಉತ್ತಮ ಸಾಮರ್ಥ್ಯದೊಂದಿಗೆ ಸಂಶೋಧನೆ ನಡೆಸಬಲ್ಲ ಮತ್ತು ಇದರೊಂದಿಗೆ ವಿಶ್ಲೇಷಣೆ ಮತ್ತು ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವೂ ಹೆಚ್ಚುತ್ತದೆ ಎಂದರು. ವ್ಯಕ್ತಿತ್ವ ನಿರ್ಮಾಣಕ್ಕೆ ಸ್ವಂತ ಭಾಷೆಗಿಂತ ದೊಡ್ಡ ಮಾಧ್ಯಮ ಇನ್ನೊಂದಿಲ್ಲ. ಪ್ರಾಚೀನ ಭಾಷೆಗಳು ನಮ್ಮ ದೇಶಕ್ಕೆ ಸೇರಿದ್ದು, ಅತ್ಯುತ್ತಮ ವ್ಯಾಕರಣ, ಸಾಹಿತ್ಯ, ಕಾವ್ಯ, ಇತಿಹಾಸ ನಮ್ಮ ಭಾಷೆಯಲ್ಲಿವೆ. ನಾವು ನಮ್ಮ ಭಾಷೆಗಳನ್ನು ಉತ್ತೇಜಿಸದ ಹೊರತು ದೇಶದ ಭವಿಷ್ಯ ಸುಧಾರಿಸಲು ಸಾಧ್ಯವಿಲ್ಲ. ಹಾಗಾಗಿ, ನೂತನ ಶಿಕ್ಷಣ ನೀತಿಯಲ್ಲಿ ಭಾಷೆಯ ಪ್ರಾಮುಖ್ಯತೆಯನ್ನು ಕಾಯ್ದುಕೊಳ್ಳಲು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪ್ರಾಥಮಿಕ ಶಿಕ್ಷಣದಲ್ಲಿ ಮಾತೃಭಾಷೆ ಕಡ್ಡಾಯಗೊಳಿಸಲು ಕ್ರಮ ಕೈಗೊಂಡಿದ್ದಾರೆ ಎಂದು ಹೇಳಿದರು. ಹೊಸ ಶಿಕ್ಷಣ ನೀತಿಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶಿಕ್ಷಣವನ್ನು ತಡೆರಹಿತ ಮತ್ತು ವರ್ಗರಹಿತವಾಗಿಸಿದ್ದಾರೆ. ಹೀಗಾದಾಗ ಮಾತ್ರ ಮುಕ್ತವಾಗಿ ಯೋಚಿಸಿ ಜ್ಞಾನದ ಲೋಕಕ್ಕೆ ಪ್ರವೇಶ ಪಡೆಯಬಹುದು. ಶಿಕ್ಷಣದ ಗುರಿ ಪದವಿ, ಉತ್ತಮ ಉದ್ಯೋಗ ಅಥವಾ ವೈಯಕ್ತಿಕ ಜೀವನದಲ್ಲಿ ಸೌಕರ್ಯಗಳನ್ನು ಪಡೆಯುವುದಲ್ಲ, ಆದರೆ ಪರಿಪೂರ್ಣ ಮಾನವನಾಗುವುದು ಮತ್ತು ಇದು ತಡೆರಹಿತ ಮತ್ತು ವರ್ಗರಹಿತ ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ಅಮಿತ್ ಶಾ ಹೇಳಿದರು.

ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳ ಈ ಸುದೀರ್ಘ ಪಯಣವು ಉಜ್ವಲ ಸಾಧನೆಗಳ ಪಯಣವಾಗಿದೆ. ಆಜಾದಿ ಕಾ ಅಮೃತ ಮಹೋತ್ಸವ ಆಚರಿಸಲು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 3 ಉದ್ದೇಶಗಳನ್ನು ನಮ್ಮ ಮುಂದೆ ಇಟ್ಟಿದ್ದಾರೆ. ಮೊದಲನೆಯದಾಗಿ, ದೇಶದ ಯುವಜನತೆಗೆ ಸ್ವಾತಂತ್ರ್ಯ ಹೋರಾಟ ಮತ್ತು ಸ್ವಾತಂತ್ರ್ಯಪೂರ್ವ ಇತಿಹಾಸದ ಬಗ್ಗೆ ಅರಿವು ಮೂಡಿಸಬೇಕು. ಎರಡನೆಯದಾಗಿ, 75 ವರ್ಷಗಳ ಸಾಧನೆಗಳ ಬಗ್ಗೆ ಹೆಮ್ಮೆಪಡುವುದು. ಮೂರನೆಯದಾಗಿ, 75ರಿಂದ 100 ವರ್ಷಗಳ ಪ್ರಯಾಣವನ್ನು ದೃಢ ಸಂಕಲ್ಪಗಳ ಪ್ರಯಾಣವನ್ನಾಗಿ ಮಾಡುವ ಮೂಲಕ ವಿಶ್ವದ  ಪ್ರತಿ ಕ್ಷೇತ್ರದಲ್ಲೂ ಭಾರತವನ್ನು ಮೊದಲ ಸ್ಥಾನದಲ್ಲಿರಿಸಲು ನಿರ್ಧರಿಸುವುದಾಗಿದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 75ರಿಂದ 100 ವರ್ಷಗಳ ಅವಧಿಯನ್ನು ‘ಅಮೃತ ಕಾಲ’ ಎಂದು ಕರೆದಿದ್ದಾರೆ. ಅದನ್ನು ‘ಸಂಕಲ್ಪ ಸೇ ಸಿದ್ಧಿ’ ಎಂದೂ ಕರೆದಿದ್ದಾರೆ. 130 ಕೋಟಿ ಜನರು ಒಂದು ಹೆಜ್ಜೆ ಮುಂದಿಟ್ಟರೆ ದೇಶ 130 ಕೋಟಿ ಹೆಜ್ಜೆ ಮುಂದಿಡುತ್ತದೆ. ಭಾರತವನ್ನು ಶ್ರೇಷ್ಠ ಮತ್ತು ವಿಶ್ವದ ಪ್ರತಿಯೊಂದು ಕ್ಷೇತ್ರದಲ್ಲೂ ಮೊದಲ ಸ್ಥಾನದಲ್ಲಿರಿಸುವ ಜವಾಬ್ದಾರಿ ದೇಶದ ಯುವಕರ ಮೇಲಿದೆ ಎಂದು ಶ್ಹಾ ಹೇಳಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೇಶದ ಯುವಕರಿಗೆ ಅಪಾರ ಅವಕಾಶಗಳನ್ನು ಒದಗಿಸಿದ್ದಾರೆ. 2016ರಲ್ಲಿ ದೇಶಾದ್ಯಂತ 724 ಸ್ಟಾರ್ಟಪ್‌ಗಳಿದ್ದವು. ಅವೀಗ 2022ರ ವೇಳೆಗೆ 70,000 ಸ್ಟಾರ್ಟಪ್‌ಗಳಿಗೆ ಏರಿಕೆಯಾಗಿದೆ. ಹೆಚ್ಚುವರಿಯಾಗಿ 107 ಸ್ಟಾರ್ಟಪ್‌ಗಳು ಯುನಿಕಾರ್ನ್ ಕ್ಲಬ್‌ನಲ್ಲಿವೆ. 2016ರಲ್ಲಿ ಅವುಗಳ ಸಂಖ್ಯೆ ಕೇವಲ 4 ಇತ್ತು. ದೇಶದ ಒಟ್ಟು ಸ್ಟಾರ್ಟಪ್‌ಗಳಲ್ಲಿ 45% ಸ್ಟಾರ್ಟಪ್ ಗಳನ್ನು ಮಹಿಳೆಯರು ಮತ್ತು ಯುವತಿಯರು ನಡೆಸುತ್ತಿದ್ದಾರೆ. 45% ಸ್ಟಾರ್ಟಪ್‌ಗಳು 2 ಮತ್ತು 3ನೇ ಶ್ರೇಣಿಯ ನಗರಗಳಲ್ಲಿವೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 25 ಕ್ಷೇತ್ರಗಳನ್ನು ಗುರುತಿಸುವ ಮೂಲಕ 'ಮೇಕ್ ಇನ್ ಇಂಡಿಯಾ' ಯೋಜನೆ ಪ್ರಾರಂಭಿಸಿದರು. ಅದರ ಅಡಿ, ಅನೇಕ ಹೊಸ ಕ್ಷೇತ್ರಗಳನ್ನು ತೆರೆಯಲಾಯಿತು, ಇದರ ಪರಿಣಾಮವಾಗಿ ಭಾರತದ ಸರಕು ರಫ್ತು ಪ್ರಮಾಣ 400 ಶತಕೋಟಿ ಡಾಲರ್ ದಾಟಿದೆ. ಉತ್ಪಾದನೆ ಸಂಪರ್ಕಿತ ಉತ್ತೇಜನಾ ಯೋಜನೆ(ಪಿಎಲ್ಐ)ಯ ಹೂಡಿಕೆಯಿಂದ 4 ಲಕ್ಷ ಕೋಟಿ ರೂ. ಒಳಹರಿವಾಗಿದೆ.  ಕೌಶಲ್ಯ, ಕೌಶಲ್ಯ ಮೇಲ್ದರ್ಜೆ ಮತ್ತು ಮರುಕೌಶಲ್ಯದ 3 ಕೌಶಲ್ಯಾಭಿವೃದ್ಧಿ ಯೋಜನೆಗಳ ಮೂಲಕ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆ ಹೊರತಂದಿದೆ ಮತ್ತು ನವೀಕರಿಸಿದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಯುವಕರ ಸಾಮರ್ಥ್ಯ ವೃದ್ಧಿಗಾಗಿ ಹಲವು ಕ್ಷೇತ್ರಗಳನ್ನು ತೆರೆದಿದ್ದಾರೆ. ದೇಶದ ಸ್ವಾತಂತ್ರ್ಯದ ಶತಮಾನೋತ್ಸವದ ಸಮಯದಲ್ಲಿ, ಭಾರತವು ವಿಶ್ವದ ಎಲ್ಲಾ ಕ್ಷೇತ್ರಗಳಲ್ಲಿ ಖಂಡಿತವಾಗಿಯೂ ಮೊದಲ ಸ್ಥಾನದಲ್ಲಿರುತ್ತದೆ ಎಂದು ಸಚಿವ ಅಮಿತ್ ಶ್ಹಾ ಹೇಳಿದರು.


***(Release ID: 1908559) Visitor Counter : 109


Read this release in: English , Urdu , Hindi