ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ

​​​​​​​ಸೇಲ್ಸ್‌ಫೋರ್ಸ್ ಮತ್ತು ಟ್ರೂಕಾಲರ್‌ ಭಾರತ ಕಚೇರಿಗಳನ್ನು ಉದ್ಘಾಟಿಸಿದ ಸಚಿವ ರಾಜೀವ್ ಚಂದ್ರಶೇಖರ್


2014ರಲ್ಲಿ ಏಕ ಆಯಾಮದಂತಿದ್ದ ಭಾರತದ ಡಿಜಿಟಲ್ ಆರ್ಥಿಕತೆಯು ಇದೀಗ ವಿಶಾಲ-ತಳಹದಿಯ ಉನ್ನತ ಬೆಳವಣಿಗೆಗೆ ಸ್ಥಳಾಂತರಗೊಂಡಿದೆ: ಸಚಿವ ರಾಜೀವ್ ಚಂದ್ರಶೇಖರ್

Posted On: 16 MAR 2023 7:17PM by PIB Bengaluru

ನರೇಂದ್ರ ಮೋದಿ ಸರ್ಕಾರದ ಸುಲಭವಾಗಿ ಉದ್ಯಮ ವ್ಯವಹಾರ ನಡೆಸುವ ನೀತಿಗಳು ನವ ಭಾರತದ ಉತ್ಪಾದನೆ ಮತ್ತು ಸ್ಟಾರ್ಟಪ್ ಪರಿಸರ ವ್ಯವಸ್ಥೆಗೆ ಸಹಾಯ ಮಾಡಿದೆ, ಜಾಗತಿಕ ಕಂಪನಿಗಳು ಭಾರತದಲ್ಲಿ ಕಚೇರಿಗಳನ್ನು ತೆರೆಯಲು ಉತ್ತೇಜಿಸಿದೆ. ಅಲ್ಲದೆ, ಯುವ ಭಾರತೀಯರಿಗೆ ಉದ್ಯೋಗಗಳು ಮತ್ತು ಉದ್ಯಮಶೀಲತಾ ಅವಕಾಶಗಳನ್ನು ತರುತ್ತಿದೆ ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ವಾಣಿಜ್ಯೋದ್ಯಮ ಹಾಗೂ ವಿದ್ಯುನ್ಮಾನ ಮತ್ತು ಐಟಿ ಖಾತೆ ರಾಜ್ಯ ಸಚಿವ ಶ್ರೀ ರಾಜೀವ್ ಚಂದ್ರಶೇಖರ್ ತಿಳಿಸಿದ್ದಾರೆ.

ಸೇಲ್ಸ್‌ಫೋರ್ಸ್ ಮತ್ತು ಟ್ರೂಕಾಲರ್ ಅನುಕ್ರಮವಾಗಿ ಹೈದರಾಬಾದ್ ಮತ್ತು ಬೆಂಗಳೂರಿನಲ್ಲಿ ತಮ್ಮ ಭಾರತ ಕಚೇರಿಗಳನ್ನು ತೆರೆಯುವ ಕ್ರಮವನ್ನು ಸ್ವಾಗತಿಸಿದ ಸಚಿವರು, “ಇದು ವಿಶ್ವಕ್ಕೆ ವಿಶ್ವಾಸಾರ್ಹ ತಂತ್ರಜ್ಞಾನ ಪಾಲುದಾರನಾಗಿ ಭಾರತದ ಬೆಳವಣಿಗೆಯನ್ನು ಹೇಳುತ್ತಿದೆ, ಸರ್ಕಾರದ ಪೂರ್ವಭಾವಿ ನೀತಿಗಳು ಮತ್ತು ನಮ್ಮ ರೋಮಾಂಚಕ ಸ್ಟಾರ್ಟಪ್ ಗಳು ಮತ್ತು ನಾವೀನ್ಯತೆ ಪರಿಸರ ವ್ಯವಸ್ಥೆಯಿಂದ  ಇದನ್ನು ಸಾಧ್ಯವಾಗಿಸಿದೆ ಎಂದು ಶ್ರೀ ರಾಜೀವ್ ಚಂದ್ರಶೇಖರ್ ಅವರು ನವದೆಹಲಿಯಿಂದ ಈ ಜಾಗತಿಕ ತಂತ್ರಜ್ಞಾನ ಕಂಪನಿಗಳ ಕಚೇರಿಗಳನ್ನು ಉದ್ಘಾಟಿಸಿ, ಮಾತನಾಡಿದರು.

ತಂತ್ರಜ್ಞಾನದ ಬಳಕೆಯಲ್ಲಿ ಭಾರತವು ಅಗ್ರಗಣ್ಯ ರಾಷ್ಟ್ರವಾಗಿ ಹೊರಹೊಮ್ಮುತ್ತಿರುವ ಕುರಿತು ಮಾತನಾಡಿದ ಸಚಿವರು, “ದೀರ್ಘಕಾಲದಿಂದ ಭಾರತವು ಜಗತ್ತಿನ ಬ್ಯಾಕ್ ಆಫೀಸ್ ಎಂದು ಕರೆಯಲ್ಪಡುತ್ತಿದೆ, ನಮ್ಮ ಡಿಜಿಟಲ್ ಆರ್ಥಿಕತೆಯು ಐಟಿ ಮತ್ತು ಐಟಿ ಸಂಬಂಧಿತ ಸೇವಾ ವಲಯದ ಹಲವಾರು ಕಂಪನಿಗಳ ಉಪಸ್ಥಿತಿಯಿಂದ ವ್ಯಾಖ್ಯಾನಿತವಾಗಿದೆ. 2014ರಲ್ಲಿ ಪ್ರಧಾನ ಮಂತ್ರಿ ಅಧಿಕಾರ ವಹಿಸಿಕೊಂಡ ನಂತರ, ಡಿಜಿಟಲ್ ಆರ್ಥಿಕತೆಯು ಭಾರತದ ಬೆಳವಣಿಗೆಯಲ್ಲಿ ಯಶೋಗಾಥೆಯಾಗಲಿದೆ ಮತ್ತು ಬಹುದೊಡ್ಡ ಪಾತ್ರ ವಹಿಸಲಿದೆ, ಭಾರತದ ಜಿಡಿಪಿಯಲ್ಲಿ ಬಹುದೊಡ್ಡ ಭಾಗವಾಗಲಿದೆ ಎಂಬ ದೂರದೃಷ್ಟಿ ಹೊಂದಿದ್ದರು ಎಂದರು.

2015ರಲ್ಲಿ ಡಿಜಿಟಲ್ ಇಂಡಿಯಾ ಕಾರ್ಯಕ್ರಮ ಪ್ರಾರಂಭಿಸುವುದರೊಂದಿಗೆ, 2014ರಲ್ಲಿ ನಾವು ಆನುವಂಶಿಕವಾಗಿ ಪಡೆದ ಏಕಆಯಾಮದ ಡಿಜಿಟಲ್ ಆರ್ಥಿಕತೆಯು ವಿಶಾಲ ತಳಹದಿಯ ಹೆಚ್ಚಿನ ಬೆಳವಣಿಗೆಯ ಡಿಜಿಟಲ್ ಆರ್ಥಿಕತೆಯಾಗಿ ಬಹು ಆಯಾಮವನ್ನು ಹೊಂದಿದೆ, ಅದು ವೇಗವಾಗಿ ಬೆಳೆಯುತ್ತಿದೆ ಮತ್ತು ನಾವೀನ್ಯತೆಯನ್ನು ಸೃಷ್ಟಿಸುತ್ತಿದೆ ಎಂದು ಸಚಿವರು ತಿಳಿಸಿದರು.

ಸೇಲ್ಸ್‌ಫೋರ್ಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀ ರಾಜೀವ್ ಚಂದ್ರಶೇಖರ್, ಭಾರತದಲ್ಲಿ ಜಾಗತಿಕ ಪ್ರಮುಖ ರಾಷ್ಟ್ರಗಳ ಸಕ್ರಿಯ ಉಪಸ್ಥಿತಿಯು ಗಣನೀಯವಾಗಿ ಹೆಚ್ಚಿ, ಹೆಚ್ಚಿನ ಸಂಖ್ಯೆಯ ಉದ್ಯೋಗಗಳು ಮತ್ತು ಅವಕಾಶಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ ಮತ್ತು ಇಂಡಿಯಾ ತಂತ್ರಜ್ಞಾನ ಬೆಳವಣಿಗೆ ಯಶೋಗಾಥೆಯ ಭಾಗವಾಗಿದೆ ಎಂದು ಹೇಳಿದರು.

ಭಾರತವು ಇಂದು ಎಲೆಕ್ಟ್ರಾನಿಕ್ಸ್ ಉತ್ಪಾದನೆಯಲ್ಲಿ ಛಾಪು ಮೂಡಿಸಿದೆ, ಉತ್ಪಾದನಾ ಶಕ್ತಿಯಾಗಿ ಹೊರಹೊಮ್ಮುತ್ತಿದೆ ಮತ್ತು ವಿಶ್ವ ದರ್ಜೆಯ ಸ್ಟಾರ್ಟಪ್ ಮತ್ತು ನಾವೀನ್ಯತೆ ಪರಿಸರ ವ್ಯವಸ್ಥೆಯ ಹೆಗ್ಗಳಿಕೆ ಹೊಂದಿದೆ. ಇದು ವಿಶ್ವದ 3ನೇ ಅತಿ ದೊಡ್ಡ ಸ್ಟಾರ್ಟಪ್ ಪರಿಸರ ವ್ಯವಸ್ಥೆಯಾಗಿದೆ ಎಂದು ಶ್ರೀ ರಾಜೀವ್ ಚಂದ್ರಶೇಖರ್ ತಿಳಿಸಿದರು.

ಕೈಗಾರಿಕೆಗಳಿಗೆ ಭವಿಷ್ಯದ ಕೌಶಲ್ಯಗಳಿಗೆ ಸಿದ್ಧ ಕೌಶಲ್ಯಯುತ ಉದ್ಯೋಗಿಗಳನ್ನು ಸಿದ್ಧಪಡಿಸಲು ಸರ್ಕಾರ ನಡೆಸುತ್ತಿರುವ ಪ್ರಯತ್ನಗಳ ಬಗ್ಗೆ ಸಚಿವರು ಮಾತನಾಡಿದರು. 2023ಕ ಕೇಂದ್ರ ಬಜೆಟ್ ನಲ್ಲಿ ಘೋಷಿಸಲಾದ ಹೊಸ ಕೌಶಲ್ಯ ಉಪಕ್ರಮಗಳನ್ನು ಪ್ರಸ್ತಾಪಿಸಿದ ಅವರು, ಪಿಎಂಕೆವಿವೈ 4.0 ಕೋವಿಡ್ ನಂತರದ ಅವಕಾಶಗಳು ಮತ್ತು ಸವಾಲುಗಳನ್ನು ಎದುರಿಸಲು ವಿನ್ಯಾಸಗೊಳಿಸಲಾದ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಕೋಡಿಂಗ್, ಕೃತಕ ಬುದ್ಧಿಮತ್ತೆ, ರೊಬೊಟಿಕ್ಸ್‌, ಮೆಕಾಟ್ರಾನಿಕ್ಸ್, ಐಒಟಿ, 3ಡಿ ಮುದ್ರಣ, ಡ್ರೋನ್‌ಗಳು ಮತ್ತು ಮೃದು ಕೌಶಲ್ಯಗಳು ಹೊಸ ಪೀಳಿಗೆಯ ಕೋರ್ಸ್‌ಗಳನ್ನು ಒಳಗೊಂಡಿದೆ ಎಂದರು. 

ಭಾರತವನ್ನು ವಿಶ್ವದ ಪ್ರತಿಭಾ ತಾಣವಾಗಿ ಮಾಡಬೇಕೆಂಬ ಪ್ರಧಾನಿ ಮೋದಿ ಅವರ ದೂರದೃಷ್ಟಿ ಉಲ್ಲೇಖಿಸಿದ ಸಚಿವರು, "ದೇಶದಲ್ಲಿ ಕೌಶಲ್ಯ ಮತ್ತು ಪ್ರತಿಭೆಗಳ ಅಭಿವೃದ್ಧಿಗಾಗಿ ಕೈಗಾರಿಕೆ, ಶೈಕ್ಷಣಿಕ ಮತ್ತು ಆರ್ & ಡಿ ಸಂಸ್ಥೆಗಳ ಸಹಭಾಗಿತ್ವದಲ್ಲಿ ಮಾರ್ಗಸೂಚಿ ಅಭಿವೃದ್ಧಿಪಡಿಸಲಾಗುತ್ತಿದೆ" ಎಂದರು. ಉದ್ಯಮದ ಇತ್ತೀಚಿನ ಅಗತ್ಯತೆಗಳ ಪ್ರಕಾರ, ಮುಂದಿನ 4 ವರ್ಷಗಳಲ್ಲಿ 85,000 ಸೆಮಿಕಂಡಕ್ಟರ್ ಎಂಜಿನಿಯರ್‌ಗಳು, ವಿನ್ಯಾಸಕರು ಮತ್ತು ಇತರ ಬೆಂಬಲ, ಪ್ರತಿಭೆಗಳಿಗೆ ತರಬೇತಿ ನೀಡುವ ಗುರಿ ಇದೆ ಎಂದು ಅವರು ಇತ್ತೀಚೆಗೆ ಬಿಡುಗಡೆ ಮಾಡಿದ ಭವಿಷ್ಯದ ಕೌಶಲ್ಯಗಳ ವರದಿಯ ಉದಾಹರಣೆ ಉಲ್ಲೇಖಿಸಿದರು. 

ಸ್ವೀಡನ್‌ನಲ್ಲಿ ಪ್ರಧಾನ ಕಚೇರಿ ಹೊಂದಿರುವ ಟ್ರೂಕಾಲರ್‌ ಇದೀಗ ಹೊರರಾಷ್ಟ್ರ ಭಾರತದಲ್ಲಿ ತನ್ನ ಕಚೇರಿ ತೆರೆದಿದೆ. ಈ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ  ಶ್ರೀ ಚಂದ್ರಶೇಖರ್, ತಂತ್ರಜ್ಞಾನದ ಕೆಟ್ಟದ್ದನ್ನು ನಿಯಂತ್ರಿಸುವ ಜತೆಗೆ, ತಂತ್ರಜ್ಞಾನದ ಉತ್ತಮತೆಯನ್ನು ಬೆಂಬಲಿಸುವ ಅಗತ್ಯತೆ ಇದೆ ಎಂದರು.

"ಮುಂಬರುವ ದಶಕದಲ್ಲಿ ಭಾರತದ ನಾವೀನ್ಯತೆಯ ಪರಿಸರ ವ್ಯವಸ್ಥೆಗೆ ರಕ್ಷಣೆ,  ಸಕ್ರಿಯಗೊಳಿಸುವಿಕೆ ಮತ್ತು ವೇಗವರ್ಧಕಗಳನ್ನು ಒದಗಿಸುವ ಹೊಸ ಕಾಯಿದೆಗಳು ಮತ್ತು ಹೊಸ ನಿಯಮಗಳನ್ನು ನಾವು ವಿನ್ಯಾಸಗೊಳಿಸುತ್ತಿದ್ದೇವೆ ಮತ್ತು ರೂಪಿಸುತ್ತಿದ್ದೇವೆ" ಎಂದು ಸಚಿವರು ಹೇಳಿದರು.


****



(Release ID: 1907980) Visitor Counter : 88


Read this release in: Telugu , English , Hindi , Tamil