ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ

ಸಿಲಿಕಾನ್ ವ್ಯಾಲಿ ಬ್ಯಾಂಕ್(ಎಸ್.ವಿ.ಬಿ.) ನ ಇತ್ತೀಚೆಗಿನ ಕುಸಿತದಿಂದಾಗಿ ಭಾರತದಲ್ಲಿ ಆಗಿರುವ ಪರಿಣಾಮಗಳ ಕುರಿತು ಚರ್ಚಿಸಲು ಕೇಂದ್ರ ಸಚಿವ ಶ್ರೀ ರಾಜೀವ್ ಚಂದ್ರಶೇಖರ್ ಅವರು 450 ಕ್ಕೂ ಹೆಚ್ಚು ಭಾರತೀಯ ಸ್ಟಾರ್ಟ್‌ಅಪ್‌ ಗಳೊಂದಿಗೆ ಸಂವಾದ ನಡೆಸಿದರು


​​​​​​​ಭಾರತೀಯ ಬ್ಯಾಂಕಿಂಗ್ ವ್ಯವಸ್ಥೆಯು ಅತ್ಯಂತ ದೃಢವಾಗಿದೆ ಮತ್ತು ಸ್ಥಿರವಾಗಿದೆ, ಇವುಗಳನ್ನು ಬಳಸಿಕೊಂಡು ಸ್ಟಾರ್ಟ್‌ಅಪ್‌ ಗಳು ಅನೇಕ ನೂತನ ಅವಕಾಶಗಳನ್ನು ಸೃಷ್ಟಿಸಬಹುದು: ಕೇಂದ್ರ ಸಚಿವ ಶ್ರೀ ರಾಜೀವ್ ಚಂದ್ರಶೇಖರ್

Posted On: 14 MAR 2023 7:21PM by PIB Bengaluru

ಭಾರತೀಯ ವೆಂಚರ್ ಕ್ಯಾಪಿಟಲಿಸ್ಟ್‌ಗಳು (ವಿ.ಸಿ.ಗಳು), ಉದ್ಯಮದ ಮುಖಂಡರು ಮತ್ತು ಇತರ ಮಧ್ಯಸ್ಥಗಾರರ , ಖಾಸಗಿ ಒಡೆತನದ /ಸಹ-ಮಾಲೀಕತ್ವದ 450 ಕ್ಕೂ ಹೆಚ್ಚು ಸ್ಟಾರ್ಟಪ್‌ಗಳೊಂದಿಗೆ ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ರಾಜ್ಯ ಸಚಿವ ಶ್ರೀ ರಾಜೀವ್ ಚಂದ್ರಶೇಖರ್ ಅವರು ಸಿಲಿಕಾನ್ ವ್ಯಾಲಿ ಬ್ಯಾಂಕ್ ಕುಸಿತದ ಕುರಿತು ವಿಡಿಯೊ ಸಮಾವೇಶ ಮೂಲಕ ನವದೆಹಲಿಯಲ್ಲಿ ಸಂವಾದ ನಡೆಸಿದರು. ಈ ಬಿಕ್ಕಟ್ಟಿನ ಸಂದರ್ಭದಲ್ಲಿ ಆರ್ಥಿಕ ಉಬ್ಬರ- ಕುಸಿತಕ್ಕೆ ಸಹಾಯ ಮಾಡಲು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಸಂಪೂರ್ಣ ಕೇಂದ್ರಿತವಾಗಿದೆ ಎಂದು ಅವರು ಈ ಸಭೆಯಲ್ಲಿ ಭಾಗವಹಿಸಿದವರಿಗೆ ಭರವಸೆ ನೀಡಿದರು.
 
"ಭಾರತೀಯ ಬ್ಯಾಂಕಿಂಗ್ ವ್ಯವಸ್ಥೆಯು ದೃಢವಾಗಿದೆ ಮತ್ತು ಅವುಗಳು ನೀಡುವ ಆರ್ಥಿಕ ಅವಕಾಶಗಳನ್ನು ಬಳಸಿಳ್ಳಬಹುದು" ಎಂದು ಸಲಹೆ ನೀಡಿದ ಕೇಂದ್ರ ಸಚಿವರು, “ಭಾರತೀಯ ಬ್ಯಾಂಕಿಂಗ್ ವ್ಯವಸ್ಥೆಯು ಅತ್ಯಂತ ಸ್ಥಿರವಾಗಿದೆ ಮತ್ತು ದೃಢವಾಗಿದೆ ಮತ್ತು ನಿಮ್ಮ ಸಾಂಸ್ಥಿಕ ಚೌಕಟ್ಟಿನ ಭಾಗವಾಗಿ ನೀವು ಅದನ್ನು ಬಳಸಿಕೊಳ್ಳಬೇಕು.  ಸ್ಟಾರ್ಟ್‌ಅಪ್‌ಗಳು ಎಸ್.ವಿ.ಬಿ. ಯಂತಹ ಬ್ಯಾಂಕ್‌ಗಳನ್ನು ಬಳಸಲು ನೈಸರ್ಗಿಕ ಪ್ರೋತ್ಸಾಹ ಮತ್ತು ಅವಕಾಶಗಳನ್ನು ಹೊಂದಿದ್ದರೂ, ನಿಮ್ಮ ವ್ಯವಹಾರ ಮಾದರಿಯನ್ನು ಬದಲಾಯಿಸದೆಯೇ ಭಾರತೀಯ ಬ್ಯಾಂಕಿಂಗ್ ವ್ಯವಸ್ಥೆಯನ್ನು ಕೂಡಾ ಬಳಸಲು ನೀವೆಲ್ಲರೂ ಒಂದು ಹೆಚ್ಚುವರಿ ನೂತನ ಮಾರ್ಗವನ್ನು ಕಂಡುಹಿಡಿಯಬೇಕು" ಎಂದು ಹೇಳಿದರು

ಸಮಕಾಲೀನ ಸಂದಿಗ್ಧ ಪರಿಸ್ಥಿತಿಯನ್ನು ಪರಿಹರಿಸಲು ಮತ್ತು ಎಸ್.ವಿ.ಬಿ.ನಲ್ಲಿ ಹಣಕಾಸಿನ ಹಿಡುವಳಿಗಳನ್ನು ಹೊಂದಿರುವ ಭಾರತದ ನಾವೀನ್ಯತೆ ಕ್ಷೇತ್ರದ ಸಂಸ್ಥೆ ಮತ್ತು ಸ್ಟಾರ್ಟ್ಅಪ್ ಸಂಸ್ಥೆ, ಮತ್ತು ಅಂತಹ ಆರ್ಥಿಕ ಪರಿಸರ ವ್ಯವಸ್ಥೆಯಲ್ಲಿರುವ ಸದಸ್ಯರಿಗೆ ಯಾವುದೇ ಲಭ್ಯ ತ್ವರಿತ ಸಹಾಯವನ್ನು ನೀಡುವ ಸರ್ಕಾರದ ವಿಧಾನದ ಭಾಗವಾಗಿ ಈ ಸಮಾಲೋಚನೆಯನ್ನು ಏರ್ಪಡಿಸಲಾಗಿದೆ. ಜೊತ್.ಎಲ್.ಒ. ಹಟಿಕಾ.ಎಲ್.ಒ. ಮತ್ತು ವಿ.ಸಿ. ಗಳಂತಹ ಸ್ಟಾರ್ಟ್‌ಅಪ್‌ಗಳು ಮತ್ತು ಬ್ಲೂಮೆ ವಿಸಿ. ಮತ್ತು ಮಾರಾಯಾ ಎಸೆಟ್  ನಂತಹ ಹಣಕಾಸು ಸೇವಾ ಪೂರೈಕೆದಾರರು ಇಂದಿನ ಈ ಸಭೆಯ ಭಾಗವಹಿಸಿದ್ದರು.

ತಮ್ಮ ಯು.ಎಸ್. ಡಾಲರ್ ಠೇವಣಿಗಳನ್ನು ಭಾರತಕ್ಕೆ ಮತ್ತು ಯು.ಎಸ್- ಆಧಾರಿತ ಭಾರತೀಯ ಬ್ಯಾಂಕ್‌ ಗಳ ಶಾಖೆಗಳಿಗೆ ವರ್ಗಾಯಿಸುವುದಕ್ಕೆ ಅವಕಾಶ ಮಾಡಿ ಕೊಡಬೇಕು ಎಂದು ಪಾಲ್ಗೊಂಡಿದ್ದ ಕೆಲವರು ತಮ್ಮ ಕಳವಳ ಹಾಗೂ ಬೇಡಿಕೆಯನ್ನು ವಿನಿಮಯ ಮಾಡಿಕೊಂಡರು
 
ತಮ್ಮ ಸಲಹೆಗಳನ್ನು ಹಂಚಿಕೊಂಡಿದ್ದಕ್ಕಾಗಿ ಎಲ್ಲರಿಗೂ ಸಚಿವರು ಧನ್ಯವಾದಗಳನ್ನು ಅರ್ಪಿಸಿದರು ಮತ್ತು " ಬ್ಯಾಂಕ್ ಕುಸಿತದಿಂದ ಉಂಟಾದ ಗಂಭೀರ ಪರಿಸ್ಥಿತಿಯನ್ನು ಗುರುತಿಸಿ, ಪರಿಶೀಲಿಸಲು ಹಾಗೂ ಸೂಕ್ತ ಪರಿಹಾರಕ್ಕಾಗಿ ಕೇಂದ್ರ ಸರ್ಕಾರವು ಎಲ್ಲಾ ರೀತಿಯ ಸಹಾಯವನ್ನು ಮಾಡುತ್ತದೆ" ಎಂದು ಸಚಿವರು ಭರವಸೆ ನೀಡಿದರು.

“ನಾವು ಕ್ರೂಢೀಕರಿಸಿದ ಸಲಹೆಗಳ ಪಟ್ಟಿಯನ್ನು ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರೊಂದಿಗೆ ಹಂಚಿಕೊಳ್ಳುತ್ತೇವೆ ಮತ್ತು ನಿಮ್ಮ ಕಾಳಜಿಗಳನ್ನು ಹೇಗೆ ಉತ್ತಮವಾಗಿ ಪರಿಹರಿಸಬಹುದು ಎಂಬುದನ್ನು ಗುರುತಿಸಿ ಆ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತೇವೆ.  ನಿಮ್ಮ ಯು.ಎಸ್. ಡಾಲರ್ ಠೇವಣಿಗಳನ್ನು ಭಾರತೀಯ ಬ್ಯಾಂಕ್‌ಗಳು,  ಐ.ಎಫ್.ಎಸ್.ಸಿ. ಕೇಂದ್ರಿತ ವಿದೇಶಿ ಬ್ಯಾಂಕ್‌ಗಳು ಅಥವಾ ಯುನೈಟೆಡ್ ಸ್ಟೇಟ್ಸ್‌ ನಲ್ಲಿ ಅಸ್ತಿತ್ವವನ್ನು ಹೊಂದಿರುವ ಯಾವುದೇ ಇತರ ಭಾರತೀಯ ಬ್ಯಾಂಕ್‌ಗಳಿಗೆ ವರ್ಗಾಯಿಸಲು ನಾವು ಎಷ್ಟು ಸುಗಮವಾಗಿ ಸಹಾಯ ಮಾಡಬಹುದು ಎಂಬುದನ್ನು ಸಹ ಗುರುತಿಸಿ ದಾರಿಯನ್ನು ನಾವು ಅನ್ವೇಷಿಸುತ್ತೇವೆ" ಎಂದು ಕೇಂದ್ರ ಸಚಿವ ಶ್ರೀ ರಾಜೀವ್ ಚಂದ್ರಶೇಖರ್ ಅವರು ಹೇಳಿದರು.

"ಠೇವಣಿಗಳನ್ನು ಸಂಪೂರ್ಣವಾಗಿ ಠೇವಣಿ ಮಾಡಲು ಹೊರಟಿರುವ ಆದರೆ ಪ್ರಸ್ತುತ ಅದಕ್ಕೆ ಪ್ರವೇಶವನ್ನು ಹೊಂದಿಲ್ಲದಂತಹ ಸ್ಟಾರ್ಟ್‌ಅಪ್‌ ಗಳಿಗಾಗಿ, ಯಾವುದೇ ಕ್ರೆಡಿಟ್ ಲೈನ್‌ಗಳನ್ನು ಯು.ಎಸ್. ಡಾಲರ್ ಅಥವಾ ಭಾರತೀಯ ರೂಪಾಯಿಗಳಲ್ಲಿ ಲಭ್ಯವಾಗುವಂತೆ ಮಾಡಬಹುದೇ ಎಂಬ ಆಯ್ಕೆಯನ್ನು ನಾವು ಅನ್ವೇಷಿಸುತ್ತೇವೆ. ಯು.ಎಸ್‌.ನಲ್ಲಿರುವಂತೆ ಹೆಚ್ಚಿನ ಸಾಲ ಅವಕಾಶ ಮತ್ತು ಉತ್ಪನ್ನಗಳನ್ನು ನಿಮಗೆ ಲಭ್ಯವಾಗುವಂತೆ ಮಾಡಲು ಮತ್ತು ಅವುಗಳನ್ನು ಎಸ್‌.ವಿ.ಬಿ.ಯಿಂದ ಯು.ಎಸ್‌.ನಲ್ಲಿರುವ ಯಾವುದೇ ಭಾರತೀಯ ಬ್ಯಾಂಕ್‌ ಗೆ ವರ್ಗಾಯಿಸಲು ಸುಲಭವಾಗುವಂತೆ ಮಾಡಲು ಬೇಕಾಗುವ ಎಲ್ಲಾ ಪೂರಕ ಲಭ್ಯ ಕ್ರಮಗಳನ್ನು ನಾವು ಪ್ರಯತ್ನಿಸುತ್ತೇವೆ" ಎಂದು ಕೇಂದ್ರ ಸಚಿವ ಶ್ರೀ ರಾಜೀವ್ ಚಂದ್ರಶೇಖರ್ ಅವರು ಹೇಳಿದರು.

"ಭಾರತೀಯ ಯಾವುದೇ ಸ್ಟಾರ್ಟ್‌ಅಪ್‌ ಗಳಿಗೆ ಅವರು ಎದುರಿಸುತ್ತಿರುವ ಯಾವುದೇ ರೀತಿಯ ಸಮಸ್ಯೆಗಳು/ತೊಂದರೆಗಳಿಗೆ 'ಸಿ.ಇ.ಒ., ಎಂ.ಇ.ಐ.ಟಿ.ವೈ., ಸ್ಟಾರ್ಟ್‌ಅಪ್ ಹಬ್ ' ಅನ್ನು ನೇರವಾಗಿ ಸಂಪರ್ಕಿಸಬಹುದು ಮತ್ತು ಸರ್ಕಾರವು ಸಹಾಯ ಮಾಡಲು ತನ್ನ ಕೈಲಾದಷ್ಟು ಪ್ರಯತ್ನಗಳನ್ನು ಮಾಡುತ್ತದೆ" ಎಂದು ಕೇಂದ್ರ ಸಚಿವ ಶ್ರೀ ರಾಜೀವ್ ಚಂದ್ರಶೇಖರ್ ಅವರು ಭರವಸೆ ನೀಡಿದರು.

 

 

.

 

 



(Release ID: 1907144) Visitor Counter : 126


Read this release in: English , Hindi , Malayalam