ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
azadi ka amrit mahotsav

​​​​​​​ಪುಣೆಯಲ್ಲಿ ನಾಲ್ಕನೇ ವೈ20 ಸಮಾಲೋಚನಾ ಸಭೆಯನ್ನು ಉದ್ಘಾಟಿಸಿದ ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವ ಅನುರಾಗ್ ಸಿಂಗ್ ಠಾಕೂರ್


ಇಲ್ಲಿರುವ ಯುವ ಮನಸ್ಸುಗಳ ಸಕ್ರಿಯ ಭಾಗವಹಿಸುವಿಕೆಯು ನಾವು ಎದುರಿಸುತ್ತಿರುವ ಸವಾಲುಗಳು ಮತ್ತು ವೈ20 ಚರ್ಚಾ ವೇದಿಕೆಯಲ್ಲಿ ಅವುಗಳನ್ನು ಪರಿಹರಿಸುವ ಮಾರ್ಗಗಳ ಆಳವಾದ ತಿಳುವಳಿಕೆಗೆ ಕಾರಣವಾಗುತ್ತದೆ: ಅನುರಾಗ್ ಸಿಂಗ್ ಠಾಕೂರ್

ನಮ್ಮ ದೇಶ ಅಮೃತ ಕಾಲದಿಂದ ಸ್ವರ್ಣಿಮ ಕಾಲದತ್ತ ಸಾಗುತ್ತಿದೆ. ನಮ್ಮ ಈ ಪಯಣದಲ್ಲಿ ಯುವಜನತೆ ನಿರ್ಣಾಯಕ ಪಾತ್ರ ವಹಿಸುತ್ತಾರೆ: ಅನುರಾಗ್ ಸಿಂಗ್ ಠಾಕೂರ್

Posted On: 11 MAR 2023 4:00PM by PIB Bengaluru

ನಾಲ್ಕನೇ ವೈ20 ಸಮಾಲೋಚನಾ ಸಭೆಯು ಇಂದು ಪುಣೆಯ ಸಿಂಬಯೋಸಿಸ್ ಅಂತಾರಾಷ್ಟ್ರೀಯ ವಿಶ್ವವಿದ್ಯಾಲಯದಲ್ಲಿ (ಎಸ್‌ ಐ ಯು) ಭಾರತ ಸರ್ಕಾರದ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ ಸಹಯೋಗದೊಂದಿಗೆ ನಡೆಯಿತು. ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡೆ ಹಾಗೂ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಸಿಂಗ್ ಠಾಕೂರ್ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿದ್ದರು. ಸ್ಟ್ರಾಟಜಿಕ್‌ ಫೋರಸ್‌ಸೈಟ್‌ ಸಮೂಹದ ಅಧ್ಯಕ್ಷ ಡಾ. ಸಂದೀಪ್ ವಾಸ್ಲೇಕರ್ ಮುಖ್ಯ ಭಾಷಣಕಾರರಾಗಿದ್ದರು. ಸಮಾರಂಭದಲ್ಲಿ ಸಿಂಬಯೋಸಿಸ್ ಸಂಸ್ಥಾಪಕ ಮತ್ತು ಅಧ್ಯಕ್ಷರು ಮತ್ತು ಎಸ್‌ಐಯು ಚಾನ್ಸೆಲರ್ ಪ್ರೊ. (ಡಾ.) ಎಸ್.ಬಿ. ಮುಜುಂದಾರ್, ಎಸ್‌ಐಯು ಪ್ರೊ ಚಾನ್ಸೆಲರ್ ಡಾ.ವಿದ್ಯಾ ಯೆರವಡೇಕರ್, ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ ನಿರ್ದೇಶಕ ಶ್ರೀ ಪಂಕಜ್ ಸಿಂಗ್, ವೈ20 ಇಂಡಿಯಾ ಅಧಶ್ಯಕ್ಷ ಅನ್ಮೋಲ್ ಸೋವಿತ್ ಮತ್ತು ಎಸ್‌ ಐ ಯು ಉಪ ಕುಲಪತಿ ರಜನಿ ಗುಪ್ತೆ ಉಪಸ್ಥಿತರಿದ್ದರು.

https://static.pib.gov.in/WriteReadData/userfiles/image/Y-20...1NERL.jpg

ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡೆ ಹಾಗೂ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಸಿಂಗ್ ಠಾಕೂರ್, ಪ್ರಪಂಚದ ಕೆಲವು ದೊಡ್ಡ ಆಟೋಮೊಬೈಲ್‌ ಎಂಜಿನಿಯರಿಂಗ್ ಮತ್ತು ಎಲೆಕ್ಟ್ರಾನಿಕ್ಸ್ ಕಂಪನಿಗಳಿಗೆ ನೆಲೆಯಾಗಿರುವ, ಅಭಿವೃದ್ಧಿ ಹೊಂದುತ್ತಿರುವ ಉತ್ಪಾದನಾ ಉದ್ಯಮಕ್ಕೆ ಹೆಸರುವಾಸಿಯಾದ ನಗರವಾದ ಪುಣೆಗೆ ಬಂದಿರುವುದಕ್ಕೆ ನನಗೆ ಸಂತೋಷವಾಗಿದೆ ಎಂದರು. ಮಹಾರಾಷ್ಟ್ರದ ಸಾಂಸ್ಕೃತಿಕ ರಾಜಧಾನಿ ಮತ್ತು ಪ್ರಮುಖ ಶಿಕ್ಷಣ ಕೇಂದ್ರವಾಗಿರುವ ಪುಣೆಯ ಖ್ಯಾತಿಯನ್ನು ಅತಿಯಾಗಿ ಹೇಳಲಾಗುವುದಿಲ್ಲ. 10 ವಿಶ್ವವಿದ್ಯಾನಿಲಯಗಳು ಮತ್ತು 100 ಸಂಸ್ಥೆಗಳೊಂದಿಗೆ, ನಗರವು ತಲೆಮಾರುಗಳಿಂದ ಜ್ಞಾನ ಮತ್ತು ಸಂಸ್ಕೃತಿಯ ದಾರಿದೀಪವಾಗಿದೆ, ಪ್ರಪಂಚದಾದ್ಯಂತದ ವಿದ್ಯಾರ್ಥಿಗಳು ಮತ್ತು ವಿದ್ವಾಂಸರನ್ನು ಇದು ಆಕರ್ಷಿಸುತ್ತಿದೆ. ಸಿಂಬಯೋಸಿಸ್‌ ನಂತಹ ಸಂಸ್ಥೆಗಳು ಜಗತ್ತಿನಾದ್ಯಂತ ಸಾವಿರಾರು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿವೆ. ಈ ವೈ20 ಕಾರ್ಯಕ್ರಮವನ್ನು ಆಯೋಜಿಸಲು ಇದಕ್ಕಿಂತ ಉತ್ತಮವಾದ ಸ್ಥಳವಿಲ್ಲ. ಇಂತಹ ಸಂಸ್ಥೆಗಳು ಬದಲಾವಣೆಯ ಬೀಜಗಳನ್ನು ಬಿತ್ತಿ ಪೋಷಿಸುತ್ತಿವೆ ಎಂದು ಸಚಿವರು ಹೇಳಿದರು.

https://static.pib.gov.in/WriteReadData/userfiles/image/Y-20...2ROLA.jpg

ಕಾರ್ಯಕ್ರಮಕ್ಕೆ ದೊರೆತ ವ್ಯಾಪಕ ಭಾಗವಹಿಸುವಿಕೆಯ ಬಗ್ಗೆ ಸಂತಸ ವ್ಯಕ್ತಪಡಿಸಿದ ಅವರು, ಈ ಸಮಾಲೋಚನೆಗಾಗಿ, ನಾವು 44 ಕ್ಕೂ ಹೆಚ್ಚು ದೇಶಗಳ ಪ್ರಾತಿನಿಧ್ಯವನ್ನು ಹೊಂದಿದ್ದೇವೆ ಮತ್ತು ಆ ದೇಶಗಳಿಂದ 97 ವಿದ್ಯಾರ್ಥಿಗಳು ಇಲ್ಲಿ ಬಂದಿರುವುದಕ್ಕೆ ನನಗೆ ಸಂತೋಷವಾಗಿದೆ. ಮಹಾರಾಷ್ಟ್ರದ ವಿವಿಧ ಭಾಗಗಳಿಂದ ಅಂತಹ 36 ಕಾರ್ಯಕ್ರಮಗಳಲ್ಲಿ ವಿಜೇತರಾಗಿರುವ 72 ವಿದ್ಯಾರ್ಥಿಗಳೂ ಇಲ್ಲಿದ್ದಾರೆ ಎಂದು ಅವರು ಹೇಳಿದರು.

https://static.pib.gov.in/WriteReadData/userfiles/image/Y-20...36ZAY.jpg

ಭಾರತ ಮತ್ತು ಪ್ರಪಂಚದ ಅಭಿವೃದ್ಧಿಯಲ್ಲಿ ಯುವಜನರ ಕೊಡುಗೆಯ ಮಹತ್ವದ ಕುರಿತು ಮಾತನಾಡಿದ ಸಚಿವರು, “ಯುವಜನರು ವರ್ತಮಾನದಲ್ಲಿ ಸಮಾನ ಪಾಲುದಾರರು, ಅವರ ಪಾತ್ರ ಇಂದು, ಈಗ ಮತ್ತು ಇಲ್ಲಿದೆ. ಸುತ್ತಲೂ ಒಮ್ಮೆ ನೋಡಿ, ಭಾರತವು ಪ್ರಪಂಚದಾದ್ಯಂತ ಸುದ್ದಿ ಮಾಡುತ್ತಿದೆ, ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ದೊಡ್ಡ ಆರ್ಥಿಕತೆಯಾಗಿದೆ. 2014 ರಲ್ಲಿ ದುರ್ಬಲವಾದ ಐದು ಆರ್ಥಿಕತೆಗಳಿಂದ, ನಾವು ಈಗ ವಿಶ್ವದ ಮೊದಲ ಐದು ಆರ್ಥಿಕತೆಗಳಲ್ಲಿ ಒಂದಾಗಿದ್ದೇವೆ. ಎಂಟು ವರ್ಷಗಳ ಅವಧಿಯಲ್ಲಿ, ನಾವು 77000 ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳು ಮತ್ತು 107 ಕ್ಕೂ ಹೆಚ್ಚು ಯುನಿಕಾರ್ನ್‌ಗಳೊಂದಿಗೆ ಜಾಗತಿಕವಾಗಿ ಸ್ಟಾರ್ಟ್‌ಅಪ್‌ಗಳಲ್ಲಿ ಮೂರನೇ ಸ್ಥಾನ ಪಡೆದಿದ್ದೇವೆ. ಅದು ಸೋಷಿಯಲ್ ಮೀಡಿಯಾ ನೇತೃತ್ವದ ಸಾಮಾಜಿಕ ಕಾಳಜಿಯಾಗಲಿ ಅಥವಾ ಬಿಲಿಯನ್ ಡಾಲರ್ ಸ್ಟಾರ್ಟಪ್‌ಗಳಾಗಲಿ, ನಮ್ಮ ಯುವಜನರು ಮುಂಚೂಣಿಯಲ್ಲಿದ್ದಾರೆ. ನಮ್ಮ ಯುವಕರ ವಿಭಿನ್ನ ಕಥೆಗಳು ಪ್ರಪಂಚದಾದ್ಯಂತ ಜನರು ತಮ್ಮ ಆಸಕ್ತಿಯ ಕ್ಷೇತ್ರಗಳನ್ನು ಅನುಸರಿಸಲು ಮತ್ತು ಅವರ ಕ್ಷೇತ್ರಗಳಲ್ಲಿ ಧನಾತ್ಮಕ ಪ್ರಭಾವ ಬೀರಲು ಸ್ಫೂರ್ತಿಯಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಅವರು ಹೇಳಿದರು.

ಭಾರತದ ಜಿ20 ಅಧ್ಯಕ್ಷತೆ ಮತ್ತು ವೈ20 ಶೃಂಗಸಭೆಯ ಬಗ್ಗೆ ಪ್ರಸ್ತಾಪಿಸಿದ ಸಚಿವರು, “ಪ್ರತಿಷ್ಠಿತ ಜಿ20 ಗೆ ಭಾರತ ಆತಿಥ್ಯ ವಹಿಸಿರುವುದು ನಮಗೆ ದೊಡ್ಡ ಗೌರವವಾಗಿದೆ. ಪ್ರತಿಷ್ಠಿತ ವೈ20 ಶೃಂಗಸಭೆಯನ್ನು ಆಯೋಜಿಸುವುದು ನನಗೆ ಮತ್ತು ನಮ್ಮ ಇಲಾಖೆಗೆ ಒಂದು ವಿಶೇಷವಾಗಿದೆ. ಇದು ವಿಶ್ವದ ಯುವಜನರಿಗೆ ಹೆಚ್ಚು ಮುಖ್ಯವಾದ ವಿಷಯಗಳ ಮೇಲೆ ತೊಡಗಿಸಿಕೊಳ್ಳಲು ಒಂದು ಅಸಾಧಾರಣ ಅವಕಾಶವನ್ನು ಒದಗಿಸುತ್ತದೆ. ಈ ಶೃಂಗಸಭೆಯಲ್ಲಿ ಭಾರತದ ಪಾತ್ರವು ಮಾತನಾಡುವುದಕ್ಕೆ ಮಾತ್ರ ಸೀಮಿತವಾಗಿಲ್ಲ, ಇದು ಯುವಜನರ ಅಭಿಪ್ರಾಯಗಳನ್ನು ಕೇಳುವ ಮತ್ತು ಜಾಗತಿಕ ಕಾರ್ಯಸೂಚಿಯನ್ನು ಸಕ್ರಿಯವಾಗಿ ರೂಪಿಸುವ ಗುರಿಯನ್ನು ಹೊಂದಿದೆ. ಅದರಂತೆ, ವೈ20 ಶೃಂಗಸಭೆ 2023 ಐದು ಪ್ರಮುಖ ವಿಷಯಗಳನ್ನು ಗುರುತಿಸಿದೆ, ಅದು ನಮ್ಮ ಯುವಕರಿಗೆ ದಾರಿದೀಪವಾಗಿ ಕಾರ್ಯನಿರ್ವಹಿಸುತ್ತದೆ. ಈ ಆದ್ಯತೆಯ ಕ್ಷೇತ್ರಗಳು ಬದುಕಲು ಮತ್ತು ಅಭಿವೃದ್ಧಿ ಹೊಂದಲು ಬದಲಾಗುತ್ತಿರುವ ಸಮಯದ ವಾಸ್ತವದೊಂದಿಗೆ ಜಗತ್ತನ್ನು ಸಮನ್ವಯಗೊಳಿಸಬೇಕಾದ ತುರ್ತು ಅಗತ್ಯವನ್ನು ಸೂಚಿಸುತ್ತವೆ ಎಂದು ಅವರು ಹೇಳಿದರು.

https://static.pib.gov.in/WriteReadData/userfiles/image/Y-20...4U5ZD.jpg

ಇಂದಿನ ಸಮಾಲೋಚನಾ ಸಭೆಯ ವಿಷಯ ಕುರಿತು ಮಾತನಾಡಿದ ಸಚಿವರು, “ಇಂದಿನ ಸಮಾಲೋಚನೆಯ ಘೋಷವಾಕ್ಯವು ʼಶಾಂತಿ ನಿರ್ಮಾಣ ಮತ್ತು ಸಾಮರಸ್ಯ: ಯುದ್ಧವಿಲ್ಲದ ಯುಗಕ್ಕೆ ನಾಂದಿʼ ಎಂಬುದಾಗಿದೆ. ಈ ಸಮಸ್ಯೆಯನ್ನು ನಾವು ನೋಡುವ ದೃಷ್ಟಿಯು ಮುಂದಿನ ದಶಕಗಳಲ್ಲಿ ಭಾರತವು ಇದಕ್ಕೆ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ನಿರ್ಧರಿಸುತ್ತದೆ. ಇದು ಎರಡು ದೇಶಗಳ ನಡುವೆ ನಡೆಯುತ್ತಿರುವ ಸಂಘರ್ಷವಾಗಿರಲಿ, ಸಾಂಕ್ರಾಮಿಕದ ದೂರಗಾಮಿ ಪರಿಣಾಮಗಳಾಗಿರಲಿ ಅಥವಾ ನಿರಂತರ ಆರ್ಥಿಕ ಮತ್ತು ರಾಜಕೀಯ ಅಸ್ಥಿರತೆಯಾಗಿರಲಿ, ಈ ಸಮಸ್ಯೆಗಳು ಪ್ರಾದೇಶಿಕ ಮತ್ತು ಜಾಗತಿಕ ಭದ್ರತೆಯ ಬಗ್ಗೆ ಕಳವಳವನ್ನು ಉಂಟುಮಾಡುತ್ತವೆ ಮತ್ತು ಪರಿಣಾಮಕಾರಿ ಸಹಯೋಗ ಮತ್ತು ಸಂಘಟಿತ ಕ್ರಿಯೆಯ ತುರ್ತು ಅಗತ್ಯವನ್ನು ಎತ್ತಿ ತೋರಿಸುತ್ತವೆ ಎಂದು ಅವರು ಹೇಳಿದರು.

ಬಹುಪಕ್ಷೀಯತೆಯ ಪ್ರಾಮುಖ್ಯತೆಯನ್ನು ಒತ್ತಿಹೇಳಿದ ಅವರು, ವಿಶ್ವ  ವ್ಯಾಪಾರ ಸಂಸ್ಥೆಯಲ್ಲಿ ಯಾರೂ ಬಹುಪಕ್ಷೀಯತೆಯನ್ನು ದೊಡ್ಡ ರೀತಿಯಲ್ಲಿ ಬೆಂಬಲಿಸುತ್ತಿಲ್ಲ ಎಂಬುದನ್ನು ನಾವು ನೋಡುತ್ತಿದ್ದೇವೆ ಎಂದರು. ನಾವು ನಿಜವಾಗಿಯೂ ಬಹುಪಕ್ಷೀಯ ಸಂಸ್ಥೆಗಳ ಬಗ್ಗೆ ಮಾತನಾಡಬೇಕಾಗಿದೆ ಮತ್ತು ಇವುಗಳು ನಿರ್ದಿಷ್ಟ ದೇಶಗಳಿಗೆ ಮಾತ್ರವಲ್ಲದೆ, ವಿಶ್ವಕ್ಕೆ ಹೇಗೆ ಹೆಚ್ಚು ಉಪಯುಕ್ತವಾಗಬಹುದು ಎಂಬುದನ್ನು ನೋಡಬೇಕಾಗಿದೆ. ಶಾಂತಿ ಮತ್ತು ಸಾಮರಸ್ಯದ ಅಗತ್ಯವು ಹಿಂದೆಂದಿಗಿಂತ ಈಗ ಅಗತ್ಯವಾಗಿದೆ. ಯುದ್ಧವು ಇನ್ನು ಮುಂದೆ ಕಾರ್ಯಸಾದುವಲ್ಲದ ಆಯ್ಕೆಯ ಪ್ರಪಂಚದ ಕಡೆಗೆ ನಾವು ಶ್ರಮಿಸುತ್ತಿರುವಾಗ. ಭಾರತವು ಸಂವಾದ, ಅಭಿವೃದ್ಧಿ ಮತ್ತು ರಾಜತಾಂತ್ರಿಕತೆಯನ್ನು ಉತ್ತೇಜಿಸುವ ಸಂಸ್ಕೃತಿಯಲ್ಲಿ ನಂಬಿಕೆ ಹೊಂದಿದೆ. ಅದು ಭಾರತದ ಸಂದೇಶವಾಗಿದೆ, ವಸುಧೈವ ಕುಟುಂಬಕಂನಲ್ಲಿ ಬೇರೂರಿರುವ ನಮ್ಮ ರಾಜತಾಂತ್ರಿಕ ವಿಧಾನವು ಅಹಿಂಸೆಯಿಂದ ನಿರೂಪಿಸಲ್ಪಟ್ಟಿದೆ ಎಂದು ಸಚಿವರು ಹೇಳಿದರು.

ಶಾಂತಿ ನಿರ್ಮಾಣದಲ್ಲಿ ಭಾರತದ ಪಾತ್ರ ಕುರಿತು ಮಾತನಾಡಿದ ಅವರು, “ಜಾಗತಿಕ ವೇದಿಕೆಯಲ್ಲಿ ಶಾಂತಿ ಮತ್ತು ಸಾಮರಸ್ಯವನ್ನು ಉತ್ತೇಜಿಸುವಲ್ಲಿ ಭಾರತವು ಸಕ್ರಿಯ ಪಾತ್ರವನ್ನು ವಹಿಸಿದೆ. ನಾವು ನಿಶ್ಯಸ್ತ್ರೀಕರಣ, ಪ್ರಸರಣ ತಡೆಗೆ ಪ್ರಬಲ ಬೆಂಬಲಿಗರೆಆಗಿದ್ದೇವೆ ಮತ್ತು ವಿಶ್ವಸಂಸ್ಥೆ ಶಾಂತಿಪಾಲನಾ ಪ್ರಯತ್ನಗಳಿಗೆ ಕೊಡುಗೆ ನೀಡಿದ್ದೇವೆ ಎಂದು ಹೇಳಿದರು.

ಯುದ್ಧದ ಹೊಸ ಆಯಾಮಗಳ ಬಗ್ಗೆ ಮಾತನಾಡಿದ ಅವರು, 21 ನೇ ಶತಮಾನದಲ್ಲಿ ಶಾಂತಿಯನ್ನು ವ್ಯಾಖ್ಯಾನಿಸುವ ಪ್ರಶ್ನೆಗಳನ್ನು ಎತ್ತುವುದು ಮುಖ್ಯವಾಗಿದೆ ಎಂದರು. ನಾವು ಶಾಂತಿ ಮತ್ತು ಯುದ್ಧದ ಸಾಂಪ್ರದಾಯಿಕ ಕಲ್ಪನೆಗಳಿಂದ ದೂರವಿರಬೇಕಾಗುತ್ತದೆ. ಗಡಿ-ಸಂಬಂಧಿತ ಯುದ್ಧಗಳು ಇಲ್ಲವೆಂದ ಮಾತ್ರಕ್ಕೆ ಶಾಂತಿಯ ಯುಗ ಎಂಬುದು ನಿಜವಾದ ಅರ್ಥವೇ ಅಥವಾ ಅದಕ್ಕಿಂತ ಹೆಚ್ಚಿನದು ಇದೆಯೇ? ನಮ್ಮ ಸಾಮಾಜಿಕ ಮಾಧ್ಯಮದಲ್ಲಿನ ಮಾತಿನ ಯುದ್ಧ, ಕೋಲಾಹಲ, ಶಬ್ದವನ್ನು ನಾವು ಹೇಗೆ ನಿಭಾಯಿಸುತ್ತೇವೆ? ಪ್ಲಾಟ್‌ಫಾರ್ಮ್‌ನ ಸ್ವರೂಪವು ಪೋಸ್ಟ್ ಮಾಡಿದಾಗ ಅಂತಹ ವಿಷಯವನ್ನು ಪೋಷಿಸುತ್ತದೆಯೇ? ನಿಮ್ಮ ಆರೋಗ್ಯದ ಮೇಲೆ ಯುದ್ಧವನ್ನು ಸಾರಿದ ಜೀವನಶೈಲಿಯ ಆಯ್ಕೆಗಳ ಸವಾಲುಗಳನ್ನು ನೀವು ಹೇಗೆ ಎದುರಿಸುತ್ತೀರಿ? ತಂತ್ರಜ್ಞಾನದಿಂದ ನಾವು ನಿರಂತರವಾಗಿ ಸಂಪರ್ಕ ಹೊಂದುತ್ತಿರುವ ಮತ್ತು ತೊಂದರೆ ಅನುಭವಿಸುತ್ತಿರುವ ಯುಗದಲ್ಲಿ ನಿಮ್ಮ ಶಾಂತಿ, ಸ್ಥಳ ಮತ್ತು ಸಂತೋಷದ ಅರ್ಥವನ್ನು ನೀವು ಹೇಗೆ ಮತ್ತೆ ಪಡೆಯುತ್ತೀರಿ? ಜಾಗತಿಕ ತುರ್ತು ಪರಿಸ್ಥಿತಿಗಳಿಗೆ ನಾವು ಹೇಗೆ ಪ್ರತಿಕ್ರಿಯಿಸುತ್ತೇವೆ, ಹವಾಮಾನ ಬದಲಾವಣೆ ಮತ್ತು ಆಹಾರದ ಕೊರತೆಯ ಪರಿಣಾಮಗಳನ್ನು ನಾವು ಯುದ್ಧದ ಆಧಾರದ ಮೇಲೆ ಸೋಲಿಸುತ್ತೇವೆಯೇ? ನಾವು ಮತ್ತೆ ಚಂದ್ರನ ಮೇಲಿಳಿಯಲು ಮತ್ತು ಮಂಗಳದ ಮೇಲೆ ಒಂದು ದಿನ ಕಾಳಿಡಲು ನೋಡುತ್ತಿವಾಗ, ನಮ್ಮ ಗ್ರಹದಲ್ಲಿ ನಮ್ಮ ಗಡಿಯಿಂದಾಚೆಗೆ ನಡೆಯುವ ಅನ್ಯಾಯಕ್ಕೆ ಒಂದು ನಾಗರಿಕತೆಯಾಗಿ ನಾವು ಹೇಗೆ ಪ್ರತಿಕ್ರಿಯಿಸುತ್ತೇವೆ? ಶಾಂತಿಯನ್ನು ಕಂಡುಕೊಳ್ಳಲು ಅಥವಾ ನಾವು ನಂಬುವ ಮೌಲ್ಯಗಳನ್ನು ಉತ್ತೇಜಿಸಲು ನಾವು ದೂರ ಸರಿಯುತ್ತೇವೆಯೇ? ಶಾಂತಿ ಕೇವಲ ಒಂದು ಸಂಕೇತವೇ? ಇದು ಹಿಂಸೆಯ ಅನುಪಸ್ಥಿತಿಯೇ? ಹಾಗಾದರೆ ಸಮಾಜ, ಸಮುದಾಯ ಮತ್ತು ರಾಷ್ಟ್ರವನ್ನು ಶಾಂತಿಯುತವಾಗಿಸುವುದು ಯಾವುದು ಎಂದು ಸಚಿವರು ಪ್ರಶ್ನಿಸಿದರು.

ಇಲ್ಲಿರುವ ಯುವ ಮನಸ್ಸುಗಳ ಸಕ್ರಿಯ ಭಾಗವಹಿಸುವಿಕೆಯು ಸಮಾಜ ಮತ್ತು ಮನುಕುಲವು ಎದುರಿಸುತ್ತಿರುವ ಸವಾಲುಗಳು ಮತ್ತು ವೈ20 ಚರ್ಚಾ ವೇದಿಕೆಯಲ್ಲಿ ಅವುಗಳನ್ನು ಪರಿಹರಿಸುವ ಮಾರ್ಗಗಳ ಆಳವಾದ ತಿಳುವಳಿಕೆಗೆ ಕಾರಣವಾಗುತ್ತದೆ. ಸ್ವಾಮಿ ವಿವೇಕಾನಂದರ ಕನಸಿನಂತೆ 21ನೇ ಶತಮಾನ ನಮ್ಮದಾಗಬೇಕು. ನಾವು ಅಮೃತ ಕಾಲದಿಂದ ಸ್ವರ್ಣಿಮ ಕಾಲದೆಡೆಗೆ ಸಾಗುತ್ತಿದ್ದೇವೆ. ನಮ್ಮ ಈ ಪಯಣದಲ್ಲಿ ಯುವಜನರುರು ನಿರ್ಣಾಯಕ ಪಾತ್ರವನ್ನು ವಹಿಸುತ್ತಾರೆ ಎಂದು ಸಚಿವರು ಹೇಳಿದರು.

https://static.pib.gov.in/WriteReadData/userfiles/image/Y-20...5O4WZ.jpg

ತಮ್ಮ ಪ್ರಧಾನ ಭಾಷಣದಲ್ಲಿ ಸಭಿಕರನ್ನುದ್ದೇಶಿಸಿ ಮಾತನಾಡಿದ ಸ್ಟ್ರಾಟೆಜಿಕ್ ಫೋರ್‌ಸೈಟ್ ಗ್ರೂಪ್‌ನ ಅಧ್ಯಕ್ಷ ಡಾ ಸಂದೀಪ್ ವಾಸ್ಲೇಕರ್, ಯುವಜನರು ಭವಿಷ್ಯವನ್ನು ರೂಪಿಸುತ್ತಾರೆ. ನಮ್ಮ ಸಮಾಜ ಮತ್ತು ಗ್ರಹಕ್ಕೆ ಮುಂದೆ ನಾಗುತ್ತದೆ ಎಂಬುದು ಯುವಕರು ಏನು ಯೋಚಿಸುತ್ತಾರೆ ಎಂಬುದರ ಮೇಲೆ ನಿರ್ಧಾರವಾಗುತ್ತದೆ ಎಂದರು. ಇಂದು ಯುದ್ಧವಿಲ್ಲದ ಜಗತ್ತು ಹುಚ್ಚು ಕನಸಲ್ಲ, ಬದಲಿಗೆ ವಾಸ್ತವವಾಗಿದೆ. ನಾಗರೀಕತೆ ವಿಕಾಸವಾಗಲು ಹನ್ನೆರಡು ಸಾವಿರ ವರ್ಷಗಳು ಬೇಕಾಯಿತು. ಜಾಗತಿಕ ಯುದ್ಧದಲ್ಲಿ ಇದೆಲ್ಲವೂ ಕಣ್ಮರೆಯಾಗಬಹುದು. ಶಾಂತಿಯುತ ಜಗತ್ತನ್ನು ಖಚಿತಪಡಿಸಿಕೊಳ್ಳುವ ಮಹತ್ತರವಾದ ಜವಾಬ್ದಾರಿ ಯುವಜನರ ಮೇಲಿದೆ. ವಸುಧೈವ ಕುಟುಂಬಕಂ ತತ್ವವು ಮಾತ್ರ ಅದನ್ನು ಖಚಿತಪಡಿಸುತ್ತದೆ ಎಂದು ಅವರು ಹೇಳಿದರು.

https://static.pib.gov.in/WriteReadData/userfiles/image/Y-20...6FUM7.jpg

ಸಿಂಬಯೋಸಿಸ್ ವಿಶ್ವವಿದ್ಯಾಲಯದ ಅಧ್ಯಕ್ಷರು, ಸಂಸ್ಥಾಪಕರು ಮತ್ತು ಕುಲಪತಿ ಪ್ರೊ (ಡಾ.) ಎಸ್. ಬಿ. ಮುಜುಂದಾರ್ ಅವರು ಜಾಗತಿಕ ಕುಟುಂಬದ ವಿಕಾಸದ ಆಶಯವನ್ನು ವ್ಯಕ್ತಪಡಿಸಿದರು, ವಿದೇಶಿ ಮತ್ತು ಭಾರತೀಯ ವಿದ್ಯಾರ್ಥಿಗಳನ್ನು ಒಟ್ಟಿಗೆ ಸೇರಿಸುವ ಉದ್ದೇಶದಿಂದ ಸಿಂಬಯೋಸಿಸ್ ಪ್ರಾರಂಭವಾಯಿತು. ಶಿಕ್ಷಣವು ಅದನ್ನು ಸಾಧಿಸುವ ಏಕೈಕ ಸಾಧನವಾಗಿದೆ. ಇದು ಭಾರತೀಯ ಮತ್ತು ವಿದೇಶಿ ವಿದ್ಯಾರ್ಥಿಗಳ ನಡುವೆ ಅಂತರರಾಷ್ಟ್ರೀಯ ತಿಳುವಳಿಕೆಯನ್ನು ಉತ್ತೇಜಿಸುತ್ತದೆ. ವಿಭಿನ್ನ ಗಡಿಗಳನ್ನು ಹೊಂದಿರುವ ರಾಷ್ಟ್ರಗಳು ಒಟ್ಟಿಗೆ ಸೇರುವ, ಒಟ್ಟಿಗೆ ವಾಸಿಸುವ ಮತ್ತು ಪರಸ್ಪರ ಅರ್ಥಮಾಡಿಕೊಳ್ಳುವ ದಿನ ಬರುತ್ತದೆ. ಅಲ್ಲಿ ಯುದ್ಧಗಳು ಇರುವುದಿಲ್ಲ. ವಸುಧೈವ ಕುಟುಂಬಕಂ ಮಾನವನ ಅಂತಿಮ ವಿಧಿ ಎಂದು ನಾನು ನಂಬುತ್ತೇನೆ. ನಾವು ಸಿಂಬಯೋಸಿಸ್ ನಲ್ಲಿ ಇದನ್ನು ಶಿಕ್ಷಣದ ಮೂಲಕ ವಾಸ್ತವಗೊಳಿಸಲು ಪ್ರಯತ್ನಿಸುತ್ತೇವೆ ಎಂದು ಅವರು ಹೇಳಿದರು.

https://static.pib.gov.in/WriteReadData/userfiles/image/Y-20...7F0BG.jpg

ಸಮಾಲೋಚನಾ ಸಭೆಯ ಸಂದರ್ಭದಲ್ಲಿ ಮತ್ತು ಅಂತರರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ, ಸಿಂಬಯೋಸಿಸ್ ಇನ್‌ಸ್ಟಿಟ್ಯೂಟ್ ಆಫ್ ಮೀಡಿಯಾ ಅಂಡ್ ಕಮ್ಯುನಿಕೇಷನ್‌ನಲ್ಲಿ ಮಾರ್ಚ್ 9 ಮತ್ತು 10 ರಂದು ನಡೆಸಿದ ಮೊಬೈಲ್ ಚಲನಚಿತ್ರ ನಿರ್ಮಾಣ ಕಾರ್ಯಾಗಾರದಲ್ಲಿ ಭಾಗವಹಿಸಿದ 18-35 ವರ್ಷದೊಳಗಿನ ಇಪ್ಪತ್ತೈದು ಮಹಿಳೆಯರಿಗೆ ಭಾಗವಹಿಸುವಿಕೆಯ ಪ್ರಮಾಣಪತ್ರವನ್ನು ನೀಡಲಾಯಿತು. ಸಿಂಬಯೋಸಿಸ್ ಸಮೂಹ ಮಾಧ್ಯಮ ಸಂಸ್ಥೆ, ಮುಂಬೈನ ಪ್ರೆಸ್ ಇನ್‌ಫರ್ಮೇಷನ್ ಬ್ಯೂರೋ ಮತ್ತು ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ, ವಾರ್ತಾ ಮತ್ತು ಪ್ರಸಾರ ಸಚಿವಾಲಯ, ಭಾರತ ಸರ್ಕಾರ ಇವುಗಳ ಸಹಯೋಗದಿಂದ ಈ ಕಾರ್ಯಾಗಾರವನ್ನು ಆಯೋಜಿಸಲಾಯಿತು. ಭಾಗವಹಿಸಿದ ಯುವತಿಯರು ಪುಣೆಯ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಿಗೆ ಸೇರಿದವರು, ಸಿಂಬಯೋಸಿಸ್ ಅಂತಾರಾಷ್ಟ್ರೀಯ ವಿಶ್ವವಿದ್ಯಾಲಯ ತನ್ನ ಔಟ್ರೀಚ್ ಕಾರ್ಯಕ್ರಮದ ಅಡಿಯಲ್ಲಿ ಇದನ್ನು ಅಳವಡಿಸಿಕೊಂಡಿದೆ.

https://static.pib.gov.in/WriteReadData/userfiles/image/Y-20...8MDGJ.jpg

ವೈ20 ವೇದಿಕೆಯು ಜಾಗತಿಕ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲು, ವಿಚಾರಗಳನ್ನು ವಿನಿಮಯ ಮಾಡಿಕೊಳ್ಳಲು, ಚರ್ಚಿಸಲು, ಮಾತುಕತೆ ನಡೆಸಲು ಮತ್ತು ಒಮ್ಮತಕ್ಕೆ ತಲುಪಲು ಭವಿಷ್ಯದ ನಾಯಕರಾಗಿ ಯುವಕರನ್ನು ಪ್ರೋತ್ಸಾಹಿಸುತ್ತದೆ. ಜಿ20 ಅಧ್ಯಕ್ಷ ರಾಷ್ಟ್ರವು ಯುವ ಶೃಂಗಸಭೆಯನ್ನು ಆಯೋಜಿಸುವ ಜವಾಬ್ದಾರಿಯನ್ನು ಹೊಂದಿದೆ, ಇದು ಸಾಮಾನ್ಯವಾಗಿ ಯುವಜನರು ಏನು ಯೋಚಿಸುತ್ತಿದ್ದಾರೆಂದು ತಿಳಿಯಲು ಮತ್ತು ಅವರ ಸ್ವಂತ ನೀತಿ ಪ್ರಸ್ತಾಪಗಳಲ್ಲಿ ಅವರ ಸಲಹೆಗಳನ್ನು ಅಳವಡಿಸಲು ಸಾಂಪ್ರದಾಯಿಕ ವೇದಿಕೆಗೆ ಕೆಲವು ವಾರಗಳ ಮೊದಲು ನಡೆಯುತ್ತದೆ. ಇದು ಜಿ20 ಸರ್ಕಾರಗಳು ಮತ್ತು ಅವರ ಸ್ಥಳೀಯ ಯುವಕರ ನಡುವೆ ಸಂಪರ್ಕ ಬಿಂದುವನ್ನು ಸೃಷ್ಟಿಸುವ ಪ್ರಯತ್ನವಾಗಿದೆ. 2023 ರಲ್ಲಿ ವೈ20 ಇಂಡಿಯಾ ಶೃಂಗಸಭೆಯು ಭಾರತದ ಯುವ-ಕೇಂದ್ರಿತ ಪ್ರಯತ್ನಗಳನ್ನು ಮಾದರಿಯಾಗಿ ತೋರಿಸುತ್ತದೆ ಮತ್ತು ಪ್ರಪಂಚದಾದ್ಯಂತದ ಯುವಕರಿಗೆ ಅದರ ಮೌಲ್ಯಗಳು ಮತ್ತು ನೀತಿ ಕ್ರಮಗಳನ್ನು ಪ್ರದರ್ಶಿಸಲು ಅವಕಾಶವನ್ನು ಒದಗಿಸುತ್ತದೆ. ಭಾರತದ ಅಧ್ಯಕ್ಷತೆಯ ಅವಧಿಯಲ್ಲಿ ವೈ20 ಕುರಿತು ಇನ್ನಷ್ಟು ತಿಳಿದುಕೊಳ್ಳಲು ಇಲ್ಲಿ ಕ್ಲಿಕ್‌ ಮಾಡಿ here.

ಜಿ20 ಒಕ್ಕೂಟವು 19 ದೇಶಗಳು ಮತ್ತು ಯುರೋಪಿಯನ್ ಯೂನಿಯನ್ ಅನ್ನು ಒಳಗೊಂಡಿರುವ ಒಂದು ಅಂತರಸರ್ಕಾರಿ ವೇದಿಕೆಯಾಗಿದೆ. ಇದು ಅಂತರರಾಷ್ಟ್ರೀಯ ಆರ್ಥಿಕ ಸ್ಥಿರತೆ, ಹವಾಮಾನ ಬದಲಾವಣೆ ತಗ್ಗಿಸುವಿಕೆ ಮತ್ತು ಸುಸ್ಥಿರ ಅಭಿವೃದ್ಧಿಯಂತಹ ಜಾಗತಿಕ ಆರ್ಥಿಕತೆಗೆ ಸಂಬಂಧಿಸಿದ ಪ್ರಮುಖ ಸಮಸ್ಯೆಗಳನ್ನು ಪರಿಹರಿಸಲು ಕಾರ್ಯನಿರ್ವಹಿಸುತ್ತದೆ. ಜಿ20 ಕುರಿತು ಇನ್ನಷ್ಟು ತಿಳಿದುಕೊಳ್ಳಲು ಇಲ್ಲಿ ಕ್ಲಿಕ್‌ ಮಾಡಿ here.

ಭಾರತವು ಈ ವರ್ಷದ ಡಿಸೆಂಬರ್ 1 ರಂದು ಇಂಡೋನೇಷ್ಯಾದಿಂದ ಜಿ 20 ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿದೆ ಮತ್ತು 2023 ರಲ್ಲಿ ದೇಶದಲ್ಲಿ ಮೊದಲ ಬಾರಿಗೆ ಜಿ20 ನಾಯಕರ ಶೃಂಗಸಭೆ ನಡೆಯಲಿದೆ. ಪ್ರಜಾಪ್ರಭುತ್ವ ಮತ್ತು ಬಹುಪಕ್ಷೀಯತೆಗೆ ಬದ್ಧವಾಗಿರುವ ರಾಷ್ಟ್ರ ಭಾರತದ ಜಿ 20 ಅಧ್ಯಕ್ಷ ಸ್ಥಾನವು ದೇಶಕ್ಕೆ ಒಂದು ಅಭೂತಪೂರ್ವವಾದ ಸಂದರ್ಭವಾಗಿದೆ. ಪ್ರತಿಯೊಬ್ಬರ ಯೋಗಕ್ಷೇಮಕ್ಕಾಗಿ ಪ್ರಾಯೋಗಿಕ ಜಾಗತಿಕ ಪರಿಹಾರಗಳನ್ನು ಕಂಡುಹಿಡಿಯುವ ಮೂಲಕ ಪ್ರಮುಖ ಪಾತ್ರವನ್ನು ವಹಿಸಲು ಇದು ಪ್ರಯತ್ನಿಸುತ್ತದೆ ಮತ್ತು ಹಾಗೆ ಮಾಡುವ ಮೂಲಕ, 'ವಸುಧೈವ ಕುಟುಂಬಕಂ' ಅಥವಾ 'ಜಗತ್ತು ಒಂದು ಕುಟುಂಬ' ಎಂಬ ನಿಜವಾದ ಮನೋಭಾವವನ್ನು ಬೆಂಬಲಿಸುತ್ತದೆ.

****


(Release ID: 1905963) Visitor Counter : 188