ಆಯುಷ್
azadi ka amrit mahotsav g20-india-2023

​​​​​​​9ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ 100 ದಿನಗಳ ಕ್ಷಣಗಣನೆ ಆರಂಭ


ಗ್ರಾಮ ಪಂಚಾಯತ್/ಗ್ರಾಮ ಸಭೆಗಳ ಭಾಗವಹಿಸುವಿಕೆಯ ಮೂಲಕ ಯೋಗವನ್ನು ಪ್ರತಿ ಹಳ್ಳಿಗೆ ಕೊಂಡೊಯ್ಯುವತ್ತ ʻಅಂತಾರಾಷ್ಟ್ರೀಯ ಯೋಗ ದಿನ -2023ʼ (ಐಡಿವೈ-2023) ಗಮನ ಹರಿಸಲಿದೆ

Posted On: 11 MAR 2023 3:51PM by PIB Bengaluru

ʻಆಯುಷ್ ಸಚಿವಾಲಯ’ ಮತ್ತು ʻಮೊರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಸಂಸ್ಥೆ’ (ಎಂಡಿಎನ್ಐವೈ) 2023ರ ಮಾರ್ಚ್ 13 ರಿಂದ 14 ರವರೆಗೆ ದೆಹಲಿಯ ತಾಲ್ಕಟೋರಾ ಕ್ರೀಡಾಂಗಣದಲ್ಲಿ ʻಯೋಗ ಮಹೋತ್ಸವ-2023ʼ ಮತ್ತು ಯೋಗ ಮಹೋತ್ಸವದ ಬಳಿಕ ಮಾರ್ಚ್ 15, 2023 ರಂದು ʻಎಂಡಿಎನ್ಐವೈ’ನಲ್ಲಿ ಯೋಗ ಕಾರ್ಯಾಗಾರಗಳನ್ನು ಆಯೋಜಿಸಿದೆ. "ವಸುದೈವ ಕುಟುಂಬಕಂ" ತತ್ವವನ್ನು ಪ್ರತಿಧ್ವನಿಸುವ ಭಾರತದ ʻಜಿ 20ʼ ಅಧ್ಯಕ್ಷತೆಯ ಧ್ಯೇಯವಾಕ್ಯ - "ಒಂದು ವಿಶ್ವ, ಒಂದು ಆರೋಗ್ಯ"ಗೆ ಅನುಗುಣವಾಗಿ ಈ ವರ್ಷದ ಅಂತಾರಾಷ್ಟ್ರೀಯ ಯೋಗ ದಿನವು(ಐಡಿವೈ) ದೊಡ್ಡ ಮಟ್ಟದ ಜಾಗತಿಕ ಸಮುದಾಯದೊಂದಿಗೆ ಸಂಪರ್ಕ ಸಾಧಿಸಲು ಯತ್ನಿಸಲಿದೆ. ಜಾಗತಿಕ ವ್ಯಾಪ್ತಿಯ ಜೊತೆಗೆ, ಗ್ರಾಮ ಪಂಚಾಯತ್ / ಗ್ರಾಮ ಸಭೆಗಳ ಸಕ್ರಿಯ ಭಾಗವಹಿಸುವಿಕೆಯ ಮೂಲಕ ಭಾರತದ ಪ್ರತಿಯೊಂದು ಹಳ್ಳಿಗೂ ಯೋಗವನ್ನು ಕೊಂಡೊಯ್ಯುವತ್ತ ʻಐಡಿವೈʼ ಗಮನ ಹರಿಸಲಿದೆ.

ಕೇಂದ್ರ ಆಯುಷ್ ಹಾಗೂ ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ಸಚಿವ ಶ್ರೀ ಸರ್ಬಾನಂದ ಸೋನೊವಾಲ್ ಅವರು ಕೇಂದ್ರ ಸಂಸ್ಕೃತಿ, ಪ್ರವಾಸೋದ್ಯಮ ಹಾಗೂ ಈಶಾನ್ಯ ರಾಜ್ಯಗಳ ಅಭಿವೃದ್ಧಿ ಖಾತೆ ಸಚಿವ ಶ್ರೀ ಜಿ ಕಿಶನ್ ರೆಡ್ಡಿ; ಮಣಿಪುರದ ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್; ಆಯುಷ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಹಾಯಕ ಸಚಿವ ಡಾ.ಮುಂಜ್ಪಾರಾ ಮಹೇಂದ್ರಭಾಯಿ ಕಾಲುಭಾಯ್, ಬೆಂಗಳೂರಿನ ʻಎಸ್‌ವಿವೈಎಸ್ಎʼ ಕುಲಪತಿ ಡಾ.ಎಚ್.ಆರ್. ನಾಗೇಂದ್ರ;  ರಾಜಸ್ಥಾನದ ತೇರಾಪಂತ್ ಸಮಾಜದ ಶ್ರೀ ಮುನಿಶ್ರೀ ಕಮಲ್ ಕುಮಾರ್ , ಆಯುಷ್ ಸಚಿವಾಲಯದ ಕಾರ್ಯದರ್ಶಿ ವೈದ್ಯ ರಾಜೇಶ್ ಕೊಟೆಚಾ ಮತ್ತು ಇತರ ಗಣ್ಯರ ಉಪಸ್ಥಿತಿಯಲ್ಲಿ ʻಯೋಗ ಮಹೋತ್ಸವ-2023ʼ ಉದ್ಘಾಟಿಸಲಿದ್ದಾರೆ.  

2023ರ ʻಅಂತರರಾಷ್ಟ್ರೀಯ ಯೋಗ ದಿನಾಚರಣೆʼಯ 9ನೇ ಆವೃತ್ತಿಗೆ 100 ದಿನಗಳ ಕ್ಷಣಗಣನೆಯನ್ನು ಆಚರಿಸುವ ಸಲುವಾಗಿ ʻಯೋಗ ಮಹೋತ್ಸವ 2023ʼ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಹೆಜ್ಜೆಗುರುತುಗಳನ್ನು ಅನುಸರಿಸಿ, ಈ ವರ್ಷ, ಯೋಗದ ವಿವಿಧ ಆಯಾಮಗಳು ಮತ್ತು ಅದರ ಉಪಯುಕ್ತತೆಗೆ ವ್ಯಾಪಕ ಪ್ರಚಾರ ನೀಡುವುದು; ವಿಶ್ವದಾದ್ಯಂತ ಆರೋಗ್ಯ ಮತ್ತು ಯೋಗಕ್ಷೇಮ ಹಾಗೂ ಶಾಂತಿಯನ್ನು ಉತ್ತೇಜಿಸಲು ಸಾಮೂಹಿಕ ಆಂದೋಲನವನ್ನು ಪ್ರಾರಂಭಿಸುವುದು ಸಹ ʻಯೋಗ ಮಹೋತ್ಸವ -2023 ಆಯೋಜನೆಯ ಉದ್ದೇಶವಾಗಿದೆ. ಕ್ಷಣಗಣನೆಯನ್ನು ಆಚರಿಸಲು ದೆಹಲಿ ಎನ್‌ಸಿಆರ್‌ನ 100 ಸ್ಥಳಗಳಲ್ಲಿ ಸಾಮೂಹಿಕ ಯೋಗ ಪ್ರದರ್ಶನಗಳು / ಅಧಿವೇಶನಗಳು ನಡೆಯಲಿವೆ. ಜೊತೆಗೆ ಈ ಕಾರ್ಯಕ್ರಮವು ದೇಶಾದ್ಯಂತ 100 ದಿನಗಳು, 100 ನಗರಗಳು ಮತ್ತು 100 ಸಂಸ್ಥೆಗಳಲ್ಲಿ ಯೋಗ ಸಂಬಂಧಿತ ಚಟುವಟಿಕೆಗಳಿಗೆ ಶ್ರೀಕಾರ ಹಾಡಲಿದೆ. 

ಪೂಜ್ಯ ಯೋಗ ಗುರುಗಳು, ಪ್ರಸಿದ್ಧ ಯೋಗ ಶಿಕ್ಷಕರು, ಆಯುಷ್ ತಜ್ಞರು, ಪ್ರತಿನಿಧಿಗಳು ಮತ್ತು ಯೋಗ ಉತ್ಸಾಹಿಗಳು ಸೇರಿದಂತೆ ಗಣ್ಯಾತಿಗಣ್ಯರ ಶುಭ ಉಪಸ್ಥಿತಿ ಮತ್ತು ಪ್ರವಚನಗಳಿಗೆ ʻಯೋಗ ಮಹೋತ್ಸವ-2023ʼ ಸಾಕ್ಷಿಯಾಗಲಿದೆ.

ಮೂರು ದಿನಗಳ ʻಯೋಗ ಮಹೋತ್ಸವ-2023ʼರಲ್ಲಿ ಯೋಗ ಗುರುಗಳ ಭಾಷಣಗಳು / ಪ್ರವಚನಗಳು; ಪ್ರಮುಖ ವಿದ್ಯಾಸಂಸ್ಥೆಗಳ ಮುಖ್ಯಸ್ಥರ ಅನುಭವ ಹಂಚಿಕೊಳ್ಳುವಿಕೆ ಒಳಗೊಂಡ ಉಪಕುಲಪತಿಗಳ ಶೃಂಗಸಭೆ; ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳ ಆಯುಷ್ ಶೃಂಗಸಭೆ, ಯೋಗ ಫ್ಯೂಷನ್‌/ ಪ್ರಾತ್ಯಕ್ಷಿಕೆ, ಲಯಬದ್ಧ ಯೋಗ ಪ್ರದರ್ಶನ, ರಸಪ್ರಶ್ನೆ / ಭಾಷಣ / ಪೋಸ್ಟರ್ ಪ್ರಸ್ತುತಿ ಮತ್ತು ʻವೈ ಬ್ರೇಕ್ʼ ಮತ್ತು ʻಸಿವೈಪಿʼ ಮುಂತಾದ ಸ್ಪರ್ಧೆಗಳನ್ನು ಸಹ ನಡೆಸಲಾಗುವುದು.

ಈ ವರ್ಷ ಯೋಗ ಮಹೋತ್ಸವವು ಅಂಗನವಾಡಿ ಕಾರ್ಯಕರ್ತೆಯರು/ ಆಶಾ ಕಾರ್ಯಕರ್ತೆಯರು/ ಸ್ವಸಹಾಯ ಗುಂಪುಗಳು, ಆಯುಷ್ ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳು, ನಿವಾಸಿ ಕಲ್ಯಾಣ ಸಂಘಗಳು (ಆರ್‌ಡಬ್ಲ್ಯೂಎ), ಮಹಿಳಾ ಕಲ್ಯಾಣ ಸಂಸ್ಥೆಗಳು, ಸ್ನಾತಕೋತ್ತರ ವಿಭಾಗಗಳು / ವಿಶ್ವವಿದ್ಯಾಲಯಗಳು / ಯೋಗ ವಿಶ್ವವಿದ್ಯಾಲಯಗಳು / ಯೋಗ ಕಾಲೇಜುಗಳು / ಯೋಗ ತರಬೇತಿ ಸಂಸ್ಥೆಗಳು / ಆಯುರ್ವೇದ, ಸಿದ್ಧ ಹೋಮಿಯೋಪತಿ ಮತ್ತು ಯುನಾನಿ ಕಾಲೇಜುಗಳು / ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಕಾಲೇಜುಗಳು, ಶಾಲೆಗಳು, ಸಂಶೋಧನಾ ಮಂಡಳಿಗಳು / ರಾಷ್ಟ್ರೀಯ ಸಂಸ್ಥೆ / ಎನ್‌ಸಿಐಎಸ್ಎಂ / ಎನ್‌ಸಿಹೆಚ್‌/ಪಿಸಿಐಎಮ್ ಮತ್ತು ಎಚ್‌/ಎನ್ಎಂಪಿಬಿ ಮತ್ತಿತರರ ಸಕ್ರಿಯ ಭಾಗವಹಿಸುವಿಕೆಗೆ ಸಾಕ್ಷಿಯಾಗಲಿದೆ.  

ಭಾರತದಲ್ಲಿ ʻಐಡಿವೈʼನ ನೋಡಲ್ ಸಚಿವಾಲಯವಾಗಿರುವ ಆಯುಷ್ ಸಚಿವಾಲಯವು ಅಂತರರಾಷ್ಟ್ರೀಯ ಯೋಗ ದಿನಾಚರಣೆಯ (ಐಡಿವೈ) ಎಂಟು ಯಶಸ್ವಿ ಆವೃತ್ತಿಗಳನ್ನು ಆಯೋಜಿಸುವಲ್ಲಿ ಯಶಸ್ವಿಯಾಗಿದೆ. ಇದಕ್ಕೆ ಭಾರಿ ಸ್ಪಂದನೆ ಮತ್ತು ವಿಶ್ವಾದ್ಯಂತ ಬೆಂಬಲವನ್ನು ದೊರೆತಿದೆ. ಆಯುಷ್‌ ಸಚಿವಾಲಯವು ಇಡೀ ಸರಕಾರದ ಪರಿಕಲ್ಪನೆಯೊಂದಿಗೆ ಮತ್ತು ಭಾರತ ಸರಕಾರದ ಇತರ ಸಚಿವಾಲಯಗಳು / ಸಂಸ್ಥೆಗಳ / ಸಂಸ್ಥೆಗಳ ಬೆಂಬಲದ ಮೂಲಕ ಕಳೆದ 8 ವರ್ಷಗಳಲ್ಲಿ ಯೋಗದ ಸಂದೇಶವನ್ನು ಜಾಗತಿಕವಾಗಿ ಕೊಂಡೊಯ್ಯುವಲ್ಲಿ ಸಾಧಿಸಿದ ಪ್ರಗತಿಯನ್ನು ಮುಂದುವರಿಸಲು ವಿವಿಧ ಕಾರ್ಯಕ್ರಮಗಳು ಮತ್ತು ಸಹಯೋಗಗಳನ್ನು ಪ್ರಾರಂಭಿಸಿದೆ.


****



(Release ID: 1905948) Visitor Counter : 178