ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ

ಕಳೆದ ವರ್ಷದ ರಫ್ತು ಅಂಕಿಅಂಶ ಈಗಾಗಲೇ ಫೆಬ್ರವರಿಯಲ್ಲಿ ದಾಟಿದೆ; ಈ ವರ್ಷ ಸರಕು ಮತ್ತು ಸೇವೆಗಳ ರಫ್ತು 750 ಶತಕೋಟಿ ಯು.ಎಸ್.‌ ಡಾಲರ್‌ ಹಂತವನ್ನು ಮುಟ್ಟುವ ವಿಶ್ವಾಸವಿದೆ: ಶ್ರೀ ಪಿಯೂಷ್ ಗೋಯಲ್


ದೇಶದಲ್ಲಿ ಗುಣಮಟ್ಟ ಕುರಿತು ಪ್ರಜ್ಞೆ ಹೆಚ್ಚಿಸಲು ಸರ್ಕಾರವು ಗಮನ ಕೇಂದ್ರೀಕರಿಸಿದೆ; ಮುಂದಿನ ಎರಡು ವರ್ಷಗಳಲ್ಲಿ ಗುಣಮಟ್ಟ ನಿಯಂತ್ರಿತ ಆದೇಶಗಳ (ಕ್ಯೂ.ಸಿ.ಒ.) ಸಂಖ್ಯೆ 2000 ತಲುಪಲಿದೆ: ಶ್ರೀ ಪಿಯೂಷ್ ಗೋಯಲ್

ಹೂಡಿಕೆದಾರ ಸ್ನೇಹಿ ವ್ಯಾಪಾರ ಪರಿಸರ ವ್ಯವಸ್ಥೆಯಿಂದಾಗಿ ಹಲವಾರು ಕಂಪನಿಗಳು ಭಾರತದಲ್ಲಿ ಸೆಮಿ-ಕಂಡಕ್ಟರ್‌ ಚೈನ್ ನಲ್ಲಿ ಹೂಡಿಕೆ ಮಾಡಲು ಬಯಸುತ್ತಿವೆ: ಶ್ರೀ ಪಿಯೂಷ್ ಗೋಯಲ್

ಮುಂದಿನ ದಿನಗಳಲ್ಲಿ ಭಾರತವನ್ನು ಉತ್ತಮ ಸ್ಥಿತಿಯಲ್ಲಿಡಲು ಸುಸ್ಥಿರತೆ ಮತ್ತು ಗುಣಮಟ್ಟದ ಮೇಲೆ ಕೇಂದ್ರೀಕರಿಸಿ: ಶ್ರೀ ಪಿಯೂಷ್ ಗೋಯಲ್

Posted On: 04 MAR 2023 7:51PM by PIB Bengaluru

ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ, ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಮತ್ತು ಜವಳಿ ಸಚಿವರಾದ ಶ್ರೀ ಪಿಯೂಷ್ ಗೋಯಲ್ ಅವರು ಕಳೆದ ವರ್ಷದ ರಫ್ತು ಅಂಕಿಅಂಶವನ್ನು ಈಗಾಗಲೇ ಫೆಬ್ರವರಿ ತಿಂಗಳಲ್ಲಿ ದಾಟಿ ಆಗಿದೆ ಎಂದು ತಿಳಿಸಿದರು ಮತ್ತು ಈ ವರ್ಷ ಸರಕು ಮತ್ತು ಸೇವಾ ರಫ್ತು 750 ಶತಕೋಟಿ ಯು.ಎಸ್.‌ ಡಾಲರ್‌ ಅನ್ನು ಮುಟ್ಟುವ ವಿಶ್ವಾಸವನ್ನು ವ್ಯಕ್ತಪಡಿಸಿದರು. ಇಂದು ನವದೆಹಲಿಯಲ್ಲಿ ನಡೆದ ರೈಸಿನಾ ಸಂವಾದದ 8ನೇ ಆವೃತ್ತಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಕಳೆದ ವರ್ಷ ಭಾರತವು ಅತ್ಯಧಿಕ ರಫ್ತು ಅಂಕಿಅಂಶವನ್ನು ಸಾಧಿಸಿದೆ ಎಂಬ ಪ್ರಶ್ನೆಗೆ ಉತ್ತರಿಸುತ್ತಾ ಸಚಿವರು, ಇದು ಆಳವಾದ ವಿಶ್ಲೇಷಣೆ ಮತ್ತು ವ್ಯಾಪಕವಾದ ಯೋಜನೆಗಳ ಫಲಿತಾಂಶವಾಗಿದೆ ಎಂದು ಹೇಳಿದರು. ಭಾರತದ ಸಾಮರ್ಥ್ಯಗಳನ್ನು ಕೂಲಂಕಷವಾಗಿ ಮೌಲ್ಯಮಾಪನ ಮಾಡಲಾಯಿತು, ಹೊಸ ಮಾರುಕಟ್ಟೆಗಳನ್ನು ಹುಡುಕಲಾಯಿತು, ಜಿಲ್ಲೆಗಳು, ವಿಶೇಷವಾಗಿ ರಫ್ತು ಕೇಂದ್ರಗಳಾಗಲು ಅಧಿಕಾರ ನೀಡಲಾಯಿತು ಮತ್ತು ವಿದೇಶದಲ್ಲಿರುವ ಎಲ್ಲಾ ಭಾರತೀಯ ಮಿಷನ್ಗಳು ವ್ಯಾಪಾರ, ತಂತ್ರಜ್ಞಾನ ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸಲು ಮಾಡಿದ ಪ್ರಯತ್ನಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಯಿತು. ಕಳೆದ ವರ್ಷ, ಸರಕು ಮತ್ತು ಸೇವಾ ವ್ಯಾಪಾರವು 650 ಶತಕೋಟಿ ಯು.ಎಸ್.‌ ಡಾಲರ್ ಅನ್ನು ದಾಟಿದೆ ಎಂದು ಸಚಿವರು ತಿಳಿಸಿದರು.

ಕಳೆದ ದಶಕದಲ್ಲಿ ಕೇಂದ್ರ ಸರ್ಕಾರವು ಕೈಗೊಂಡ ಪರಿವರ್ತನಾ ಉಪಕ್ರಮಗಳಾದ ಸ್ವಚ್ಛ ಭಾರತ್ ಮಿಷನ್, ಗ್ರಾಮೀಣ ಭಾರತದಲ್ಲಿ ಸುಮಾರು 35 ದಶಲಕ್ಷ ಮನೆಗಳ ವಿದ್ಯುದ್ದೀಕರಣ, ದೃಢವಾದ ನಿರಂತರ ವಿದ್ಯುತ್‌ ಪೂರೈಕೆಗಾಗಿ ಪವರ್ ಗ್ರಿಡ್ ರಚನೆ, ಎಲ್ಲರಿಗೂ ವಸತಿ, 500 ದಶಲಕ್ಷಕ್ಕೂ ಹೆಚ್ಚು ಉಚಿತ ಆರೋಗ್ಯ ಸೇವೆಗಳು ಸಾಂಕ್ರಾಮಿಕ ರೋಗದಿಂದ ಎದುರಾದ ಸವಾಲುಗಳನ್ನು ಜಯಿಸುವ ಮೂಲಕ ಜನರು ಭಾರತವನ್ನು ಉತ್ತಮ ಸ್ಥಾನದಲ್ಲಿರಿಸಲು ಸಾಧ್ಯವಾಯಿತು ಎಂದು ಶ್ರೀ ಗೋಯಲ್ ಅಭಿಪ್ರಾಯ ವ್ಯಕ್ತಪಡಿಸಿದರು. ಇದಕ್ಕಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನಿರ್ಣಾಯಕ ನಾಯಕತ್ವವನ್ನು ಶ್ಲಾಘಿಸಿದರು ಮತ್ತು ಸಾಂಕ್ರಾಮಿಕ ರೋಗವನ್ನು ಜಯಿಸಲು ಮಾತ್ರವಲ್ಲದೆ ಅದು ಒಡ್ಡಿದ ಸವಾಲುಗಳನ್ನು ಅವಕಾಶಗಳಾಗಿ ಪರಿವರ್ತಿಸುವ ಪ್ರಧಾನಮಂತ್ರಿಯವರು ಆಲೋಚನೆಗಳನ್ನು ನಿರಂತರವಾಗಿ ಹುಡುಕುತ್ತಿದ್ದರು ಎಂದು ಸಚಿವರು ಹೇಳಿದರು.

ಯುದ್ದದ ಸಂಘರ್ಷದಿಂದಾಗಿ ಉಂಟಾದ ಜಾಗತಿಕ ಅನಿಶ್ಚಿತತೆಯ ಕುರಿತಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ಶ್ರೀ ಗೋಯಲ್ ಅವರು, ಈ ಪ್ರಕ್ಷುಬ್ಧ ಸಮಯವು ಭಾರತಕ್ಕೆ ತನ್ನ ಸ್ಥಿತಿಸ್ಥಾಪಕತ್ವವನ್ನು ಪ್ರದರ್ಶಿಸಲು ಅವಕಾಶವನ್ನು ನೀಡಿದೆ ಎಂದು ಹೇಳಿದರು. ಆಹಾರ ಭದ್ರತೆಯು ಪ್ರಪಂಚದ ಮುಂದೆ ಗಂಭೀರ ಸವಾಲಾಗಿ ಹೊರಹೊಮ್ಮಿದೆ ಎಂದು ವಿವರಿಸಿದ ಅವರು, ರಸಗೊಬ್ಬರಗಳ ಸಮರ್ಪಕ ಪೂರೈಕೆಯನ್ನು ಖಾತ್ರಿಪಡಿಸುವ ಮೂಲಕ ಭಾರತದ ಆಹಾರ ಭದ್ರತೆಯನ್ನು ಬಲಪಡಿಸಲು ಮುಂದಿನ ಯೋಜನೆ ರೂಪಿಸಲು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ದೂರದೃಷ್ಟಿ ಹೊಂದಿದ್ದಾರೆ ಎಂದು ಹೇಳಿದರು.

ರಸಗೊಬ್ಬರದ ಬೆಲೆಗಳು ಗಗನಕ್ಕೇರಿದ ಸಮಯದ ಕುರಿತು ಮಾತನಾಡಿದ ಸಚಿವ ಶ್ರೀ ಗೋಯಲ್ ಅವರು, ಕೇಂದ್ರ ಸರ್ಕಾರವು  ಹೆಚ್ಚಿದ ಬೆಲೆಗಳ ಹೊರೆಯನ್ನು ತಾನು ತೆಗೆದುಕೊಳ್ಳುವ ಮೂಲಕ ರೈತರು, ವಿಶೇಷವಾಗಿ ಸಣ್ಣ ಮತ್ತು ಅತಿ ಸಣ್ಣ ರೈತರು ಈ ಬೆಲೆ ಏರಿಕೆಯಿಂದ ಹಾನಿಯಾಗದಂತೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ನೋಡಿಕೊಂಡಿದ್ದಾರೆ ಎಂದು ಹೇಳಿದರು. ‘ಭಾರತವು ಆಹಾರ ಭದ್ರತೆಯಲ್ಲಿ ಸ್ವಾವಲಂಬಿಯಾಗಿದೆ, ಮತ್ತು ನಾವು ಕಳೆದ ವರ್ಷಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಉತ್ಪಾದನೆಯನ್ನು ಮುಂದುವರಿಸುತ್ತೇವೆ, ಇದರಿಂದ ನಮ್ಮ ಕೆಲವು ನೆರೆಹೊರೆಯವರು ಮತ್ತು ಇತರ ಸ್ನೇಹಪರ ರಾಷ್ಟ್ರಗಳನ್ನು ಕೂಡಾ ನಾವು ಬೆಂಬಲಿಸಬಹುದು’ ಎಂದು ಸಚಿವರು ಹೇಳಿದರು.

ಭಾರತಕ್ಕೆ ಹೂಡಿಕೆಯನ್ನು ಆಕರ್ಷಿಸಲು ಅನುವು ಮಾಡಿಕೊಡುವ ವಾತಾವರಣವನ್ನು ಕೇಂದ್ರ ಸರ್ಕಾರ ನಿರ್ಮಿಸುತ್ತಿದೆ ಎಂದು ಸಚಿವರು ಒತ್ತಿ ಹೇಳಿದರು. ಭಾರತವು 1.4 ಶತಕೋಟಿ ಜನಸಂಖ್ಯೆಯ ರಾಷ್ಟ್ರವಾಗಿದೆ, ದೇಶವು ಅತ್ಯುತ್ತಮ ಕೌಶಲ್ಯಗಳು, ನಿರ್ವಹಣಾ ಕೌಶಲ್ಯಗಳು ಸೇರಿದಂತೆ ಅಪಾರ ಯುವ ಜನಸಂಖ್ಯೆಯನ್ನು ಮತ್ತು ಮಹತ್ವಾಕಾಂಕ್ಷೆಯನ್ನು ಹೊಂದಿದೆ.  ಸರ್ಕಾರವು ಜನರ ಜೀವನದ ಮೂಲಭೂತ ಅವಶ್ಯಕತೆಗಳನ್ನು ಪೂರೈಸುವಲ್ಲಿ ಯಶಸ್ವಿಯಾಗಿದೆ. ಜೀವನದ ದೈನಂದಿನ ಮೂಲಭೂತ ಸೌಕರ್ಯಗಳನ್ನು ಪಡೆಯಲು ಮಾಡುತ್ತಿದ್ದ ಹೋರಾಟದಿಂದ ಜನರನ್ನು ಪ್ರಧಾನಮಂತ್ರಿ ಅವರು ಮುಕ್ತಗೊಳಿಸಿದರು, ಆ ಮೂಲಕ ಜೀವನದಲ್ಲಿ ಉತ್ತಮವಾದ ವಿಷಯಗಳನ್ನು ಆಶಿಸಲು ಅವರನ್ನು ಸಶಕ್ತಗೊಳಿಸಿದರು ಎಂದು ಸಚಿವರು ಹೇಳಿದರು.

ಈ ವರ್ಧಿತ ಮಹತ್ವಾಕಾಂಕ್ಷೆ ಮಟ್ಟಗಳು, ಹೂಡಿಕೆದಾರರಿಗೆ ಬೃಹತ್ ಮಾರುಕಟ್ಟೆ ಅವಕಾಶವನ್ನು ಕೂಡಾ ಒದಗಿಸಿದೆ ಎಂದು ಸಚಿವರು ಹೇಳಿದರು.  ಜನರು ಹೆಚ್ಚು ಶ್ರಮಿಸಬೇಕು ಮತ್ತು ಭಾರತದ ಬೆಳವಣಿಗೆಯ ಕಥೆಗೆ ಹೆಚ್ಚಿನ ಕೊಡುಗೆ ನೀಡಬೇಕು ಎಂಬ ಇಚ್ಛೆಯಿಂದಾಗಿ ವಿಶ್ವ ಮಾರುಕಟ್ಟೆಯಲ್ಲಿ ಭಾರತದ ಸ್ಪರ್ಧಾತ್ಮಕ ಅಂಚನ್ನು ತೀಕ್ಷ್ಣಗೊಂಡಿದೆ ಎಂದು ತಿಳಿಸಿದರು. ‘ಕೇಂದ್ರ ಸರ್ಕಾರವು ವ್ಯವಹಾರವನ್ನು ಸುಲಭಗೊಳಿಸುವುದು, ಅನುಸರಣೆ ಹೊರೆಯನ್ನು ಕಡಿಮೆ ಮಾಡುವುದು, ಅನುಪಯುಕ್ತ ಕಾನೂನುಗಳನ್ನು ನಿರುಪಯುಕ್ತಗೊಳಿಸುವುದು, ನಿರ್ಣಾಯಕ ವಲಯಗಳಲ್ಲಿ ಪಿ.ಎಲ್.ಐ ಯೋಜನೆಯನ್ನು ಜಾರಿಗೊಳಿಸುವುದು, ಸ್ಟಾರ್ಟ್ಅಪ್ ಗಳನ್ನು ಉತ್ತೇಜಿಸುವ ಆರ್ಥಿಕತೆಯನ್ನು ಡಿಜಿಟಲೀಕರಣಗೊಳಿಸುವುದು, ಮುಂತಾದ ಸಕಾರಾತ್ಮಕ ಕ್ರಮಗಳಿಂದಾಗಿ,  ಜಗತ್ತು ಭಾರತದಂತಹ ಉತ್ತಮ ಇನ್ನೊಂದು ಸ್ನೇಹಿತ ಮತ್ತು ವಿಶ್ವಾಸಾರ್ಹ ಪಾಲುದಾರನನ್ನು ಖಂಡಿತಾ ಪಡೆಯುವುದಿಲ್ಲ ಎಂದು ಅವರು ಹೇಳಿದರು.

ಅರೆವಾಹಕ(ಸೆಮಿಕಂಡಕ್ಟರ್)ಗಳ ಕುರಿತ ಪ್ರಶ್ನೆಗೆ ಸಚಿವರು ಪ್ರತಿಕ್ರಿಯಿಸಿದರು ಮತ್ತು ಭಾರತದ ಸ್ಥಿರತೆ ಮತ್ತು ಹೂಡಿಕೆದಾರ-ಸ್ನೇಹಿ ವ್ಯಾಪಾರ ಪರಿಸರ ವ್ಯವಸ್ಥೆಯಿಂದಾಗಿ ಭಾರತದಲ್ಲಿ ಅರೆವಾಹಕ ಸರಪಳಿ(ಸೆಮಿಕಂಡಕ್ಟರ್ ಚೈನ್) ಕ್ಷೇತ್ರದಲ್ಲಿ ಹೂಡಿಕೆ ಮಾಡಲು ಅನೇಕ ಕಂಪನಿಗಳು ಈಗಾಗಲೇ ಮಾತುಕತೆ ನಡೆಸುತ್ತಿವೆ ಎಂದು ಸಚಿವರು ಹೇಳಿದರು. ಭಾರತದ ವ್ಯಾಪಾರ ಕೊರತೆ ಮತ್ತು ಆಮದು ಅವಲಂಬನೆಯ ಹಿಂದಿನ ಕಾರಣಗಳನ್ನು ವಿಶ್ಲೇಷಿಸಿದ ಸಚಿವರು, ಭಾರತದಲ್ಲಿ ಉತ್ಪಾದನೆಗೆ ಹೆಚ್ಚಿನ ಮಟ್ಟದ ಹೂಡಿಕೆಯೊಂದಿಗೆ, ಭಾರತವು ಸ್ಪರ್ಧಾತ್ಮಕ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಸರಕು ಮತ್ತು ಸೇವೆಗಳನ್ನು ಉತ್ಪಾದಿಸುವಲ್ಲಿ ಯಶಸ್ವಿಯಾಗುತ್ತಿದೆ ಮತ್ತು ಆಮದುಗಳ ಮೇಲಿನ ಅವಲಂಬನೆಯನ್ನು ತ್ವರಿತವಾಗಿ ಕಡಿಮೆ ಮಾಡುತ್ತದೆ ಎಂದು ಒತ್ತಿ ಹೇಳಿದರು.

ಗುಣಮಟ್ಟ ನಿಯಂತ್ರಿತ ಆದೇಶ(ಕ್ವಾಲಿಟಿ ಕಂಟ್ರೋಲ್ ಆರ್ಡರ್ಸ್ – ಕ್ಯೂ.ಸಿ.ಒ.) ನಂತಹ ವಿವಿಧ ಉಪಕ್ರಮಗಳ ಮೂಲಕ ಗುಣಮಟ್ಟದ ಪ್ರಜ್ಞೆಯನ್ನು ಮೂಡಿಸಲು ಕೇಂದ್ರ ಸರ್ಕಾರವು ವ್ಯಾಪಕವಾಗಿ ಗಮನ ಕೇಂದ್ರೀಕರಿಸುತ್ತಿದೆ ಎಂದು ಹೇಳಿದರು. ಈಗಾಗಲೇ ಕ್ಯೂ.ಸಿ.ಒ.ಗಳ ಮಾನದಂಡದ ಸಂಖ್ಯೆಯು ನಾಲ್ಕು ಪಟ್ಟು ಹೆಚ್ಚು ಬೆಳೆದಿದೆ ಮತ್ತು ಈಗ ಸುಮಾರು 440 ಉತ್ಪನ್ನಗಳಷ್ಟಿದೆ ಮತ್ತು ಮುಂದಿನ ಎರಡು ವರ್ಷಗಳಲ್ಲಿ ಇದು 2000 ವರೆಗೆ ಬೆಳೆಯುತ್ತದೆ ಎಂದು ಸಚಿವರು ಗುಣಮಟ್ಟದ ಉತ್ಪಾದನೆ ಕುರಿತು ಪ್ರಸ್ತಾಪಿಸಿದರು. ಭಾರತದ ಗುಣಮಟ್ಟದ ಉತ್ಪನ್ನಗಳ ಸುಸ್ಥಿರತೆಯ ಕುರಿತು ಮಾತನಾಡಿದ ಸಚಿವರು 'ಶೂನ್ಯ ದೋಷ, ಶೂನ್ಯ ಪರಿಣಾಮ' ಗುರಿ ಸಾಧಿಸುವ ಭಾರತದ ಆಶಯವನ್ನು ಸಾಧಿಸಲು ಇಂತಹ ಪ್ರಕ್ರಿಯೆಗಳು ಸಹಾಯ ಮಾಡುತ್ತವೆ ಎಂದು ಹೇಳಿದರು.

****



(Release ID: 1904417) Visitor Counter : 82


Read this release in: English , Urdu , Marathi , Hindi