ಪಶು ಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆ ಸಚಿವಾಲಯ

ಜಮ್ಮು ಮತ್ತು ಕಾಶ್ಮೀರದ ರಣಬೀರ್ಬಾಗ್ ನಲ್ಲಿ ಬೀಜದ ಹೋರಿಯ ಘನೀಕೃತ ವೀರ್ಯಸಂಗ್ರಹಣಾ ಕೇಂದ್ರಕ್ಕೆ ಕೇಂದ್ರ ಸಚಿವ ಶ್ರೀ ಪರ್ಷೋತ್ತಮ್ ರೂಪಲಾ ಶಂಕುಸ್ಥಾಪನೆ ಮಾಡಿದರು

Posted On: 02 MAR 2023 3:08PM by PIB Bengaluru
1. ರಾಷ್ಟ್ರೀಯ ಗೋಕುಲ್ ಮಿಷನ್ ಯೋಜನೆಯಡಿ ಬೀಜದ ಹೋರಿಯ ಘನೀಕೃತ ವೀರ್ಯ ಕೇಂದ್ರಕ್ಕೆ ಒಟ್ಟು ರೂ. 2163.57 ಲಕ್ಷ ಮಂಜೂರಾತಿ.
2. ಬೀಜದ ಹೋರಿಯ ಘನೀಕೃತ ವೀರ್ಯ ಕೇಂದ್ರವು ಉತ್ತಮ ಗುಣಮಟ್ಟದ ಮತ್ತು ರೋಗ-ಮುಕ್ತ ಸೂಕ್ಷ್ಮಾಣು ಪ್ಲಾಸ್ಮ್ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಲು ಕಾಶ್ಮೀರ ಪ್ರದೇಶಕ್ಕೆ ಅನುವು ಮಾಡಿಕೊಡುತ್ತದೆ.
3. ಬೀಜದ ಹೋರಿಯ ಘನೀಕೃತ ವೀರ್ಯ ಯೋಜನೆ ಮತ್ತು ಅದರ ಯಶಸ್ವಿ ಅನುಷ್ಠಾನ/ಕಾರ್ಯಗತಗೊಳಿಸುವಿಕೆಯು ಅಸ್ತಿತ್ವದಲ್ಲಿರುವ ಮೂಲಸೌಕರ್ಯವನ್ನು ವರ್ಧಿಸುತ್ತದೆ ಹಾಗೂ ರಣಬೀರ್ ಬಾಗ್ನಲ್ಲಿ ಹೊಸ ಮೂಲಸೌಕರ್ಯವನ್ನು ಸೃಷ್ಟಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.
4. ಈ ಬೀಜದ ಹೋರಿಯ ಘನೀಕೃತ ವೀರ್ಯ ಕೇಂದ್ರ, ರಣಬೀರ್ ಬಾಗ್ ಯೋಜನೆಯು ಕನಿಷ್ಠ ಮಾನದಂಡಗಳ ಶಿಷ್ಠಾಚಾರ ಮಾರ್ಗಸೂಚಿಗಳಿಗೆ ಅನುಗುಣವಾಗಿ ವಾರ್ಷಿಕವಾಗಿ 10 ಲಕ್ಷ ಎಫ್.ಎಸ್.ಎಸ್.ಗಳ ಉತ್ಪಾದನೆಯ ಗುರಿಯನ್ನು ಸಾಧಿಸಲಿದೆ.

ಜಮ್ಮು ಮತ್ತು ಕಾಶ್ಮೀರದ ರಣಬೀರ್ಬಾಗ್ನಲ್ಲಿ ಬೀಜದ ಹೋರಿಯ ಘನೀಕೃತ ವೀರ್ಯ ಯೋಜನೆ ಕೇಂದ್ರಕ್ಕೆ ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವ ಶ್ರೀ ಪರ್ಷೋತ್ತಮ್ ರೂಪಲಾ ಅವರು ಶಂಕುಸ್ಥಾಪನೆ ಮಾಡಿದರು

ಜಮ್ಮು ಮತ್ತು ಕಾಶ್ಮೀರದ ರಣಬೀರ್ಬಾಗ್ನಲ್ಲಿ ಬೀಜದ ಹೋರಿಯ ಘನೀಕೃತ ವೀರ್ಯ ಯೋಜನೆ ಕೇಂದ್ರದ ಶಂಕುಸ್ಥಾಪನೆಯನ್ನು ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವ ಶ್ರೀ ಪರ್ಶೋತ್ತಮ್ ರೂಪಾಲಾ ನೆರವೇರಿಸಿದರು. ರಾಷ್ಟ್ರೀಯ ಗೋಕುಲ್ ಮಿಷನ್ ಯೋಜನೆಯಡಿ ಈ ಬೀಜದ ಹೋರಿಯ ಘನೀಕೃತ ವೀರ್ಯ ಯೋಜನೆ ಕೇಂದ್ರಕ್ಕೆ ಒಟ್ಟು ರೂ. 2163.57 ಲಕ್ಷಗಳನ್ನು ಮಂಜೂರು ಮಾಡಲಾಗಿದೆ. ಇದು ಕಾಶ್ಮೀರ ಪ್ರದೇಶವನ್ನು ಕೃತಕ ಗರ್ಭಧಾರಣೆಯ ವ್ಯಾಪ್ತಿಗೆ ಸೇರಿಸುತ್ತದೆ ಮತ್ತು ಉತ್ತಮ ಗುಣಮಟ್ಟದ ಮತ್ತು ರೋಗ ಮುಕ್ತ ಸೂಕ್ಷ್ಮಾಣು ಪ್ಲಾಸ್ಮ್ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಲು ಅನುವು ಮಾಡಿಕೊಡುತ್ತದೆ. ಶ್ರೀ ಪರ್ಷೋತ್ತಮ್ ರೂಪಾಲಾ ಅವರು ತಮ್ಮ ಭಾಷಣದಲ್ಲಿ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆಯ ಎಲ್ಲಾ ಇಲಾಖೆಗಳಿಗೆ ಸಂಬಂಧಪಟ್ಟ ಎಲ್ಲಾ ಯೋಜನೆಗಳ 100% ರಷ್ಟು ಪ್ರಯೋಜನ ಪಡೆಯಲು ಸಲಹೆ ನೀಡಿದರು. ಯೋಜನೆಗಳ ಬಳಕೆಯನ್ನು ಕೇಂದ್ರ ಸಚಿವಾಲಯವು ಸಮನ್ವಯಗೊಳಿಸುತ್ತದೆ ಮತ್ತು ಮೇಲ್ವಿಚಾರಣೆ ಮಾಡುತ್ತದೆ ಎಂದು ಅವರು ಹೇಳಿದರು. 

ರಣಬೀರ್ ಬಾಗ್ ನಲ್ಲಿ ಬೀಜದ ಹೋರಿಯ ಘನೀಕೃತ ವೀರ್ಯ ಯೋಜನೆ ಕೇಂದ್ರವನ್ನು 1980 ರಲ್ಲಿ ಇಂಡೋ-ಡ್ಯಾನಿಷ್ ಯೋಜನೆಯಡಿಯಲ್ಲಿ ಸ್ಥಾಪಿಸಲಾಯಿತು. ಡ್ಯಾನಿಶ್ ಸರ್ಕಾರ ಮತ್ತು ಭಾರತ ಸರ್ಕಾರ ನಡುವಿನ ಸಹಾಯ ಕಾರ್ಯಕ್ರಮವಾದ ಡಿ.ಎ.ಎನ್.ಐ.ಡಿ.ಎ. ಅಡಿಯಲ್ಲಿ ಹೆಪ್ಪುಗಟ್ಟಿದ ವೀರ್ಯದ ಸಂಸ್ಕರಣೆಗೆ ಸಾಧನಗಳನ್ನು ಪಡೆಯಲಾಗಿದೆ. ಈ ಯೋಜನೆಯನ್ನು 1982 ರಲ್ಲಿ ವೀರ್ಯವನ್ನು ಸಂಸ್ಕರಿಸಲು ಅತಿಶೀತಲ-ಸಂರಕ್ಷಿತ ವ್ಯವಸ್ಥೆಯಾಗಿ ನಿಯೋಜಿಸಲಾಯಿತು. ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದ “ಜಾನುವಾರು ಅಭಿವೃದ್ಧಿ ಮಂಡಳಿ-ಕಾಶ್ಮೀರ” ಇವರು “ಘನೀಕೃತ ವೀರ್ಯ ಯೋಜನೆ ಕೇಂದ್ರ ರಣಬೀರ್ ಬಾಗ್” ಅನ್ನು ಪ್ರಾಥಮಿಕವಾಗಿ ಕಾಶ್ಮೀರ ಪ್ರದೇಶದಲ್ಲಿ ಜಾನುವಾರುಗಳ ಕೃತಕ ಗರ್ಭಧಾರಣೆಗಾಗಿ ಹೆಪ್ಪುಗಟ್ಟಿದ ವೀರ್ಯ ಪ್ರಮಾಣಗಳ ಉತ್ಪಾದನೆಯಲ್ಲಿ ತೊಡಗಿಸಿಕೊಂಡಿದೆ.   

ಕೇಂದ್ರಾಡಳಿತ ಪ್ರದೇಶದ ಗಂಡರ್ಬಾಲ್ ಜಿಲ್ಲೆಯ ಹರ್ಮುಖ್ ಪರ್ವತ ಶ್ರೇಣಿಯ ತಪ್ಪಲಿನಲ್ಲಿ ನೆಲೆಗೊಂಡಿರುವ ಈ ಕೇಂದ್ರವು ನೈಸರ್ಗಿಕ ಜೈವಿಕ ಸುರಕ್ಷತೆಯ ಮೂಲಕ ಸುಮಾರು 300 ಕನಾಲ್ ಭೂಪ್ರದೇಶದಲ್ಲಿ ಮೇವು ಉತ್ಪಾದನೆಯ ಗುರಿಯನ್ನು ಕೂಡಾ ಹೊಂದಿದೆ.  

2025-26 ರ ವೇಳೆಗೆ 10.95 ಲಕ್ಷ ಬೀಜದ ಹೋರಿಯ ಹೆಪ್ಪುಗಟ್ಟಿದ ವೀರ್ಯ ಪ್ರಮಾಣಗಳನ್ನು ಉತ್ಪಾದಿಸಲು, ಐ.ಎಸ್.ಒ./ಜಿ.ಎಂ.ಪಿ ಪ್ರಮಾಣೀಕರಣ, ಸುರಕ್ಷಿತ ಜಿ.ಎಲ್.ಪಿ ಪ್ರಮಾಣೀಕರಣ ಮತ್ತು ಸಿ.ಎಂ.ಯು.ನಿಂದ  “ಎ” ದರ್ಜೆಗೇರಿಸಲು ಹಾಗೂ ರಣಬೀರ್ ಬಾಗ್ ನ ಘನೀಕೃತ ವೀರ್ಯ ಯೋಜನೆ ಕೇಂದ್ರವನ್ನಾಗಿ ಉನ್ನತೀಕರಿಸಲು ರಾಷ್ಟ್ರೀಯ ಗೋಕುಲ್ ಮಿಷನ್ ಯೋಜನೆಯಡಿಯಲ್ಲಿ ಅನುಮೋದಿಸಲಾಗಿದೆ. ಹೈ ಜೆನೆಟಿಕ್ ಮೆರಿಟ್ ಬ್ರೀಡಿಂಗ್ ಬುಲ್ಗಳ ಈ ಸಂಗ್ರಹಣೆಯನ್ನು ಅರಿತುಕೊಳ್ಳಲು, ಕನಿಷ್ಠ ಮಾನದಂಡಗಳ ಶಿಷ್ಟಾಚಾರ/ ಜೈವಿಕ ಭದ್ರತೆ, ಜೈವಿಕ ಸುರಕ್ಷತೆ ಕೈಪಿಡಿಯ ಮಾರ್ಗಸೂಚಿಗಳ ಪ್ರಕಾರ ಹೊಸ ಸಂಸ್ಕರಣೆ, ಗುಣಮಟ್ಟ ನಿಯಂತ್ರಣ ಪ್ರಯೋಗಾಲಯದ ನಿರ್ಮಾಣ, ಹೊಸ ಯಂತ್ರೋಪಕರಣಗಳು/ಸಲಕರಣೆಗಳು, ತರಬೇತಿ ಹಾಗೂ ಸಾಮರ್ಥ್ಯ ನಿರ್ಮಾಣವು ಅತ್ಯಗತ್ಯವಾಗಿರುತ್ತದೆ. ಈ ಕೆಳಗಿನ ದೀರ್ಘಾವಧಿಯ ಗುರಿಗಳನ್ನು ಸಾಧಿಸಲು ಉದ್ದೇಶಿಸಲಾಗಿದೆ:  

-ಹೆಚ್ಚಿನ ಆನುವಂಶಿಕ ಅರ್ಹತೆ ಹೊಂದಿರುವ ಬೀಜದಹೋರಿಗಳಿಂದ ಗುಣಮಟ್ಟದ ಜರ್ಮ್ ಪ್ಲಾಸ್ಮ್ ಅನ್ನು ರೈತರಿಗೆ ಒದಗಿಸುವುದು.

-ಸ್ಥಳೀಯ ಜಾನುವಾರುಗಳ ಉನ್ನತೀಕರಣಕ್ಕಾಗಿ ಗುಣಮಟ್ಟದ ಜರ್ಮ್ ಪ್ಲಾಸ್ಮ್ ಬಳಕೆಯಲ್ಲಿ ವಿಸ್ತರಣೆ.

-ಹಾಲು ಮತ್ತು ಡೈರಿ ಉಪ ಉತ್ಪನ್ನಗಳಿಗೆ ನಿರಂತರವಾಗಿ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಪ್ರಾಣಿಗಳಿಂದ ಉತ್ಪಾದನಾ ಅಂಕಿಅಂಶಗಳನ್ನು ಹೆಚ್ಚಿಸುವುದು.

-ಸ್ವಯಂ ಉದ್ಯೋಗ, ಗ್ರಾಮೀಣ ಮಹಿಳಾ ಸಬಲೀಕರಣ, ಹೆಚ್ಚುವರಿ ಆದಾಯದ ಮೂಲ, ಪ್ರಾಣಿಗಳ ಪ್ರೋಟೀನ್, ಕೊಬ್ಬು ಇತ್ಯಾದಿಗಳ ವಿಷಯದಲ್ಲಿ ಕನಿಷ್ಠ ಪೋಷಕಾಂಶಗಳ ಮೂಲವಾಗಿ ಸ್ಥಳೀಯ ಗೋತಳಿಯ ಗೋವುಗಳಸಾಕಾಣಿಕೆಯನ್ನು ಗ್ರಾಹಕರಿಗೆ ಪ್ರೋತ್ಸಾಹಿಸಿ, ಪೂರೈಸುವುದು.

-ಪ್ರಾಣಿಗಳ ಆನುವಂಶಿಕ ಗಣಲಕ್ಷಣ(ಮೇಕ್ಅಪ್) ಅನ್ನು ಸುಧಾರಿಸಿ ನವೀಕರಿಸುವ ಮೂಲಕ ಸ್ಥಳೀಯ ಜಾನುವಾರುಗಳ ತಳಿ ಸುಧಾರಣೆ

-ಸ್ಥಳೀಯ ಗೋವಂಶದ ವಿವಿಧ ತಳಿಗಳ ಸಂರಕ್ಷಣೆ ಮಾಡುವುದು 

-ಸ್ಥಳೀಯ ಗೋತಳಿಗಳ ವೀರ್ಯ ಕೇಂದ್ರದ ಮೂಲಸೌಕರ್ಯವನ್ನು ಬಲಪಡಿಸುವುದು.

-ಬಲವಾದ ಜೈವಿಕ ಸುರಕ್ಷತಾ ಕ್ರಮಗಳನ್ನು ಜಾರಿಗೆ ತರುವುದು.

-ಪ್ರಾಥಮಿಕ ಆಧಾರದ ಮೇಲೆ ಲೈಂಗಿಕವಾಗಿ ವಿಂಗಡಿಸಲಾದ ಗೋತಳಿಯ ವೀರ್ಯದೊಂದಿಗೆ ಕೃತಕ ಗರ್ಭಧಾರಣೆಯನ್ನು ಹೆಚ್ಚಿಸುವುದು

-ಎಫ್.ಎಸ್.ಡಿ ಉತ್ಪಾದನೆ ಮತ್ತು ಲೈಂಗಿಕ ವಿಂಗಡಣೆಯ ಗೋತಳಿಯ ವೀರ್ಯ ಉತ್ಪಾದನೆಗೆ ಶ್ರೇಷ್ಠತೆಯ ಕೇಂದ್ರವಾಗುವುದು.

ಈ ರಣಬೀರ್ ಬಾಗ್ ನ ಬೀಜದ ಹೋರಿಯ ಘನೀಕೃತ ವೀರ್ಯ ಕೇಂದ್ರವನ್ನು ಯಶಸ್ವಿ ಅನುಷ್ಠಾನ/ಕಾರ್ಯಗತಗೊಳಿಸುವಿಕೆಯು ಪ್ರದೇಶದ ಅಸ್ತಿತ್ವದಲ್ಲಿರುವ ಮೂಲಸೌಕರ್ಯವನ್ನು ವರ್ಧಿಸುತ್ತದೆ ಮತ್ತು ಪರಿಸರದಲ್ಲಿ ನೂತನ ಮೂಲಸೌಕರ್ಯವನ್ನು ಸೃಷ್ಟಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. ಇದು ಉತ್ತಮ ಗುಣಮಟ್ಟದ ಮತ್ತು ರೋಗ-ಮುಕ್ತ ಜರ್ಮ್ ಪ್ಲಾಸ್ಮ್ ಉತ್ಪಾದನೆಯಲ್ಲಿ ಕಾಶ್ಮೀರ ಪ್ರದೇಶವನ್ನು ಸ್ವಾವಲಂಬಿಯಾಗಿಸುತ್ತದೆ. ಡೈರಿ ಜಾನುವಾರುಗಳ ಉತ್ಪಾದಕತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರವನ್ನು ದಾಪುಗಾಲು ಮೂಲಕ ಮನ್ನುಗ್ಗಿಸುತ್ತದೆ. ಬೀಜದ ಹೋರಿಯ ಘನೀಕೃತ ವೀರ್ಯ ಕೇಂದ್ರ, ರಣಬೀರ್ ಬಾಗ್ ಯೋಜನೆಯು ಕನಿಷ್ಠ ಮಾನದಂಡಗಳ ಶಿಷ್ಠಾಚಾರ ಮಾರ್ಗಸೂಚಿಗಳಿಗೆ ಅನುಗುಣವಾಗಿ ವಾರ್ಷಿಕವಾಗಿ 10 ಲಕ್ಷ ಎಫ್.ಎಸ್.ಎಸ್.ಗಳ ಉತ್ಪಾದನೆಯ ಗುರಿಯನ್ನು ಸಾಧಿಸಲಿದೆ. 


* *  * 



(Release ID: 1903685) Visitor Counter : 107