ಉಪರಾಷ್ಟ್ರಪತಿಗಳ ಕಾರ್ಯಾಲಯ

ಡಾ. ಎಂ. ಎಸ್. ರಾಮಯ್ಯ ಅವರ ಜನ್ಮ ಶತಮಾನೋತ್ಸವ ಸಮಾರಂಭದಲ್ಲಿ ಉಪರಾಷ್ಟ್ರಪತಿಗಳ ಭಾಷಣದ ಪಠ್ಯ (ಆಯ್ದ ಭಾಗಗಳು)

Posted On: 01 MAR 2023 3:35PM by PIB Bengaluru

ಡಾ. ಎಂ. ಎಸ್. ರಾಮಯ್ಯ ಅವರು ತಮ್ಮ ಜೀವನದುದ್ದಕ್ಕೂ ಕರ್ಮಯೋಗಿಗಳಾಗಿದ್ದರು. ದೇಶದ ಶಿಕ್ಷಣ ಮತ್ತು ಆರೋಗ್ಯ ಸನ್ನಿವೇಶವನ್ನು ಪರಿವರ್ತಿಸುವ ಕರ್ತವ್ಯ ಮಾರ್ಗದಲ್ಲಿ ನಡೆದವರು ಅವರಾಗಿದ್ದಾರೆ. ಅವರ ಜನ್ಮ ಶತಮಾನೋತ್ಸವ ಆಚರಣೆಯಲ್ಲಿ ಭಾಗಿಯಾಗಿರುವುದು ನಮಗೆಲ್ಲರಿಗೂ ಹೆಮ್ಮೆ ತರುವ ಕ್ಷಣವಾಗಿದೆ.

ಮಹಾನ್ ಕರ್ಮಯೋಗಿ ಮತ್ತು ಈ ಸಂಸ್ಥೆಯ ನಿರ್ಮಾತೃವಾದ ಡಾ. ಎಂ. ಎಸ್. ರಾಮಯ್ಯ ಅವರ ಜೀವನ ಮತ್ತು ಸಾಧನೆಗಳನ್ನು ಸ್ಮರಿಸಲು ಗೋಕುಲ ಎಜುಕೇಶನ್ ಫೌಂಡೇಶನ್ ಅಧ್ಯಕ್ಷರು, ಟ್ರಸ್ಟಿ ಮಂಡಳಿ, ರಾಮಯ್ಯ ಕುಟುಂಬದ ಸದಸ್ಯರು ಮತ್ತು ಇಲ್ಲಿ ಹಾಜರಿರುವ ಎಲ್ಲರಿಗೂ ನಾನು ಅಭಿನಂದನೆ ಸಲ್ಲಿಸುತ್ತೇನೆ.

ಅವರ ಜೀವನವು ನಮ್ಮ ನಾಗರಿಕತಾ ನೈತಿಕತೆಯ ಅಧೀನತೆಗೆ ಉದಾಹರಣೆಯಾಗಿದೆ. ವಿನಮ್ರ ಆರಂಭವಾಗಿದೆ. ಅವರು ಒಂದು ಗುರಿಯನ್ನು ನಿಗದಿಪಡಿಸಿ, ಅದನ್ನು ಸಾಧಿಸಿದರು. ಅವರ ನಂತರ, ಅವರು ಪಾಲಿಸಿದ ಸಂಸ್ಕಾರಗಳ ಮೂಲಕ ಅವರ ಕುಟುಂಬದ ಸದಸ್ಯರು ಅದೇ ಪಥದಲ್ಲಿ ನಡೆಯುತ್ತಿದ್ದಾರೆ.

ಶಿಕ್ಷಣವಿಲ್ಲದೆ ಎಲ್ಲವೂ ಅಪೂರ್ಣ. ಶಿಕ್ಷಣವು ಸಮಾಜದ ಪರಿವರ್ತನೆಗೆ ಮತ್ತು ಡಾ. ಬಿ. ಆರ್. ಅಂಬೇಡ್ಕರ್ ಅವರಿಗೆ ಬಹಳ ಪ್ರಿಯವಾದ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸುವ ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ.

ಭಾರತದ ಸಂವಿಧಾನ ಶಿಲ್ಪಿ, ಮಹಾನ್ ದಾರ್ಶನಿಕ, ಡಾ. ಬಿ. ಆರ್. ಅಂಬೇಡ್ಕರ್ ಅವರು ತಮ್ಮ ಪೀಠಿಕೆಯಲ್ಲಿ ಇಂತಹ ವಿಚಾರಗಳನ್ನು ಹೊಂದಿದ್ದರು. ಅದರ ಸಾಕ್ಷಾತ್ಕಾರಕ್ಕಾಗಿ ನಾವೆಲ್ಲರೂ ಕೆಲಸ ಮಾಡಬೇಕಾಗಿದೆ.

ಪ್ರಸ್ತುತವಾದ, ನಮ್ಮ ಈ ಅಮೃತ ಕಾಲದ ಪ್ರಸ್ತುತತೆಯಲ್ಲಿ ನಾವು ಭಾರತವನ್ನು ವಿಭಿನ್ನ ಸ್ವರೂಪದಲ್ಲಿ ನೋಡುತ್ತಿದ್ದೇವೆ. ಭಾರತವು ಹಿಂದೆಂದಿಗಿಂತಲೂ ಹೆಚ್ಚು ಮುನ್ನಡೆಯುತ್ತಿದೆ. ಭಾರತದ ಏಳಿಗೆಯನ್ನು ತಡೆಯಲಾಗುವುದಿಲ್ಲ. ಇಡೀ ಜಗತ್ತು ಅದನ್ನು ಗುರುತಿಸುತ್ತಿದೆ.

ನಾವು ವಿಶ್ವದ ದೊಡ್ಡ ಆರ್ಥಿಕತೆಗಳಲ್ಲಿ ಹೂಡಿಕೆ ಮತ್ತು ಅವಕಾಶಗಳ ಪ್ರಮುಖ ತಾಣವಾಗಿ ಮಾರ್ಪಟ್ಟಿದ್ದೇವೆ.

ಸೆಪ್ಟೆಂಬರ್ 2022, ನಮ್ಮೆಲ್ಲರಿಗೂ ಅದೆಂತಹ ವೈಭವೀಕೃತ ಕ್ಷಣ! ಭಾರತವು ಭೂಮಿಯ ಮೇಲಿನ ಐದನೇ ಅತಿದೊಡ್ಡ ಆರ್ಥಿಕತೆ ಎಂಬ ಹೆಗ್ಗಳಿಕೆಯನ್ನು ಗಳಿಸಿದ ಕ್ಷಣವದು. ಎರಡನೆಯ ವಿಷಯವೆಂದರೆ, ನಾವು ನಮ್ಮ ಹಿಂದಿನ ವಸಾಹತುಶಾಹಿ ಆಡಳಿತಗಾರರನ್ನು ಹಿಂದಿಕ್ಕಿದ್ದೇವೆ. ನಮ್ಮ ಆರ್ಥಿಕತೆಯು ಈಗ ನಮ್ಮನ್ನು ದೀರ್ಘಕಾಲ ಆಳಿದ ಯುಕೆಗಿಂತ ದೊಡ್ಡದಾಗಿದೆ.

ಸರ್ಕಾರದ ದೂರದೃಷ್ಟಿಯ ಕ್ರಮಗಳಿಗೆ ಧನ್ಯವಾದಗಳು. ಎಲ್ಲಾ ಹಂತಗಳಲ್ಲಿಯೂ ಸಕಾರಾತ್ಮಕವಾಗಿರುವ ಸರ್ಕಾರಿ ನೀತಿಗಳಿಗೆ ಧನ್ಯವಾದಗಳು. ಈ ದಶಕದ ಅಂತ್ಯದ ವೇಳೆಗೆ ನಾವು ಭೂಮಿಯ ಮೇಲಿನ ಮೂರನೇ ಅತಿದೊಡ್ಡ ಆರ್ಥಿಕತೆಯಾಗುತ್ತೇವೆ ಎಂಬುದರಲ್ಲಿ ಸಂದೇಹವಿಲ್ಲ.

ನಾವು 2047ರಲ್ಲಿ ನಮ್ಮ ಸ್ವಾತಂತ್ರ್ಯ ಶತಮಾನೋತ್ಸವದ ಸುವರ್ಣ ಯುಗವನ್ನು ತಲುಪಿದಾಗ ನಮ್ಮ ಅಂತಿಮ ಗುರಿಗಳನ್ನು ಸಾಕಾರಗೊಳಿಸುವುದೇ ರಾಷ್ಟ್ರದ ಮುಂದಿರುವ ದೊಡ್ಡ ಸವಾಲಾಗಿದೆ. ನಿಮ್ಮಂತಹ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಮತ್ತು ಇತರೆಡೆಗಳಲ್ಲಿರುವ ಯುವ ಪ್ರಭಾವಶಾಲಿ ಯುವಕರು 2047ರಲ್ಲಿ ಭಾರತದ ಭವಿಷ್ಯದ ಯೋಧರು ಮತ್ತು ನಿಜವಾದ ಗೇಮ್ ಚೇಂಜರ್ ಗಳಾಗಿರುತ್ತಾರೆ ಎಂಬುದರಲ್ಲಿ ನನಗೆ ಯಾವುದೇ ಸಂದೇಹವಿಲ್ಲ.

ಈ ಹಿನ್ನೆಲೆಯಲ್ಲಿ, ನಾವೆಲ್ಲರೂ ಭಾರತೀಯರು ಎಂದು ಹೆಮ್ಮೆ ಪಡಬೇಕು ಎಂದು ಇಲ್ಲಿರುವ ಪ್ರತಿಯೊಬ್ಬರಿಗೂ ಕರೆ ನೀಡುತ್ತೇನೆ. ನಾವು ಯಾವಾಗಲೂ ನಮ್ಮ ರಾಷ್ಟ್ರವನ್ನು ಮೊದಲ ಸ್ಥಾನದಲ್ಲಿಡಬೇಕು. ನಮ್ಮ ಸಾಧನೆಗಳ ಬಗ್ಗೆ ನಾವು ಹೆಮ್ಮೆ ಪಡಬೇಕು.

ಉಪರಾಷ್ಟ್ರಪತಿಯಾಗಿ ನಾನು ದೇಶ-ವಿದೇಶಗಳ ಪ್ರವಾಸ ಮಾಡಿದ್ದೇನೆ. ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿ ನಾನು ಬೆಳವಣಿಗೆಗಳನ್ನು ನೋಡಿದ್ದೇನೆ. ದೇಶವು ಏನನ್ನು ಸಾಧಿಸಿದೆ ಎಂದು ಇನ್ನೂ ಕೆಲವರು ಯೋಚಿಸಲು ಅಥವಾ ಊಹಿಸಲು ಸಾಧ್ಯವಿಲ್ಲ.

ಉದಾಹರಣೆಗೆ ಕೋವಿಡ್ ಅನ್ನು ತೆಗೆದುಕೊಳ್ಳಿ, ಅದು ಮಾನವೀಯತೆಗೆ ದೊಡ್ಡ ಸವಾಲಾಗಿತ್ತು. ಇದು ಪ್ರತಿಯೊಂದು ಭೌಗೋಳಿಕ ಪ್ರದೇಶಕ್ಕೂ ತಾರತಮ್ಯರಹಿತ ಸವಾಲಾಗಿತ್ತು. ನಮ್ಮ 1.4 ಬಿಲಿಯನ್ ಜನಸಂಖ್ಯೆಯ ಕಾರಣದಿಂದಾಗಿ ನಾವು ಕಠಿಣ ಪರಿಸ್ಥಿತಿಯನ್ನು ಎದುರಿಸಬೇಕಾಯಿತು. "ಭಾರತಕ್ಕೆ ಏನಾಗುತ್ತದೆ" ಎಂದು ಜನರು ಚಿಂತಿತರಾಗಿದ್ದರು. ಈಗ ಅದೇ ಜನರು, "ಭಾರತವು ಅದನ್ನು ಹೇಗೆ ಸಾಧ್ಯವಾಗಿಸಿತು? ಭಾರತವು ಅದನ್ನು ಹೇಗೆ ಯಶಸ್ವಿಯಾಗಿ ಪೂರೈಸಿತು?" ಎಂದು ಕೇಳುತ್ತಿದ್ದಾರೆ. ಇದುವರೆವಿಗೆ ಎಲ್ಲಾ ನಾಗರಿಕರಿಗೂ 220 ಕೋಟಿ ವ್ಯಾಕ್ಸಿನೇಷನ್ ಡೋಸ್ ಗಳನ್ನು ಉಚಿತವಾಗಿ ನೀಡಲಾಗಿದೆ. ಎಲ್ಲರನ್ನೂ ತಂತ್ರಜ್ಞಾನದಿಂದ ಡಿಜಿಟಲ್ ಮ್ಯಾಪ್ ಮಾಡಲಾಗಿದೆ.

ಸ್ನೇಹಿತರೇ, ಇದು ಪಾಶ್ಚಿಮಾತ್ಯ ದೇಶಗಳಲ್ಲಿಯೂ ಸಾಧ್ಯವಾಗದ ವಿಷಯ. ಇದು ನಮ್ಮ ಜನರು, ನಮ್ಮ ನೀತಿಗಳು ಮತ್ತು ನಮ್ಮ ನಾಯಕತ್ವದ ದೂರದೃಷ್ಟಿಯಿಂದಾಗಿ ಸಾಧ್ಯವಾಗಿದೆ.

ನಾನು ಕೆಲವೊಮ್ಮೆ ಈ ವಿಷಯದಲ್ಲಿ ಆಶ್ಚರ್ಯಚಕಿತನಾಗುತ್ತೇನೆ. ನಮ್ಮ ಈ ಸಾಧನೆಗಳನ್ನು ನೋಡಿ ಜಗತ್ತು ದಿಗ್ಭ್ರಮೆಗೊಂಡಿದೆ, ಮೂಲಸೌಕರ್ಯದ ಬೆಳವಣಿಗೆ, ತಂತ್ರಜ್ಞಾನದ ಬೆಳವಣಿಗೆ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ತರಲಾದ ಬೆಳವಣಿಗೆಯ ಪರಿಸರ ವ್ಯವಸ್ಥೆಯನ್ನು ಪ್ರತಿಬಿಂಬಿಸುವಂತೆ ನಾನು ಯುವಜನರು, ಬುದ್ಧಿಜೀವಿಗಳು ಮತ್ತು ಪತ್ರಕರ್ತರಿಗೆ ಕರೆ ನೀಡುತ್ತೇನೆ.

ಕಷ್ಟಪಟ್ಟು ದುಡಿಯುವ ನಮ್ಮ ಜನರ ಸಾಧನೆಗಳನ್ನು ಕಳಂಕಗೊಳಿಸಲು, ಮಾಲಿನ್ಯಗೊಳಿಸಲು, ಕಡಿಮೆ ಮಾಡಲು ಮತ್ತು ಕೀಳಾಗಿ ಕಾಣಲು ನಾವು ಕೆಲವರಿಗೆ ಏಕೆ ಅವಕಾಶ ನೀಡಬೇಕು? ಅದರ ಬಗ್ಗೆ ನಾವೆಲ್ಲರೂ ಸ್ವಲ್ಪ ಯೋಚಿಸಬೇಕಾಗಿದೆ.

ನಮ್ಮ ಮಹಾನ್ ಸಂಸ್ಥೆಗಳು ಈಗ ಪ್ರವರ್ಧಮಾನಕ್ಕೆ ಬರುತ್ತಿವೆ, ಆದರೆ ನಾವು ನಮ್ಮ ಹಿಂದಿನ ಐತಿಹಾಸಿಕ ದೃಷ್ಟಿಕೋನಕ್ಕೆ ತೆರಳಿದರೆ, ಭಾರತವು ಜಾಗತಿಕವಾಗಿ ಅತ್ಯಂತ ಪ್ರಸಿದ್ಧ ಶಿಕ್ಷಣ ಸಂಸ್ಥೆಗಳ ನೆಲೆಯಾಗಿದೆ. ನಾವು ನಳಂದ, ತಕ್ಷಶಿಲೆ, ವಲ್ಲಭಿ, ವಿಕ್ರಮಶಿಲಾ ಮುಂತಾದವುಗಳಿಗೆ ನೆಲೆಯಾಗಿದ್ದೇವೆ.

ದೂರದೃಷ್ಟಿಯುಳ್ಳ ಡಾ. ಎಂ. ಎಸ್. ರಾಮಯ್ಯ ಅವರು ಒಂದು ಸಂಸ್ಥೆಯನ್ನು ರಚಿಸಿದ್ದು, ಅದರಡಿಯಲ್ಲಿ ಹಲವಾರು ಸಂಸ್ಥೆಗಳು ಬೆಳೆಯುತ್ತಿವೆ ಎಂಬುದು ಅತ್ಯಂತ ತೃಪ್ತಿದಾಯಕವಾಗಿದೆ. ಇದು ನಾವು ನಮ್ಮ ಗತ ವೈಭವವನ್ನು ಮರಳಿ ಪಡೆಯುವ ಹಾದಿಯನ್ನು ಸೂಚಿಸುತ್ತದೆ. 2047ರ ವೇಳೆಗೆ ಆರ್ಥಿಕತೆ, ಶಿಕ್ಷಣ, ಆರೋಗ್ಯ ಮತ್ತು ಇತರ ಸಾಮಾಜಿಕ ನಿಯತಾಂಕಗಳಲ್ಲಿ ನಾವು ಜಗತ್ತಿಗೆ ಮಾದರಿಯಾಗಿರುತ್ತೇವೆ.

ಈ ವರ್ಷ ವಿಶೇಷವಾದ ಮಹತ್ವವನ್ನು ಹೊಂದಿದೆ. ಭಾರತವು ಜಿ-20ರ ಅಧ್ಯಕ್ಷವಾಗಿರುವ ಈ ಸುವರ್ಣಾವಕಾಶದ ಪರಿಣಾಮವನ್ನು ಎಲ್ಲೆಡೆ ಅನುಭವಿಸಲಾಗುತ್ತಿದೆ. ಬೆಂಗಳೂರು ನಗರ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಹಲವಾರು ದೇಶಗಳಿಂದ ಬಂದ ನಾಗರೀಕರನ್ನು ನಾವು ನೋಡಿದ್ದೇವೆ.

ಬೆಂಗಳೂರು ನಗರವು ಯುವ ಮನಸ್ಸುಗಳ ಸಕಾರಾತ್ಮಕ ಬೆಳವಣಿಗೆಯ ನೇರ ಕೇಂದ್ರಬಿಂದುವಾಗಿದ್ದು, ನಾವೀನ್ಯತೆಗೆ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡುತ್ತದೆ, ಇದು ಅಪರೂಪದ ಅವಕಾಶವಾಗಿದೆ. ಈ ದೇಶದ ಇತಿಹಾಸದಲ್ಲಿ ಭಾರತದ ಧ್ವನಿಯು ಈಗ ಪ್ರತಿಧ್ವನಿಸುತ್ತಿರುವಷ್ಟು ಈ ಹಿಂದೆ ಕೇಳಿರಲಿಲ್ಲ.

ಕಳೆದ ಒಂದು ವರ್ಷದಲ್ಲಿ ಭಾರತದ ಪ್ರಧಾನ ಮಂತ್ರಿಗಳು ಎರಡು ಆಲೋಚನೆಗಳನ್ನು ಹೊಂದಿದ್ದಾರೆ. ಈ ಆಲೋಚನೆಗಳು ಸಾವಿರಾರು ವರ್ಷಗಳ ನಮ್ಮ ಆಲೋಚನಾ ಪ್ರಕ್ರಿಯೆಗೆ ಪೂರಕವಾಗಿವೆ. ಮೊದಲನೆಯ ಆಲೋಚನೆಯು ಕಳೆದ ವರ್ಷದ ಆರಂಭದಲ್ಲಿ ಪ್ರತಿಧ್ವನಿಸಿತ್ತು. ಅದೆಂದರೆ, "ಇದು ವಿಸ್ತರಣೆಯ ಯುಗವಲ್ಲ. ಐತಿಹಾಸಿಕವಾಗಿ ಎಂದಿಗೂ ವಿಸ್ತರಣೆಯನ್ನು ಆಶ್ರಯಿಸದ ಏಕೈಕ ದೇಶವೆಂದರೆ ಅದು ಭಾರತ" ಎಂಬುದು; ಮತ್ತು ಈ ವರ್ಷ ಎರಡನೆಯ ಆಲೋಚನೆ, ಮತ್ತು ಜಗತ್ತು ಅದನ್ನು ಶ್ಲಾಘಿಸಿದೆ: ಅದೆಂದರೆ "ಯುದ್ಧವು ಯಾವುದೇ ಸಮಸ್ಯೆಗೆ ಪರಿಹಾರವಲ್ಲ; ಸಂವಾದ ಮತ್ತು ರಾಜತಾಂತ್ರಿಕತೆಯೊಂದೇ ಅದಕ್ಕೆ ಮಾರ್ಗ" ಎಂಬುದಾಗಿದೆ.

ಈ ದೃಷ್ಟಿಕೋನದಲ್ಲಿ, ನಾನು ಎಲ್ಲರಿಗೂ, ವಿಶೇಷವಾಗಿ ಯುವಕರಿಗೆ ಕರೆ ನೀಡುತ್ತೇನೆ; ಅವರು ಅವಕಾಶವನ್ನು ಬಳಸಿಕೊಳ್ಳಬೇಕು. ಈಗ ನಾವು ಒಂದು ಪರಿಸರ ವ್ಯವಸ್ಥೆಯನ್ನು ಹೊಂದಿದ್ದೇವೆ, ಅಲ್ಲಿ ಪ್ರತಿಯೊಬ್ಬ ಯುವ ಮನಸ್ಸು ಅವರ ಸಾಮರ್ಥ್ಯ ಮತ್ತು ಪ್ರತಿಭೆಯನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಮತ್ತು ಸಾಧನೆಗಳನ್ನು ಸಾಧಿಸಲು ಅವಕಾಶವಿದೆ.

ನನ್ನ ಯುವ ಸ್ನೇಹಿತರಿಗೆ, ನಾನು ನನ್ನ ಒಂದು ಸಲಹೆಯನ್ನು ನೀಡುತ್ತೇನೆ: ಯಾವುದೇ ಉದ್ವೇಗ ಬೇಡ, ಒತ್ತಡ ಬೇಡ. ಸ್ಪರ್ಧಾತ್ಮಕ ಸನ್ನಿವೇಶಕ್ಕೆ ಸಿಲುಕಿಕೊಳ್ಳಬೇಡಿ. ಪ್ರಯತ್ನಿಸಲು ಹಿಂಜರಿಯಬೇಡಿ ಏಕೆಂದರೆ ತಪ್ಪು ನಡೆಯಬಹುದು; ಬೀಳದೆ ದೊಡ್ಡದೇನನ್ನೂ ಸಾಧಿಸಲು ಸಾಧ್ಯವಾಗುವುದಿಲ್ಲ.

ನನಗೆ ತಿಳಿದಂತೆ ಬುದ್ಧಿವಂತ ಮನಸ್ಸು ಮಾನವೀಯತೆಗೆ ಮಾಡಬಹುದಾದ ಅತಿದೊಡ್ಡ ಅನ್ಯಾಯವೆಂದರೆ, ನಮ್ಮ ಬೆಳವಣಿಗೆಗೆ ಅಡ್ಡಿಯಾಗಬಲ್ಲ ಒಂದು ವಿಶಯವೆಂದರೆ - ಅದ್ಭುತ ಕಲ್ಪನೆಯನ್ನು ಹೊಂದಿದ್ದರೂ ಅದನ್ನು ಕಾರ್ಯಗತಗೊಳಿಸದಿರುವುದು.

ನಮ್ಮ ರಕ್ತ ಕಣದ ಡಿಎನ್ಎಯಲ್ಲಿ ವಿಶಿಷ್ಟವಾದದ್ದೇನೋ ಇದೆ ಎಂಬುದರಲ್ಲಿ ನನಗೆ ಯಾವುದೇ ಸಂದೇಹವಿಲ್ಲ. ನಮ್ಮ ಡಿಎನ್ಎಯಲ್ಲಿ ನಾವೀನ್ಯತೆ, ಸಂಶೋಧನೆ, ಉದ್ಯಮ, ಉದ್ಯಮಶೀಲತೆ ಇದೆ. ನಾವು ಮಾಡಬೇಕಾಗಿರುವುದು ಇದನ್ನೇ. ಇಂದು ವಿಶ್ವದ ಯಾವುದೇ ಮೂಲೆಗೆ ಹೋದರೂ, ನೀವು ಭಾರತದ ಬುದ್ಧಿಶಕ್ತಿಯ ಎಲ್ಲೆಯನ್ನು ನೀವು ನೋಡಬಹುದು, ಜಗತ್ತು ಇದರ ಪ್ರಯೋಜನ ಪಡೆಯುತ್ತಿದೆ.

ನಾನು ನನ್ನ ವೃತ್ತಿಜೀವನವನ್ನು ಪ್ರಾರಂಭಿಸಿ ವಕೀಲನಾದಾಗ, ಗ್ರಂಥಾಲಯಕ್ಕಾಗಿ ಬ್ಯಾಂಕಿನಿಂದ ರೂ.6000 ಸಾಲ ಪಡೆಯಲು ನಾನು ಹೆಣಗಾಡಬೇಕಾಯಿತು. ನನ್ನ ಗ್ರಂಥಾಲಯಕ್ಕೆ ಯಾವುದೇ ಭದ್ರತೆಯಿಲ್ಲದೆ ನನಗೆ 6000 ರೂಪಾಯಿಗಳನ್ನು ನೀಡಿದ ಆ ಬ್ಯಾಂಕ್ ಮ್ಯಾನೇಜರ್ ಗೆ ನಾನು ಕೃತಜ್ಞನಾಗಿದ್ದೇನೆ.

ಇಂದು ನಿಮಗೆ ಬೇಕಾಗಿರುವುದು ಬರೀ ಒಂದು ಕಲ್ಪನೆ. ಅದಕ್ಕಾಗಿ ಹಣ ಹೊಂದಿಸುವುದು ಕಷ್ಟವಲ್ಲ.

ನಮ್ಮ ನವೋದ್ಯಮಗಳು, ಯುನಿಕಾರ್ನ್ ಗಳನ್ನು ನೋಡಿ, ಅಲ್ಲಿ ಮಾಡಲಾಗುತ್ತಿರುವ ಹೂಡಿಕೆ ಮತ್ತು ನಮ್ಮ ಯುವಕರು ಸೃಷ್ಟಿಸಿದ ಎಲ್ಲ ವಿಸ್ಮಯವನ್ನೂ ನೋಡಿ. ಇಂದು ನಾವು ವಿಶ್ವ ನಾಯಕರಾಗಿದ್ದೇವೆ.

ಇದೆಲ್ಲ ಸಾಧ್ಯ ಏಕೆಂದರೆ ಈಗ ನಾವು ದೊಡ್ಡದಾಗಿ ಯೋಚಿಸುವ, ದೊಡ್ಡದಾಗಿ ಕಾರ್ಯಗತಗೊಳಿಸುವ, ತನ್ನ ಮಾನವ ಸಂಪನ್ಮೂಲವನ್ನು ನಂಬುವ ಮತ್ತು ಫಲಿತಾಂಶಗಳನ್ನು ಪ್ರತಿಯೊಬ್ಬರೂ ನೋಡಲು ಆಶಿಸುವ ಸರ್ಕಾರವನ್ನು ಹೊಂದಿದ್ದೇವೆ.

34 ವರ್ಷಗಳ ನಂತರ, ದೇಶದಲ್ಲಿ ಒಂದು ಕ್ರಾಂತಿಕಾರಿ ಅಲೆ ಬಂದಿತ್ತು. ಆ ಸಮಯದಲ್ಲಿ ನಾನು ಪಶ್ಚಿಮ ಬಂಗಾಳ ರಾಜ್ಯದ ರಾಜ್ಯಪಾಲನಾಗಿದ್ದರಿಂದ ಅದರಲ್ಲಿ ಭಾಗವಹಿಸುವ ಅವಕಾಶವೂ ನನಗೆ ಸಿಕ್ಕಿತು. ಆ ಅಲೆಯೇ ಹೊಸ ಶಿಕ್ಷಣ ನೀತಿ - 2020.

ಈ ಶಿಕ್ಷಣ ನೀತಿಯ ವಿಕಸನವು ದೀರ್ಘಕಾಲದ ಪ್ರಕ್ರಿಯೆಯಾಗಿದ್ದು, ಲಕ್ಷಾಂತರ ಮಧ್ಯಸ್ಥಗಾರರಿಂದ ಇದು ಮಾಹಿತಿಯನ್ನು ಪಡೆಯುತ್ತಿದೆ. ಈ ಹೊಸ ಶಿಕ್ಷಣ ನೀತಿಯು ಗೇಮ್ ಚೇಂಜರ್ ಆಗಿದ್ದು, ಇದು ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಕ್ರಾಂತಿಯನ್ನುಂಟು ಮಾಡಿ, ಅದನ್ನು ಕೌಶಲ್ಯ ಆಧಾರಿತವಾಗಿಸುತ್ತದೆ. ಇದು ಪದವಿ ಆಧಾರಿತ ಸಂಸ್ಕೃತಿಯಿಂದ ವಿಧ್ಯಾರ್ಥಿಗಳನ್ನು ದೂರವಿರಿಸಿ, ಅವರನ್ನು ಉತ್ಪಾದಕ ಹಾದಿಯಲ್ಲಿ ಮುನ್ನಡೆಸುತ್ತದೆ. ಇದರಿಂದ ಏಕೀಕರಣ ಮತ್ತು ಉತ್ಕೃಷ್ಟತೆಯ ಎರಡು ಉದ್ದೇಶಗಳನ್ನು ಸಾಧಿಸಬಹುದು.

ಕಳೆದ 8-9 ವರ್ಷಗಳಲ್ಲಿ, ಪ್ರತಿದಿನ ಎರಡು ಕಾಲೇಜುಗಳು ಮತ್ತು ಪ್ರತಿ ವಾರ ಒಂದು ವಿಶ್ವವಿದ್ಯಾಲಯವು ಸ್ಥಾಪಿತಗೊಳ್ಳುತ್ತಿವೆ.
ಪ್ರಪಂಚದ ಜನರಿಗೆ ಇದರ ಅರಿವಾದಾಗ, ಅವರು ಆಶ್ಚರ್ಯಚಕಿತರಾಗುತ್ತಾರೆ.

ಇದು ಬಹಳ ವಿಶೇಷ ಸಂದರ್ಭವಾಗಿರುವುದರಿಂದ, ನಾನು ಗೋಕುಲ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಿಗೆ ಒಂದು ನಿರ್ದಿಷ್ಟ ಮನವಿಯನ್ನು ಮಾಡುತ್ತೇನೆ. ದಯವಿಟ್ಟು ಮುಂದಾಳತ್ವ ವಹಿಸಿ. ನಾವು ಟ್ಯಾಪ್ ಮಾಡಬೇಕಾದ ಒಂದು ಮಾನವ ಸಂಪನ್ಮೂಲವೆಂದರೆ ಹಳೆಯ ವಿದ್ಯಾರ್ಥಿಗಳು. ನಾವು ಪ್ರತಿ ಸಂಸ್ಥೆಯಲ್ಲಿ ಹಳೆಯ ವಿದ್ಯಾರ್ಥಿಗಳ ಸಂಸ್ಕೃತಿಯನ್ನು ಅಭಿವೃದ್ಧಿಪಡಿಸಬೇಕು. ಹಳೆಯ ವಿದ್ಯಾರ್ಥಿಗಳ ಸಂಘಟನೆಗಳೇ ನಿಜವಾದ ಅರ್ಥದಲ್ಲಿ ಸಮಾಜಕ್ಕೆ ನಾವು ಹಿಂತಿರುಗಿಸಬೇಕಾದ ಉತ್ತಮ ಮಾಧ್ಯಮವಾಗಿದೆ. ಹಳೆಯ ವಿದ್ಯಾರ್ಥಿಗಳು ಸಂಸ್ಥೆಯ ಬೆನ್ನುಲುಬಿನ ಶಕ್ತಿ ಮಾತ್ರವಲ್ಲ, ಇಡೀ ವಲಯದ ಬೆನ್ನೆಲುಬಿನ ಶಕ್ತಿಯನ್ನು ರೂಪಿಸುತ್ತಾರೆ. ಆದ್ದರಿಂದ ದಯವಿಟ್ಟು ಹಳೆಯ ವಿದ್ಯಾರ್ಥಿಗಳ ಸಂಘಗಳ ಒಕ್ಕೂಟವನ್ನು ನಿರ್ಮಿಸಲು ನಾನು ಮನವಿ ಮಾಡುತ್ತೇನೆ. ಇದು ಬೆಂಗಳೂರು ನಗರದಿಂದ ಪ್ರಾರಂಭವಾಗಬೇಕು. ಅಖಿಲ ಭಾರತ ಹಳೆಯ ವಿದ್ಯಾರ್ಥಿಗಳ ಸಂಘಕ್ಕೆ ಇದರ ಬಗ್ಗೆ ವಿಶ್ವಾಸವಿದೆ. ಅದು ಬಹಳ ಆಳವಾದ ಥಿಂಕ್ ಟ್ಯಾಂಕ್ ಆಗಿದ್ದು, ಸಮಸ್ಯೆಗಳನ್ನು ಪರಿಹರಿಸಲು ಅದು ನಮಗೆ ಸಹಾಯ ಮಾಡುತ್ತದೆ.

ಸ್ನೇಹಿತರೇ, ಭಾರತವು ಪ್ರಗತಿ ಹೊಂದುತ್ತಿದೆ, ಆದರೆ ನಾವು ಭಾರತೀಯರು ನಮ್ಮ ಕರ್ತವ್ಯವನ್ನು ಮಾಡಬೇಕು.

ಮೊದಲ ಬಾರಿಗೆ, ಸ್ವಚ್ಛ ಭಾರತದ ವಿಷಯ ಬಂದಾಗ, ನಮ್ಮ ದೇಶದ ಪ್ರಧಾನಿ ಏನು ಮಾಡುತ್ತಿದ್ದಾರೆಂದು ಕೆಲವರು ವಿಚಿತ್ರವಾಗಿ ಪ್ರಶ್ನಿಸಿದ್ದರು. ಈಗ ಇದು ಗಮನ ಸೆಳೆದಿದೆ. ಹಳ್ಳಿಗಳಲ್ಲಿ ಈಗ ಶೌಚಾಲಯಗಳಿವೆ. ಅಭಿವೃದ್ಧಿ ನಡೆದಿದೆ. ಅದು ಒಂದು ಉದ್ಯಮವಾಗಿಯೂ ಮಾರ್ಪಟ್ಟಿದೆ. ಆದರೆ ನಾನು ನಿಮಗೆ ಒಂದು ಪ್ರಶ್ನೆಯನ್ನು ಕೇಳಲು ಆಶಿಸುತ್ತೇನೆ, ವಿದೇಶಕ್ಕೆ ಹೋಗಿಬಂದ ಯಾವ ಭಾರತೀಯನು ಕಾರಿನಿಂದ ಏನನ್ನೂ ಹೊರಗೆ ಎಸೆಯುವುದಿಲ್ಲ. ರಸ್ತೆಯನ್ನು ನಮ್ಮ ಕಸದ ಬುಟ್ಟಿ ಎಂದು ನಾವು ನಮ್ಮ ದೇಶದಲ್ಲಿ ಪರಿಗಣಿಸಿದ್ದ ಸಮಯವಿತ್ತು. ಇದು ಬದಲಾಗುತ್ತಿದೆ. ನಮ್ಮ ಶಿಸ್ತು ಹೇಗಿರಬೇಕುಕೆಂದು ಯುವ ಪ್ರಭಾವಿ ಯುವಕರು ನೆನೆದು ಅದನ್ನು ಸಂಯೋಜಿಸಿದರೆ, ಭಾರತದ ಚಿತ್ರಣವು ಸಾಕಷ್ಟು ಬದಲಾಗುತ್ತದೆ.

ಭಾರತ ಮಾತನಾಡುವಾಗ, ಜಗತ್ತು ಕೇಳುತ್ತದೆ ಮತ್ತು ಭಾರತವು ಏನು ಹೇಳುತ್ತದೆ, ಅದು ಯಾವಾಗ ಹೇಳುತ್ತದೆ ಮತ್ತು ಎಷ್ಟು ಹೇಳುತ್ತದೆ ಎಂದು ಜಗತ್ತು ಕಾಯುತ್ತಿದೆ. ಭಾರತವು ತನ್ನದೇ ಆದ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಅಂತರರಾಷ್ಟ್ರೀಯ ರಂಗದಲ್ಲಿ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. 

ನನ್ನ ನೋವನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಲು ನಾನು ಬಯಸುತ್ತೇನೆ. ಡಾ. ಅಂಬೇಡ್ಕರ್ ಅವರು ಭಾರತದ ಸಂವಿಧಾನವನ್ನು ರಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಮೂರು ವರ್ಷಗಳ ಕಾಲ ಸಂವಿಧಾನ ರಚನಾ ಸಭೆಯು ಚರ್ಚೆ ನಡೆಸಿತು. ಸಂವಾದ, ಚರ್ಚೆ, ವಿಚಾರವಿನಿಮಯ, ವಾದವಿವಾದ ನಡೆಯಿತು. ಅವರ ಮುಂದಿದ್ದ ಸಮಸ್ಯೆ ಸಂಕೀರ್ಣವಾಗಿತ್ತು, ಅನೇಕ ವಿವಾದಾತ್ಮಕ ವಿಷಯಗಳಿದ್ದವು, ಜನರು ವಿರುದ್ಧ ದೃಷ್ಟಿಕೋನಗಳನ್ನು ಹೊಂದಿದ್ದರು, ಹೊಂದಾಣಿಕೆ ಮಾಡಿಕೊಳ್ಳುವುದು ಕಷ್ಟಕರವಾಗಿತ್ತು, ಆದರೂ ಸಂವಿಧಾನ ಸಭೆಯು ಒಂದೇ ಒಂದು ಅಡಚಣೆ ಇಲ್ಲದೆ ಮುಂದುವರೆಯಿತು. ಸಂವಿಧಾನ ರಚನಾ ಸಭೆಯಲ್ಲಿ ಯಾವುದೇ ಒಂದು ಅಡೆತಡೆ ಇರಲಿಲ್ಲ. ಯಾರೂ ಘೋಷಣೆಗಳನ್ನು ಕೂಗಲಿಲ್ಲ, ಯಾರೂ ಹೀಯಾಳಿಸಲಿಲ್ಲ, ಯಾರೂ ಫಲಕಗಳನ್ನು ತೋರಿಸಲಿಲ್ಲ. ದೇಶಕ್ಕೆ ಸಂವಿಧಾನವನ್ನು ನೀಡಿದ ಜನರು ನಮಗಾಗಿ ಇಷ್ಟು ದೊಡ್ಡ ಕೆಲಸ ಮಾಡಿದಾಗ, ನಾವು ಅವರ ಮಾದರಿಯನ್ನು ಅನುಸರಿಸಲು ಸಾಧ್ಯವಿಲ್ಲದ ಕಾರಣವೇನು?

ರಾಜ್ಯಸಭೆಯ ಸಭಾಪತಿಯಾಗಿ ನನ್ನ ಗಮನಕ್ಕೆ ಬಂದಿರುವುದು, ನಾನು ನೋಡುತ್ತಿರುವುದು ನಿಮ್ಮೆಲ್ಲರ ಕಾಳಜಿಯ ಕಾರಣವಾಗಿದೆ.

ರಾಜ್ಯಸಭೆಯ ಪ್ರತಿ ನಿಮಿಷಕ್ಕೆ ಲಕ್ಷಾಂತರ ಮತ್ತು ಕೋಟಿಗಳನ್ನು ರೂಪಾಯಿಗಳನ್ನು ಖರ್ಚು ಮಾಡಲಾಗುತ್ತದೆ. ಅಡೆತಡೆಯೊಂದಿಗೆ, ನೀವು ಸರ್ಕಾರಿ ವ್ಯವಸ್ಥೆಯನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಕಾರ್ಯಾಂಗವನ್ನು ಉತ್ತರದಾಯಿಯನ್ನಾಗಿ ಮಾಡಲು, ಸರ್ಕಾರವನ್ನು ಜವಾಬ್ದಾರರನ್ನಾಗಿ ಮಾಡಲು ರಾಜ್ಯಸಭೆ ಒಂದು ವೇದಿಕೆಯಾಗಿದೆ.

ಇದರ ಬಗ್ಗೆ ವ್ಯಾಪಕ ಜನಾಂದೋಲನ ನಡೆಯಬೇಕು. ನಾನು ಯುವಕರಿಗೆ ಮನವಿ ಮಾಡುತ್ತೇನೆ. ರಾಷ್ಟ್ರದ ಗಮ್ಯಸ್ಥಾನವು ಸರಿಯಾದ ಹಾದಿಯಲ್ಲಿ ನಡೆಯಲು ಮತ್ತು ಅದನ್ನು ಸುಗಮಗೊಳಿಸಲು ನಾವು ರಾಜ್ಯಸಭೆ ಮತ್ತು ಸಂಸತ್ತಿನಲ್ಲಿದ್ದೇವೆ. ಪ್ರತಿಯೊಬ್ಬರೂ ಅನುಕರಿಸಬಹುದಾದ, ಪ್ರತಿಯೊಬ್ಬರೂ ಅನುಸರಿಸಬಹುದಾದ ನಮ್ಮ ನಡವಳಿಕೆಯನ್ನು ನಾವು ಉದಾಹರಣೆಯಾಗಿ ನೀಡಬೇಕು.

ನಮ್ಮ ಯುವ ಪ್ರತಿಭೆಗಳು ಅಡೆತಡೆಗಳನ್ನು ಅನುಭವಿಸಲು ನಾವು ಬಯಸುವುದಿಲ್ಲ, ಘೋಷಣೆಗಳನ್ನು ಕೂಗುವುದನ್ನು, ಫಲಕಗಳನ್ನು ತೋರಿಸುವುದನ್ನು ಅವರು ಉತ್ತೇಜಿಸಲು ನಾವು ಬಯಸುವುದಿಲ್ಲ, ಆದ್ದರಿಂದ ಶಾಂತ ವಾತಾವರಣವನ್ನು ಸೃಷ್ಟಿಸಲು, ಸಾರ್ವಜನಿಕ ಅಭಿಪ್ರಾಯವನ್ನು ರಚಿಸಲು, ಲಭ್ಯವಿರುವ ಪ್ರತಿಯೊಂದು ಮಾಧ್ಯಮವನ್ನು ಬಳಸಲು ನಾವು ನಮ್ಮ ಸಂಸದರನ್ನು ವಿನಂತಿಸುತ್ತೇವೆ. ಪ್ರಜಾಪ್ರಭುತ್ವದ ದೇಗುಲದಲ್ಲಿ ನಮ್ಮ ನಡವಳಿಕೆ ನಮಗೆ ಹೆಮ್ಮೆ ತರಬೇಕು. ನಮ್ಮ ನಡವಳಿಕೆ ದೇಶದ ಅಭಿವೃದ್ಧಿಗಾಗಿ ಇರಬೇಕು.

ಶಿಕ್ಷಣದ ದೇವಾಲಯದಲ್ಲಿ ಅಧ್ಯಯನವನ್ನು ಹೊರತುಪಡಿಸಿ ಏನಾಗುತ್ತದೆ? ಪ್ರಜಾಪ್ರಭುತ್ವದ ಶಕ್ತಿಯ ಬಗ್ಗೆಯೂ ನನ್ನ ಆಲೋಚನೆ ಅದೇ ಆಗಿದೆ. ನಾನು ಈ ಆಲೋಚನೆಯನ್ನು ಯುವ ಮನಸ್ಸುಗಳಿಗೆ ಬಿಡುತ್ತಿದ್ದೇನೆ. ನನ್ನ ಯುವ ಸ್ನೇಹಿತರೇ, ನಾನು ಇದನ್ನು ಸಾಕಷ್ಟು ಭರವಸೆಯೊಂದಿಗೆ ಮಾಡುತ್ತಿದ್ದೇನೆ. ಏಕೆಂದರೆ 2047ರಲ್ಲಿ ಭಾರತ ಹೇಗಿರುತ್ತದೆಯೋ, ನಮ್ಮಲ್ಲಿ ಕೆಲವರು ತಮ್ಮ ಜೀವನದ ಸಂಜೆಯ ಹೊಸ್ತಿಲಲ್ಲಿರಬಹುದು, ಆದರೆ ನೀವು ನಿಮ್ಮ ಯೌವನದ ಉತ್ತುಂಗದಲ್ಲಿರುತ್ತೀರಿ, ನೀವು ಅಧಿಕಾರದಲ್ಲಿರುತ್ತೀರಿ, ಆದ್ದರಿಂದ 2047ರವರೆಗೆ ಪ್ರತಿ ವರ್ಷ, ಭಾರತವು ಆರ್ಥಿಕತೆ ಮತ್ತು ಇತರ ಅಂಶಗಳಲ್ಲಿ ವಿಶ್ವ ನಾಯಕನಾಗಿ ಏರಬೇಕಾದಾಗ ನೀವು ಜಾಗರೂಕರಾಗಿರಬೇಕು.

ನನ್ನ ಯುವ ಸ್ನೇಹಿತರೇ, ನೀವು ನನ್ನ ತೀವ್ರವಾದ ಮನವಿಯನ್ನು ಗಮನಿಸುತ್ತೀರ ಎಂದು ನನಗೆ ನಂಬಿಕೆಯಿದೆ, ನನ್ನ ಮನವಿ ಪಕ್ಷಪಾತರಹಿತವಾಗಿದೆ. ನನ್ನ ಮನವಿ ರಾಜಕೀಯ ನಾಯಕರಿಗೆ ಸಂಬಂಧಿಸಿದ್ದಲ್ಲ. ನನ್ನ ಮನವಿಯೆಂದರೆ ನಾವು ರಾಷ್ಟ್ರದ ಬೆಳವಣಿಗೆಯಲ್ಲಿ ಪಾಲುದಾರರಾಗಬೇಕು. ಡಾ.ಬಿ.ಆರ್. ಅಂಬೇಡ್ಕರ್ ಅವರು ನೀಡಿದ ಸಂವಿಧಾನದ ಪೀಠಿಕೆಯನ್ನು ಸಾಕಾರಗೊಳಿಸಲು ನಾವು ಆಡಳಿತದಲ್ಲಿ ಪಾಲುದಾರರಾಗಬೇಕು ಎಂಬುದಾಗಿದೆ.

ಜೈ ಹಿಂದಿ, ಜೈ ಭಾರತ್!

 

****



(Release ID: 1903496) Visitor Counter : 137


Read this release in: English , Urdu , Hindi , Tamil